ಮುಸ್ಲಿಂ ಸಮುದಾಯದ ಉತ್ಪ್ರೇಕ್ಷಿತ ಕೊರಗುಗಳು
– ಪ್ರೇಮ ಶೇಖರ
“ಇಂದು ಈ ದೇಶದಲ್ಲಿ ಹಿಂಸೆ, ಹತ್ಯಾಕಾಂಡಗಳು ನಡೆದಿರುವುದು ಜಾತಿ ಸಮಾವೇಶ, ರ‍್ಯಾಲಿಗಳಿಂದಲ್ಲ. ಪ್ರವೀಣ್ ತೊಗಾಡಿಯಾರಂತಹ ಮಂದಿಗಳು ದೇಶಾದ್ಯಂತ ಏರ್ಪಡಿಸಿಕೊಂಡು ಬಂದ ಹಿಂದೂ ಸಮಾಜೋತ್ಸವದಂತಹ ಸಮಾವೇಶಗಳು, ರ‍್ಯಾಲಿಗಳು ದೇಶವನ್ನು ಕಂಗೆಡಿಸಿದ್ದವು. ಹಲವು ಕೋಮುಗಲಭೆಗಳಿಗೆ, ಹಿಂಸೆಗಳಿಗೆ ಬಿಜೆಪಿ ಮತ್ತು ಆರೆಸ್ಸೆಸ್‌ನ ರ‍್ಯಾಲಿಗಳು ಕಾರಣವಾಗಿವೆ. ಅವು ಸಮಾಜವನ್ನು, ದೇಶವನ್ನು ಒಡೆದಿವೆ.”
ಉತ್ತರ ಪ್ರದೇಶದಲ್ಲಿ ಜಾತಿಯಾಧಾರಿತ ರ‍್ಯಾಲಿಗಳನ್ನು ನಿರ್ಬಂಧಿಸಿ ಕಳೆದ ಗುರುವಾರ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಮರುದಿನವೇ ಅಂದರೆ ಶುಕ್ರವಾರ ಪ್ರಕಟವಾದ ಕನ್ನಡ ದೈನಿಕವೊಂದರ ಸಂಪಾದಕೀಯದಲ್ಲಿ ಕಂಡುಬಂದ ಸಾಲುಗಳಿವು. ಪ್ರವೀಣ್ ತೊಗಾಡಿಯಾರಂತಹ ಮಂದಿಗಳು ದೇಶಾದ್ಯಂತ ನಡೆಸಿಕೊಂಡು ಬಂದ ರ‍್ಯಾಲಿಗಳು ದೇಶವನ್ನು ಕಂಗೆಡಿಸಿದ ಬಗ್ಗೆ ಹೇಳುವ ಈ ಸಂಪಾದಕೀಯ ಅಕ್ಬರುದ್ದೀನ್ ಒವೈಸಿಯಂತಹ ಮಂದಿಗಳು ಹದಿನೈದು ನಿಮಿಷಗಳಲ್ಲಿ ಹಿಂದೂಗಳನ್ನು ಮಟ್ಟಹಾಕುತ್ತೇವೆಂದು ಘೋಷಿಸುವ ರ‍್ಯಾಲಿಗಳು ದೇಶವನ್ನು ಕಂಗೆಡಿಸಿದ ಬಗ್ಗೆ ಮೌನವಾಗಿದೆ.
ನನ್ನ ಅರಿವಿನ ಪ್ರಕಾರ ಈ ದೇಶ “ಒಡೆದದ್ದು” ೧೯೪೭ರಲ್ಲಿ ಮತ್ತು ಅದಕ್ಕೆ ಆರೆಸ್ಸೆಸ್ ಆಗಲೀ, ಬಿಜೆಪಿಯಾಗಲೀ ಏರ್ಪಡಿಸಿದ ರ‍್ಯಾಲಿಗಳು ಕಾರಣವಾಗಿರಲಿಲ್ಲ. ಬ್ರಿಟಿಷ್ ವಸಾಹತುಶಾಹಿ ಆಳರಸರ ಕೈಗೊಂಬೆಯಾಗಿ, ಅವರ ಸಕ್ರಿಯ ಸಹಕಾರದಿಂದ ಮುಸ್ಲಿಂ ಲೀಗ್ ನಡೆಸಿದ ರ‍್ಯಾಲಿಗಳು ಸಮಾಜವನ್ನು ಒಡೆದವು ಮತ್ತು ಬಂಗಾಳದಲ್ಲಿ ಅಧಿಕಾರದಲ್ಲಿದ್ದ ಮುಸ್ಲಿಂ ಲೀಗ್ ಆಗಸ್ಟ್ ೧೬, ೧೯೪೬ರಂದು ಕಲ್ಕತ್ತಾ ನಗರದಲ್ಲಿ ಆಯೋಜಿಸಿದ “ಡೈರೆಕ್ಟ್ ಆಕ್ಷನ್ ಡೇ” ಎಂಬ ಕೋಮುವಾದಿ ರ‍್ಯಾಲಿ ಮತ್ತದು ಬಲಿತೆಗೆದುಕೊಂಡ ಸುಮಾರು ನಾಲ್ಕುಸಾವಿರ ಜೀವಗಳು ದೇಶದ ಐಕ್ಯತೆಗೆ ಅಂತಿಮ ಹೊಡೆತ ನೀಡಿ ಭಾರತ ಇಬ್ಬಾಗವಾಗಲು ಕಾರಣವಾದವು. ಭಾರತವಷ್ಟೇ ಇಬ್ಬಾಗವಾಗಲಿಲ್ಲ, ಮುಸ್ಲಿಂ ಲೀಗ್‌ನ ಮೂರ್ಖತನದಿಂದಾಗಿ ಉಪಖಂಡದ ಬಲಿಷ್ಟ ಮುಸ್ಲಿಂ ಸಮುದಾಯವೂ ಇಬ್ಬಾಗವಾಯಿತು. ೧೯೭೧ರಲ್ಲಿ ಅದು ಮೂರು ಭಾಗಗಳಾಗಿ ಹೋಳಾಗಿ ಮತ್ತಷ್ಟು ಕೃಶವಾಯಿತು. ಈ ಒಡೆಯುವಿಕೆಗೂ ಬಿಜೆಪಿಯಾಗಲೀ, ಆರೆಸ್ಸೆಸ್ ಆಗಲೀ ಕಾರಣವಾಗಿರಲಿಲ್ಲ.
ಮತ್ತಷ್ಟು ಓದು