ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 16, 2016

10

ಮೌಲ್ಯ ರಾಜಕಾರಣ ಮರೆತ ಜಯಲಲಿತಾ!

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್
ಪತ್ರಕರ್ತರು

54849200ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನೊಂದಿಗೆ ಅವರ ಆಡಳಿತ ಕೊನೆಗೊಂಡಿದೆ. ಇದನ್ನೇ ಜಯಲಲಿತಾ ಯುಗಾಂತ್ಯ ಎಂದು ಬಣ್ಣಿಸಲಾಗುತ್ತಿದೆ. ತಮಿಳುನಾಡಿನ ಕೋಟಿ ಕೋಟಿ ಜನರು ತಮ್ಮ ಅಮ್ಮನ ನಿಧನದ ಸುದ್ದಿ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದಾರೆ. ನಾಡಿನಾದ್ಯಂತ ಶೋಕ ಮಡುಗಟ್ಟಿದೆ. ಅಮ್ಮನ ಸಾವಿನ ಭಾವೋದ್ವೇಗದ ಅಲೆ ಉಕ್ಕಿ ಹರಿಯುತ್ತಿದೆ. ಎಲ್ಲೆಡೆ ಅಮ್ಮನ ಗುಣಗಾನ ನಡೆಯುತ್ತಿದೆ. ಜಯಲಲಿತಾ ತಾವು ಬದುಕಿರುವಷ್ಟು ದಿನವೂ ತಮ್ಮ ನಾಡಿನ ರೈತರಿಗಾಗಿ ಕಾವೇರಿ ನೀರನ್ನು ಶತಾಯಗತಾಯ ಹರಿಸಿಕೊಳ್ಳಲೇಬೇಕು ಎಂದು ಹಠ ಹಿಡಿದವರಂತೆ ವರ್ತಿಸಿದರು. ಈ ವರ್ಷವೂ ಕರ್ನಾಟಕದ ಎಲ್ಲಾ ಜಲಾಶಯಗಳು ನೀರಿಲ್ಲದೆ ಒಣಗಿ ನಿಂತಿದ್ದಾಗಲೂ ಸಹ ಜಯಲಲಿತಾ ತಮ್ಮ ರಾಜ್ಯಕ್ಕೆ ನೀರು ಹರಿಸಲೇಬೇಕೆಂದು ಕರ್ನಾಟಕದ ಮೇಲೆ ಒತ್ತಡ ಹೇರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದಾಗ್ಯೂ ಕರ್ನಾಟಕದ ಜನ ಅವರ ಸಾವಿಗೆ ಅನುಕಂಪ ವ್ಯಕ್ತಪಡಿಸಿದ್ದಾರೆ, ಒಬ್ಬ ಧೀಮಂತ ಮಹಿಳೆಯ ಸಾವಿಗೆ ನೀಡಬೇಕಾದ ಘನತೆ ಗೌರವಗಳನ್ನು ಮಾನವೀಯತೆಯ ನೆಲೆಯಲ್ಲಿ ಪ್ರದರ್ಶಿಸಿ ಕನ್ನಡಿಗರು ಎಂದಿನಂತೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಜಯಲಲಿತಾ ಜನಪ್ರಿಯತೆ, ಅವರ ಸಾವಿನ ಭಾವ ತೀವ್ರತೆಯ ಹಿಂದಿನ ಕಾರಣ ಜಯಲಲಿತಾ ಅವರ ಜನಪ್ರಿಯ ಯೋಜನೆಗಳು. ಜಯಲಲಿತಾ ತಮ್ಮ ಅಧಿಕಾರವಧಿಯಲ್ಲಿ ಕ್ರಮೇಣ ಮಾಗುತ್ತಾ ನಡೆದಿದ್ದರು. ಅವರದ್ದು ನಿರಂಕುಶ ಧೋರಣೆಯೇ ಆದರೂ ಕಳೆದ 3 ವರ್ಷಗಳಲ್ಲಿ ಜಯಲಲಿತಾ ಆದಷ್ಟೂ ಕಳಂಕ ರಹಿತ ಮಾದರಿಯಲ್ಲಿ ಆಡಳಿತ ನಡೆಸುವ ಪ್ರಯತ್ನ ಮಾಡಿದ್ದರು. ಕಾನೂನು ಸುವ್ಯವಸ್ಥೆ ಉತ್ತಮಗೊಂಡಿತ್ತು. ಗೂಂಡಾಗಿರಿ ಕಡಿಮೆಯಾಗಿತ್ತು. ಸರ್ಕಾರದ ಜನಪ್ರಿಯ ಯೋಜನೆಗಳಿಂದ ಬಡತನದ ರೇಖೆಯ ಕೆಳಗಿದ್ದ ಲಕ್ಷಾಂತರ ಜನರಿಗೆ ಉಪಯೋಗವಾಗಿತ್ತು. ಅಮ್ಮಾ ಕ್ಯಾಂಟೀನ್ ಮೂಲಕ ಒಂದು ರೂಪಾಯಿಗೆ ಒಂದು ಇಡ್ಲಿ, 3ರೂಗೆ ಮೊಸರನ್ನ, 5 ರೂಪಾಯಿಗೆ ಅನ್ನ ಸಾಂಬಾರ್ ಲಕ್ಷಾಂತರ ಕಾರ್ಮಿಕರ ಹಸಿವು ನೀಗಿತ್ತು. ಕಾಲೇಜು ವಿದ್ಯಾರ್ಥಿನಿಯರಿಗೆ ಲ್ಯಾಪ್‍ಟಾಪ್ ನೀಡುವ ಯೋಜನೆ ಜಾರಿಗೆ ಬಂದಿತ್ತು. ರೂ.340ರ ಬದಲಿಗೆ ಒಂದು ಚೀಲಕ್ಕೆ ರೂ.110ರ ಬೆಲೆಯಲ್ಲಿ ಅಮ್ಮ ಸೀಮೆಂಟ್ ನೀಡಲಾಗುತ್ತಿತ್ತು. ದೇವಾಲಯಗಳಲ್ಲಿ ಭಕ್ತರಿಗೆ ಉಚಿತ ಊಟ ನೀಡಲಾಗುತ್ತಿದೆ. ವಿಶ್ರಾಂತ ಪೋಲೀಸ್ ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಚೆನ್ನೈನಲ್ಲಿ ಬಡ ಕಾರ್ಮಿಕರಿಗೆಂದೇ ವಿಶೇಷ ಮಿನಿ ಬಸ್ಸುಗಳನ್ನು ಓಡಿಸಲಾಗುತ್ತಿದೆ.. ಹೀಗೆ ಪುಂಖಾನುಪುಂಖವಾಗಿ ಜಾರಿಗೊಂಡ ಅಮ್ಮ ಯೋಜನೆಗಳು ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿದವು.

ಒಬ್ಬ ಮಹಿಳಾ ಮುಖ್ಯಮಂತ್ರಿಯಾಗಿ ಜಯಲಲಿತಾ ಅವರಿಗೆ ಒಂದು ಆದರ್ಶ, ನಿಷ್ಕಳಂಕ ಆಡಳಿತ ನೀಡುವ ಎಲ್ಲಾ ಅವಕಾಶಗಳೂ ಇತ್ತು. ಏಕೆಂದರೆ ಒಂದು ಆರ್ಥಿಕ ಸಮೀಕ್ಷೆ ಪ್ರಕಾರ ದೇಶದ ಎರಡನೇ ಅತಿ ದೊಡ್ಡ ಅರ್ಥಿಕತೆಯನ್ನು ತಮಿಳುನಾಡು ಹೊಂದಿದ ಖ್ಯಾತಿಗೆ ಪಾತ್ರವಾಗಿದೆ. ಅದರ ಜಿಎಸ್‍ಡಿಪಿ 2014-15ನೇ ಸಾಲಿನಲ್ಲಿ ಶೇ.14 ಬಿಲಿಯನ್‍ಗಳಷ್ಟಿತ್ತು. ತಮಿಳುನಾಡಿನ ಶೇ.45ರಷ್ಟು ವರಮಾನ ಸೇವಾಕ್ಷೇತ್ರದಿಂದ ಬಂದರೆ, ಶೇ,21 ಕೃಷಿಯಿಂದ ಮತ್ತು ಶೇ.34 ತಯಾರಿಕಾ ಕ್ಷೇತ್ರದಿಂದ ಬರುತ್ತದೆ. ಆದರೆ ಜಯಲಲಿತಾ ಹಿಂದಿನ ಡಿಎಂಕೆ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳ ತತ್ವ, ಸಿದ್ಧಾಂತಕ್ಕೇ ಕಟ್ಟು ಬಿದ್ದರು. ಹೀಗಾಗಿ ಜನರಿಗೆ ಕೊಡಬೇಕಾದ ಯೋಜನೆಗಳು ಆಮಿಷಗಳಾಗಿ ಬದಲಾದವು. ಚುನಾವಣಾ ಸಂದರ್ಭಗಳಲ್ಲಿ ನೀಡಿದ ಆಶ್ವಾಸನೆಗಳ ಪಾಲನೆಗಾಗಿ ಜಯಲಲಿತಾ ಬೇರೆಲ್ಲಾ ಸ್ಥಾಯೀ ಕಾರ್ಯಕ್ರಮಗಳು, ಶಾಶ್ವತ ಯೋಜನೆಗಳನ್ನು ನಿರ್ಲಕ್ಷಿಸಿ ಕೋಟ್ಯಂತರ ರೂಪಾಯಿ ವ್ಯಯಿಸಿದರು. ಒಂದೇ ವರ್ಷದಲ್ಲಿ ಫ್ಯಾನ್, ಮಿಕ್ಸಿ ಮೊದಲಾದ ಗೃಹೋಪಯೋಗಿ (25 ಲಕ್ಷ ಕುಟುಂಬಳಿಗೆ) ಸಾಧನೆಗಳ ವಿತರಣೆಗೆ ರೂ.1250 ಕೋಟಿ, ಉಚಿತ ಮನೆಗಳಿಗೆ ರೂ.1080 ಕೋಟಿ, ಉಚಿತ ಚಿನ್ನದ ತಾಳಿ ವಿತರಣೆಗೆ 514 ಕೋಟಿ ರೂಗಳನ್ನು ಖರ್ಚು ಮಾಡಲಾಯಿತೆಂದರೆ ಕಳೆದ ಐದು ವರ್ಷಗಳಲ್ಲಿ ಎಷ್ಟು ಕೋಟಿ ರೂಪಾಯಿಗಳು ಇಂತಹ ಉಚಿತ ವಿತರಣೆಗೆ ಖರ್ಚಾಗಿದೆ ಎಂದು ಯಾರಾದರೂ ಲೆಕ್ಕ ಹಾಕಬಹುದು. ಡಿಎಂಕೆ ಸರ್ಕಾರದ ಅವಧಿಯಲ್ಲಿ 1.01 ಲಕ್ಷ ಕೋಟಿಯಿದ್ದ ಸರ್ಕಾರದ ಸಾರ್ವಜನಿಕ ಸಾಲ ಜಯಲಲಿತಾ ಕಾಲದಲ್ಲಿ ಸುಮಾರು 1.81ಲಕ್ಷ ಕೋಟಿಗೆ ಏರಿತು. 4 ವರ್ಷಗಳಲ್ಲಿ ಜನಪ್ರಿಯ ಉಚಿತ ಯೋಜನೆಗಳಿಗಾಗಿ ಸುಮಾರು 79687 ಕೋಟಿ ರೂಗಳನ್ನು ಜಯಲಲಿತಾ ರಾಜ್ಯ ಬೊಕ್ಕಸದ ಮೇಲೆ ಹೊರೆಯಾಗಿಸಿದರು. ಜನಪ್ರಿಯ ಉಚಿತ ಯೋಜನೆಗಳು ಹೆಚ್ಚಾದಂತೆಲ್ಲಾ ಜಯಲಲಿತಾ ಕೀರ್ತಿ ಉತ್ತುಂಗಕ್ಕೇರಿತು. ಆದರೆ ಶಿಕ್ಷಣ ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರಗಳು ತೀವ್ರ ಹೊಡೆತ ತಿಂದವು. ಇದರಿಂದಾಗಿ ಬೃಹತ್ ಆರ್ಥಿಕತೆಯನ್ನು ಹೊಂದಿದ ತಮಿಳುನಾಡು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯಲ್ಲಿ ದೇಶದಲ್ಲಿ 17ನೇ ಸ್ಥಾನಕ್ಕೆ ಕುಸಿಯಿತು. ಜಯಲಲಿತಾ ಅವರು ಕಲರ್ ಟೆಲಿವಿಶನ್ ಸೆಟ್, ಗೃಹೋಪಯೋಗಿ ವಸ್ತುಗಳ ಉಚಿತ ವಿತರಣೆಗಾಗಿ ಖರ್ಚು ಮಾಡಿದ 11561 ಕೋಟಿ ರೂಪಾಯಿಗಳಲ್ಲಿ 25ಸಾವಿರ ಶಾಲೆಗಳನ್ನು ಅಥವಾ 11 ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕಟ್ಟಿಸಬಹುದಿತ್ತು. ತಮಿಳುನಾಡು ರಾಜ್ಯದ ಆರ್ಥಿಕ ಅಭಿವೃದ್ಧಿ ದರ ಮತ್ತು ಸಾರ್ವಜನಿಕ ಸಾಲದ ಏರಿಕೆ ದರದ ವ್ಯತ್ಯಾಸ ಒಂದು ಹಂತದಲ್ಲಿ ಬಹುತೇಕ ಶೂನ್ಯ ಮುಟ್ಟಿತ್ತು ಎಂದು ಅರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ.

ಜನರನ್ನು ಸ್ವಾಭಿಮಾನಿಗಳನ್ನಾಗಿ ಬೆಳೆಸದೆ ಆಶ್ವಾಸನೆಗಳನ್ನು ಆಮಿಷಗಳನ್ನಾಗಿಸಿದ ಜಯಲಲಿತಾ ರಾಜಕೀಯ ಮುತ್ಸದ್ದಿತನವನ್ನೇನೂ ಮೆರೆಯಲಿಲ್ಲ. ಅಮ್ಮ, ಮಕ್ಕಳು ಆಸೆ ಪಟ್ಟಿದ್ದನ್ನು ಕೊಡುವುದರ ಜೊತೆಗೆ ಅವರಿಗೆ ನೈತಿಕ ಮೌಲ್ಯಗಳನ್ನೂ ಕಲಿಸಬೇಕು ಎಂಬುದನ್ನು ಮರೆತೇ ಬಿಟ್ಟರು. ಮೌಲ್ಯಾಧಾರಿತ ರಾಜಕಾರಣದಿಂದ ಅವರೂ ಸಾಕಷ್ಟು ದೂರ ಉಳಿದರು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲೂ ಸಾಧ್ಯವಾಗಲಿಲ್ಲ. ತಮ್ಮ ರಾಜಕೀಯ ಜೀವನದುದ್ದಕ್ಕೂ ಅವರು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಹೋದರು. ಜಯಲಲಿತಾ ಅನುಭವದ ಕೊರತೆ ಹಾಗೂ ಮಿತಿ ಮೀರಿದ ಉದ್ಧಟತನದಿಂದ ಎಲ್ಲಾ ತೊಂದರೆಗಳನ್ನು ತಾವೇ ಆಹ್ವಾನಿಸಿಕೊಂಡರು. 1991-96ರ ಅಧಿಕಾರಾವಧಿಯಲ್ಲಿ ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳಿಗೆ ಅವರು ಭಾರೀ ಬೆಲೆ ತೆತ್ತರು. ಆ ಅವಧಿಯಲ್ಲಿ ಅವರಿಗೆ ರಾಜಕೀಯ ಪ್ರಬುದ್ಧತೆ ಇರಲಿಲ್ಲ, ರಾಜಕೀಯಕ್ಕೆ ಬೇಕಾದ ಸೂಕ್ಷ್ಮತೆ, ದೂರಾಲೋಚನೆ, ಅನುಭವ ಯಾವುದೂ ಅವರಿಗಿರಲಿಲ್ಲ. ಹೋಗಲೆಂದರೆ ಅವರಿಗೆ ಆ ಸಮಯದಲ್ಲಿ ಸೂಕ್ತ ಮಾರ್ಗದರ್ಶನವೂ ಸಿಗಲಿಲ್ಲ. ಅವರ ಬಂಧುಗಳು ಅಧಿಕಾರದಲ್ಲಿ ಭಾರೀ ಹಸ್ತಕ್ಷೇಪ ನಡೆಸಿದರು. ನೂರಾರು ಕೋಟಿ ರೂಗಳ ಅಕ್ರಮ ನಡೆಯಿತು. ಜೊತೆಗೆ ಜಯಲಲಿತಾ ತಮ್ಮ ರಾಜಕೀಯ ಜೀವನದುದ್ದಕ್ಕೂ ವಿರೋಧಿಗಳನ್ನೇ ಸೃಷ್ಟಿಸಿಕೊಳ್ಳುತ್ತಾ ಹೋದರು. ಸುಬ್ರಹ್ಮಣ್ಯಸ್ವಾಮಿ, ಟಿ.ಎನ್.ಶೇಷನ್, ಚಿದಂಬರಂ ಎಲ್ಲರನ್ನೂ ಎದುರು ಹಾಕಿಕೊಂಡರು. ಪ್ರಜಾಪ್ರಭುತ್ವದಿಂದ ಬಂದ ಅಧಿಕಾರವನ್ನು ಸರ್ವಾಧಿಕಾರಿಯ ಧೋರಣೆಯಿಂದ ನಡೆಸಿದರು. ಅವರಲ್ಲಿ ಅಹಂ ತುಂಬಿ ತುಳುಕುತ್ತಿತ್ತು. ವಿರೋಧಿಗಳೊಂದಿಗೆ ರಾಜಕೀಯ ದ್ವೇಷಕ್ಕೆ ಮೀರಿದ ವೈಯಕ್ತಿಕ ಸೇಡಿನ ಮನೋಭಾವ ಬೆಳೆಸಿಕೊಂಡರು. ಯಾರನ್ನೂ ಬೇಕಾದರೂ ದುಡ್ಡು ಚೆಲ್ಲಿ ಕೊಂಡುಕೊಳ್ಳಬಲ್ಲೆ ಎಂಬ ದರ್ಪ ಮೆರೆದರು.

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಆದರೆ ಜಯಲಲಿತಾ ವೈಯಕ್ತಿಕವಾಗಿಯೂ ಆಡಂಬರದ ‘ಶೋ ಆಫ್’ ಬದುಕನ್ನು ತೆರೆದಿಟ್ಟರು. ಬಾಯಲ್ಲಿ ತಿಂಗಳಿಗೆ ಕೇವಲ ಒಂದು ರೂ ಸಂಬಳ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ ಜಯಲಲಿತಾ ಅತ್ಯಂತ ವೈಭವಯುತ ಜೀವನಕ್ಕೆ ಸಾಕ್ಷಿಯಾದರು. ಪೋಲಿಸರು ದಾಳಿ ಮಾಡಿದಾಗ 10 ಸಾವಿರಕ್ಕೂ ಹೆಚ್ಚು ಸೀರೆ, 500 ಜೊತೆ ಚಪ್ಪಲಿ ಸಿಕ್ಕವು. ಅವರ ದತ್ತು ಮಗನ ಮದುವೆ ‘ನ ಭೂತೋ ನ ಭವಿಷ್ಯತ್’ ಎನ್ನುವಂತೆ ಏರ್ಪಾಡಾಗಿತ್ತು. ಕೇವಲ ಅಲಂಕಾರಕ್ಕೇ 750 ಮಿಲಿಯನ್ ರೂಪಾಯಿ ಹಾಗೂ ಊಟೋಪಚಾರಕ್ಕೆ 15 ಮಿಲಿಯನ್ ರೂಪಾಯಿಗಳನ್ನು ವ್ಯಯಿಸಲಾಗಿತ್ತು. ಇಂತಹ ಆಡಂಬರದ ಬದುಕು ತಮಗೆ ಮುಳುವಾಗುತ್ತದೆ ಎಂದು ಯೋಚಿಸುವ ತಾಳ್ಮೆಯೂ ಅವರಿಗಿರಲಿಲ್ಲ. ಹಾಗಾಗಿ ಜಯಲಿಲಿತಾ ಅವರು ಕಾನೂನಿನ ಕಪಿಮುಷ್ಠಿಯಿಂದ ತಪ್ಪಿಸಕೊಳ್ಳಲಾಗದೆ ತಮ್ಮ ವಿರುದ್ಧ ತಾವೇ ಸಾಕ್ಷಿಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೋದರು. ಭಾರತದ ರಾಜಕೀಯದಲ್ಲಿ ಜಾಣ್ಮೆ ಹಾಗೂ ಬುದ್ದಿವಂತಿಕೆಯ ನಡೆ ಇದ್ದರೆ ಎಂತಹ ಭ್ರಷ್ಟತೆಯನ್ನು ಬೇಕಾದರೂ ಜೀರ್ಣಿಸಿಕೊಳ್ಳಬಹುದು ಎಂಬುದು ಸಾಬೀತಾಗಿದೆ. ಡೌಲಿನ, ಹಂಚಿ ತಿನ್ನದ ಭ್ರಷ್ಟಾಚಾರ (ಬ್ಲಾಟಂಟ್ ಕರೆಪ್ಶನ್) ಮಾತ್ರ ರಾಜಕೀಯ ವ್ಯಕ್ತಿಗಳನ್ನು ಜೈಲು ಪಾಲು ಮಾಡುತ್ತದೆ. ಇದೇ ಕಾರಣಕ್ಕಾಗಿ ‘ಇನ್ ಇಂಡಿಯಾ ಎವೆರಿಥಿಂಗ್ ಗೋಸ್ ಹ್ಯಾಂಡ್ ಇನ್ ಹ್ಯಾಂಡ್’ ಎಂದು ಹೇಳುವುದು. ಇಂತಹ ಪರಸ್ಪರ ಕೈ ಕುಲುಕುವ ಜಾಣ್ಮೆ ಇಲ್ಲದಿದ್ದರೆ ಕಾನೂನಿನ ಕಪಿಮುಷ್ಟಿಯೊಳಗೆ ಸಿಲುಕಿಬಿದ್ದಂತೆಯೇ ಸೈ! ಸಾವಿರಾರು ಕೋಟಿ ಲೂಟಿ ಹೊಡೆದ ರಾಜಕಾರಣಿಗಳ ಮಧ್ಯೆ 64 ಕೋಟಿ ಅಕ್ರಮ ಆಸ್ತಿ ಗಳಿಕೆ ಸಂಬಂಧ ಜಯಲಲಿತಾ ನ್ಯಾಯಾಲಯದ ಕಟಕಟೆ ಹತ್ತಬೇಕಾಗಿ ಬಂದದ್ದು ಇದಕ್ಕೆ ಒಂದು ಒಳ್ಳೆಯ ಉದಾಹರಣೆ.

18 ವರ್ಷಗಳ ನಂತರ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತಾಗಿ ಶಿಕ್ಷೆಯಾಗಿತ್ತು. ಕೀರ್ತಿಯ ಉತ್ತುಂಗದಲ್ಲಿದ್ದಾಗಲೇ ಅವರು ಜೈಲು ಸೇರುವಂತಾಗಿತ್ತು. ಹಾಲಿ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರ ಹಾಗೂ ಅಕ್ರಮ ಸಂಪತ್ತು ಗಳಿಕೆ ಆರೋಪದ ಮೇಲೆ ಜೈಲು ಸೇರುವ ಸಂದರ್ಭ ಬಂದದ್ದೂ ಒಂದು ವಿಪರ್ಯಾಸ! ಎಲ್ಲಾ ತತ್ವ, ಸಿದ್ಧಾಂತ, ಕಾನೂನಿನ ನಿಯಂತ್ರಣ ಮೀರಿ ಅಪರಾಧೀಕರಣಗೊಳ್ಳುತ್ತಿರುವ ರಾಜಕೀಯ ಕ್ಷೇತ್ರಕ್ಕೆ ನ್ಯಾಯಾಲಯದ ತೀರ್ಪು ಒಂದು ಎಚ್ಚರಿಕೆಯ ಗಂಟೆಯಾಗಿತ್ತು. ಆಮೇಲೆ ಹೈಕೋರ್ಟ್ ಅವರನ್ನು ಆರೋಪದಿಂದ ಮುಕ್ತಗೊಳಿಸಿತ್ತು. ಇದೀಗ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ವಿಚಾರಣೆಯಲ್ಲಿರುವಾಗಲೇ ಜಯಲಲಿತಾ ತಾವು ತಪ್ಪಿತಸ್ಥರಲ್ಲ ಎಂದು ಸಾಬೀತು ಪಡಿಸದೆಯೇ ನಿರ್ಗಮಿಸಿದ್ದಾರೆ. ಆದರೆ ತಮ್ಮ ಜನಪ್ರಿಯ ಯೋಜನೆಗಳಿಂದಾಗಿ ಬಹುಕಾಲ ತಮಿಳರ ಜನಮಾನಸದಲ್ಲಿ ಅಕ್ಕರೆಯ ಅಮ್ಮನಾಗಿ ನೆನಪಲ್ಲಿ ಉಳಿಯುವುದಂತೂ ನಿಸ್ಸಂದೇಹ!

10 ಟಿಪ್ಪಣಿಗಳು Post a comment
  1. shripad's avatar
    shripad
    ಡಿಸೆ 16 2016

    ಈಯಮ್ಮಳ ಮಾದರಿಯಲ್ಲೇ ಸಾಗುತ್ತಿರುವ (ಸ್ವಾಭಿಮಾನಿ ಜನರಿಗೆ!? ಆಮಿಷ ಕೊಡುವ ಯೋಜನೆ) ಕರ್ನಾಟಕದ ಸದ್ಯದ ಸರ್ಕಾರ ಕೂಡ ಶೇ.೨೫ ಮೀರಿದ ಸಾಲ ಮಾಡಿ ಪೈಸೆಯೂ ಸಾಲ ಹುಟ್ಟದ ಸ್ಥಿತಿಗೆ ತಲುಪಿದೆ. ‘ಬಿಟ್ಟಿ ಅಂದ್ರೆ ಬೆಳಗಾನ ಇಲ್ರಿ’ ಎಂಬ ಗಾದೆ ಸುಮ್ಮನೇ ಅಲ್ಲ. ಅಂಥ ತೂಕಡಿಸುವ ಜನರಿಗೆ ಹಾಸಿಗೆ ಹಾಸುವ ಯೋಜನೆಗಳನ್ನು ಜಾರಿ ಮಾಡುವ ಸರ್ಕಾರಗಳು ಸಮಾಜವನ್ನು ದಿಕ್ಕೆಡಿಸುತ್ತವೆ. ಮುಂದಿನ ತಲೆಮಾರಿಗೆ ತೆರಿಗೆ ಭಾರ ಮತ್ತಷ್ಟು ಏರುತ್ತದೆ. ಅಮ್ಮಾ ಯೋಜನೆಯ ಫಲ ಉಂಡವರು ಮುಂದಿನ ದಿನಗಳಲ್ಲಿ ಅಮ್ಮಾ ಹಗ್ಗವೂ ಇದ್ದಿದ್ದರೆ ಎಂದು ಯೋಚಿಸುವಂತಾಗುತ್ತದೆ!

    ಉತ್ತರ
    • ಶೆಟ್ಟಿನಾಗ ಶೇ.'s avatar
      ಶೆಟ್ಟಿನಾಗ ಶೇ.
      ಡಿಸೆ 18 2016

      ಮೆಡಿಕಲ್ ಕಾಲೇಜುಗಳ ಮೂಲಕ ಕಂಚಿ ಮಠ ಮಾಡಲು ಹೊರಟಿದ್ದು ಮೌಲ್ಯಾಭಿವೃದ್ಧಿಯನ್ನೇ ಅಲ್ಲವೇ ರಾಯರೇ! ;-p

      ಉತ್ತರ
      • shripad's avatar
        shripad
        ಡಿಸೆ 19 2016

        ಲಿಂಗಾಯತ ಗೌಡ ಮಠಗಳು, ಮುಸ್ಲಿಂ ಸಂಸ್ಥೆಗಳು ಇಂಥ ಕೆಲಸದಲ್ಲಿ ಬೇಕಾದಷ್ಟು ತೊಡಗಿವೆ. ಅವನ್ನೆಲ್ಲ ಮುಟ್ಟಲು ಯೋಗ್ಯತೆ ಇದೆಯಾ? ಡಬ್ಬಾಗಳು. ಡಬಲ್ ಸ್ಟಾಂಡರ್ಡ್ ಬುದ್ಧಿಜೀವಿಗಳು ನೀವು.

        ಉತ್ತರ
        • ಶೆಟ್ಟಿನಾಗ ಶೇ.'s avatar
          ಶೆಟ್ಟಿನಾಗ ಶೇ.
          ಡಿಸೆ 19 2016

          ಬ್ರಾಹ್ಮನೇತರ ಸಂಸ್ಥೆಗಳು ಹೇಲು ತಿನ್ನುವ ಕೆಲಸ ಮಾಡ್ತಾವೆ ಅಂದರೆ ಬ್ರಾಹ್ಮಣ ಮಠಗಳೂ ಅದನ್ನೇ ಮಾಡಬಹುದು ಅಂತಾನ ನಿಮ್ಮ ಅಭಿಪ್ರಾಯ?

          ಉತ್ತರ
          • shripad's avatar
            shripad
            ಡಿಸೆ 19 2016

            ನಿಧಾನಕ್ಕೆ ಹೇಳಿ…ತಮ್ಮ ಸಮುದಾಯದ ಸಂಸ್ಥೆಗಳು ಹೇಲು ತಿಂತಿವೆ ಎಂಬುದನ್ನು ಕೇಳಿ ದರ್ಗಾಗೆ ಆಘಾತವಾಗಬಹುದು…

            ಉತ್ತರ
            • ಶೆಟ್ಟಿನಾಗ ಶೇ.'s avatar
              ಶೆಟ್ಟಿನಾಗ ಶೇ.
              ಡಿಸೆ 19 2016

              ದರ್ಗಾ ಸರ್ ಅವರು ಹೇಲು ತಿನ್ನುವ ಸಂಸ್ಥೆಗಳೊಂದಿಗೆ ಎಂದಿಗೂ ಸಂಬಂಧ ಬೆಸೆದಿಲ್ಲ. ಅವರು ಬಡವರಿಗೆ ಅನ್ನ ತಿನ್ನಿಸುವ ಸಂಸ್ಥೆಗಳ ಜೊತೆಗೆ ಮಾತ್ರ ಸಂಬಂಧವಿಟ್ಟುಕೊಂಡಿದ್ದಾರೆ. ಆದುದರಿಂದಲೇ ಅವರು ಸಮಕಾಲಿನ ಸಮಾಜದ ಕ್ರಿಟಿಕಲ್ ಇನ್ಸೈಡರ್ ಆಗಿದ್ದಾರೆ. ಮುಸಲ್ಮಾನರಾಗಿದ್ದೂ ಬಸವಾದ್ವೈತಿ ಎನಿಸಿದ್ದಾರೆ. ಅವರ ವಿಚಾರ ಬಿಡಿ ಕಂಚಿ ಮಠದ ಬಗ್ಗೆ ಮಾತನಾಡಿ – ದುಡ್ಡಿನ ಆಸೆಗೆ ಶಿಕ್ಷಣವನ್ನು ಮಾರಬಹುದೇ?

              ಉತ್ತರ
              • SalamBava's avatar
                SalamBava
                ಡಿಸೆ 20 2016

                “ದುಡ್ಡಿನ ಆಸೆಗೆ ಶಿಕ್ಷಣವನ್ನು ಮಾರಬಹುದೇ?”

                Brilliant question Shetkar! Please Don’t stop asking such relevant questions just because some Witian, a fake ID con artist, denigrates you for questioning the hegemony of Brahmin Maths. These Hindutva fanatics hate Amma for her secular views but accept corruption of BJP leaders. Such is their hypocrisy. If Amma were the CM of Karnataka, Swamis who promote Made Sana and Pankti Bheda would have been sent to jail.

                ಉತ್ತರ
  2. WITIAN's avatar
    WITIAN
    ಡಿಸೆ 20 2016

    ರಾಕೇಶ್ ಶೆಟ್ಟರೆ, ನಿಮ್ಮ ಅಪಾರ ಪ್ರೀತಿಗೂ ಆದರಕ್ಕೂ ಪಾತ್ರನಾದ ಶಿಟ್ಟಿನಾಗ, ಉರುಫ್ ನಾಗಶಿಟ್ಟಿ ಹೇತ್ಕರ್, ಏಲಿಯಾಸ್ ಅಭಿನವ ಚೆನ್ನಬಸವಣ್ಣನ ಪ್ರತಿಕ್ರಿಯೆಗಳ ಪರಿಮಳವನ್ನು ಆಸ್ವಾದಿಸುತ್ತಾ ಕುಳಿತಿದ್ದೀರಾ? ಭ್ರಷ್ಟ ರಾಜಕಾರಣಿಯಬಗ್ಗೆ ಮಾತನಾಡುವಾಗ ಸಂಬಂಧ ಪಡದ ವಿಷಯ ಹಿಡಿದುಕೊಂಡು ಮುಷ್ಟಿ ಮೈಥುನ ಮಾಡಿಕೊಳ್ಳುವ ಈ ಕ್ರಿಮಿಯನ್ನು ದಯವಿಟ್ಟು ನಿಲುಮೆಯಿಂದ ಬಹಿಷ್ಕರಿಸಿ. ನೈಜ ಆಸಕ್ತಿಯಿರುವ ಓದುಗರು ನಿಮ್ಮ ಪುಟವನ್ನು ತೆರೆಯಬೇಕೆಂಬ ಅಪೇಕ್ಷೆ ನಿಮಗಿದ್ದರೆ ಈ ಕೆಲಸ ಮೊದಲು ಮಾಡಿ. ಇಲ್ಲದಿದ್ದರೆ ಯಾರೂ ನಿಮ್ಮ ಜಾಲತಾಣಕ್ಕೆ ಭೇಟಿಕೊಡುವುದಿಲ್ಲ. ಸುವಾಸನೆಯಿದ್ದಲ್ಲಿ ಜನ ಬರುತ್ತಾರೆಯೇ ಹೊರತು ಕೊಚ್ಚೆಗುಂಡಿಗಲ್ಲ.

    ಉತ್ತರ
    • Anonymous's avatar
      Anonymous
      ಡಿಸೆ 20 2016

      “ಸುವಾಸನೆಯಿದ್ದಲ್ಲಿ ಜನ ಬರುತ್ತಾರೆಯೇ ಹೊರತು ಕೊಚ್ಚೆಗುಂಡಿಗಲ್ಲ.”

      ನಿಜ! ಆದರೆ ನಿಲುಮೆ ಒಂದು ಕೊಚ್ಚೆಗುಂಡಿ ಆಗಲು ತಾವೂ ಒಬ್ಬ ಕಾರಣಕರ್ತರು!! ಆದುದರಿಂದ ದಯವಿಟ್ಟು ಇನ್ನು ಮುಂದೆ “ಶಿಟ್ಟಿನಾಗ”, ” ನಾಗಶಿಟ್ಟಿ ಹೇತ್ಕರ್”, “ಮುಷ್ಟಿ ಮೈಥುನ” ಇತ್ಯಾದಿಗಳನ್ನು ಇಲ್ಲಿ ಎಸೆಯಬೇಡಿ. ಶೇತ್ಕಾರ್ ಒಬ್ಬ ಮೂರ್ಖನೇ ಇರಬಹುದು ಆದರೆ ತಾವು ಬುದ್ಧಿ ಇರುವ ಜನ ಹೆಚ್ಚಿನ ಜಾಗರೂಕತೆ ವಹಿಸುವುದು ಎಲ್ಲರಿಗೂ ಶ್ರೇಯಸ್ಕರ.

      ಉತ್ತರ
  3. SalamBava's avatar
    SalamBava
    ಡಿಸೆ 20 2016

    “ಭ್ರಷ್ಟ ರಾಜಕಾರಣಿಯಬಗ್ಗೆ ಮಾತನಾಡುವಾಗ ಸಂಬಂಧ ಪಡದ ವಿಷಯ ಹಿಡಿದುಕೊಂಡು”

    Oh really?! Everyone knows how Amma upheld secular fabric of India by jailing Kanchi Swamy in the famous Shankar Raman murder case. That’s the reason why Hindutva brigade is anti Amma. Regarding corruption who in BJP is not corrupt? There’ll be earthquake when Rahulji opens his mouth.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments