ವಿಷಯದ ವಿವರಗಳಿಗೆ ದಾಟಿರಿ

Archive for

12
ಜುಲೈ

ಪೀಜಿ ಪುರಾಣ

– ಪ್ರಶಸ್ತಿ.ಪಿ, ಸಾಗರ

Atithiಅ: ಹಾಯ್, ನೀವೆಲ್ಲಿರೋದು ?

ಬ: ಬೆಂಗ್ಳೂರು

ಅ: ಓ. ಹೌದಾ.. ಬೆಂಗ್ಳೂರಲ್ಲೇನ್ ಮಾಡ್ಕೊಂಡಿದೀರಿ ?

ಬ:ಪೀಜಿ

ಅ:ಪೀಜಿ ಅಂದ್ರೆ ಪೋಸ್ಟ್ ಗ್ರಾಜುಯೇಷನ್ನಾ ?

ಬ:ಅಲ್ಲ ಮಾರ್ರೆ.ಪೇಯಿಂಗ್ ಗೆಸ್ಟು !:-)

ಈ ಬೆಂದಕಾಳೂರಿಗೆ ಬಂದು ಬಾಳ ಬೇಳೆ ಬೇಯಿಸ್ಕೊಳೋಕೆ ಶುರು ಮಾಡಿದಾಗಿನಿಂದ ಮೇಲಿನ ಪೀಜಿ PJ ಬೇಜಾರ್ ಬರೋವಷ್ಟು ಕಾಮನ್ನಾಗಿ ಹೋಗಿದೆ 😦

ಅಲ್ಲ, ಈ ಕಾಲ ಅನ್ನೋದು ನಮ್ಮ ಕಲ್ಪನೆ, ನಂಬಿಕೆಗಳನ್ನೆಲ್ಲಾ ಎಷ್ಟು ಬದಲಾಯಿಸತ್ತೆ ಅಲ್ವಾ ? ಕೆಲವೊಂದು ಸಲ ನಂಬಿಕೆಗಳನ್ನ  ಬುಡಮೇಲೇ ಮಾಡ್ಬಿಡುತ್ತೆ. ನಾವು ಎಷ್ಟೇ ಅಂದ್ಕೊಂಡ್ರೂ ನಮ್ಮ ಮನೆ ಬಿಟ್ಟು ಗೊತ್ತಿರದ ಊರಿಗೆ ಹೋಗಬೇಕಾದ ಸಂದರ್ಭ ಬಂದೇ ಬರತ್ತೆ. ಆ ಊರಲ್ಲಿ ಹತ್ತಿರದ ನೆಂಟ್ರ ಮನೆಯೋ, ಗೆಳೆಯರ ರೂಮೋ ಇದ್ರೆ ಓಕೆ. ಇಲ್ದಿದ್ರೆ ? ! ಹುಡುಗರು ಹೇಗೋ ಒಂದೆರಡು ದಿನ ಏಗಬಹುದು. ಆದ್ರೆ ಹುಡುಗಿಯರು ಎಕ್ಸಾಮಿಗೋ, ಇಂಟರ್ವ್ಯೂಗೋ ಯಾವ್ದೋ ಹೊಸ ಊರಿಗೆ ಒಂದೆರಡು ದಿನಗಳ ಮಟಿಗೆ ಹೋದ ಅಕ್ಕಂದಿರು  ಯಾವುದೋ ಗೃಹಸ್ಥರ ಮನೆಯಲ್ಲಿ ಉಳ್ಯೋದು. ನೆಂಟರಲ್ಲ, ಪರಿಚಯದವರೂ ಅಲ್ಲ. ಹಾಗಾಗಿ ದುಡ್ಡು ಕೊಟ್ಟು ಉಳ್ಯೋ ಅತಿಥಿ(paying guest) ಅನ್ನೋ ಕಲ್ಪನೆ ಇತ್ತು ಪೀಜಿ ಅಂದ್ರೆ. ಆಮೇಲೆ ಅಕ್ಕಂದಿರೆಲ್ಲಾ ಕೆಲ್ಸ ಅಂತ ಬೆಂಗ್ಳೂರಿಗೆ ಬಂದ ಮೇಲೆ ಪೀಜಿ ಪರಿಕಲ್ಪನೆ ಸ್ವಲ್ಪ ಬದಲಾಯ್ತು. ಒಂದು ಆಂಟಿ ಮನೇಲಿ ಅವ್ರಿಗೆ ಊಟದ, ಇನ್ನಿತರ ಖರ್ಚು ಅಂತ ಕೊಟ್ಟು ಮನೆ ಮಕ್ಕಳಂತೆ ಇರೋದೇ ಪೀಜಿ ಅನ್ನೊವಷ್ಟು ಅಕ್ಕಂದಿರ ಮಾತುಗಳಿಂದ ತಿಳಿದಿದ್ದೆ. ಪೀಜಿ ಅಂದರೆ ಕೆಲದಿನ ಅಂತಿದ್ದ ಪರಿಕಲ್ಪನೆ ಅದು ತಿಂಗಳು, ವರ್ಷಗಳಿಗೂ ಮುಂದುವರಿಯುವ ಮೆಗಾ ಸೀರಿಯಲ್ ಅಂತ ಬದಲಾಯ್ತು.. ಕೇಳೋದಕ್ಕೂ, ಸ್ವತಃ ಅನುಭವಿಸೋದಕ್ಕೂ ಇರೋ ವ್ಯತ್ಯಾಸ, ಬೆಂದಕಾಳೂರಿನ ಪೀಜಿಗಳ ನಿಜರೂಪದ ಝಲಕ್ಗಳು ಸಿಗೋಕೆ ಶುರು ಆದದ್ದು ನಾನು ಸ್ವತಃ ಬೆಂಗಳೂರಿಗೆ ಬಂದಾಗಲೇ.

ಮತ್ತಷ್ಟು ಓದು »

12
ಜುಲೈ

ಉತ್ತರಾಖಂಡ ಜಲಪ್ರಳಯ ಸಂತ್ರಸ್ತರ ಪರಿಹಾರ ನಿಧಿಗಾಗಿ

Pravaha peeditaru  ಧಾರವಾಡ: ಉತ್ತರಾಖಂಡ ಜಲಪ್ರಳಯ ಸಂತ್ರಸ್ತರ ಪರಿಹಾರ ನಿಧಿಗೆ ಸಹಾಯ ಧನ ನೀಡುವ ಉದ್ದೇಶದಿಂದ ಮಾಧ್ಯಮ  ಛಾಯಾ ಗ್ರಾಹಕರು ಹಾಗೂ ಹವ್ಯಾಸಿ ಛಾಯಾಗ್ರಾಹಕರು ಮತ್ತು ಕಲಾವಿದರ ಸುಂದರವಾದ ಕಲಾಕೃತಿಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ. ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ, ಆರ್‍ಕೆ ಛಾಯಾ ಫೌಂಡೇಶನ್, ಬಾಲ ನಂದನ ಟ್ರಸ್ಟ್ ಹಾಗೂ ಮಾಸ್ ಮೀಡಿಯಾ ಕಮ್ಯುನಿಕೇಶನ್ಸ್ ಫಾರ್ ರೂರಲ್ ಆಂಡ್ ಅರ್ಬನ್ ಡೆವೆಲಪ್‍ಮೆಂಟ್ ಸೆಂಟರ್ ಕರ್ನಾಟಕ ಜಂಟಿಯಾಗಿ ಜುಲೈ 20ರಿಂದ 5 ದಿನಗಳ ಕಾಲ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಈ ಹಿನ್ನಲೆಯಲ್ಲಿ ಆಸಕ್ತ ಕಲಾವಿದರು, ಹವ್ಯಾಸಿ ಛಾಯಾ ಗ್ರಾಹಕರು ಜುಲೈ 15ರ ಒಳಗಾಗಿ ತಮ್ಮ ಕಲಾಕೃತಿ ಹಾಗೂ ಛಾಯಾಚಿತ್ರಗಳನ್ನು ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ತರಾದ ಎನ್.ಎಂ.ದಾಟನಾಳ ಇವರಿಗೆ ತಲುಪಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಮೊ:9341242401, ಪ್ರತಾಪ ಬಹುರೂಪಿ 8095932738 ಗೆ ಸಂಪರ್ಕಿಸಬೇಕೆಂದು ಮಾಸ್ ಮೀಡಿಯಾ ಕಮ್ಯುನಿಕೇಶನ್ಸ್ ಫಾರ್ ರೂರಲ್ ಆಂಡ್ ಅರ್ಬನ್ ಡೆವೆಲಪ್‍ಮೆಂಟ್ ಸೆಂಟರ್ ಕರ್ನಾಟಕ ಉಪಾಧ್ಯಕ್ಷ ಶಶಿಕಾಂತ್ ದೇವಾಡಿಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

12
ಜುಲೈ

ಸಂಕವ್ವನ ಸ್ವಾತಂತ್ರ್ಯ

– ಸಂತೆಬೆನ್ನೂರು ಫೈಜ್ನಟ್ರಾಜ್’

Swaatantryaಜೈಹಿಂದ್,

ಜೈಹಿಂದ್,

ಜೈ ಹಿಂದ್,

ಮಹಾತ್ಮಗಾಂಧಿ ಕಿ ಜೈ.

ಭಾರತ್ಮಾತಾಕಿ ಜೈ.

ಇಡೀ ಹಳ್ಳಿಗೆ ಹಳ್ಳಿಯೇ ಕಂಪಿಸುವಂತೆ ಘೋಷಣೆಗಳು ಅನುರಣಿಸುತ್ತಿದ್ದವು. ನಾಗೇನಹಳ್ಳಿ ಊರಗೌಡ್ರು ಸರ್ಜಾ ಸಂಕಣ್ಣ ನಾಯಕರ ಮನೆ ಮಾತ್ರ ಅಂದು ಸ್ಮಶಾನಕ್ಕಿಂತಲೂ ಮೌನ-ಮೌನವಾಗಿತ್ತು !ಹುರಿ-ಹುರಿ ಮೀಸೆಯ, ಕಚ್ಚೆ ಪಂಚೆಯ, ಇಟ್ಟಗಿ ಖಾದಿಯ ಜುಬ್ಬಾ ತಲೆ ಮೇಲೂ ಅಲ್ಲಿಯ ಚೌಕಾಕಾರದ ಗಾಂಧಿಟೋಪಿ ಧರಿಸಿ ಅದ್ಯಾವುದೋ ಶೂನ್ಯ ದಿಟ್ಟಿಸ್ತಾ ಗೌಡರು ಹಜಾರದ ಕಂಬವೊಂದನ್ನು ಬಲಗೈಲಿ ಹಿಡಿದು ನಿಂತಿದ್ದರು!

ಸುರಪುರದ ವೆಂಕಟಪ್ಪನಾಯಕನ ವಂಶಸ್ಥರಾದ ಈ ಸರ್ಜಾ ಸಂಕಣ್ಣನಾಯಕರ ಮನೆಯಲ್ಲೂ ಅಂದು ಸಣ್ಣ ಚಳವಳಿ ಪ್ರಾರಂಭಗೊಂಡಿತ್ತು. ಅಡಿಗೆ ಖೋಲಿಯ ಮೂಲೆಯಲ್ಲಿ ಗೌಡತಿ ಸಂಕವ್ವ ಸೆರಗು ಒದ್ದೆಯಾಗುವಂತೆ ಮುಸಿ-ಮುಸಿ ಅಳ್ತಾನೇ ಇದ್ದದ್ದು ಅದು ನಿನ್ನೆ ರಾತ್ರಿಯಿಂದ ಗೌಡರ ರಕ್ತ ಕೋಪವಾಗಿ ಬರಲು ಕಾರಣವಾಗಿತ್ತು!

ಮತ್ತಷ್ಟು ಓದು »