ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 15, 2017

1

ದಿಗ್ಗಜರ ಮೇಲಾಟ..!

‍ನಿಲುಮೆ ಮೂಲಕ

– ರೂಪಲಕ್ಷ್ಮೀ

the-strange-love-hate-relationship-between-bill-gates-and-steve-jobs೧೯೮೦ರ ದಶಕ ಅಮೇರಿಕಾಗಷ್ಟೇ ಅಲ್ಲಾ, ಇಡೀ ಜಗತ್ತಿಗೆ ಅತ್ಯಂತ ಮಹತ್ವದ ದಶಕ. ಇಬ್ಬರು ದಿಗ್ಗಜರು ಕಂಪ್ಯೂಟರ್ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಒತ್ತಿದ ಕಾಲವಿದು. ಕಂಪ್ಯೂಟರ್ ತಂತ್ರಜ್ಞಾನ ಮನೆಮನೆಗೆ ಪಸರಿಸಲು ಸಹಾಯ ಮಾಡಿದ ಬಿಲ್ ಗೇಟ್ಸ್ ಹಾಗೂ ಸ್ಟೀವ್ ಜಾಬ್ಸ್ ಇಬ್ಬರ ನಡುವಿನ ಸಂಕೀರ್ಣ ಸಂಬಂಧವನ್ನು, ನಾಟಕೀಯವಾಗಿ, ನಾಜೂಕಾಗಿ ಈ ವಿಡಿಯೋದಲ್ಲಿ ಚಿತ್ರಿಸಿದ್ದಾರೆ. ಈ ಇಬ್ಬರೂ ಒಟ್ಟಿಗೆ ಇದ್ದರೂ ಕೂಡ ಪರಸ್ಪರ ಸ್ಪರ್ಧಿಗಳಾಗಿದ್ದರು. ಪರಸ್ಪರ ಸ್ಫರ್ಧಿಗಳಾಗಿದ್ದರೂ ಕೂಡ, ಒಟ್ಟಿಗೆ ಕೆಲಸ ಮಾಡಿ ತಂತ್ರಜ್ಞಾನದಲ್ಲಿ ಅತ್ಯುತ್ತಮ ಹಂತವನ್ನು ತಲುಪಿದವರು. ಒಬ್ಬರನೊಬ್ಬರು ಎಷ್ಟು ವಿರೋಧಿಸುತ್ತಿದ್ದರೋ, ಅಷ್ಟೇ ಪರಸ್ಪರ ಗೌರವಿಸುತ್ತಿದ್ದರು ಕೂಡ. ಇಬ್ಬರೂ ಕೂಡ ಮಹತ್ವಾಕಾಂಕ್ಷಿಗಳು, ಬುದ್ಧಿವಂತರು. ಕಂಪ್ಯೂಟರ್ ಮತ್ತು ತಂತ್ರಜ್ಞಾನ ಎರಡರಲ್ಲಿಯೂ ಆಪಲ್ ಕಂಪೆನಿಯೇ ಮೇಲುಗೈ ಸಾಧಿಸಬೇಕೆಂಬುದು ಸ್ಟೀವ್ ಜಾಬ್ಸ್ ನ ಮನಸ್ಥಿತಿಯಾಗಿದ್ದರೆ, ಮನೆಮನೆಗೂ ತಂತ್ರಜ್ಞಾನವನ್ನು ತಲುಪಿಸಬೇಕೆಂಬುದು ಬಿಲ್ ಗೇಟ್ಸ್ ನ ಇಚ್ಛೆಯಾಗಿತ್ತು.

https://www.youtube.com/watch?v=prstbP2cG6M

ಮೊದಲಿಗೆ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್ ನ ಕಂಪೆನಿಗೆ ಸಾಫ್ಟ್ ವೇರ್ ಮಾಡಿಕೊಡುತ್ತಿದ್ದನು. ಮಹತ್ವಾಕಾಂಕ್ಷಿ ಬಿಲ್ ಗೇಟ್ಸ್ ಆ ಸಮಯದಲ್ಲಿಯೇ ಐಬಿಎಂ ಕಂಪೆನಿಗೆ ಸ್ವಂತದ್ದಾದ ಒಂದು ಆಪರೇಟಿಂಗ್ ಸಿಸ್ಟಮ್ (DOS) ಮಾಡಿಕೊಡಲು ಒಪ್ಪಂದ ಮಾಡಿಕೊಂಡನು. ಆ ಸಮಯದಲ್ಲಿ ಆಪಲ್ ಕಂಪೆನಿಯ ಓನರ್ ಆಗಿದ್ದ ಸ್ಟೀವ್ ಜಾಬ್ಸ್ ನಿಗೆ, ತನ್ನ ಕಂಪೆನಿಯ ತಂತ್ರಜ್ಞಾನವನ್ನು ಬಿಲ್ ಗೇಟ್ಸ್ ಕದಿಯಬಹುದು ಎಂಬ ಚಿಂತೆ ಶುರುವಾಯಿತು. ಇದರಿಂದಾಗಿ ಇಬ್ಬರ ನಡುವೆ ವಿರಸ ಕೂಡ ತಲೆಯೆದ್ದಿತು. ಆಪಲ್ ಕಂಪೆನಿಯ ಸಾಫ್ಟ್ ವೇರ್ ತಂತ್ರಜ್ಞಾನವನ್ನು ಬಿಲ್ ಗೇಟ್ಸ್ ಕದ್ದಿದ್ದಾನೆ ಎಂಬ ಕೇಸ್ ಕೂಡ ಸ್ಟೀವ್ ಜಾಬ್ ಹಾಕಿದ. ಆದರೆ ಮೈಕ್ರೊಸಾಫ್ಟ್ ನ ಬಿಲ್ ಗೇಟ್ಸ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ತನ್ನ ಕಂಪೆನಿಯನ್ನು ಬೆಳೆಸುವುದರಲ್ಲಿಯೇ ಮಗ್ನನಾಗಿಬಿಟ್ಟ. ಅದೇ ಸಮಯದಲ್ಲಿ ಕಾರಣಾಂತರಗಳಿಂದ ಸ್ಟೀವ್ ಜಾಬ್ಸ್ ತನ್ನ ಆಪಲ್ ಕಂಪೆನಿಯನ್ನೇ ಬಿಟ್ಟು ಹೊರಟ. ಒಂದಷ್ಟು ದಿನಗಳ ನಂತರ ಸ್ಟೀವ್ ಜಾಬ್ಸ್ ಮತ್ತೆ ಆಪಲ್ ಕಂಪೆನಿಗೆ ಬಂದು ಸೇರಿದ. ಇನ್ನೂ ಅಂತ್ಯ ಕಂಡಿರದಿದ್ದ ಕೇಸ್ ಮತ್ತೆ ಪ್ರಾರಂಭವಾಯಿತು. ಆದರೆ ಇಬ್ಬರೂ ಕೂಡ ಒಂದಷ್ಟು ಒಪ್ಪಂದಗಳನ್ನು ಮಾಡಿಕೊಂಡು, ಮತ್ತೆ ತಂತ್ರಜ್ಞಾನದ ಕ್ಷೇತ್ರದಲ್ಲಿ ಒಟ್ಟಿಗೆ ದುಡಿಯಲು ಹೊರಟರು. ಮೊದಲ ಬಾರಿಗೆ ಐಪೋನ್ ಮಾರುಕಟ್ಟೆಗೆ ಬರುವ ಸಮಯದಲ್ಲಿ, ಬಿಲ್ ಗೇಟ್ಸ್ ಈ ಐಫೋನ್ ಸಾಮಾನ್ಯ ಜನರ ಕೈಗೆಟುಕದು ಎಂದು ಮೂಗು ಮುರಿದ. ಆದರೆ ಇದು ಬಿಡುಗಡೆಯಾದ ಹೊಸದರಲ್ಲಿಯೇ ಸುಮಾರು ೯೦ ಮಿಲಿಯನ್ ಗಳಷ್ಟು ಐಫೋನ್ ಗಳು ಮಾರಾಟವಾದವು.

ಇವರಿಬ್ಬರ ಸಂಕೀರ್ಣ ಸಂಬಂಧವನ್ನು ವಿಮರ್ಶಾತ್ಮಕವಾಗಿ ನೋಡಿದಾಗ, ಈಗಿನ ಸಮಾಜದ ಜನರ ಮನಸ್ಥಿತಿಯನ್ನು ಅರ್ಥೈಸಬಹುದು. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಒಟ್ಟಿಗೆ ಕೆಲಸ ಮಾಡಬೇಕಾದ ಅನಿವಾರ್ಯತೆ, ಆದರೆ ಇತರರ ಮೇಲಿರುವ ಅಪನಂಬಿಕೆ; ತಮ್ಮ ಪ್ರತಿಭೆ ಮತ್ತೊಬ್ಬರಿಗಿಂತ ಮೇಲ್ಮಟ್ಟದಲ್ಲಿದೆ ಎಂಬ ಅಹಂ, ಆದರೂ ಎಲ್ಲಾ ಕೆಲಸಗಳನ್ನು ಒಬ್ಬನೇ ಮಾಡಲಾಗದ ಅಸಹಾಯಕತೆ; ಒಂಟಿಯಾಗಿ ಕೆಲಸ ಮಾಡಲು ಸಾಲದ ಧೈರ್ಯ, ಗುಂಪಿನಲ್ಲಿ ಕೆಲಸ ಮಾಡುವಾಗ ಅನುಭವಿಸಬೇಕಾದ ಒತ್ತಡ, ಇವೆಲ್ಲಾ ಆಧುನಿಕ ತಂತ್ರಜ್ಞಾನದ ಬಳುವಳಿಯೆನ್ನಬಹುದು.

1 ಟಿಪ್ಪಣಿ Post a comment
  1. AKUVA's avatar
    AKUVA
    ಫೆಬ್ರ 16 2017

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments