ದೇವರ ನಾಡಿನಲ್ಲಿ ಮರಣ ಮೃದಂಗ
– ಮಲ್ಲಿ ಶರ್ಮ
ಬೋಟ್ ಹೌಸ್, ಸರೋವರಗಳು, ಅರಬೀ ಸಮುದ್ರ, ತೆಂಗು ಅಡಿಕೆ ಕೃಷಿ, ಆಹಾ ಈ “GOD’S OWN COUNTRY” ಇದೆಯಲ್ಲಾ, ಅಲ್ಲಿಯ ಟೂರಿಸಂ ಕುರಿತ HD ವಿಡಿಯೋ ಯೂಟ್ಯೂಬಲ್ಲಿ ನೋಡೋವಾಗ ಆಹಾ!!! ಇದಪ್ಪಾ ಸ್ವರ್ಗ ಅಂದ್ರೆ, ಅಂತ ಉದ್ಘಾರ ತೆಗೆದುಬಿಡ್ತಾರೆ ಪ್ರತಿಯೊಬ್ಬರೂ. ಆದರೆ ದೇವರ ಸ್ವಂತ ನಾಡಾದ ಕೇರಳದಲ್ಲಿ ಭಯಾನಕ ರಾಕ್ಷಸರು ಬೀಡು ಬಿಟ್ಟಿರೋ ಸಂಗತಿ ನಿಮಗೆಷ್ಟು ಗೊತ್ತು? ಮತ್ತಷ್ಟು ಓದು
ಐದು ಮೂಲೆ ಮನೆ
– ಗುರುರಾಜ ಕೊಡ್ಕಣಿ. ಯಲ್ಲಾಪುರ
‘ಈ ಮನೆಯಲ್ಲಿ ಭೂತಾ ಇದೆ, ಇಲ್ಲಿ ಯಾರೂ ಬರಬೇಡಿ’…..
ಹೀಗೊ೦ದು ಸಾಲನ್ನು ಆ ಮನೆಯ ಬಾಗಿಲಿನ ಮೇಲೆ ನೋಡಿದಾಗ ನಾವ್ಯಾರೂ ತಲೆ ಕೆಡಿಸಿಕೊ೦ಡಿರಲಿಲ್ಲ.ಚಿಕ್ಕ ಮಕ್ಕಳ ಭಾಷೆಯಲ್ಲಿ ಕಾಗುಣಿತಗಳ ದೋಷದೊ೦ದಿಗೆ ಇದ್ದಲಿನಿ೦ದ ಬರೆದಿದ್ದ ಗೀಚು ಅಕ್ಷರಗಳ ಬಗ್ಗೆ ಉಡಾಫೆಯಾಗಿ ಮಾತನಾಡಿಕೊ೦ಡು ಮನೆ ಸೇರಿಕೊ೦ಡಿದ್ದಾಗ ನನಗಿನ್ನೂ ಹನ್ನೆರಡು ವರ್ಷ ವಯಸ್ಸು. ಹಳೆಯ ಮನೆಯ ಮಾಲೀಕ ಏಕಾಏಕಿ ಬಾಡಿಗೆ ಜಾಸ್ತಿ ಮಾಡಿದನ್ನೆನ್ನುವ ಕಾರಣಕ್ಕೆ ಅವಸವಸರವಾಗಿ ಮನೆ ಬಿಡಬೇಕಾಗಿ ಬ೦ದಿತ್ತು. ಅಮ್ಮನ ಆಫೀಸಿಗೆ ತೀರ ಹತ್ತಿರದಲ್ಲಿದೆ ಎನ್ನುವ ಕಾರಣಕ್ಕೆ ಹೊಸ ಮನೆಯನ್ನು ಸೇರಿಕೊ೦ಡಿದ್ದೆವು. ಒ೦ದು ಸಾಧಾರಣ ಮನೆಯದು.ಪಡಸಾಲೆಯ ಹೊರಗೋಡೆಯ ಅರ್ಧದಷ್ಟು ಭಾಗ ಕಟ್ಟಿಗೆ ಕಿಟಕಿ ಆವರಿಸಿಕೊ೦ಡಿತ್ತು. ಪಡಸಾಲೆಯನ್ನು ದಾಟಿದರೆ ನಡುಮನೆ, ನಡುಮನೆಯಿ೦ದಲೇ ಬಲಕ್ಕೆ ತಿರುಗಿಕೊ೦ಡರೆ ಅಡುಗೆ ಕೋಣೆ, ಅಡುಗೆ ಕೋಣೆಯ ಮೂಲೆಯಲ್ಲಿ ಬಚ್ಚಲು. ಪಡಸಾಲೆ ಮತ್ತು ನಡುಮನೆಯನ್ನು ಸೇರಿಸುತ್ತಿದ್ದದ್ದು ರೈಲಿನ ಬೋಗಿಯ೦ಥಹ ಒ೦ದು ಕೋಣೆ. ಮತ್ತಷ್ಟು ಓದು