ಚೇಂಜ್‍ಗೆ ಗಂಡ, ಎಕ್ಸ್’ಚೇಂಜ್‍ಗೆ ಪರಗಂಡ..! ( ಹಾಸ್ಯ )
– ತುರುವೇಕೆರೆ ಪ್ರಸಾದ್
ಬ್ರಹ್ಮಚಾರಿಯಾದ ಮೋದಿಗೆ ನಮ್ಮಂತಹ ಸದ್ (ಸತ್?) ಗೃಹಸ್ಥರ ಕಷ್ಟ ಹೇಗೆ ಗೊತ್ತಿರಲಿಕ್ಕೆ ಸಾಧ್ಯ ? ಎಂದು ನಾವು ಹಲವು ಬಾರಿ ಬಹಳ ಬೇಸತ್ತುಕೊಂಡಿದ್ದೆವು. ದೊಡ್ಡ ದೇಶದ ಪ್ರಧಾನಿ ಆಗುವುದು ದೊಡ್ಡದಲ್ಲ, ಚಿಕ್ಕ ಸಂಸಾರದಲ್ಲಿ ನಿಧಾನಿಯಾಗಿ ಎಲ್ಲವನ್ನೂ ನಿಭಾಯಿಸುವುದೇ ಕಷ್ಟ ಎಂದು ಮೊದಲಿನಿಂದಲೂ ನಮಗೆ ಅನುಭವವೇದ್ಯವಾದ ಅರಿವು ಮೂಡಿತ್ತು. ಅಂತದ್ದೊಂದು ಅರಿವಿಲ್ಲದೆ ಮೋದಿ ಎಲ್ಲಂದರಲ್ಲಿ ಓಡಾಡಿಕೊಂಡು, ದೇಶ ಸುತ್ತಿಕೊಂಡು ನೆಮ್ಮದಿಯಾಗಿದ್ದಾರಲ್ಲ ಎಂದು ನಮಗೆ ಸಿಕ್ಕಾಪಟ್ಟೆ ಹೊಟ್ಟೆ ಉರಿಯಿತ್ತು. ನಮ್ಮಂತಹ ಗೃಹಸ್ಥರಿಗೆ ಯಾವುದೇ ಪ್ಯಾಕೇಜ್ ಘೋಷಿಸಿರಲಿಲ್ಲ ಎಂದು ಮುಂದಿನ ಬಾರಿ ಅವರಿಗೆ ಓಟ್ ಮಾಡುವುದೇ ಬೇಡ ಎಂದು ನಿರ್ಧರಿಸಿದ್ದೆವು. ಈಗ ಅವರು ಏಕಾಏಕಿ 1000, 500ರ ನೋಟುಗಳನ್ನು ಬ್ಯಾನು ಮಾಡಿ ನಮಗೆ ದೊಡ್ಡ ಉಪಕಾರ ಮಾಡಿದ್ದಾರೆ. ಮಡದಿ ಇದ್ದಿದ್ದರೆ ಇಷ್ಟೆಲ್ಲಾ ಗುಟ್ಟು ಕಾಯ್ದಿಟ್ಟುಕೊಂಡು ಮೋದಿ ದೊಡ್ಡ ದೊಡ್ಡ ನೋಟುಗಳನ್ನು ಬ್ಯಾನ್ ಮಾಡಲು ಆಗುತ್ತಿರಲಿಲ್ಲ. ಹೇಗೋ ದೊಡ್ಡ ದೊಡ್ಡ ನೋಟುಗಳನ್ನು ಬ್ಯಾನ್ ಮಾಡಿ ಕೋಟ್ಯಂತರ ಗೃಹಸ್ಥರನ್ನು ಸಂಕಟದಿಂದ ಪಾರು ಮಾಡಿದ್ದಾರೆ. ನಮ್ಮಲ್ಲೂ ಹೊಸ ಆಸೆ ಭರವಸೆ ಮೂಡಿಸಿದ್ದಾರೆ. ಕೋಟ್ಯಂತರ ಪತ್ನೀ ಶೋಷಿತ ಗಂಡಸರ ಪರವಾಗಿ ಮೋದಿಗೆ ಕೋಟಿಕೋಟಿ ವಂದನೆಗಳು.. ಮತ್ತಷ್ಟು ಓದು