ಉತ್ತರಾಖಂಡ ಜಲಪ್ರಳಯ ಸಂತ್ರಸ್ತರ ಪರಿಹಾರ ನಿಧಿಗಾಗಿ
ಧಾರವಾಡ: ಉತ್ತರಾಖಂಡ ಜಲಪ್ರಳಯ ಸಂತ್ರಸ್ತರ ಪರಿಹಾರ ನಿಧಿಗೆ ಸಹಾಯ ಧನ ನೀಡುವ ಉದ್ದೇಶದಿಂದ ಮಾಧ್ಯಮ ಛಾಯಾ ಗ್ರಾಹಕರು ಹಾಗೂ ಹವ್ಯಾಸಿ ಛಾಯಾಗ್ರಾಹಕರು ಮತ್ತು ಕಲಾವಿದರ ಸುಂದರವಾದ ಕಲಾಕೃತಿಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ. ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ, ಆರ್‍ಕೆ ಛಾಯಾ ಫೌಂಡೇಶನ್, ಬಾಲ ನಂದನ ಟ್ರಸ್ಟ್ ಹಾಗೂ ಮಾಸ್ ಮೀಡಿಯಾ ಕಮ್ಯುನಿಕೇಶನ್ಸ್ ಫಾರ್ ರೂರಲ್ ಆಂಡ್ ಅರ್ಬನ್ ಡೆವೆಲಪ್‍ಮೆಂಟ್ ಸೆಂಟರ್ ಕರ್ನಾಟಕ ಜಂಟಿಯಾಗಿ ಜುಲೈ 20ರಿಂದ 5 ದಿನಗಳ ಕಾಲ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಈ ಹಿನ್ನಲೆಯಲ್ಲಿ ಆಸಕ್ತ ಕಲಾವಿದರು, ಹವ್ಯಾಸಿ ಛಾಯಾ ಗ್ರಾಹಕರು ಜುಲೈ 15ರ ಒಳಗಾಗಿ ತಮ್ಮ ಕಲಾಕೃತಿ ಹಾಗೂ ಛಾಯಾಚಿತ್ರಗಳನ್ನು ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ತರಾದ ಎನ್.ಎಂ.ದಾಟನಾಳ ಇವರಿಗೆ ತಲುಪಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಮೊ:9341242401, ಪ್ರತಾಪ ಬಹುರೂಪಿ 8095932738 ಗೆ ಸಂಪರ್ಕಿಸಬೇಕೆಂದು ಮಾಸ್ ಮೀಡಿಯಾ ಕಮ್ಯುನಿಕೇಶನ್ಸ್ ಫಾರ್ ರೂರಲ್ ಆಂಡ್ ಅರ್ಬನ್ ಡೆವೆಲಪ್‍ಮೆಂಟ್ ಸೆಂಟರ್ ಕರ್ನಾಟಕ ಉಪಾಧ್ಯಕ್ಷ ಶಶಿಕಾಂತ್ ದೇವಾಡಿಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




