ಛಡಿ ಏಟಿನಿಂದ ಕ್ರಾಂತಿಯ ಕಿಡಿಯವರೆಗೆ…!
– ಶಿವಾನಂದ ಶಿ ಸೈದಾಪೂರ
(ಎಂ. ಎ. ವಿದ್ಯಾರ್ಥಿ )
ABVP ರಾಜ್ಯ ಕಾರ್ಯಕಾರಿಣಿ ಸದಸ್ಯ .
ಆವತ್ತು ಒಂದು ದಿನ ಕಾಶಿಯಲ್ಲಿ ದೇಶ ಭಕ್ತರೆಲ್ಲರು ಸೇರಿ ವಂದೇಮಾತರಂ ಘೋಷಣೆ ಕೂಗುತ್ತಾ ಶಾಂತಿಯುತವಾಗಿ ಮೆರವಣಿಗೆ ಹೋಗುತ್ತಿದ್ದ ಸಂದರ್ಭ. ಇದ್ದಕಿದ್ದಂತೆ ದುರಳ ಬ್ರಿಟಿಷ್ ಪೋಲಿಸ್ ಅಧಿಕಾರಿಗಳು ದೇಶ ಭಕ್ತರ ಮೇಲೆ ಲಾಠಿ ಚಾರ್ಜ್ ಮಾಡಿದರು. ಶಾಂತಿಯುತವಾಗಿ ಮೆರವಣಿಗೆಯಲ್ಲಿದ್ದವರಿಗೆ ಮನ ಬಂದಂತೆ ತಳಿಸತೊಡಗಿದ್ದರು. ಇದನ್ನು ಗಮನಿಸಿದ ಕಾಶಿವಿದ್ಯಾಪೀಠದಲ್ಲಿ ಅಧ್ಯಯನ ಮಾಡುತಿದ್ದ ಪುಟ್ಟ ಬಾಲಕನೊಬ್ಬ ಬ್ರಿಟಿಷ್ ಪೊಲೀಸರಿಗೆ ಅಟ್ಟಾಡಿಸಿ ಕಲ್ಲು ಹೊಡೆದು ಪರಾರಿಯಾದ. ಆತನ ಬೆನ್ನಟ್ಟಿದ ಪೊಲೀಸರೆ ಓಡಿ ಓಡಿ ಸುಸ್ತಾದರೆ ಹೊರತು ಆತನೇನು ಆವತ್ತು ಸಿಗಲಿಲ್ಲ. ಮರುದಿನ ಯಾರದೋ ಮೊಸದ ಜಾಲದಿಂದ ಆ ಬಾಲಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಯ್ದರು. ಆತನ ಪ್ರತಿಯೊಂದು ಮಾತುಗಳನ್ನು ಕೇಳಿ ಜಡ್ಜನೇ ಹೌಹಾರಿದ. ಆ ಪುಟ್ಟ ಬಾಲಕನ ಬಾಯಿಂದ ಅಂತಹುದೆ ಮಾತುಗಳು ಬರುತ್ತಿದ್ದವು. ನಿನ್ನ ಹೆಸರು ಏನೆಂದು ಜಡ್ಜ ಕೇಳಿದರೆ ”ಅಜಾದ್” ಎಂದು ಅಬ್ಬರಿಸಿದ. ಎಲ್ಲಿ ನಿನ್ನ ಮನೆ ಎಂದರೆ ”ಜೈಲು..! ನನ್ನ ಮನೆ” ಎಂದು ಪ್ರತ್ಯುತ್ತರ ನೀಡಿದ ಆ ಬಾಲಕ. ಆ ಪುಟ್ಟ ಬಾಲಕನ ನಿಷ್ಟುರತೆಯನ್ನು ಕಂಡ ಕೋಪಿಷ್ಟ ಜಡ್ಜ ಸಾಹೇಬ್ ೧೫ ಛಡಿ ಏಟಿನ ಶಿಕ್ಷೆ ನೀಡಿದ. ಪ್ರತಿಯೊಂದು ಏಟು ಬಿದ್ದಾಗ ”ವಂದೇಮಾತರಂ”, ”ಭಾರತ್ ಮಾತಾ ಕೀ ಜೈ”, ”ಗಾಂಧೀಜಿ ಕೀ ಜೈ” ಎಂಬುವ ಘೋಷಣೆಗಳು ಆತನ ಬಾಯಿಂದ ಹೊರಡುತಿದ್ದವು. ಆ ಪುಟ್ಟ ಬಾಲಕನೆ ಚಂದ್ರಶೇಖರ್ ಅಜಾದ್. ಅಜಾದರು ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಜೀವನದ ಮೊದಲ ಮತ್ತು ಕೊನೆಯ ಬಾರಿ ಬ್ರಿಟಿಷ್ ಜೈಲಿನ ಶಿಕ್ಷೆ ಅನುಭವಿಸಿದರು. ಆತನ ಸಾಹಸ ಗಾತೆಯನ್ನು ಕಂಡ ಜನತೆ ಒಂದು ಸಾರ್ವಜನಿಕ ಸಮಾರಂಭ ಏರ್ಪಡಿಸಿದ್ದರು. ಜನರನ್ನು ಉದ್ದೇಶಿಸಿ ಮಾತನಾಡುತ್ತ. ಅಜಾದ್ ”ದುಷ್ಮನೋಂಕಿ ಗೊಲಿಯೋಂ ಸೇ ಮೈ ಸಾಮ್ನಾ ಕರೂಂಗಾ. ಅಜಾದ್ ಹೂಂ ಮೇ ಅಜಾದ್ ಹೀ ರಹೂಂಗಾ” ಎಂದು ಅಬ್ಬರಿಸಿದರು. ಅಕ್ಷರಶ ಅದನ್ನೇ ಕೊನೆಯತನಕ ಪಾಲಿಸಿದ್ದರು. ಮತ್ತಷ್ಟು ಓದು