ವಿಷಯದ ವಿವರಗಳಿಗೆ ದಾಟಿರಿ

Archive for

17
ಜುಲೈ

ಮೂರು ಬಿಟ್ಟವರ ನೂರು ಮಾತು

– ಭಾರತೀತನಯ

tivi paperಬೆಳಗ್ಗೆದ್ದು ನಿತ್ಯಕರ್ಮಗಳ ಮುಗಿಸಿ ಒಂದು ಕಪ್ ಕಾಫಿ ಅಥವಾ ಟೀ ಕುಡಿದು ಪತ್ರಿಕೆಯ ಕಡೆ ಕಣ್ಣು ಹಾಯಿಸದಿದ್ದರೆ ಏನೋ ಕಳೆದುಕೊಂಡವರ ಹಾಗೆ ಆಗಿಬಿಡುತ್ತೀವಿ. ಜಗತ್ತಿನ ಘಟನೆಗಳು, ರಾಜಕೀಯ, ದೇಶದ ಸಮಸ್ಯೆ, ಅನಾಹುತಗಳು, ಅಂಕಣಗಳು, ಭವಿಷ್ಯ,ಕ್ರೀಡೆಗಳು, ಹೊಸ ಚಲನಚಿತ್ರಗಳಾಗಿರಬಹುದು, ಹೀಗೆ ಹತ್ತು ಹಲವು ವಿಚಾರಗಳಿಗೆ ಪತ್ರಿಕೆಯನ್ನು ಅವಲಂಬಿಸಿರುತ್ತೇವೆ. ಈ ಎಲ್ಲ ವಿಷಯಗಳನ್ನು ಪತ್ರಿಕೆಗಳು ಎರಡು, ಮೂರು ರುಪಾಯಿಯೊಳಗೆ ನಮಗೆ ತಲುಪಿಸಿಬಿಡುತ್ತವೆ. ದೂರ ದರ್ಶನಗಳಲ್ಲಿ ಇಪ್ಪತ್ನಾಲಕು ಗಂಟೆಗಳು ನಿರೂಪಕರು ಗಂಟಲು ಹರಿದುಕೊಂಡು ಬೊಬ್ಬಿಕ್ಕಿದರೂ ನಮಗೆ ಪತ್ರಿಕೆಯ ಮೇಲಿನ ಮೋಹ ಕಡಿಮೆಯಾಗಲಿಲ್ಲ. ಅಷ್ಟು ಗಾಡವಾದ ಸೆಳೆತ ನಮ್ಮ ಮತ್ತು ಪತ್ರಿಕೆಯ ನಡುವಿನದು.ಪೂರ್ವಗ್ರಹಗಳ ಪೀಡಿತರಾಗಿ ಇರುತ್ತಿರಲಿಲ್ಲ. ಪತ್ರಿಕೆಯಲ್ಲಿ ವಿಷಯ ಬಂದಿದೆಯೆಂದರೆ ಅಧಿಕೃತವೆಂದೇ ಭಾವಿಸುತಿದ್ದೆವು.

ಮತ್ತಷ್ಟು ಓದು »

17
ಜುಲೈ

‘ಹಿಂದು’ ಶಬ್ದ ಕೇಳುತ್ತಲೇ ಇವರೇಕೆ ಹುಯಿಲೆಬ್ಬಿಸುತ್ತಾರೆ?

– ಪ್ರವೀಣ್ ಪಟವರ್ಧನ್

Modi12ಕೆಲ ದಿನಗಳ ಹಿಂದಷ್ಟೇ ಬೋಧ್ಗಯಾ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ನೀಡಿದ್ದ ವಿಚಿತ್ರ- ವಿಕೃತ ಹೇಳಿಕೆಗಳನ್ನು ಆಧರಿಸಿ, ತಮಗೆ ಸಮಯ ಬಂದಾಗಲೆಲ್ಲಾ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಿ, ಇತರರ (ಉದ್ದೇಶಪೂರ್ವಕವಾಗಿ ಗುಜರಾತಿನ ಮುಖ್ಯಮಂತ್ರಿ ಮೋದಿಯವರ) ತೇಜೋವಧೆ ಮಾಡುವ ಕಾಂಗ್ರೆಸ್ಸಿಗ “ಒಸಾಮಾ ಜೀ” ಎಂದು ಮುಕ್ತ ಮನಸ್ಸಿನಿಂದ ಮರ್ಯಾದೆ ನೀಡಿದ ಖ್ಯಾತಿಯ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯಸಿಂಗ್ ಅವರನ್ನು ಕುರಿತು Facebook  ಜಾಲತಾಣದಲ್ಲಿ ಒಂದು ವ್ಯಂಗ್ಯ ಚಿತ್ರ ಹರಿದಾಡುತ್ತಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ವ್ಯಂಗ್ಯಚಿತ್ರದಲ್ಲಿ ಇದ್ದುದು ಇಷ್ಟೇ. “ಟೀವಿಯಲ್ಲಿ ದಿಗ್ವಿಜಯಸಿಂಗ್ ಒಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದಾಗ ಮನೆಯಲ್ಲಿನ ಸಾಕಿದ ನಾಯಿಗಳು ಟೀವಿ ನೋಡುತ್ತಾ ಬೊಗಳುತ್ತಿವೆ. ಮುಂದೇನೂ ಹೇಳಲಾರೆ. ನೀವೇ ಅರ್ಥ ಮಾಡಿಕೊಳ್ಳಬಲ್ಲಿರಷ್ಟೇ.

ರಾಜಕಾರಣಿಯೆಂದರೆ ಅಲ್ಲಿ ವಾದ-ವಿವಾದಗಳು ಸಾಮಾನ್ಯ. ಈಗಿನ ರಾಜಕಾರಣದಲ್ಲಿ ಜನಪರ ಕೆಲಸ ಮಾಡುವುದಕ್ಕಿಂತ ವಾದಗಳಿಗೆ ಸಿಲುಕಿಕೊಳ್ಳುವುದೇ ಹೆಚ್ಚು. ಒಬ್ಬರ ಮೇಲೋಬ್ಬರ ಕೆಸರೆರಚಾಟ. ವಿರೋಧ ಪಕ್ಷದ ವ್ಯಕ್ತಿಯ ತೇಜೋವಧೆ, ಸುಳ್ಳು ಆರೋಪ, ಅರ್ಥವಿಹೀನ ಹೇಳಿಕೆ ಇವೆಲ್ಲವೂ ಕೆಸರೆರೆಚಾಟದ ವಿವಿಧ ಮುಖಗಳು. ನಿಮ್ಮ ಸರ್ಕಾರ ಹೀಗೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ ಸಿಗುವ ಉತ್ತರ, ನಮ್ಮ ಹಿಂದಿನ ಸರ್ಕಾರ ಇದಕ್ಕಿಂತಲೂ ಕೆಟ್ಟ ಕೆಲಸ ಮಾಡಿತ್ತು ಅದರ ಬಗ್ಗೆ ಮಾತಾಡೋಣವೇ ಎಂದು ಕುಟುಕಿ ತಮ್ಮ ಲೋಪಗಳನ್ನು cover-up ಮಾಡಿಕೊಳ್ಳುವವರೇ ಈ ದಿನ ಹೆಚ್ಚು.

ಮತ್ತಷ್ಟು ಓದು »