ವಿಷಯದ ವಿವರಗಳಿಗೆ ದಾಟಿರಿ

Archive for

5
ಫೆಬ್ರ

ಉತ್ತರಕಾಂಡದ ಓದು ಮತ್ತು ಜಿಜ್ಞಾಸೆ.

– ನವೀನ ಗಂಗೋತ್ರಿ

uttarakaandaರಾಮಾಯಣವನ್ನಾಗಲೀ ಮಹಾಭಾರತವನ್ನಾಗಲೀ ಅವಲೋಕಿಸುವ ಸಂದರ್ಭ ಆಗಾಗ ಬರುತ್ತಲೇ ಇರುತ್ತದೆ. ಅದೆಷ್ಟು ಬಾರಿಗೆ ಅವಲೋಕಿಸಿದರೂ ರಾಮನೆಂಬಾತ ಮಾತ್ರ ಎಟುಕಿಗೆ ನಿಲುಕದ, ಯಾವುದಕ್ಕೂ ಕಲಕದ, ಅರ್ಥವಾಗದ ಮತ್ತು ಅರ್ಥಮಾಡಿಸಿಕೊಳ್ಳುವ ಬಯಕೆಯೂ ಇಲ್ಲದ ಪಾತ್ರವಾಗಿಯೇ ನನಗೆ ತೋರುತ್ತಾನೆ. ಅವನ ಕೃತ್ಯಗಳ ಪರವಾಗಿ ಜಿಜ್ಞಾಸೆಗೆ ನಿಂತಾಗೆಲ್ಲ ಕೊನೆಯಲ್ಲಿ ಆತನ ನಿರ್ಧಾರಗಳೆಡೆಗೆ ಪ್ರಶ್ನೆಗಳೇ ಉಳಿಯುತ್ತವೆ. ಹಾಗಂತ ಅವನ ಕೃತ್ಯಗಳ ಪರವಲ್ಲದ ಕೋನ ಹಿಡಿದುಕೊಂಡೆನೋ, ಆತನ ‘ಧರ್ಮ’ವು ಎಲ್ಲೋ ಒಂದು ಸಣ್ಣ ಹೊಳಹಿನಲ್ಲಿ ಸುಳಿದು ವಿರೋಧವಾದದ ಬುಡವನ್ನೇ ಕಡಿಯುತ್ತದೆ. ರಾಮ ಇವತ್ತಿಗೂ ನನ್ನ ಅರಿವಿನ ಯಾವ ಅಂಚಿಗೂ ನಿಲುಕದವನು.

ಉತ್ತರಕಾಂಡವನ್ನು ಎತ್ತಿಕೊಂಡಾಗ ಕಾದಂಬರಿಕಾರನು ಕಥೆಯ ಹರಿವಿನಲ್ಲಿ ಒದಗಿಸಬಹುದಾದ ರಸಸೃಷ್ಟಿಯಲ್ಲಿ ಮಿಂದೇಳುವ ಬಯಕೆಯು ಹಿರಿದಾಗಿತ್ತಾದರೂ ರಾಮನನ್ನು ನನಗೆ ಹತ್ತಿರವಾಗಿಸಬಹುದೇನೋ ಅನ್ನುವ ಸಣ್ಣದೊಂದಾಸೆಯೂ ಮನಸಲ್ಲಿತ್ತು. ಮತ್ತಷ್ಟು ಓದು »