ವಿಷಯದ ವಿವರಗಳಿಗೆ ದಾಟಿರಿ

Archive for

10
ಫೆಬ್ರ

ಕಡಲತಡಿಯಲ್ಲಿ ಮೊಳಗಲಿದೆ ಸಾಹಿತ್ಯ ಸಮ್ಮೇಳನದ ಝೇಂಕಾರ

– ರಾಜೇಶ್ ನರಿಂಗಾನ

img-20170209-wa0015ಹೌದು.. ಕಡಲತೀರ ಮಂಗಳೂರು ಒಂದು ವಿಶಿಷ್ಟ, ವಿನೂತನ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಜ್ಜುಗೊಂಡಿದೆ. ಇದನ್ನು ವಿಶಿಷ್ಟ, ವಿನೂತನ ಎಂದು ಕರೆಯುವುದಕ್ಕೂ ಕಾರಣವಿದೆ. ಇದು ದೇಶದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವ ಸಾಹಿತ್ಯದ ಉತ್ಸವ. ಜಗತ್ತು ಕಂಡ ಶ್ರೇಷ್ಠ ಸಂತ, ಸಿಡಿಲ ಸಂನ್ಯಾಸಿ ಸ್ವಾಮಿ ವಿವೇಕಾನಂದ ಮತ್ತು ಅವರ ಅಸ್ಖಲಿತ ವಾಗ್ಝರಿಗೆ ಮರುಳಾಗಿ ದೂರದ ಪಾಶ್ಚಿಮಾತ್ಯ ದೇಶವಾದ ಐರ್ಲೆಂಡಿನಿಂದ ಭಾರತಕ್ಕೆ ಆಗಮಿಸಿ, ಈ ದೇಶಕ್ಕಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ನಿವೇದಿಸಿದ ಸೋದರಿ ನಿವೇದಿತಾ ಅವರ ಸಾಹಿತ್ಯದ ಸಂಗಮವಿದು. ಈ ಇಬ್ಬರು ಶ್ರೇಷ್ಟ ವ್ಯಕ್ತಿಗಳ ಸಾಹಿತ್ಯದ ಅಧ್ಯಯನ, ಅವರ ಜೀವನ ಪ್ರೇರಣೆಯ ಸಂದೇಶದ ಅಪೂರ್ವ ಸಮಾವೇಶವೇ “ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ”

ಈ ನಾಡಿನ ಖ್ಯಾತ ಚಿಂತಕ, ವಾಗ್ಮಿ, ಅಂಕಣಕಾರ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಕಳೆದ ಎರಡುವರೆ ವರ್ಷಗಳಿಂದ ಅನೇಕ ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡು ಇಡೀ ರಾಷ್ಟ್ರದ ಗಮನ ಸೆಳೆದಿರುವ ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ನೇತೃತ್ವದಲ್ಲಿ ಈ ಅಭೂತಪೂರ್ವ ಸಾಹಿತ್ಯ ಸಮ್ಮೇಳನವು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಇದೇ ಫೆಬ್ರವರಿ 11 ಮತ್ತು 12 ರಂದು ಸಂಪನ್ನಗೊಳ್ಳಲಿದೆ.

 

ಸಾಹಿತ್ಯ ಸಮ್ಮೇಳನದಲ್ಲಿ ಏನಿದೆ?
ಮತ್ತಷ್ಟು ಓದು »