“ಅನ್ವೇಷಣೆ..!”
– ಭಾಸ್ಕರ ಭೀಮರಾವ್ ಖಾಂಡ್ಕೆ
ಸಾಗರ
ಬಹುಶಃ ಜೀವನವೇ ಹೀಗೆ, ಯಾವುದೋ ಸಮಸ್ಯೆ ಯಾವುದಕ್ಕೋ ಪರಿಹಾರ, ಯಾವುದೋ ಪ್ರಶ್ನೆ ಯಾವುದಕ್ಕೋ ಉತ್ತರವಾಗಿ ಬಿಡುತ್ತದೆ
ಇಂದು ಏಕಾಂತದ ಮಿತ್ರನೊಂದಿಗೆ ಸಂಭಾಷಣೆ ನಡೆಸುವ ಅವಕಾಶ ಸಿಕ್ಕಿಬಿಟ್ಟಿತು. ಮಾತಿಗೆ ಮಾತು ಬೆಳೆಯುತ್ತಾ ನನ್ನೊಳಗೆ ಶೂನ್ಯ ತುಂಬಿದ ಭಾವನೆ…ಛಲಬಿಡದ ತಿವಿಕ್ರಮನಂತೆ ಶೂನ್ಯದೊಂದಿಗೆ ಸೆಣಸಾಡುತ್ತಾ ನನ್ನೊಳಗೆ ಅಡಗಿರಬಹುದಾದ ಸತ್ಯದ ಅನ್ವೇಷಣೆಯ ಪ್ರಯತ್ನದ ಫಲವೇ ಈ ಸಾಹಿತ್ಯ , ಬಹುಶಃ ಇದು ಸಾಹಿತ್ಯವಲ್ಲಾ ನಮ್ಮೆಲ್ಲರೊಳಗೆ ಹುದುಗಿರುವ ಆದ್ಯಾತ್ಮದ ಒಂದು ಸಣ್ಣ ಹನಿ… ಮತ್ತಷ್ಟು ಓದು 
ಗುಂಗು..!
– ಡಾ.ಸುದರ್ಶನ ಗುರುರಾಜರಾವ್
ಗುಂಗಿನ ಹಂಗದು ನಿನಗಿರೆ ಗೆಳೆಯ
ಬೇಸರವಿಲ್ಲದೆ ಕಳೆವುದು ಸಮಯ
ಜೀವನಕೊಂದು ಸಿಗುವುದು ಧ್ಯೇಯ
ಬದುಕಿದ ಬಾಳಿಗೆ ದೊರೆವುದು ನ್ಯಾಯ
ಪಿತೃ ವಾಕ್ಯವೆ ರಾಮನ ಗುಂಗು
ಭ್ರಾತೃ ಪ್ರೇಮವೆ ಭರತನ ಗುಂಗು
ಸೀತಾಪತಿ ಜಪ ಮಾರುತಿ ಗುಂಗು ಮತ್ತಷ್ಟು ಓದು 




