ವಿಷಯದ ವಿವರಗಳಿಗೆ ದಾಟಿರಿ

Archive for

3
ಫೆಬ್ರ

ಬಿ.ಜಿ.ಎಲ್. ಸ್ವಾಮಿಯವರ ಕುರಿತಾದ ‘ಸ್ವಾಮಿಯಾನ’ ಪುಸ್ತಕ

– ಪ್ರಶಾಂತ್ ಭಟ್

5-feb-b-g-l-swamyಬಿ.ಜಿ.ಎಲ್. ಸ್ವಾಮಿ ಕನ್ನಡಿಗರಿಗೆ ಪರಿಚಿತ ಹೆಸರು. ಅವರ ‘ಹಸುರು ಹೊನ್ನು’, ‘ಕಾಲೇಜು ರಂಗ’, ‘ಸಾಕ್ಷಾತ್ಕಾರದ ಹಾದಿಯಲ್ಲಿ’, ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ’ ಇತ್ಯಾದಿ ಪುಸ್ತಕಗಳು ಹಾಸ್ಯದ ಜೊತೆಗೆ ಸಸ್ಯಶಾಸ್ತ್ರದ ಕುರಿತಾದ ಅರಿವನ್ನೂ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ೧೯೮೦ರಲ್ಲೇ ಧೈವಾಧೀನರಾದ ಸ್ವಾಮಿಯವರು ಹೇಗಿದ್ದರು, ಅವರ ಹುಡುಕಾಟದ ಶೈಲಿ, ಜೀವನ ವಿಧಾನ ಇನ್ನಿತರ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅಂತ ಹುಡುಕಾಡಿದರೆ ಸಿಗುವ ಮಾಹಿತಿ ತುಂಬಾ ಕಡಿಮೆ. ಹೀಗಾಗಿ ಅವರ ಪುಸ್ತಕಗಳ ಮೂಲಕ ಮತ್ತು ಅವರ ತಂದೆ ಡಿ.ವಿ.ಗುಂಡಪ್ಪನವರ ಕುರಿತಾದ ಚಿತ್ರಣಗಳಲ್ಲಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ನುಸುಳುವ ( ಉದಾಹರಣೆಗೆ ಡಿ.ವಿ.ಜಿ.ಯವರ ಮಗಳು ತಂದೆಯ ಬಗ್ಗೆ ಬರೆಯುವಾಗ ‘ಸ್ವಾಮಿ ನಮ್ಮನ್ನು ತುಂಬಾ ಗೋಳು ಹೊಯ್ಕೊಳ್ಳುವವನು, ಆದರೆ ಯಾವಾಗ ಬರೆಯಲು ಶುರು ಮಾಡಿದನೋ ಆವಾಗಿನಿಂದ ಗಂಭೀರನಾದ. ಹಾಸಿಗೆಗೆ ಕಾಲು ಒರಗಿಸಿ ಬರೆಯುತ್ತಿದ್ದ’ ಇತ್ಯಾದಿ) ಪ್ರಸಕ್ತಿಗಳೇ ಅಧಿಕ. ಮತ್ತಷ್ಟು ಓದು »