ಮಾಧ್ಯಮಗಳ ಟಿ.ಆರ್.ಪಿ ದಾಹಕ್ಕೆ ಬಲಿಯಾದಳೇ ಸುಹಾನಾ ಸೈಯದ್ ?
– ಸುರೇಶ್ ಮುಗಬಾಳ್

ಪ್ರತಿ ಮತವೂ ಬಿಜೆಪಿಗೆ ಬೀಳುತ್ತದೆ ಎನ್ನುವ ಮುನ್ನ…
– ರಮಕಾಂತ್ ಶೆಟ್ಟಿ
ಚುನಾವಣೆ ಈ ದೇಶದಲ್ಲೊ೦ದು ಸಮೂಹ ಸನ್ನಿ ಎ೦ದರೆ ತಪ್ಪಿಲ್ಲ. ರಾಜಕೀಯ ಪಕ್ಷಗಳಿಗೆ ಚುನಾವಣೆಯೆ೦ದರೆ ಕದನ ಕುತೂಹಲ, ಪರೀಕ್ಷಾ ಸಮಯ. ಪಕ್ಷಗಳ ಅಭಿಮಾನಿಗಳಿಗೆ ನೆಚ್ಚಿನ ನಾಯಕನ ಗೆಲುವಿನ ಹ೦ಬಲಿಕೆ. ತಮ್ಮ ನಾಯಕನೇ ಗೆದ್ದರೆ ಸಿಗುವ ಅಹ೦ ತೃಪ್ತಿಯ ಹ೦ಬಲಿಕೆ. ಹಲವರಿಗೆ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ ಬೆರಳಿಗೊ೦ದಷ್ಟು ಮಸಿ ಬಳಿದುಕೊ೦ಡು ಸಾಮಾಜಿಕ ಜಾಲತಾಣದಲ್ಲೊ೦ದು ಭಾವಚಿತ್ರ ತಗುಲಿಸುವ ಉತ್ಸಾಹ. ಕೆಲವರಿಗೆ ಯಾರು ಗೆದ್ದರೂ ದೇಶವೇನೂ ಬದಲಾಗದು ಬಿಡು ಎನ್ನುವ ತಾತ್ಸಾರ. ಹೀಗೆ ಹತ್ತು ಹಲವು ಭಾವಗಳ ಹೊಮ್ಮುವಿಕೆ ಚುನಾವಣೆ. ಆದರೆ ಚುನಾವಣೆ ಎ೦ದಾಕ್ಷಣ ಕೊ೦ಚ ಬೆಚ್ಚಿಬೀಳುವ, ಚೂರು ಬೇಸರ ವ್ಯಕ್ತಪಡಿಸುವ ವರ್ಗವೂ ಒ೦ದಿದೆ. ಅದು ರಾಜ್ಯ, ಕೇ೦ದ್ರ ಸರ್ಕಾರಿ ನೌಕರರ ವರ್ಗ. ಕೇ೦ದ್ರ ಸರ್ಕಾರಿ ಸ್ವಾಮ್ಯದ ಕ೦ಪನಿಗಳ ಉದ್ಯೋಗಿಗಳೂ ಇದೇ ಸಾಲಿಗೆ ಸೇರುತ್ತಾರೆ. ಚುನಾವಣೆಯೆ೦ದರೆ ಅವರ ಪಾಲಿಗೆ ಬರಿ ಮತದಾನ ಮಾತ್ರವಲ್ಲ. ನೇರವಾಗಿ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಿಬ್ಬ೦ದಿಗಳು ಸರ್ಕಾರಿ ನೌಕರರು. ರಾಜ್ಯ ಸರ್ಕಾರಿ ಶಿಕ್ಷಕರ ಪಾಲಿಗ೦ತೂ ಚುನಾವಣೆ ಕರ್ತವ್ಯವೆನ್ನುವುದು ಮತ್ತೊ೦ದು ಅರೆಕಾಲಿಕ ಉದ್ಯೋಗವೆ೦ದರೆ ತಪ್ಪಾಗಲಾರದು. ಸಣ್ಣದ್ದೊ೦ದು ಸಹಕಾರಿ ಸ೦ಸ್ಥೆಯ ಚುನಾವಣೆಯಿ೦ದ ಹಿಡಿದು ಲೋಕಸಭೆಯ ಚುನಾವಣೆಯವರೆಗಿನ ಎಲ್ಲ ಚುನಾವಣಾ ಕರ್ತವ್ಯಗಳೂ ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ. ಕೇವಲ ಶಿಕ್ಷಕರು ಮಾತ್ರವಲ್ಲದೇ ಕೇ೦ದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಬ್ಬ ಉದ್ಯೋಗಿಯೂ ತನ್ನ ವೃತ್ತಿಜೀವನದಲ್ಲಿ ಒಮ್ಮಿಲ್ಲೊಮ್ಮೆ ಚುನಾವಣಾ ಕರ್ತವ್ಯವನ್ನೂ ನಿಭಾಯಿಸಿಯೇ ಇರುತ್ತಾನೆ. ಈ ಚುನಾವಣೆಯ ಪ್ರಕ್ರಿಯೆ ಹೇಗಿರುತ್ತದೆ ಎ೦ಬುದರ ಒ೦ದು ಸಣ್ಣ ಪರಿಚಯ ಇ೦ದು ಮಾಡಿಕೊಡಬೇಕೆನ್ನಿಸಿದೆ. ಮತ್ತಷ್ಟು ಓದು
ಸಂಸ್ಕೃತಿ ಸರಣಿ – ಭಾಗ ೧ : ಪೂಜೆ
ಜಗತ್ತಿನ ಎಲ್ಲ ನಾಗರೀಕತೆಗಳಿಗಿಂತ ಅತೀ ಪುರಾತನವಾದದ್ದು ಭಾರತೀಯ ನಾಗರೀಕತೆ.ಆದರೆ ಆ ಪ್ರಾಚೀನತೆ ಮಾತ್ರ ಅದರ ಹೆಗ್ಗಳಿಕೆ ಅಲ್ಲ. ಪ್ರಾಚೀನವಾದದ್ದೆಲ್ಲ ಉತ್ತಮ ಎಂಬ ಭ್ರಮೆ ಮತ್ತು ಕುರುಡು ಅಭಿಮಾನ ಉಚಿತವಲ್ಲ. ತಮ್ಮ ನಾಡೇ ಪ್ರಾಚೀನ, ಆ ಕಾರಣಕ್ಕೆ ತಮ್ಮ ಸಂತತಿಯೇ ಶ್ರೇಷ್ಠ, ನಾವೇ ಸುಸಂಸ್ಕೃತರು ಇತ್ಯಾದಿ ಅನೇಕ ಭ್ರಮೆಗಳನ್ನು ಐರೋಪ್ಯರು ಹೊಂದಿದ್ದರು.ಆ ಭ್ರಮೆಗಳ ಕಾರಣದಿಂದಾಗಿ ತಮ್ಮ ಸಾರ್ವಭೌಮತ್ವವನ್ನು ಎಲ್ಲರ ಮೇಲೆ ಹೇರಲು ಹೊರಟು, ಅನೇಕ ಜಾಗತಿಕ ಹಾಗೂ ಮಾನವೀಯ ಸಮಸ್ಯೆಗಳಿಗೆ ಕಾರಣರಾಗಿದ್ದಾರೆ.
ಭಾರತದ್ದು ಇಂತಹ ಭ್ರಮಾ ಕಲ್ಪಿತ ಮತ್ತು ಆಕ್ರಾಮಕ ಶ್ರೇಷ್ಠತೆ ಅಲ್ಲ.ಅದರ ಶ್ರೇಷ್ಠತೆಯ ಗುಣಲಕ್ಷಣಗಳೇ ಬೇರೆ. ಹೂವಿನ ಗಂಧ ಸಹ ಜವಾಗಿ ಹರಡುವಂತೆ ಭಾರತೀಯ ಜೀವನ ವಿಧಾನದ ಅಂತಃಸತ್ವ ಬಹುತೇಕ ಭೂಭಾಗವನ್ನು ಪ್ರಭಾವಿಸಿತ್ತು.ಆದರೆ ಅದೆಲ್ಲ ಈಗ ಗತಕಾಲದ ಚರಿತ್ರೆ.ಕಳೆದ ಸಾವಿರ ವರ್ಷಗಳ ಐತಿಹಾಸಿಕ ಘಟನೆಗಳು ಮತ್ತು ಪರಕೀಯ ಶಿಕ್ಷಣ ವಿಧಾನ ನಮ್ಮ ಸಂಸ್ಕೃತಿಗೆ ನಮ್ಮನ್ನೇ ಪರಕೀಯರಂತೆ ಮಾಡುತ್ತಿದೆ.ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯಗಳ, ಆಚರಣೆಗಳ ಕುರಿತು ಹಲವರಿಗೆ ಪ್ರಶ್ನೆಗಳೇಳುವುದು ಸಹಜವೇ.
ಅಂತಹ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಶ್ರೀ.ದತ್ತರಾಜ್ ಅವರು ಈ “ಸಂಸ್ಕೃತಿ ಸರಣಿ”ಯನ್ನು ಪ್ರಾರಂಭಿಸಿದ್ದಾರೆ. ಭಾರತ ಯಾವ ರೀತಿಯಲ್ಲಿ ಭಿನ್ನ ಹಾಗೂ ಶ್ರೇಷ್ಠ ಎಂಬುದನ್ನು ವಿವರಿಸಲಿದ್ದಾರೆ.ದತ್ತರಾಜ್ ಅವರು ಧಾರವಾಡದ ಬಳಿ ಹಳ್ಳಿಯಲ್ಲಿ ಹುಟ್ಟಿದವರು.ಆರನೇ ವಯಸ್ಸಿಗೇ ಮನೆ ತೊರೆದು ಮಹಾರಾಷ್ಟ್ರ, ಆಂಧ್ರ, ತಮಿಳು ನಾಡು ಇತ್ಯಾದಿ ಕಡೆಗಳಲ್ಲಿ ವೇದ ಪಂಡಿತರ ಮನೆಗಳಲ್ಲಿ ಇದ್ದು ಗುರು ಸೇವೆ, ಭಿಕ್ಷೆ ಮಾಡಿಕೊಂಡು 12 ವರ್ಷ ಋಗ್ವೇದವನ್ನು ಆರು ಅಂಗಗಳ ಸಹಿತ ಕಂಠಪಾಠ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ.ಶಾಲಾ-ಕಾಲೇಜುಗಳ ಮೆಟ್ಟಿಲು ಹತ್ತಿದವರಲ್ಲ.ತಮ್ಮ ಅಧ್ಯಯನ ಮತ್ತು ವಿಭಿನ್ನ ಜೀವನದ ಅನುಭವದ ಆಧಾರದಿಂದ ಭಾರತೀಯ ಸಂಸ್ಕೃತಿ ಪರಿಚಯವನ್ನು ಸರಳ ಆಡು ಭಾಷೆಯಲ್ಲಿ ಮಾಡಿಕೊಡಲಿದ್ದಾರೆ.
ಸಂಸ್ಕೃತಿ ಸರಣಿಯ ಮೊದಲ ಎರಡು ಭಾಗವಾಗಿ “ಪೂಜೆ”ಯ ಕುರಿತು ಮಾತನಾಡಿದ್ದಾರೆ.ಆ ಎರಡು ಭಾಗಗಳು ನಿಮಗಾಗಿ ನಿಲುಮೆಯಲ್ಲಿ – ನಿಲುಮೆ ನಿರ್ವಾಹಕರು
ಮತ್ತಷ್ಟು ಓದು
ಈ ಪ್ರತ್ಯೇಕತಾ ಭಾವ ಹುಟ್ಟುತ್ತಿರುವುದು ಎಲ್ಲಿಂದ..?
– ಡಾ. ಮೋಹನ್ ತಲಕಾಲುಕೊಪ್ಪ
ನಮ್ಮ ಸಾಗರದ ಸುಹಾನಾ ಅವರ ಸುಶ್ರಾವ್ಯ ಗಾಯನ, ಅದಕ್ಕೆ ತೀರ್ಪುಗಾರರ ಹಾಗೂ ನಿರೂಪಕಿಯ ನಾಟಕೀಯ, ಧಾರ್ಮಿಕ ಹಾಗೂ ಟಿಆರ್ ಪಿ ಪ್ರೇರಿತ ಮಾತುಗಳ ಹಿನ್ನೆಲೆಯಲ್ಲಿ ಈ ಪೋಸ್ಟ್.
ಅಲ್ಲ ಮಾರಾಯರೆ, ಬ್ರಾಹ್ಮಣರು, ಲಿಂಗಾಯಿತರು, ಗೌಡರು, ಕುರುಬರು, ದಲಿತರು, ಜೈನರು, ಸಿಖ್ಖರು, ಬೌದ್ಧರು, ಜಾಟರು ಇತ್ಯಾದಿ ಸಮುದಾಯಗಳು ಇದ್ದ ಹಾಗೆ ಭಾರತದಲ್ಲಿರುವ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಕೂಡಾ ಒಂದೊಂದು ಸಮುದಾಯ, ಅವರಿಗೆ ಎಲ್ಲ ಸಮುದಾಯಗಳಂತೆ, ದೇವರು, ಸಂಪ್ರದಾಯ, ರೀತಿ-ರಿವಾಜು, ಉಡುಗೆ-ತೊಡುಗೆ, ಆಹಾರ ವಿಶೇಷಗಳಿವೆ ಎಂದು ಭಾವಿಸಿದರೆ ಈಗಿನ ಸಮಸ್ಯೆಗಳೆಲ್ಲಾ ಪರಿಹಾರ ಅಂತ ನನಗನ್ನಿಸುತ್ತದೆ. ಅವರು ಎಲ್ಲರಂತೆ ಅಂತ ತಿಳಿದು ವರ್ತಿಸಿದರೆ ಏನು ತೊಂದರೆ? ಅವರಿಗೆ ವಿಶೇಷ ಗಮನವೂ ಬೇಡ. ನಿರ್ಲಕ್ಷ್ಯವೂ ಸಲ್ಲದು. ಸಹಜವಾಗಿ ಮನುಷ್ಯರಂತೆ ಭಾವಿಸಿದರೆ ಏನಾಗುತ್ತದೆ? ಮತ್ತಷ್ಟು ಓದು
ಅಸಹಿಷ್ಣುತೆ, ಅನೈತಿಕತೆ ಮತ್ತು ನಮ್ಮ ಬೌದ್ಧಿಕ ಜಗತ್ತು
– ಎಂ. ಎಸ್. ಚೈತ್ರ
ನಿರ್ದೇಶಕರು, ಆರೋಹಿ ಸಂಶೋಧನಾ ಸಂಸ್ಥೆ.
ಬೆಂಗಳೂರು.
ಧಾರವಾಡದ ಸಾಹಿತ್ಯ ಸಂಭ್ರಮದ ಗೋಷ್ಠಿಯೊಂದರಲ್ಲಿ ಕಲಬುರ್ಗಿಯವರ ಹತ್ಯೆಯನ್ನು ಕುರಿತು ಅಜ್ಜಂಪುರ ಮಂಜುನಾಥ್‍ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಗತಿಪರರ ದಾಂಧಲೆಯನ್ನು ಎದುರಿಸಬೇಕಾಯಿತು. ಈ ಕುರಿತು ಪ್ರಜಾವಾಣಿಯಲ್ಲಿ ಪದ್ಮರಾಜ್ ದಂಡಾವತಿಯವರು (ದಿನಾಂಕ 29 ಜನವರಿ 2017), ನಮ್ಮ ಕನ್ನಡದ ಪ್ರಗತಿಪರ ಬುದ್ಧಿಜೀವಿಗಳು, ಕಲ್ಬುರ್ಗಿಯವರ ಹತ್ಯೆ ಬಲಪಂಥೀಯರಿಂದಲೇ ನಡೆದದ್ದು ಎಂಬ ಬಿಂಬವೊಂದನ್ನು ಕಾಯ್ದಿಟ್ಟುಕೊಳ್ಳುವ ಭರದಲ್ಲಿ ಘಟನೆಯೊಂದರ ಸತ್ಯಾಸತ್ಯತೆ ಮತ್ತು ಅದಕ್ಕೆ ಇರಬಹುದಾದ ವಿವಿಧ ಆಯಾಮಗಳನ್ನು ಮಾತನಾಡಲೂ ಅವಕಾಶ ಕೊಡದೆ, ಅಸಹಿಷ್ಣುಗಳಾಗುತ್ತಿದ್ದಾರೆಂದು ಟೀಕಿಸಿದ್ದರು. ಈ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಸಾಮಾಜಿಕ ಜಾಲತಾಣವೊಂದರಲ್ಲಿ (ಮಾಧ್ಯಮನೆಟ್.ಕಾಂ) ರಾಜೇಂದ್ರ ಚೆನ್ನಿಯವರು ದಂಡಾತಿಯವರ ಮೇಲೆ ತೀವ್ರವಾಗಿ ಹರಿಹಾಯ್ದಿದ್ದಾರೆ. ಚೆನ್ನಿಯವರ ಪ್ರತಿಕ್ರಿಯೆಯು ಕನ್ನಡದ ಬೌದ್ಧಿಕ ಜಗತ್ತಿನ ಕುರಿತು ಏನನ್ನು ಹೇಳುತ್ತಿದೆ ಎಂಬುದನ್ನು ಈ ಲೇಖನ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತದೆ. ಮತ್ತಷ್ಟು ಓದು
‘ಆರ್ ಅಂಕುಸ(ರ?)ವಿಟ್ಟೊಡಂ’: ಒಂದು ಪರಿಶೀಲನೆ
– ಡಾ.ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕರು,
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಪಂಪ ವಿರಚಿತ ವಿಕ್ರಮಾರ್ಜುನ ವಿಜಯ (ಕ್ರಿ.ಶ.942) ಕೃತಿಯಲ್ಲಿನ ಬನವಾಸಿ ವರ್ಣನೆಯನ್ನು ಮಾಡುವ ಚತುರ್ಥಾಶ್ವಾಸದ 28 ರಿಂದ 32ನೆಯ ಪದ್ಯಗಳು ಸಾಕಷ್ಟು ಚರ್ಚಿತವಾದವು. ಇಂದಿಗೂ ಈ ಪದ್ಯಗಳನ್ನು ಕುರಿತು ಚರ್ಚೆ ನಡೆಯುತ್ತಲೇ ಇದೆ. ಇವುಗಳಲ್ಲಿ ಒಂದು ಪದ್ಯ:
ತೆಂಕಣಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕಡಂ ಬಿರಿದಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ1 (4-32) ಮತ್ತಷ್ಟು ಓದು
“ಪಟ್ಟಭದ್ರಹಿತಾಸಕ್ತಿಗಳ ಕೈಗಳಲ್ಲಿ ಸಿಕ್ಕಿ ಒದ್ದಾಡುತ್ತಿದೆ ಕನ್ನಡ ಚಿತ್ರರಂಗ”
– ಸುರೇಶ್ ಮುಗಬಾಳ್
ಗೆಳೆಯನೊಬ್ಬ ತಮಿಳು ನಟ ವಿಜಯ್ ನಟಿಸಿರುವ ‘ಕತ್ತಿ’ ಸಿನೆಮಾವನ್ನು ವೀಕ್ಷಿಸುವಂತೆ ಹೇಳಿದ, ಆ ಸಿನೆಮಾದಲ್ಲೇನಿದೆ ಅಂತಹ ವಿಶೇಷತೆ? ಎಂದು ಕೇಳಿದಾಗ, ‘ಸಾಮಾಜಿಕ ಕಳಕಳಿಯುಳ್ಳ ಅತ್ಯುತ್ತಮ ನಿನೆಮಾ, ಸಾಧ್ಯವಾದರೆ ವೀಕ್ಷಿಸು’ ಎಂದ, ಸರಿ ನಾನೂ Hotstar ನಲ್ಲಿ ಚಿತ್ರಕ್ಕಾಗಿ ತಡಕಾಡಿದೆ, ಸಿನೆಮಾವೇನೋ ವೀಕ್ಷಿಸಲು ಸಿಕ್ಕಿತು, ಆದರೆ ಚಿತ್ರವನ್ನು ಮಲೆಯಾಳಂ ಭಾಷೆಯಲ್ಲಿ ಡಬ್ಬ್ ಮಾಡಲಾಗಿತ್ತು. ಭಾಷೆ ಬಾರದವನಿಗೆ ತಮಿಳು ಭಾಷೆಯಾದರೇನು? ಮಲೆಯಾಳಂ ಭಾಷೆಯಾದರೇನು? ಅದು ಒತ್ತಟ್ಟಿಗಿರಲಿ, ಭಾಷೆಯ ಗಂಧವೇ ಗೊತ್ತಿರದ ಅರೇಬಿಕ್ ಭಾಷೆಯ ಅಲ್ ಲೈಲ್, ಕೋರಿಯನ್ ಭಾಷೆಯ Miracle in cell No. 7 ಸಿನೆಮಾಗಳನ್ನೂ ವೀಕ್ಷಿಸಿದ್ದೇನೆ, ಈ ಚಿತ್ರಗಳಲ್ಲಿ ನನಗೆ ಅರ್ಥವಾಗುತ್ತಿದ್ದದ್ದು ಕೇವಲ ಮುಖಭಾವ, ಆಂಗಿಕ ಚಲನೆ, ಚಿತ್ರದ ನಿರೂಪಣೆಗಳು ಮಾತ್ರ. ಇವುಗಳ ಸಹಾಯದಿಂದಲೇ ಚಿತ್ರಕಥೆಯನ್ನು ಅರ್ಥಮಾಡಿಕೊಳ್ಳು ಪ್ರಯತ್ನಿಸುತ್ತಿದ್ದೆ. ಒಂದು ವೇಳೆ English ಅಡಿಬರಹಗಳಿಲ್ಲದಿದ್ದರೆ ಸಿನೆಮಾ ಅರ್ಥವೇ ಆಗುತ್ತಿರಲಿಲ್ಲ. Miracle in cell No. 7 ಚಿತ್ರವನ್ನು ಇತ್ತೀಚೆಗೆ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿ ಕನ್ನಡಕ್ಕೆ ‘ಪುಷ್ಫಕ ವಿಮಾನ’ ಎಂಬ ಹೆಸರಿನಲ್ಲಿ ರಿಮೇಕ್ ಕೂಡ ಮಾಡಲಾಯಿತು. ನಾಯಕನ ನಟನೆ ಅದ್ಭುತವಾಗಿದ್ದರೂ ಚಿತ್ರವು ನಿರೀಕ್ಷೆಯನ್ನು ಹುಸಿಗೊಳಿಸಿತು. ಕೊರಿಯನ್ ಭಾಷೆಯಲ್ಲಿ ನಿರ್ಮಾಣವಾದ ಚಿತ್ರ ನನ್ನ ಅಂತರಂಗವನ್ನು ಕಲುಕಿದಷ್ಟೂ ಕನ್ನಡದಲ್ಲಿ ರಿಮೇಕ್ ಮಾಡಿದ ಚಿತ್ರ ಅಂತರಂಗಕ್ಕಿಳಿಯಲಿಲ್ಲ. ಪ್ರಾಯಶಃ ಕೊರಿಯನ್ ಭಾಷೆಯ ಚಿತ್ರವನ್ನೇ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದರೆ ಚಿತ್ರ ಇನ್ನಷ್ಟು ಅರ್ಥಗಳನ್ನು ಮೂಡಿಸುತ್ತಿತ್ತೇನೋ. ಮತ್ತಷ್ಟು ಓದು
ಕ್ವೀನ್ ಆಫ್ ಕಟ್ವೆ..!
– ರವಿಶಂಕರ್
ಹೇ ಪಪ್ಪಾ.. ನಾಳೆ ಸಿಸಿಲಿಯನ್ ಡ್ರ್ಯಾಗನ್ ಕಲ್ತ್ಕೊಂಡ್ ಹೋಗ್ಬೇಕು ಅಂದ ಪುತ್ರ ರತ್ನ! ಬರೀ ಎಂಟರ್ ದಿ ಡ್ರ್ಯಾಗನ್ ಗೊತ್ತಿರೋ ನಾನು ‘ಲೋ ಅದನ್ನ ಕಲ್ತಕೊಂಡ್ ಹೋಗೋಕೆ ಆಗಲ್ಲ, ಬೇಕಾದ್ರೆ ನೋಡಬಹುದು’ ಅಂದೆ. ಪಪ್ಪಾ, ಬ್ರೂಸ್ ಲೀ ಪಿಕ್ಚರ್ ಅಲ್ಲ.. ಇದು ಚೆಸ್ ಮೂವ್ಸ್ ಅಂದಾಗ್ಲೇ ನಂಗೆ ಗೊತ್ತಾಗಿದ್ದು ಸಿಸಿಲಿಯನ್ ಡ್ರ್ಯಾಗನ್ ಅಂದ್ರೆ ಚೆಸ್ ಆಟದಲ್ಲಿನ ಒಂದು ಡಿಫೆನ್ಸಿವ್ ಅಥವಾ ಆಟ ಶುರು ಮಾಡೋ ಒಂದು ತಂತ್ರ ಅಂತ (ಅದೂ ಗೂಗಲ್ ಮಾಡಿದ್ ಮೇಲೆ). ಬರೀ ಆನೆ, ಒಂಟೆ, ರಾಣಿ, ಕುದುರೆ ಹೀಗ್ ಪರಿಚಯ ಇರೋ ಈ ಆಟ.. ನೈಟ್, ರೂಕ್, ಬಿಷಪ್.. ಅದರ ಜೊತೆಗೆ ಡ್ರಾಗನ್ನು, ಮಣ್ಣು, ಮಸಿ ಅಂದ್ರೆ ಹೆಂಗ್ ಗೊತ್ತಾಗ ಬೇಕು ಹೇಳಿ! ಮತ್ತಷ್ಟು ಓದು
ಅವರು ಅಂಧರು ಅಂತ ಒಂದು ಕ್ಷಣಕ್ಕೂ ಅನ್ನಿಸಲಿಲ್ಲ..!
– ನರೇಂದ್ರ ಎಸ್ ಗಂಗೊಳ್ಳಿ.
ಹೌದು ಅವತ್ತು ಫೆಬ್ರವರಿ 12. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸುಮಾರು 15000ಕ್ಕೂ ಅಧಿಕ ಸಂಖ್ಯೆ ಪ್ರೇಕ್ಷಕರು ನೆರೆದಿದ್ದರು. ಅದರಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತ್ತು. ಅವರೆಲ್ಲರ ತುಂಬು ಹೃದಯದ ಪ್ರೋತ್ಸಾಹದ ನಡುವೆ ನಮ್ಮ ಭಾರತದ ಅಂಧರ ಕ್ರಿಕೆಟ್ ತಂಡ ಸಾಂಪ್ರದಾಯಿಕ ಪ್ರತಿಸ್ಫರ್ಧಿ ಪಾಕಿಸ್ತಾನವನ್ನು ಬಗ್ಗುಬಡಿದು ಸತತ ಎರಡನೇ ಬಾರಿಗೆ ಟಿ-20 ವಿಶ್ವಕಪ್ ನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಇಡೀ ಪಂದ್ಯದ ರೋಚಕತೆ ಎನ್ನುವುದು ಯಾವ ವಿಶ್ವ ಕಪ್ ಪಂದ್ಯಕ್ಕೂ ಕಡಿಮೆ ಇರಲಿಲ್ಲ. ಮತ್ತಷ್ಟು ಓದು
ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೩
– ಮು. ಅ. ಶ್ರೀರಂಗ, ಬೆಂಗಳೂರು
ಭಾನುವಾರ ಬೆಳಗ್ಗೆ ಪೀರಾಯರು ಎಂದಿನಂತೆ ವಾಯುವಿಹಾರ ಮುಗಿಸಿಕೊಂಡು ಬಂದು, ಸ್ನಾನ ಮುಗಿಸಿ ತಿಂಡಿ ತಿನ್ನಲು ಹೊರಡಬೇಕು ಆ ವೇಳೆಗೆ ಮೊಬೈಲ್ ರಿಂಗಾಯಿತು. Raju Vasishtha calling ಎಂದು ಮೊಬೈಲ್ ಸ್ಕ್ರೀನ್ ಮೇಲೆ ಮೂಡಿ ಬಂದ ಪದಗಳನ್ನು ನೋಡಿ ಇವತ್ತು ಬರುತ್ತೇನೆ ಎಂದು ಹೇಳಲು ಫೋನ್ ಮಾಡಿರಬೇಕು ಎಂದು ಕೊಂಡು ಕಾಲ್ ರಿಸೀವ್ ಮಾಡಿದರು. ‘ಹಲೋ ಪೀರಾವ್ ಸಾರಿ ಕಣಯ್ಯಾ. ಇವತ್ತು ನಾನು ಬರಕ್ಕೆ ಆಗ್ತಿಲ್ಲ. ಅರ್ಜೆಂಟ್ ಆಗಿ ಡೆಲ್ಲಿಗೆ ಹೋಗಬೇಕಾಗಿದೆ. ಈಗ ಏರ್ ಪೋರ್ಟ್ಗೆ ಆಫೀಸ್ ಕಾರ್ ನಲ್ಲಿ ಹೋಗ್ತಾಯಿದೀನಿ. ನಿನಗೆ ನಮ್ಮೂರು ಬೇಸರವಾದರೆ ಬೆಂಗಳೂರಿಗೆ ಹೊರಡು. ನಾನು ಬೆಂಗಳೂರಿಗೆ ಬಂದ ಮೇಲೆ ಫೋನ್ ಮಾಡ್ತೀನಿ. ಈಗ ಇನ್ನೂ ಒಂದಿಬ್ಬರಿಗೆ ಫೋನ್ ಮಾಡಬೇಕು. see you’ ಎಂದು ಒಂದೇ ಉಸಿರಲ್ಲಿ ಹೇಳಿ ಮುಗಿಸಿದ. ಕಾಲ್ ಕಟ್ ಆಯ್ತು. ಮತ್ತಷ್ಟು ಓದು