ಅಖಂಡ ದರ್ಶನ..!
ಮೂಲ ( ತೆಲುಗು ) :- ಟಿ ಶ್ರೀವಲ್ಲೀ ರಾಧಿಕ
ಕನ್ನಡಕ್ಕೆ :- ಬುಸಿರಾಜು ಲಕ್ಷ್ಮೀದೇವಿ ದೇಶಾಯಿ
ಶಾಲೆಯಲ್ಲಿ ನಾವು ಮೂವರಿಗೆ ತ್ರಿಮೂರ್ತಿಗಳಂತಾನೆ ಹೆಸರು. ನಾನೇಕೆ ಈಗ ಈ ಕಥೆ ಹೇಳುವುದೆಂದರೆ ನಾನೊಬ್ಬ ಕಥೆಗಾರ. ಜೀವನದಲ್ಲಿ ಏನೇ ಸ್ವಲ್ಪ ವಿಚಿತ್ರವಾಗಿ ಜರುಗಿತೆಂದರೆ ಆ ವಿಷಯವನ್ನು ನಾಲ್ಕು ಜನರೊಂದಿಗೆ ಹಂಚಿಕೊಳ್ಳುವುದು ನನ್ನ ಅಭಿಲಾಷೆ. ಹರಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ ಈಗಷ್ಟೇ ನಿವೃತ್ತಿ ಹೊಂದಿದ್ದಾನೆ. ಶಿವು ವಿಧ ವಿಧದ ವ್ಯಾಪಾರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾನೆ. ಅವನಿಗೆ ಸಾಕಷ್ಟು ಸಂಪಾದನೆ ಇದೆ, ಇಂದೋರ್’ನಲ್ಲಿ ಸೆಟ್ಲ್ ಆಗಿದ್ದಾನೆ. ಇವತ್ತು ಅವನ ಫೋನ್’ನಿಂದಾನೆ ಕಥೆ ಶುರುವಾಯ್ತು. ಮತ್ತಷ್ಟು ಓದು