ವಿಷಯದ ವಿವರಗಳಿಗೆ ದಾಟಿರಿ

Archive for

14
ಫೆಬ್ರ

ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೨

– ಮು. ಅ. ಶ್ರೀರಂಗ, ಬೆಂಗಳೂರು

(ನಿಲುಮೆಯಲ್ಲಿ ೨೧-೧-೨೦೧೭ ರಂದು ಪ್ರಕಟವಾದ ನೀಳ್ಗತೆ ಯ ಮುಂದುವರಿದ ಭಾಗ)

oldman-walking[ಇಲ್ಲಿಯರೆಗೆ:- ಸರ್ಕಾರಿ ಕೆಲಸದಿಂದ ನಿವೃತ್ತರಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ  ಪದ್ಮನಾಭರಾವ್(ಪೀರಾಯ) ಅಲ್ಲಿನ ಗಡಿಬಿಡಿಯ, ಏಕತಾನತೆಯ ಜೀವನ, ಇವುಗಳಿಂದ ಬೇಸತ್ತು, ನಾಲ್ಕಾರು ದಿನಗಳಾದರೂ ಇವೆಲ್ಲದರಿಂದ ದೂರವಿರೋಣ ಎಂದು ತನ್ನ ಸ್ನೇಹಿತ ಹಾಗೂ ಬೆಂಗಳೂರಿನಲ್ಲಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜು ವಶಿಷ್ಠನ ಸ್ವಂತ ಊರಿನಲ್ಲಿದ್ದ ತೋಟದ ಮನೆಗೆ ಬರುತ್ತಾರೆ. ಪಕ್ಕದ ಮನೆಯಲ್ಲಿದ್ದ ಕಂಟ್ರಾಕ್ಟರ್, ಸೈಟು, ಮನೆಗಳ ಬ್ರೋಕರ್ ಏಜೆನ್ಸಿ ನಡೆಸುತ್ತಿದ್ದ ಲಿಂಗೇಗೌಡನ ಪರಿಚಯವಾಗುತ್ತದೆ. ಆತನ ಅತೀ ಮಾತುಗಾರಿಕೆ ಪೀರಾಯರಿಗೆ ಬೇಸರ ತರಿಸುತ್ತದೆ. ಆ ಊರಿನ ಕಾಲೇಜಿನಲ್ಲಿ ನಡೆಯುವ ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಸಂಕಿರಣದ ಆಹ್ವಾನ ಪತ್ರಿಕೆ ಕೊಡಲು ಬರುವ ಕನ್ನಡ ಉಪನ್ಯಾಸಕಿ ರಮಾದೇವಿಯ ಭೇಟಿಯೂ ಆಗುತ್ತದೆ. Read more »