ವಿಷಯದ ವಿವರಗಳಿಗೆ ದಾಟಿರಿ

Archive for

5
ಡಿಸೆ

ನನ್ನೆಸ್ರು ಕಂಪ್ಯೂಟರ್ರೇ. ಬೇಕಾದ್ರೆ ಈ ಏರೋಪ್ಲೇನನ್ ಕೇಳ್ರಿ!

– ರೋಹಿತ್ ಚಕ್ರತೀರ್ಥ

780053446ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಕೂಗಳತೆ ದೂರದಲ್ಲಿರುವ ಹೊಸೂರು ಹಳ್ಳಿಯ ಯಾವುದೋ ಗಲ್ಲಿಯಲ್ಲಿ ಹೋಗಿ ಕಂಪ್ಯೂಟರ್ ಎಂದು ಜೋರಾಗಿ ಕೂಗುತ್ತೀರಿ. ಆಗ ಗಲ್ಲಿಯ ನಾಲ್ಕು ಮೂಲೆಯಿಂದ ನಾಲ್ಕು ಹುಡುಗರು ಓಡಿಬಂದು ನಿಮ್ಮ ಮುಂದೆ ನಿಲ್ಲುತ್ತಾರೆ. ಏನಯ್ಯ, ನೀವ್ಯಾಕ್ರಯ್ಯ ಬಂದ್ರಿ ಎಂದರೆ ನಮ್ಮ ಹೆಸರು ಕಂಪ್ಯೂಟರ್ ಅಂತಾ ಸಾರ್ ಎಂದು ನಿಮ್ಮನ್ನೇ ಗೊಂದಲಕ್ಕೆ ಬೀಳಿಸಿಬಿಡುತ್ತವೆ ಆ ಚಳ್ಳೆಪಿಳ್ಳೆಗಳು. ಹೋಗೋಗ್ರೋ, ಕಂಪ್ಯೂಟರ್ ಅನ್ನೋ ಹೆಸರನ್ನ ಮನುಷ್ಯರಿಗ್ಯಾರಾದ್ರೂ ಇಡತಾರಾ ಅಂತ ಅವರ ಜೊತೆ ವಾದಕ್ಕಿಳಿದಿರಾ, ಮುಗೀತು ಕತೆ! ಬೇಕಾದ್ರೆ ನನ್ ಅಣ್ಣ ಹೈಕೋರ್ಟನ್ನ ಕೇಳಿ ಅನ್ನಬಹುದೊಬ್ಬ. ನಮ್ ಕೇರಿಯ ಬಸ್ಸು, ಟ್ರೇನು, ಮಿಲಿಟ್ರಿ, ರಾಕೆಟ್ ಯಾರನ್ನು ಬೇಕಾದರೂ ಕೇಳ್ರಿ; ನನ್ ಹೆಸರು ಹೇಳತಾರೆ ಅನ್ನಬಹುದು ಇನ್ನೊಬ್ಬ. ನನ್ನ ಅಕ್ಕ ಹೇಮಮಾಲಿನೀನ ಕೇಳಿ, ಇಲ್ಲಾ ನನ್ನವ್ವನ ತಂಗೀ ಮಗ ರಾಜೇಶ್ ಖನ್ನನನ್ನ ಕೇಳಿ ಅನ್ನಬಹುದು ಮೂರನೆಯವನು. ನಮಗೆಲ್ಲ ವೋಟರ್ ಕಾರ್ಡ್ ಮಾಡಿಸುವ ಜಲ್ಲಿಯಮ್ಮ ಜಪಾನ್ ಅವರನ್ನೇ ಕೇಳಿ ಬನ್ನಿ ಅನ್ನಬಹುದು ನಾಲ್ಕನೆ ಹುಡುಗ. ಅಂದ ಹಾಗೆ, ನಾವು ಜಗತ್ತಲ್ಲಿ ನೋಡಬಹುದಾದ ದೋಸೆ, ಫೋನ್, ಕಾಫಿ, ಬಾಲ್, ಸೈಕಲ್, ಮೈಸೂರು ಪಾಕ್, ಏರೋಪ್ಲೇನ್, ಕ್ರಿಕೆಟ್ ಎಲ್ಲವೂ ಇಲ್ಲಿ ಮನುಷ್ಯರ ಹೆಸರುಗಳಾಗಿ ಅವತರಿಸಿವೆ. ಇಂಥದೊಂದು ವಿಚಿತ್ರ ಜಗತ್ತನ್ನು ನೋಡಬೇಕಾದರೆ ನಾವು ಹಕ್ಕಿಪಿಕ್ಕಿಗಳ ಹಾಡಿಗೇ ಹೋಗಿಬರಬೇಕು! ಮತ್ತಷ್ಟು ಓದು »

4
ಡಿಸೆ

ಪರ ವಿರೋಧಗಳ ನಡುವೆ ನೋಟುಗಳ ಸಮಸ್ಯೆ

– ಮು ಅ ಶ್ರೀರಂಗ

untitledಪ್ರಜಾಪ್ರಭುತ್ವದಲ್ಲಿ ‘ಪಾಸಿಟಿವ್ ಆದ ವಾತಾವರಣ’ ಎಂಬುದು ಒಂದು ಆದರ್ಶವಾಗಬಹುದಷ್ಟೇ ಹೊರತು ವಾಸ್ತವ ಆಗಲಾರದು. ಹೀಗಾಗಿ  ಕೆಲವೊಂದು ಸುಧಾರಣೆಗಳನ್ನು ಮುಂದಿನ ದಿನಗಳ ಒಳಿತಿಗಾಗಿ, ಕೆಲವರಿಗೆ ಸದ್ಯಕ್ಕೆ ಅನಾನುಕೂಲವೆನಿಸಿದರೂ, ಇದು ಪಾಸಿಟಿವ್ ಆದ ವಾತಾವರಣ ಅಲ್ಲ ಎಂದು ಅನಿಸಿದರೂ  ತರಲೇಬೇಕಾಗುತ್ತದೆ. ಹಿಂದೆ ಭಾರತದಲ್ಲಿ ಭೂಸುಧಾರಣಾ ಕಾನೂನು, ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದತಿ ಇವುಗಳನ್ನು ಜಾರಿಗೆ ತಂದಾಗಲೂ ‘ಎಲ್ಲೂ, ಎಲ್ಲರಲ್ಲೂ ಪಾಸಿಟಿವ್ ಆದ ವಾತಾವರಣ’ ಇರಲಿಲ್ಲ.  ಭಾರತದಲ್ಲಿ ಅನಕ್ಷರಸ್ಥರೇ ಜಾಸ್ತಿ; ಇಡೀ ದೇಶದಲ್ಲಿ ಅಕ್ಷರಸ್ಥರು ಜಾಸ್ತಿ ಇರುವ ರಾಜ್ಯವಾದ  ಕೇರಳದಲ್ಲಿ ಸಹ ‘ನಗದು’ ವ್ಯವಹಾರವೇ ಜಾಸ್ತಿ; ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, Paytm ಇತ್ಯಾದಿಗಳ ಮೂಲಕ ವ್ಯವಹಾರ ಕಡಿಮೆ. ಹೀಗಾಗಿ ಇಡೀ ಭಾರತದಲ್ಲಿ ಈ ವ್ಯವಸ್ಥೆಯನ್ನು ಶೇಕಡಾ ಐವತ್ತರಷ್ಟು ಜಾರಿಗೆ ತರುವುದೂ ಅಸಾಧ್ಯ ಎಂದು ಹೇಳಲು ಕೆಲವರು ಕೊಡುವ ಅಂಕಿ-ಅಂಶಗಳ ಬಗ್ಗೆ ನನ್ನ ತಕರಾರೇನೂ ಇಲ್ಲ. ಯಾವುದಾದರೂ ಒಂದೆರೆಡು ಸಂಸ್ಥೆಗಳು ಅಂತಹ sample surveyಗಳನ್ನು ಮಾಡಿರುತ್ತವೆ. ಅವುಗಳ ಆಧಾರದ ಮೇಲೆ ಹೇಳಿರುತ್ತಾರೆ. ಚುನಾವಣೆಯ ಫಲಿತಾಂಶಗಳು, ಯಾವುದೋ ಒಂದು ಸಾಮಾಜಿಕ ಸಮಸ್ಯೆ ಇವುಗಳ ಬಗೆಗಿನ ಇಂತಹ ಅಂಕಿ-ಅಂಶಗಳು ‘ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಜಾಸ್ತಿ’. ಈಗಂತೂ ಸುದ್ದಿ ವಾಹಿನಿಗಳು yes or no ಎಂಬ ಎರಡು ಪದಗಳ sms ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿವೆ! ಅಲ್ಲಿಗೆ ಮುಗಿಯಿತು. ಅದೇ ಸತ್ಯ, ದೂಸರಾ ಮಾತಿಲ್ಲ.  ಮತ್ತಷ್ಟು ಓದು »

3
ಡಿಸೆ

ಸಾಹಿತಿ, ಬುದ್ಧಿಜೀವಿಗಳ ಆತ್ಮ ಸಾಕ್ಷಿ ಯಾರ ಪಾದಾರುವಿಂದವನ್ನು ಸೇರಿದೆ?

ಕಿರಣ್ ಕಿಜೋ
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ
ಆಂಧ್ರ ಪ್ರದೇಶ

15203330_1161962633852199_2178590942366491034_nಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅರೆನಗ್ನ ಚಿತ್ರ ನೋಡಿ, ಸಾಕಷ್ಟು ಛೀಮಾರಿಗೆ ಒಳಗಾಗಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್, “ಮೂರೂ ಬಿಟ್ಟವರು ಊರಿಗೆ ದೊಡ್ಡವರು” ಎನ್ನುವ ಹಾಗೇ ಓಡಾಡಿಕೊಂಡಿರುವುದನ್ನು ನೋಡಿದರೆ ನಿಜಕ್ಕೂ ಖೇದವೆನಿಸುತ್ತದೆ. ಈ ನಡುವೆ ಸರ್ಕಾರವು ಸಚಿವ ಮಹಾಶಯರ ಬೆನ್ನಿಗೆ ನಿಂತು, ಸಿ.ಐ.ಡಿ.ಯಿಂದ ತನಿಖೆಯ ನಾಟಕವಾಡಿಸಿ ಕ್ಲೀನ್‍ಚೀಟ್ ನೀಡುವ ಉಮ್ಮೇದಿಯಲ್ಲಿದೆ. ನಿಷ್ಠ ಪೋಲಿಸ್ ಅಧಿಕಾರಿ ಗಣಪತಿ ಸಾವಿನ ವಿಚಾರದಲ್ಲೇ ಜಾರ್ಜ್‍ಗೆ ಕ್ಲೀನ್‍ಚೀಟ್ ನೀಡಿದವರಿಗೆ, ಈ ಪ್ರಕರಣ ಹೂವೆತ್ತಿದಷ್ಟೇ ಸಲೀಸು ಬಿಡಿ! ಇರಲಿ, ಇದೆಲ್ಲಾ ರಾಜಕಾರಣದ ಕೇಡಿನ ಭಾಗ. ನನ್ನ ಪ್ರಶ್ನೆ ಆ ಕುರಿತದ್ದಲ್ಲ, ಆ ಉದ್ದೇಶವೂ ನನ್ನಲ್ಲಿಲ್ಲ. ಆದರೆ ಸಭ್ಯ, ಪ್ರಜ್ಞಾವಂತ ಸಮಾಜವನ್ನು ಕಾಡುತ್ತಿರುವುದು ಹಾಗೂ ಸಂಕಟಕ್ಕೆ ದೂಡಿರುವುದು, ಈ ಮನುಷ್ಯ ನಾಡಿದ್ದು ರಾಯಚೂರಿನಲ್ಲಿ ನಡೆಯುತ್ತಿರುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷನೆಂಬುದು! ಮತ್ತಷ್ಟು ಓದು »

3
ಡಿಸೆ

ಆ ಯೋಧನ ಸಾವೂ ಕೂಡಾ ಚಿಲ್ಲರೆ ಸಂಗತಿಯಲ್ಲಿ ಹೂತುಹೋಯಿತು..!

– ಸಂತೋಷ್ ತಮ್ಮಯ್ಯ

srinivas-kumar-sinha-3ಅಂದು ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆಯೊಂದುನಡೆದುಹೋಗಿತ್ತು. ದೇಶಾದ್ಯಂತ ಅಚ್ಚರಿ, ಕೆಲವರಿಗೆ ಆಘಾತ. ಇದೇಕೆ ಹೀಗೆ ಎಂಬ ಉದ್ಗಾರ. ಆರ್ಮಿ ಕೇಂದ್ರಕಛೇರಿಯ ಸೌತ್‌ಬ್ಲಾಕ್‌ನಲ್ಲಿ ತಿಂಗಳುಗಟ್ಟಲೆ ಗಾಸಿಫ್‌ಗಳು. ಎಮರ್ಜೆನ್ಸಿ ಇನ್ನೂ ಹೋಗಿಲ್ಲವೇ? ಇಂದಿರಾ ಸರ್ವಾಧಿಕಾರಕ್ಕೆ ಇದಕ್ಕಿಂತ ಇನ್ನೇನು ಉದಾಹರಣೆ ಬೇಕು ಎಂದು ವಿರೋಧ ಪಕ್ಷಗಳ ಆರೋಪ.

ಅಂದು ನಡೆದಿದ್ದು ಇಷ್ಟು:
ಆರ್ಮಿಯ ೧೧ನೇ ಚೀಫ್ ಆಫ್ ಆರ್ಮಿ ಸ್ಟಾಫ್ ಕೆ.ವಿ ಕೃಷ್ಣರಾವ್ ೧೯೮೩ರ ಮೇ ಕೊನೆಯಲ್ಲಿ ನಿವೃತ್ತರಾಗುವವರಿದ್ದರು. ಕೆಲವು ದಿನಗಳ ಹಿಂದಿನಿಂದಲೇ ಸೌತ್ ಬ್ಲಾಕ್ ಹೊಸ ಜನರಲ್‌ನ ನೇಮಕದ ಪ್ರಕ್ರಿಯೆಯಲ್ಲಿ ನಿರತವಾಗಿತ್ತು. ಹೊಸ ಜನರಲ್ ಯಾರೆಂಬ ಬಗ್ಗೆ ಆರ್ಮಿಗಾಗಲಿ, ಜನರಿಗಾಗಲೀ ಯಾವುದೇ ಗೊಂದಲಗಳಿರಲಿಲ್ಲ. ಏಕೆಂದರೆ ಕೃಷ್ಣರಾವ್ ಚೀಫ್ ಆಗಿದ್ದಾಗ ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದವರು ಮಹಾ ಮೇಧಾವಿ ಯೋಧ ಶ್ರೀನಿವಾಸ್ ಕುಮಾರ್ ಸಿನ್ಹಾ. ಮಿಲಿಟರಿಯ ಸೇವಾರ್ಹತೆಯಲ್ಲಿ ಸದ್ಯಕ್ಕಿದ್ದ ಹಿರಿಯರು ಅವರೇ. ಅಲ್ಲದೆ ಅವರು ಪ್ರಥಮ ಮಹಾದಂಡನಾಯಕ ಜನರಲ್ ಕಾರ್ಯಪ್ಪನವರಿಗೆ adc-aide de corps ಅಗಿದ್ದ ಅನುಭವಸ್ಥರು. ಜನರಲ್ ಆಯ್ಕೆಗೆ ಇನ್ನು ಅಧಿಕೃತ ಪ್ರಕಟಣೆಯೊಂದು ಮಾತ್ರ ಉಳಿದಿತ್ತು. ಜ.ಕೃಷ್ಣರಾವ್ ನಿವೃತ್ತರಾಗುವ ಕೇವಲ ಮೂರು ದಿನಗಳ ಹಿಂದೆ ಆ ಅಧಿಕೃತ ಪ್ರಕಟಣೆ ಹೊರಬಿತ್ತು. ದೇಶವನ್ನು ಆಘಾತಕ್ಕೆ ದೂಡಿದ್ದು ಆ ಪ್ರಕಟಣೆಯೇ. ಏಕೆಂದರೆ ಎಸ್. ಕೆ. ಸಿನ್ಹಾ ಅವರಿಗಿಂತ ವಯಸ್ಸಿನಲ್ಲೂ, ಸೇವಾವಧಿಯಲ್ಲೂ ಕಿರಿಯರಾಗಿದ್ದ ಲೆ.ಜ ಎ.ಎಸ್. ವೈದ್ಯ ಅವರನ್ನು ಭೂಸೇನೆಯ ದಂಡನಾಯಕ ಎಂದು ಘೋಷಣೆ ಮಾಡಲಾಗಿತ್ತು. ಈ ಎ.ಎಸ್ ವೈದ್ಯ ಎಂಥ ಮಹಾ ಯೋಧರೆಂದರೆ ಮಹಾವೀರ ಚಕ್ರವನ್ನು ಎರಡೆರಡು ಬಾರಿ ಪಡೆದು mahavirachakra bar ಎಂದು ಹೆಸರು ಪಡೆದಿದ್ದವರು. ಅಂದರೆ ಎಸ್. ಕೆ ಸಿನ್ಹಾರನ್ನು ಸೂಪರ್ ಸೀಡ್ ಮಾಡಲಾಗಿತ್ತು! ಮತ್ತಷ್ಟು ಓದು »

2
ಡಿಸೆ

ಮೋದಿ ಭಾರತದಲ್ಲಿ ತೀವ್ರಗೊಂಡ ನಿರುದ್ಯೋಗ ಸಮಸ್ಯೆ : ಚಿಂತಾಜನಕ ಮಾಹಿತಿ (ಸುಳ್ಸುದ್ದಿ)

ಪ್ರವೀಣ್ ಕುಮಾರ್, ಮಾವಿನಕಾಡು

sulsuddi-2ನವದೆಹಲಿ, ಡಿಸೆಂಬರ್ 2 : ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹಿಂದೆಂದಿಗಿಂತಲೂ ತೀವ್ರವಾಗಿದೆ. ಕಳೆದ ಹನ್ನೆರಡು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ ನಿರುದ್ಯೋಗ ದೇಶದಲ್ಲಿ ತಾಂಡವವಾಡುತ್ತಿರುವುದು ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ.

ಕಳೆದ ನವೆಂಬರ್.8 ನೇ ತಾರೀಕಿನಿಂದ ದೇಶದಲ್ಲಿ ಇಲ್ಲಿಯವರೆಗೆ 15 ರಿಂದ 65 ರ ವಯಸ್ಸಿನ ಸುಮಾರು 8% ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸೆಂಟ್ರಲ್‌ ಗಂಜಿ ಬ್ಯೂರೋ ನಡೆಸಿದ ಉದ್ಯೋಗ-ನಿರುದ್ಯೋಗ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಮತ್ತಷ್ಟು ಓದು »

1
ಡಿಸೆ

ಅನಾಣ್ಯೀಕರಣ ಯಾಕೆ ? ಹೇಗೆ ?

– ರೂಪಲಕ್ಷ್ಮಿ

hqdefaultಮೋದಿಯವರು ಈ ೫೦೦/೧೦೦೦ ನೋಟ್ ಗಳನ್ನು ನಿಷೇಧಿಸಿದ ದಿವಸದಿಂದ ಜನರಿಗೆ ಸಿಕ್ಕಾಪಟ್ಟೆ ಗೊಂದಲಗಳು. ಬಹುಶಃ ರಹಸ್ಯವಾಗಿಟ್ಟು, ದಿಢೀರನೆ ಘೋಷಿಸಿದ್ದರಿಂದಾದ ಪ್ರಮಾದವಿದು. ಮಾಧ್ಯಮಗಳು ಕೂಡ ವಸ್ತುನಿಷ್ಟವಾಗಿ ಇದನ್ನು ವಿಶ್ಲೇಷಿಸದೆ, ಯುದ್ಧವೇ ಘೋಷಣೆಯಾಗಿದೆ ಅನ್ನುವ ರೀತಿಯಲ್ಲಿ ಬಿಂಬಿಸಿದ್ದು ಮತ್ತೊಂದು ಕಾರಣ. ಕಪ್ಪು ಹಣ / ಬಿಳಿ ಹಣ, ೨೦೦% ಟ್ಯಾಕ್ಸ್ / ೫೦% ಟ್ಯಾಕ್ಸ್, ರಾಜಕಾರಣಿಗಳು / ಉದ್ಯಮಿಗಳು, ೨೦೦೦ದ ನೋಟ್ / ೫೦೦ ರ ನೋಟ್, ನಮಗೆ ಟೈಮ್ ಕೊಡಬೇಕಿತ್ತು ಅಂತಾ ಒಂದಷ್ಟು ಜನರ ಬೊಬ್ಬೆ, ಬಡಜನರು ಸಾಯ್ತಿದ್ದಾರೆ ಅಂತಾ ಒಂದಷ್ಟು ಜನರ ಗೋಳು, ಇದರ ಮಧ್ಯೆ ಆ ನೋಟ್ ಗಳನ್ನು ನಿಷೇಧಿಸಿರುವುದಷ್ಟೆ, ಮೌಲ್ಯವನ್ನಲ್ಲ, ಅದಕ್ಕೆ ನಿಮಗೆ ಬದಲಾಯಿಸಲು ಅಥವಾ ನಿಮ್ಮ ಅಕೌಂಟಿಗೆ ಪಡೆಯಲು ೫೦ ದಿವಸಗಳ ಕಾಲಾವಕಾಶ ಇದೆ ಎಂದರೂ ಕೂಡ ಜನರು ಅರ್ಜೆಂಟಿನಲ್ಲಿ ಹೋಗಿ, ಅವಶ್ಯಕತೆ ಇದೆಯೋ, ಇಲ್ಲವೋ, ಕ್ಯೂ ನಲ್ಲಿ ನಿಂತು ಹಣ ತಂದು ಸಂಗ್ರಹಿಸಿಟ್ಟುಕೊಂಡು ಸದ್ಯ, ಬದಲಾಯಿಸಿಕೊಂಡ್ವಿ ಎಂಬ ನಿಟ್ಟುಸಿರು ಬಿಟ್ಟರು. ಮತ್ತೂ ಕೆಲವರು ಇದೇ ಸಮಯದಲ್ಲಿ ತಮ್ಮಲ್ಲಿರುವ ಕಪ್ಪು ಹಣವನ್ನು ಬದಲಾಯಿಸಲು ಪೈಪೋಟಿಗೆ ಬಿದ್ದವರಂತೆ ಕೂಲಿಯಾಳುಗಳನ್ನು ಕ್ಯೂ ನಲ್ಲಿ ನಿಲ್ಲಿಸಿ, ಹಣ ಬದಲಾಯಿಸಿದರು. ಮೋದಿಯವರು ಯಾರೂ ಕೂಡ ಹೆದರುವ ಅವಶ್ಯಕತೆಯಿಲ್ಲ ಎಂದು ಸಾರಿ, ಸಾರಿ ಹೇಳಿದರೂ ಕೂಡ ಬಡವ, ಬಲ್ಲಿದರೆನ್ನದೆ ಕ್ಯೂನಲ್ಲಿ ನಿಂತದ್ದೇ, ನಿಂತದ್ದು. ಹಾಗಿದ್ದರೆ ಈ ಅನಾಣ್ಯೀಕರಣದಿಂದ ತೊಂದರೆಗಳಿಲ್ಲವೇ? ಈ ಯೋಜನೆಯಿಂದ ದೇಶಕ್ಕಾಗುವ ಉಪಯೋಗಗಳೇನು? ಮತ್ತಷ್ಟು ಓದು »