ಇದೇನಾ… ಹುಚ್ಚು ಪ್ರೀತಿ…?
– ಕೆ.ಎಂ.ವಿಶ್ವನಾಥ(ಮಂಕವಿ) ಮರತೂರ
ಬೀದಿ ಹೋಟೇಲವೊಂದರಲ್ಲಿ ಭಿಕ್ಷುಕನೊಬ್ಬ ಒಂದು ಪತ್ರಿಕೆ ಹಿಡಿದು ಹ್ಯಾಪಿ ಬರ್ತಡೇ ಟು ಯೂ ಹಾಡು ಹೇಳುತ್ತ ಘಾಡವಾಗಿ ಏನೊ ಓದುವಂತ ದೃಶ್ಯವಿತ್ತು . ಸಮೀಪ ಹೋಗಿ ನೋಡಿದರೆ ಆತ ಓದುತ್ತಿದ್ದದ್ದು ಐದನೆ ಪುಣ್ಯಸ್ಮರಣೆಯ ಭಾವಚಿತ್ರ . ನಾನು ಸ್ವಲ್ಪ ಹತ್ತಿರ ಹೋಗಿ ಪತ್ರಿಕೆ ಕಸಿದು ಕೊಳ್ಳಲು ಪ್ರಯತ್ನಿಸಿದರೆ , ಆತ ಕೋಪ ಬಂದವನಂತಾಗಿ ತನ್ನ ಒಡಲಾಳದ ವಿಷಯ ಯಾರ ಪರಿವೆಯಿಲ್ಲದೆ ಹೇಳಿಕೊಳ್ಳುತ್ತಾನೆ. ಆ ಭಾವಚಿತ್ರಕ್ಕು ತನಗೂ ಇರುವ ಸಂಬಂದವನ್ನು ಬಿಚ್ಚಿ ಹೇಳುತ್ತಾನೆ.ಈತನ ಹೆಸರು ಗೋಪಾಲ ಸುಂದರ ಮೈಕಟ್ಟು ನಿಲುವು ಬಾಹು ಸತತ ವ್ಯಾಯಾಮ ಮಾಡಿ ಮನೆಯ ಖಾರಪುಡಿ ರೊಟ್ಟಿ ತಿಂದು ಗಟ್ಟಿಮುಟ್ಟಾಗಿ ಇದ್ದ ಆತನ ದೇಹ ಆಕರ್ಶಕವಾಗಿತ್ತು ಕಾಲೇಜು ಕನ್ನೆಯರಿಗೆಲ್ಲ ಕನಸಿನ ರಾಜಕುಮಾರ ನಂತಿದ್ದ .
ಲೇ.. ಆ ಫಿಗರು ಭಾರಿ ಇತ್ತಲೆ… ಆದರೆ ಅವಳು ಸ್ವಲ್ಪನು ತಿರುಗಿ ನೋಡಲೇಯಿಲ್ಲ. ಈ ಬಾರಿ ಸಿಗಲಿ ಅವಳನ್ನು ಬಿಟ್ಟರೆ ಕೇಳು ಅವಳ ಆ ಮೈಮಾಟ ನೋಡಿ ನನಗೆ ನಿದ್ದೆನೆ ಬರತಿಲ್ಲ ಕಣ್ರೊ. ಹೀಗೆ ಗೆಳೆಯೆರೆಲ್ಲ ಕಾಲೇಜು ಕ್ಯಾಂಪಸ್ ಲ್ಲಿ ಕಾಲಹರಣ ಮಾಡುತ್ತಾ ಆ ಕಾಲೇಜಿನ ಸುಂದರಿ ಪಾರ್ವತಿ ಊರ್ಫ ಪಾರು ಹುಡುಗಿಯ ಬಗ್ಗೆ ಮಾತಾಡುತ್ತಿದ್ದರು .
ನಮ್ಮ ಗೋಪಾಲ ನೋಡಿರೊ ಅಷ್ಟು ಹ್ಯಾಂಡ್ಸಂ ಆದರೂ ಯಾವ ಹುಡುಗಿ ತಂಟೆಗೂ ಹೋಗದೆ ಹೇಗೆ ಇರತಾನೆ ಅಂದ ರಹೀಮ , ಲೇ.. ಹುಚ್ಚಾ ಅವನಿಗ್ಯಾಕೊ ಅದರ ಚಿಂತಿ ಅವನ ಕಂಡರೆ ನಮ್ಮ ಹುಡುಗಿರೆ ಮುಗಿಬೀಳತಾರೆ ರವಿ ಅಂದ ಹಾಸ್ಯದಲ್ಲಿ.ಲೆ… ನೀವೆಲ್ಲ ಉದ್ಧಾರ ಆಗಲ್ಲ ಕಣ್ರೊ ಮಂದಿ ಹೆಣ್ಣು ಮಕ್ಕಳ ಬಗ್ಗೆ ಅಸಯ್ಯವಾಗಿ ಮಾತಾಡಬಾರದು ತಮ್ಮಿಂದಿರಾ ನಡೆಯಿರಿ ಕ್ಲಾಸ್ ಶುರುವಾಯಿತು ಎಂದು ಎಲ್ಲರಿಗೂ ಬುದ್ದಿವಾದ ಹೇಳಿದ ಕರ್ಣ . ಎಲ್ಲರು ತರಗತಿಯಲ್ಲಿ ಕುಳಿತರು ಈಗ ತರಗತಿಯಲ್ಲಿ ಇಂಗ್ಲೀಷ ಮೇಡಂ ಕ್ಲಾಸ್ ಇದೆ ಎಲ್ಲರು ಪಾಠಕ್ಕಿಂತ ಮೇಡಂ ಇಷ್ಠಾಂತ ಇಡಿ ತರಗತಿ ಹೌಸ್ ಫುಲ್ ಆಗಿತ್ತು .