ದೇವನೂರು ಎಂಬ ಸಂತ ಮತ್ತು ವಿಧ್ವಂಸಕ ಪ್ರಚೋಧನೆ
ಹೃಷೀಕೇಶ್, ಚಿಕ್ಕಮಗಳೂರು
ಬ್ರಾಹ್ಮಣರು ಮತ್ತು ಲಿಂಗಾಯತರ ಟೌನ್ ಶೀಪ್ ಮೇಲೆ ಜೀವಹಾನಿಯಾಗದಂತೆ ಬಾಂಬ್ ಹಾಕಬೇಕೆಂದು ದೇವನೂರು ಫತ್ವಾ ಹೊರಡಿಸಿದ್ದಾರೆಂದು ಬಶೀರ್ ಬಿ ಎಮ್ ರವರು ಫೆಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ… ದೇವನೂರು ರವರು ಹಾಗೆ ಹೇಳಿರುವುದು ಸತ್ಯವೇ ಆದ ಪಕ್ಷದಲ್ಲಿ ಕೆಳಗಿನ ಗೊಂದಲಗಳು/ಪ್ರಶ್ನೆಗಳು ಏಳುತ್ತವೆ.
೧. ಜೀವಹಾನಿ ಆದರೂ ಆಗದಿದ್ದರೂ ಅಮಾನವೀಯವಾಗಿ ಬಾಂಬ್ ಹಾಕುವಂತೆ ಹೇಳುವುದು ಸಾಧುವೇ? ಹಾಗೇ ಹೇಳಲು ಅವರಿಗೆ ಅಧಿಕಾರ ಕೊಟ್ಟವರು ಯಾರು?
೨.ಗೊಲ್ಲರ ಹಟ್ಟಿ, ಲಂಬಾಣಿ ತಾಂಡ ಹೀಗೆ ಹತ್ತು ಹಲವು ಜಾತಿಗಳು ಪ್ರತ್ಯೇಕವಾಗಿ ಬದುಕುತ್ತಿವೆ, ಅವರೆಲ್ಲಾ ಪ್ರತ್ಯೇಕವಾಗಿ ಬದುಕುತ್ತಿದ್ದಾರೆಂದು,ಅವರ ಮೇಲೂ ಬಾಂಬ್ ಹಾಕಲು ಹೇಳಬಹುದೆ?
೩. ಉದ್ಯೋಗದ ಆಧಾರದ ಮೇಲೆ ಹಲವಾರು ವೃತ್ತಿಪರ ಉದ್ಯೋಗಿಗಳು ಪ್ರತ್ಯೇಕವಾಗಿಯೇ ನೆಲೆಸುತ್ತಾರೆ,ಉದಾಹರಣೆಗೆ ಕ್ವಾಟ್ರಸ್ ನಲ್ಲಿ ನೆಲೆಸುವ ಉದ್ಯೋಗಿಗಳು.ಇಲ್ಲಿಯೂ ಬಾಂಬ್ ಹಾಕಬೇಕೆ?
೪. ಬ್ರಾಹ್ಮಣರ ಮೇಲೆ ಬಾಂಬ್ ಹಾಕುವುದರ ಕುರಿತು ಅವರಿಗೆ ದೊರಕಿರುವ ಕತೆಗಳು ಪ್ರೇರಕವಾಗಿರಬಹುದು,ಆದರೂ ಅವರಿಗೆ ಜೀವಹಾನಿಯಾಗದಂತೆ ಅವರ ಮನೆಗಳ ಮೇಲೆ ಬಾಂಬ್ ಹಾಕಬೇಕು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ?
೬. ಜನರು ಪ್ರತ್ಯೇಕವಾಗಿಯಾದರೂ ನೆಲೆಸಲಿ ಒಟ್ಟಿಗಾದರೂ ನೆಲೆಸಲಿ ಅದನ್ನು ಧ್ವಂಸ ಮಾಡುವ ಅಧಿಕಾರ ಸಾಹಿತ್ಯ ಬರೆಯುವವರಿಗೆ ನೀಡಿದವರು ಯಾರು?
೭.ಬೇರೆ ಕೋಮುಗಳ ಮೇಲೆ ಬಾಂಬ್ ಹಾಕುವ ವಿಧ್ವಂಸಕ ಹೇಳಿಕೆಯನ್ನು ನೀಡಿದರೆ ನೀಜವಾಗಿಯೂ ಕೋಮುಗಲಭೆಗೆ ಮುನ್ನುಡಿ ಬರೆಯುತ್ತಿರುವವರು ಯಾರು?
೮.ವಚನ ಚಳುವಳಿಯ ಚರ್ಚೆಯ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ಕುರಿತು ಒಂದು ಮಾತನ್ನೂ ಎತ್ತದವರು,ಈಗ ಅವರ ವಿರುದ್ದ ಹರಿಹಾಯಲು ಕಾರಣಗಳೇನು?
ಒಟ್ಟಿನಲ್ಲಿ ಬಶೀರ್ ಬಿಎಮ್ ಅವರ ಪೋಸ್ಟ್ ಓದಿದಾಗ ಎದೆ ಜಲ್ ಎಂದಿದೆ.ಏನಾಗುತ್ತಿದೆ ಈ ಸಮಾಜದಲ್ಲಿ? ಜನರು ಬದುಕಲು ಇವರ ಅಪ್ಪಣೆ ಪಡೆಯಬೇಕಾ ಮತ್ತು ಬದುಕುವ ಸ್ವಾತಂತ್ರ ಎಲ್ಲವೂ ಬರೀ ಬೊಗಳೆಯೇ ಎಂದು ಅನ್ನಿಸುತ್ತದೆ. ಆದರೆ ಅದನ್ನು ಪರಾಮರ್ಶೆ ಮಾಡದೆ ಹೆಮ್ಮೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಏನೋ ವೇದವಾಕ್ಯವೇ ಹೇಳಿದ್ದಾರೆಂದು ಹಾಕುವ ಹಿಂಬಾಲಗಳ ತಲೆಯಲ್ಲೇನಿದೆ ಎಂಬುದರ ಕುರಿತು ಗಂಭೀರವಾದ ಅನುಮಾನ ಏಳುತ್ತಿದೆ.
ಪ್ರತ್ಯೇಕ ಟೌನ್ ಶೀಪ್ ಗಳನ್ನು ವಿರೋಧಿಸುವುದು,ಬಿಡುವುದು ಅವರವರಿಗೆ ಬಿಟ್ಟಿದ್ದು ಅದು ತಪ್ಪಲ್ಲ.ನನ್ನ ತಕರಾರಿವುದು ವಿರೋಧಿಸುವ,ವಿರೋಧವನ್ನು ದಾಖಲಿಸುವ ರೀತಿಗೆ. ದೇವನೂರು ಮಹಾದೇವ ರವರು ಯಾವ ಉದ್ದೇಶದಿಂದ ಹೇಳಿದ್ದಾರೋ ತಿಳಿದಿಲ್ಲ, ಆದರೆ ಬಶೀರ‍್ ಬಿಎಮ್ ರವರು ಅದನ್ನು ಬರೆದಿರುವುದು ಮೇಲೆ ತಿಳಿಸಿದ ಅರ್ಥವನ್ನೇ ಸೂಚಿಸುತ್ತದೆ
ಚಿತ್ರ ಕೃಪೆ : http://avadhimag.com
ಸಿದ್ರಾಮಣ್ಣನ ೧.ರೂ ಅಕ್ಕಿಯ ಸುತ್ತಮುತ್ತ
-ಪ್ರಸನ್ನ,ಬೆಂಗಳೂರು
೧ ರೂ ಅಕ್ಕಿ ಯೋಜನೆಯನ್ನು ಸಮರ್ಥಿಸುತ್ತಾ ಕೆಲವರು ಗ್ಯಾಸ್ ಮತ್ತು ಪೆಟ್ರೋಲ್ ಸಬ್ಸಿಡಿ ಬಗ್ಗೆ ಹೇಳುತ್ತಿದ್ದಾರೆ, ಪೆಟ್ರೋಲ್ ಮೇಲೆ ಶೇ ೪೦ ಕ್ಕೂ ಹೆಚ್ಚು ತೆರಿಗೆಯೂ ಇದೆ ಸಬ್ಸಿಡಿಯೂ ಇದೆ ಎನ್ನುವ ಸಣ್ಣ ಮಾಹಿತಿಯೂ ಇವರಲ್ಲಿ ಇಲ್ಲವೆ? ಬಹುತೇಕ ಮಧ್ಯಮ ವರ್ಗದ ಜನ ದುಡಿದು ಸಂಪಾದಿಸಿದ ಹಣದಲ್ಲಿ ಬದುಕುತ್ತಿದ್ದಾರೆ. ೧ ರೂ ಅಕ್ಕಿಯಂತಹ ಯೋಜನೆಗಳು ಅವನ ಮೇಲೆ ಹೊರೆ ಹೆಚ್ಚಿಗೆ ಮಾಡುತ್ತದೆ ಎನ್ನುವ ಕಾಳಜಿ ಅವನದು.
ಇನ್ನೂ ಕೆಲವರು ಐಟಿ ವಲಯಕ್ಕೆ ಕೊಡುವ ಸಬ್ಸಿಡಿ, ಭೂಮಿಯ ಬಗ್ಗೆ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಈ ವಲಯಗಳು ಸೃಷ್ಠಿಸಿರುವ ಮತ್ತು ಅದರಿಂದ ಒದಗುವ ಉದ್ಯೋಗವಕಾಶ ಅದರಿಂದ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿರುವುದನ್ನು ಮರೆಯುವುದು ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಅಥವ ಅಂಧಾಭಿಮಾನದ ಪ್ರತೀಕ. ಸ್ವಂತವಾಗಿ ಉದ್ಯೋಗ ಸೃಷ್ಠಿಸಲಾಗದ ಅಸಹಾಯಕ ಸರ್ಕಾರಗಳು ಈ ವಲಯಕ್ಕೆ ಸೌಕರ್ಯ ಒದಗಿಸಿ ಉದ್ಯೋಗಿಗಳ ತೆರಿಗೆ
ಹಣದಿಂದ ಬೊಕ್ಕಸ ತುಂಬಿಸಿಕೊಳ್ಳುತ್ತಿಲ್ಲವೆ? ಆ ವಲಯದಿಂದ ಆದಾಯವಿಲ್ಲದೆ ಯಾವ ಸರ್ಕಾರವೂ ಕಣ್ಣುಮುಚ್ಚಿ ಸೌಕರ್ಯಗಳನ್ನು ಒದಗಿಸುತ್ತಿಲ್ಲ.