ವಿಷಯದ ವಿವರಗಳಿಗೆ ದಾಟಿರಿ

Archive for

25
ಫೆಬ್ರ

ಸತ್ಯಂ ಶಿವಂ ಸುಂದರಂ

– ರೋಹಿತ್ ಚಕ್ರತೀರ್ಥ

shiv-mahapuran“ನೀವು ವಿಜ್ಞಾನ ಬರಹಗಾರರಾಗಿ ದೇವರನ್ನು ನಂಬ್ತೀರಾ?!” ಎಂಬ ಪ್ರಶ್ನೆ ಸಾಧಾರಣವಾಗಿ ಆಗಾಗ ನನ್ನೆದುರು ಬರುತ್ತದೆ. ಹೆಚ್ಚಾಗಿ ಅಂಥ ಸಂದರ್ಭಗಳಲ್ಲೆಲ್ಲ ಪ್ರಶ್ನೆ ಕೇಳಿದವರು ಯಾರು ಎಂಬುದನ್ನು ನೋಡಿಕೊಂಡು ಉತ್ತರ ಕೊಡುತ್ತೇನೆ. ನಿಜವಾಗಿಯೂ ಧಾರ್ಮಿಕರಾಗಿದ್ದು ನನ್ನ ವಿಜ್ಞಾನ ಲೇಖನಗಳನ್ನೂ ಓದಿಕೊಂಡವರು ಕೇಳಿದ್ದರೆ ಸಂಕ್ಷಿಪ್ತವಾಗಿ “ಹೌದು” ಎಂದುಬಿಡುತ್ತೇನೆ. ಆಗ ಅವರಿಗೆ ಖುಷಿಯಾಗುತ್ತದೆ. ಪರವಾಗಿಲ್ಲ, ವಿಜ್ಞಾನ ಗಿಜ್ಞಾನ ಅಂತ ಹೇಳ್ತಿದ್ದರೂ ಹುಡುಗನಿಗೆ ದೈವಭಕ್ತಿ ಇದೆ ಎಂದು ಸಂಭ್ರಮಪಡುತ್ತ ಹೋಗುತ್ತಾರೆ. ಸ್ವಲ್ಪ ವಿಚಾರವಾದಿಗಳ ಹಾಗೆ ಕಂಡರೆ “ನಾನು ಆಸ್ತಿಕ ಎಂದು ಹೇಳಿದ್ದ ಸ್ಟೇಟ್‍ಮೆಂಟ್ ಇದ್ದರೆ ಕೊಡಿ” ಎಂದು ಕೇಳುತ್ತೇನೆ. ಈ ಮನುಷ್ಯ ಅದ್ಯಾಕೋ ಯುದ್ಧಕ್ಕೆ ಅಣಿಯಾಗುತ್ತಿದ್ದಾನೆ ಎಂದು ಭಾವಿಸಿದ ಅವರು ದೇವರನ್ನು ನಂಬುವ ವಿಚಾರವನ್ನು ಅಲ್ಲಿಗೇ ಬಿಟ್ಟು “ಈ ವಾರ ಈರುಳ್ಳಿ ಬೆಲೆ ಏರಿದೆ ನೋಡಿ” ಎಂದು ವಿಷಯಾಂತರ ಮಾಡುತ್ತಾರೆ. ಒಂದೆರಡು ವರ್ಷಗಳ ಹಿಂದೆ ಓರ್ವ ಹಿರಿಯ ವಿಜ್ಞಾನ ಲೇಖಕರೇ ನನಗೆ “ವಿಜ್ಞಾನ ಬರೆಯುವವನಾಗಿ ದೇವರನ್ನು ಹೇಗೆ ನಂಬ್ತೀಯೋ?” ಎಂದು ಕೇಳಿ ಗೊಂದಲಪಡಿಸಿದ್ದರು. “ನನಗೆ ದೇವರ ಬಗ್ಗೆ ಭಕ್ತಿ ಎಂಬುದು ಯಾಕೋ ಅಷ್ಟು ಸುಲಭದಲ್ಲಿ ಬರುವುದಿಲ್ಲ. ದೇವರ ಬಗ್ಗೆ ಕುತೂಹಲ ಇದೆ, ಪ್ರೀತಿ ಇದೆ, ಗೆಳೆತನ ಇದೆ” ಎಂದಿದ್ದೆ. “ಓಹೋ ಹಾಗೋ? ಅಂದರೆ ನೀನು ನಾಸ್ತಿಕನೆಂದಾಯಿತು. ನಾಸ್ತಿಕನಾಗಿದ್ದು ಆಸ್ತಿಕನಂತೆ ಬರೆಯಬೇಡ. ಆಸ್ತಿಕನಾಗಿದ್ದು ನಾಸ್ತಿಕನಂತೆ ಬರೆ” ಎಂದು ಅವರು ಉಪದೇಶ ಮಾಡಿದ್ದರು! ಅಸಲಿಗೆ ನನಗೆ ನಾನು ಆಸ್ತಿಕನೋ ನಾಸ್ತಿಕನೋ ಎಂಬ ಪ್ರಶ್ನೆಯೇ ಪ್ರಮುಖ ಅನ್ನಿಸಿಲ್ಲ. ಜಗತ್ತಿನಲ್ಲಿರುವ ಪ್ರತಿ ವ್ಯಕ್ತಿಯೂ ಈ ಎರಡು ಕೆಟಗರಿಗಳಲ್ಲಿ ಒಂದನ್ನು ಆರಿಸಿಕೊಳ್ಳಲೇಬೇಕು ಎಂದು ಯಾರಾದರೂ ಸರ್ವಾಧಿಕಾರಿ ರೂಲ್ಸು ಮಾಡುವ ತನಕ ನನಗೆ ನಿಶ್ಚಿಂತೆ. ಮತ್ತಷ್ಟು ಓದು »