ವಿಷಯದ ವಿವರಗಳಿಗೆ ದಾಟಿರಿ

Archive for

23
ಫೆಬ್ರ

ಕಮ್ಯುನಿಸ್ಟರು ನಡೆಸಿದ ಬಡವರು-ದಲಿತರ ರಕ್ತದೋಕುಳಿಗೆ ಈಗ ೩೮ ವರ್ಷ!

ರಾಕೇಶ್ ಶೆಟ್ಟಿ

kannur-political-violence-cpim-and-rss-workers-hacked-to-death-indialivetoday” ಕೋಮುವಾದಕ್ಕೆ ವಿರುದ್ಧವಾಗಿ, ಕರಾವಳಿ ಸೌಹಾರ್ದ ರ‌್ಯಾಲಿ” ಎಂಬ ಹೆಸರಿನಲ್ಲಿ ಮುಂದಿನ ಭಾನುವಾರ, ೨೫ನೇ ತಾರೀಖು ಮಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆಯಂತೆ. ಕಮ್ಯುನಿಸ್ಟರ ಈ ರ‌್ಯಾಲಿಯನ್ನುದ್ದೇಶಿಸಿ ಮಾತನಾಡಲು ಕೇರಳದ ಕಮ್ಯುನಿಸ್ಟರ ರಕ್ತಚರಿತ್ರೆಯ ಕೇಂದ್ರವಾದ ಕಣ್ಣೂರಿನ ಸೂತ್ರಧಾರ, ಪಿಣರಾಯಿ ವಿಜಯನ್ ಬರಲಿದ್ದಾರಂತೆ..!

“ನಾವೆಲ್ಲ ಒಂದೇ ಜಾತಿ, ಮತ, ಕುಲ. ನಾವು ಮನುಜರು. ಇದು ಐಕ್ಯತಾ ರ‌್ಯಾಲಿ, ಸೌಹಾರ್ದ ರ‌್ಯಾಲಿ” ಅಂತೆಲ್ಲ ಕಮ್ಯುನಿಸ್ಟ್ ಒಬ್ಬರು ನಾನಿರುವ ವಾಟ್ಸಾಪ್ ಗುಂಪಿನಲ್ಲಿ ಈ ಕಾರ್ಯಕ್ರಮದ ಪ್ರಚಾರ ಮಾಡುತ್ತಿದ್ದರು. ನಾನು ಜೋರಾಗಿ ನಕ್ಕು, ಇದರ ಜೊತೆಗೆ “ಶಾಂತಿ,  ಅಹಿಂಸೆ” ಅಂತನೂ ಸೇರಿಸಿಕೊಳ್ಳಿ ಎಂದೆ. ಅವರಿಂದೇನೂ ಉತ್ತರ ಬರಲಿಲ್ಲ. ಉತ್ತರ ಬರುವುದಾದರೆ ಹೇಗೆ ಹೇಳಿ ? ಎಲ್ಲಿಯ ಪಿಣರಾಯಿ ? ಎಲ್ಲಿಯ ಸೌಹಾರ್ದತೆ ? ಎಲ್ಲಿಯ ಶಾಂತಿ ? ಎಲ್ಲಿಯ ಅಹಿಂಸೆ ? Read more »

23
ಫೆಬ್ರ

ಬಿಗ್ ಬಾಸ್ ನಲ್ಲೂ ಮೀಸಲಾತಿಗೆ ಒತ್ತಾಯ (ಸುಳ್ಸುದ್ದಿ)

– ಪ್ರವೀಣ್ ಕುಮಾರ್, ಮಾವಿನಕಾಡು

sulsuddiಬಿಗ್ ಬಾಸ್ ನಲ್ಲೂ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಪ್ರಗತಿಪರ ಹೋರಾಟಗಾರರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರು: ಖಾಸಗಿ ಚ್ಯಾನಲ್ ಗಳು ನಡೆಸುವ ಬಿಗ್ ಬಾಸ್ ಸ್ಪರ್ಧೆಗಳಲ್ಲೂ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಪ್ರಗತಿಪರ ಹೋರಾಟಗಾರರ ಸಂಘದ ಕಾರ್ಯಕರ್ತರು ನಗರದಲ್ಲಿ ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದರು. ಚಿನ್ನಮ್ಮ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಪ್ರ.ಹೋ.ಸಂ. ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೀಸಲಾತಿ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಘೋಷಣೆಗಳನ್ನು ಕೂಗಿದರು. Read more »