ವಿಷಯದ ವಿವರಗಳಿಗೆ ದಾಟಿರಿ

ಮೇ 16, 2013

4

ವಂದೇ ಮಾತರಂ ಹಾಡಲಾಗದಿದ್ದರೆ…

‍ನಿಲುಮೆ ಮೂಲಕ

-ಅಶ್ವಿನ್ ಅಮೀನ್

Vande Mataram BSPಅದನ್ನು ಬರಿ ಗೀತೆ ಅನ್ನಬಹುದೇ?ಊಹೂಂ ಅದು ಗೀತೆಯಲ್ಲ, ಅದು ಭಾರತದ ಸ್ವಾತಂತ್ರ್ಯ ಹೋರಾಟದ ಬೀಜಮಂತ್ರ.ಬ್ರಿಟಿಷರ ನಿದ್ದೆ ಕೆಡಿಸುತ್ತಿದ್ದ ಮಂತ್ರವದು.ಎದೆಯುಬ್ಬಿಸಿ ಗರ್ವದಿಂದ ಗರ್ಜಿಸುವಾಗ ಮೈ ಮನಸ್ಸುಗಳು ರೋಮಾಂಚನಗೊಳ್ಳುತ್ತವೆ.. ಅದೆಂತಾ ಶಕ್ತಿಯಿದೆ ಈ ‘ವಂದೇ ಮಾತರಂ’ ನಲ್ಲಿ. ಅದೆಷ್ಟೋ ಹೋರಾಟಗಳ ಸ್ಪೂರ್ತಿ ಇದು, ದೇಶ ಪ್ರೇಮವ ಬಡಿದೆಬ್ಬಿಸುವ ಬೀಜಮಂತ್ರವಿದು. ಪ್ರತಿಯೊಬ್ಬ ಭಾರತೀಯನ ನಾಡಿ ಮಿಡಿತವಿದು… ವಂದೇ ಮಾತರಂ ಅನ್ನು ವಿಶ್ಲೇಷಿಸ ಹೊರಟರೆ ಆ ವಿಶ್ಲೇಷಣೆಯೇ ಒಂದು ವೀರ ಗೀತೆಯಾದೀತು…!!!!

ಆದರೆ…ವಂದೇ ಮಾತರಂ ಅನ್ನು ಗೌರವಿಸುವ ಮನಸ್ಸುಗಳ ನಡುವೆ ಧರ್ಮದ ನೆಪವೊಡ್ಡಿ ಅದನ್ನು ವಿರೋಧಿಸುವ ಕೆಲ ವಿಷ ಮನಸ್ಸುಗಳೂ ತುಂಬಿರುವುದು ಖೇದಕರ..

ಮೊನ್ನೆ ಮೊನ್ನೆ ತಾನೆ ತಾನು ಮುಸ್ಲಿಂ ಎಂಬ ಕಾರಣಕ್ಕೆ ವಂದೇ ಮಾತರಂ ಹಾಡುವುದಿಲ್ಲ ಎಂದು ವಂದೇ ಮಾತರಂ ಹಾಡಿನ ಮಧ್ಯೆಯೇ ಸಂಸತ್ತಿನಿಂದ ಹೊರನಡೆದು ಉದ್ದಟತನ ತೋರಿದ ಬಿಎಸ್ಪಿ ಸಂಸದ ಶಫಿಕುರ್ ರೆಹಮಾನ್ ಬಗ್ಗೆ ಕೇಳಿರುತ್ತೀರಿ. ಇಂತಹ ಮತಾಂಧವಾದದ ನಡೆ ಇದೇ ಮೊದಲಲ್ಲ. ವಂದೇ ಮಾತರಂ ಅನ್ನು ವಿರೋಧಿಸಿ ಭಾರತೀಯರಲ್ಲಿ ವಿಷ ಬೀಜ ಬಿತ್ತಿದವರಲ್ಲಿ ಆಲಿ ಸಹೋದರರು ಮೊದಲಿಗರಾಗಿ ಕಂಡು ಬರುತ್ತಾರೆ.

ಆ ಘಟನೆ ಹೀಗಿದೆ;

1923. ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ಸ್ ನ ರಾಷ್ಟ್ರೀಯ ಅಧಿವೇಶನ ನಡೆಯುತ್ತಿತ್ತು. ಆಗ ಪ್ರತಿ ಅಧಿವೇಶನದಲ್ಲಿ ವಂದೇ ಮಾತರಂ ಹಾಡುವ ಸಂಪ್ರದಾಯ ಬೆಳೆದು ಬಂದಿತ್ತು. ಪಂಡಿತ್ ವಿಷ್ಣು ದಿಗಂಬರ ಫಲುಸ್ಕರ್ ಪ್ರತಿ ವರ್ಷದಂತೆ ವಂದೇ ಮಾತರಂ ಹಾಡ ಹೊರಟಾಗ ಆಗಿನ ಕಾಂಗ್ರೆಸ್ಸ್ ಅಧ್ಯಕ್ಷ (ಮುಸ್ಲಿಂ ಲೀಗ್ ನ ಸ್ಥಾಪಕರಲ್ಲೊಬ್ಬರಾದ) ಮೌಲಾನ ಅಹಮದ್ ಆಲಿ ಆತನ ಸಹೋದರ ಶೌಕತ್ ಆಲಿ ತಡೆದರು. ಇಸ್ಲಾಂನ ಕಾನೂನಿನಂತೆ ಸಂಗೀತ ನಿಷಿದ್ಧ ಎಂಬುದು ಅವರು ಕೊಟ್ಟ ಕಾರಣವಾಗಿತ್ತು. ಹಠಾತ್ ಬೆಳವಣಿಗೆಯಿಂದ ಕೆಂಡಾ ಮಂಡಲರಾದ ಫಲುಸ್ಕರ್ ಇದು ಕಾಂಗ್ರೆಸ್ಸ್ ನ ಅಧಿವೇಶನ, ಒಂದು ಧರ್ಮದ ಸಭೆಯಲ್ಲ.. ಮುಸ್ಲಿಮರ ದರ್ಗಾ, ಮಸೀದಿಯೂ ಅಲ್ಲ.. ಈ ರಾಷ್ಟ್ರೀಯ ವೇದಿಕೆ ಮೇಲೆ ವಂದೇ ಮಾತರಂಗೆ ಅಡ್ಡಿಪಡಿಸಲು ನಿಮಗೇನು ಅಧಿಕಾರವಿದೆ? ಅಧಿವೇಶನ ಪ್ರಾರಂಭವಾಗುವ ಮೊದಲು ಅಧ್ಯಕ್ಷೀಯ ಮೆರವಣಿಗೆ ಯಲ್ಲಿ ವಿಜೃಂಭಣೆಯ ಸಂಗೀತ ವಾದ್ಯಗಳೊಂದಿಗೆ ಬರುವಾಗ ನಿಮಗೆ ಹಿಡಿಸಿತೇ ?! ವಂದೇ ಮಾತರಂಗೆ ವಿರೋಧ ಇರುವವರು ಧಾರಾಳವಾಗಿ ಹೊರ ನಡೆಯಬಹುದು ಎಂದು ಆಲಿ ಸಹೋದರರನ್ನು ಜಾಡಿಸಿದರು. ನಂತರ ವಂದೇ ಮಾತರಂ ಅನ್ನು ಪೂರ್ತಿಯಾಗಿ ಹಾಡಿ ವಂದಿಸಿ ಕೆಳಗಿಳಿದರು.

ಮುಂದೆ ಇದೇ ಆಲಿ ಸಹೋದರರು ಜಿನ್ನಾ ಜತೆಗೂಡಿ ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನದ ರಚನೆಗೆ ಕಾರಣರಾಗಿ ಅಲ್ಲಿಗೇ ವಲಸೆ ಹೋದರು. ಆದರೆ ಅವರಂತಹ ವಿಷ ಮನಸ್ಸುಗಳು ಕೆಲವು ಇಲ್ಲೇ ಉಳಿದುಬಿಟ್ಟವು. ಇಂದು ಅಂತಹ ಹಲವು ವಿಷ ಮನಸ್ಸುಗಳು ಕಾಣಸಿಗುತ್ತವೆ. . ಬಿಎಸ್ಪಿ ಸಂಸದ ಶಫಿಕುಲ್ ರೆಹಮಾನ್ ಹಾಗು ಆ ಘಟನೆ ನಂತರ ಆತನನ್ನು ಬೆಂಬಲಿಸಿ ವಾದಕ್ಕಿಳಿದ ಆತನ ಕೆಲ ಧರ್ಮೀಯರೂ ಕೂಡ ಈ ಪಟ್ಟಿಗೆ ಬರುತ್ತಾರೆ.

ಅಷ್ಟಕ್ಕೂ ವಂದೇ ಮಾತರಂ ನಲ್ಲಿ ಏನಿದೆ??

ಬಂಕಿಮ ಚಂದ್ರರು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಹೊರಗಿನ ಸುಂದರ ಪರಿಸರವನ್ನು ನೋಡಿ ಪುಳಕಿತರಾಗಿ ಬರೆದ ಗೀತೆಯಿದು. ಇಲ್ಲಿ ಇರುವುದು ನಮ್ಮ ದೇಶದ ಭೂಮಿಯ, ಪ್ರಕೃತಿಯ, ಮರಗಿಡಗಳಿಂದ ಕೂಡಿದ ಹಚ್ಚ ಹಸುರಿನ ವರ್ಣನೆ ಬಣ್ಣನೆ ಹಾಗು ದೇಶ ಪ್ರೇಮವನ್ನು ಬಡಿದೆಬ್ಬಿಸಿ ನಾವು ಇಂತಹ ಅಮೋಘ ಮಣ್ಣಿಗೆ ತಲೆ ಬಾಗಬೇಕು ಅನ್ನುವ ಸಂದೇಶ.. ಆದರೆ ಇದೇ ಭೂಮಿಯಲ್ಲಿ ಜೀವಿಸಿ ಆ ಭೂಮಿಗೆ ತಲೆಬಾಗುವುದಿಲ್ಲ ಅದು ನಮ್ಮ ಧರ್ಮಕ್ಕೆ ವಿರುಧ್ಧ ಎಂದರೆ ಎಂತಹ ಉದ್ಧಟತನವದು. ??! ನಾವು ಅಲ್ಲಾಹ್ ನನ್ನು ಬಿಟ್ಟು ಬೇರೆ ಯಾರಿಗೂ ತಲೆ ಬಾಗುವುದಿಲ್ಲ ಎನ್ನುತ್ತೀರಲ್ಲ ಹಾಗಾದರೆ ನಿಮ್ಮ ತಾಯಿ ?? ಅವಳಿಗೆ ತಲೆ ಬಾಗುವುದಿಲ್ಲವೇ ?? ನಿಮ್ಮ ಜೀವನ ಶೈಲಿ ಕುರಾನ್ ನಲ್ಲಿ ಹೇಳಿದಂತೆ ಇದೆಯೇ? ಒಮ್ಮೆ ನಿಮ್ಮ ಜೀವನ ಹಾಗು ನಿಮ್ಮ ಕುರಾನ್ ನಲ್ಲಿ ಹೇಳಿದ ಕೆಲ ನಿರ್ಭಂಧಗಳನ್ನು ಒಮ್ಮೆ ನೆನಪಿಸಿ ಅವಲೋಕಿಸಿ. ನಿಮಗೆ ಬೇಕಾದಲ್ಲಿ ಕುರಾನ್ ಅನ್ನು ಮರೆತು ಜೀವನ ನಡೆಸುವ ನೀವು ದೇಶದ ಶಾಂತಿ ಕದಡಲು ಮಾತ್ರ ನಿಮ್ಮ ಕುರಾನ್ ಅನ್ನು ಅಡ್ಡ ತರುತ್ತೀರೆನು ??

ವಂದೇ ಮಾತರಂ ಕೇವಲ ಭರತ ಭೂಮಿಯನ್ನು ಹೊಗಳುವ ಸ್ತುತಿ ಗೀತೆಯಾಗಿ ಉಳಿದಿಲ್ಲ .. ಇದೊಂದು ರಾಷ್ಟ್ರ ಪ್ರೇಮವನ್ನು ಬಡಿದೆಬ್ಬಿಸುವ ವೀರ ಗೀತೆ… ಅಂದಿನ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಕ್ರಾಂತಿ ಗೀತೆಯಾಗಿ ಜನರನ್ನು ಉತ್ತೇಜಿಸಿದ್ದು ಇದೇ ವಂದೇ ಮಾತರಂ.. ೧೯೦೫ ರಲ್ಲಿ ಬಂಗಾಳ ವಿಭಜನೆ ಮಾಡಲು ಹೊರಟ ಸಂದರ್ಭದಲ್ಲಿ ವಂಗ ಭಂಗ ಚಳುವಳಿಗೆ ಇದೇ ವಂದೇ ಮಾತರಂ ಸ್ಫೂರ್ತಿ. ತಿಲಕರ ನೇತೃತ್ವದಲ್ಲಿ ನಡೆದ ಈ ಚಳುವಳಿಯಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಭಾಗವಹಿಸಿ ವಂದೇ ಮಾತರಂ ಅನ್ನು ಸಾರ್ವಜನಿಕವಾಗಿ ಹಾಡಿ ಚಳುವಳಿಯ ಕಿಚ್ಚು ಹೆಚ್ಚಿಸಿದ್ದರು. ಇದೇ ಕಿಚ್ಚು ಆಗ ಬಂಗಾಳ ವಿಭಜನೆಯನ್ನು ತಡೆದು ಯಶಸ್ವಿಯಾಗಿತ್ತು. ಅಂದಿನಿಂದ ೧೯೪೭ ರ ಸ್ವಾತಂತ್ರ ಸಿಗುವವರೆಗೆ ನಮ್ಮ ಸ್ವಾತಂತ್ರ ಸಂಗ್ರಾಮದ ಕ್ರಾಂತಿ ಗೀತೆಯಾಗಿ ವಿರಾಜಮಾನವಾದದ್ದು ಇದೇ ವಂದೇ ಮಾತರಂ.

ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ವಂದೇ ಮಾತರಂ ಬಗ್ಗೆ ಚಕಾರವೆತ್ತದ ಮುಸ್ಲಿಮರು ಈಗ ಧರ್ಮದ ಲೇಪ ಹಚ್ಚುತ್ತಿರುವುದು ಅವರ ಉದ್ದಟತನ ಹಾಗು ಸ್ವಾರ್ಥತೆಯನ್ನು ಬಿಂಬಿಸುತ್ತದೆ. ಹಾಗೆಯೇ ಅವರ ದೇಶ ವಿರೋಧಿ ಮನೋಭಾವವನ್ನೂ. ಸ್ವಾತಂತ್ರ ಬೇಕಾದಾಗ ಇವರಿಗೆಲ್ಲ ವಂದೇ ಮಾತರಂ ಬೇಕಿತ್ತು. ಜತೆಗೆ ಹಿಂದೂಗಳೂ ಬೇಕಿದ್ದರು. ಹಿಂದೂ ಮುಸ್ಲಿಮರು ಜತೆಯಾಗಿ ವಂದೇ ಮಾತರಂ ಹಾಡುತ್ತಿದ್ದರು. ಆದರೆ ಯಾವಾಗ ಭಾರತಕ್ಕೆ ಸ್ವಾತಂತ್ರ ಸಿಗುವ ಮುನ್ಸೂಚನೆ ದೊರಕಿತೋ ಆ ಕ್ಷಣದಿಂದ ಈ ಮುಸ್ಲಿಂ ಮತಾಂಧತೆ ಸೃಷ್ಟಿಯಾಯಿತು ಎನ್ನಬಹುದು. ೧೯೨೦ ರ ನಂತರ ನಡೆದದ್ದೆಲ್ಲ ಈ ಮುಸ್ಲಿಂ ಮತಾಂಧತೆಯ ರಾಜಕಾರಣವೇ…. ಪರಿಣಾಮ ದೇಶ ವಿಭಜನೆ.. !!

ದೇಶ ವಿಭಜನೆಯ ನಂತರ ಮತಾಂಧ ಮುಸ್ಲಿಮರೆಲ್ಲ ಪಾಕಿಸ್ತಾನಕ್ಕೆ ಹೋದ ಮೇಲಾದರೂ ನೆಮ್ಮದಿಯ ಸೌಹಾರ್ದದಿಂದ ಬಾಳಬಹುದೆಂದುಕೊಂಡಿದ್ದ ಭಾರತೀಯರ ಕನಸು ಮಾತ್ರ ನನಸಾಗಲೇ ಇಲ್ಲ. ದೇಶದ ಬಗೆಯೇ ಗೌರವ ಇಲ್ಲದವರು ನಮ್ಮ ನಡುವೆ ಇರುವಾಗ ಎಲ್ಲಿಯ ನೆಮ್ಮದಿ, ಎಲ್ಲಿಯ ಸೌಹಾರ್ದ. ನಮಗೆ ದೇಶಕ್ಕಿಂತ ಧರ್ಮವೇ ಮೇಲು ಎನ್ನುವವರು ೧೯೪೭ ರಲ್ಲೇ ತೊಲಗಬಹುದಿತ್ತಲ್ಲ… ಅಂದು ಹಿಂದೂ ರಾಷ್ಟ್ರ ಮುಸ್ಲಿಂ ರಾಷ್ಟ್ರವೆಂದು ವಿಭಜನೆಯಾದ ಮೇಲೂ ಹಿಂದೂ ರಾಷ್ಟ್ರದಲ್ಲೇ ಉಳಿಯುತ್ತೇವೆ ಎಂದು ಯಾವ ಪುರುಷಾರ್ಥಕ್ಕಾಗಿ ಉಳಿದಿರಿ?!

ಒಂದು ರಾಷ್ಟ್ರ ಬೇರೆ,ಧರ್ಮ ಬೇರೆ. ಅವೆರಡನ್ನು ಬೆರೆಸಿ ವಾದಿಸುವ ಹುಂಬತನ ಬೇಡ. ಒಬ್ಬ ಭಾರತೀಯನಾಗಿ ಹುಟ್ಟಿದ ಮೇಲೆ ಆತ ಆ ದೇಶ, ಆ ದೇಶದ ಸಂಸ್ಕೃತಿ, ಸಂಪ್ರದಾಯ, ಸಂವಿಧಾನ, ರಾಷ್ಟ್ರ ಗೀತೆ, ರಾಷ್ಟ್ರ ಧ್ವಜ, ಲಾಂಛನ ಹಾಗು ದೇಶ ಪ್ರೇಮದ ಕುರಿತಾದ ಯಾವುದಕ್ಕಾದರೂ ಗೌರವ ಕೊಡಲೇಬೇಕು. ನಾನು ಮುಸ್ಲಿಂ ಅದೆಲ್ಲ ಸಾಧ್ಯವಿಲ್ಲವೆಂದಾದರೆ ೧೯೪೭ ರಲ್ಲೇ ನಿಮಗಾಗಿ ಭಾರತದ ಒಂದು ತುಂಡನ್ನು ಕಿತ್ತುಕೊಂಡು ಹೋದರಲ್ಲ. ದಯವಿಟ್ಟು ಅಲ್ಲಿಗೇ ಹೊರಡಬಹುದು. ಈಗಲೂ ಕಾಲ ಮಿಂಚಿಲ್ಲ .

ವಂದೇ ಮಾತರಂ… 

4 ಟಿಪ್ಪಣಿಗಳು Post a comment
  1. Samanya manshya's avatar
    Samanya manshya
    ಮೇ 16 2013

    ಬಾರತಿಯತೆ ಅನ್ನುವುದು ಯೆನು ಎ೦ದು ನಾವು ಮೊದಲು ತಿಲ್ಕೊಳಬೆಕು ಅದಕ್ಕಿ೦ತ ಮೊದಲು ಸತ್ಯವಿಶ್ವಾಸಿಗಲೆ೦ದರೆ ಯಾರು ಅವರ ಮತ ಗ್ರ೦ಥಗಳೆನು ಹೆಳುತ್ತವೆ ಅನ್ನುವುದನ್ನ ಅರ್ಥಮಾಡಿಕೊಳ್ಳಬೆಕು ಅದಕ್ಕಿ೦ತ ಮೊದಲು ದಾರುಲ್ ಹರಬ್ ದಾರುಲ್ ಇಸ್ಲಾ೦ ಅನ್ನುವುದನ್ನ ಸರಿಯಾಗಿ ಅರ್ಥೈಸಿ ಕೊ೦ಡಾಗ ಭಾರತಿಯತೆ, ಭಾರತ ಯಾರ ಮನಸಲ್ಲಿದೆ ಅನ್ನುವುದು ಅರ್ಥವಾಗುತ್ತದೆ

    ಉತ್ತರ
  2. Rajesh CH's avatar
    Rajesh CH
    ಮೇ 16 2013

    Vande Matharam….

    ಉತ್ತರ
  3. Jyoti's avatar
    Jyoti
    ಮೇ 16 2013

    Rehaman avarige olleya salahe.

    ಉತ್ತರ
  4. Anil N Kumar's avatar
    Anil N Kumar
    ಮೇ 17 2013

    “… ದೇಶ ವಿಭಜನೆಯ ನಂತರ ಮತಾಂಧ ಮುಸ್ಲಿಮರೆಲ್ಲ ಪಾಕಿಸ್ತಾನಕ್ಕೆ ಹೋದ ಮೇಲಾದರೂ ನೆಮ್ಮದಿಯ ಸೌಹಾರ್ದದಿಂದ ಬಾಳಬಹುದೆಂದುಕೊಂಡಿದ್ದ ಭಾರತೀಯರ ಕನಸು ಮಾತ್ರ ನನಸಾಗಲೇ ಇಲ್ಲ. ದೇಶದ ಬಗೆಯೇ ಗೌರವ ಇಲ್ಲದವರು ನಮ್ಮ ನಡುವೆ ಇರುವಾಗ ಎಲ್ಲಿಯ ನೆಮ್ಮದಿ, ಎಲ್ಲಿಯ ಸೌಹಾರ್ದ. ನಮಗೆ ದೇಶಕ್ಕಿಂತ ಧರ್ಮವೇ ಮೇಲು ಎನ್ನುವವರು ೧೯೪೭ ರಲ್ಲೇ ತೊಲಗಬಹುದಿತ್ತಲ್ಲ… ಅಂದು ಹಿಂದೂ ರಾಷ್ಟ್ರ ಮುಸ್ಲಿಂ ರಾಷ್ಟ್ರವೆಂದು ವಿಭಜನೆಯಾದ ಮೇಲೂ ಹಿಂದೂ ರಾಷ್ಟ್ರದಲ್ಲೇ ಉಳಿಯುತ್ತೇವೆ ಎಂದು ಯಾವ ಪುರುಷಾರ್ಥಕ್ಕಾಗಿ ಉಳಿದಿರಿ?!…”

    ಈ ಸಾಲುಗಳು ಇದೇ ಲೇಖನವನ್ನು ಹಿಡಿದಿಟ್ಟುಕೊಂಡನ್ತಿವೆ. ಲೇಖಕರು ಅತ್ಯುತ್ತಮವಾಗಿ ಪ್ರಸ್ತುತಪಡಿಸಿದ್ದಾರೆ. ವಂದೇ ಮಾತರಂ

    ಉತ್ತರ

Leave a reply to Rajesh CH ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments