‘ಹಾಚಿ’ !
– ಪ್ರಶಾಂತ್ ಯಾಳವಾರಮಠ
ಆ ದೇವರು ಪ್ರೀತಿ ವಿಶ್ವಾಸವನ್ನು ಎಲ್ಲಿ.. ಹೇಗೆ.. ಯಾಕೆ..ಸೃಷ್ಟಿಸುತ್ತಾನೋ.. ಅದು ಅವನಿಗೇ ಗೊತ್ತು!
ಪ್ರೊಫೆಸರ್ ಹೈದೆಸಬುರೋ ಯುನೋ ತಮ್ಮ ದೈನಂದಿನ ಕೆಲಸವಾದ ನೃತ್ಯ ಕಲಿಸುವುದನ್ನು ಮುಗಿಸಿ ಎಂದಿನಂತೆ ದಿನಾಲೂ ಬರುವ ಟ್ರೆನಿನಿಂದ ಸಂಜೆ ತಮ್ಮ ಮನೆಯ ಕಡೆಗೆ ಹೊರಟರು. ತಮ್ಮ ಸ್ಟೇಷನ್ ಬಂದಮೇಲೆ ಇಳಿದು ಇನ್ನೇನು ಹೊರಗೆ ಹೋಗಬೇಕೆನ್ನುವಸ್ಟರಲ್ಲಿ ಅವರ ಕಾಲುಗಳ ಹತ್ತಿರ ಒಂದು ಅಚ್ಚರಿ!! ಒಂದು ಮುದ್ದು ಮುದ್ದಾದ ನಾಯಿ ಮರಿ ಅವರ ಕಾಲುಗಳ ಹತ್ತಿರ ಓಡಾಡುತ್ತಿತ್ತು. ತುಂಬಾ ಮುದ್ದಾದ ನಾಯಿ ಮರಿಯ ಮುಗ್ದತೆ ಮತ್ತು ಸೌಂದರ್ಯಕ್ಕೆ ಮನಸೋತ ಪ್ರೊಫೆಸರ್ ಅದನ್ನ ಎತ್ತಿ ಮುದ್ದಾಡಿದರು. ಮುಂದೆ ಅಯ್ಯೋ ಇದು ಇದರ ಮಾಲಿಕನಿಂದ ಕಣ್ ತಪ್ಪಿಸಿಕೊಂಡಿರಬೇಕೆಂದು ಸ್ಟೇಷನ್ನಲ್ಲಿ ಎಲ್ಲರನ್ನು ವಿಚಾರಿಸಿದರು ಕೊನೆಗೆ ಸ್ಟೇಷನ್ ಮಾಸ್ತರ್ ಹತ್ತಿರನು ವಿಚಾರಿಸಿದರು ಯಾವುದೇ ಸುಳಿವು ಸಿಗಲಿಲ್ಲ. ಸ್ಟೇಷನ್ ಮಾಸ್ತರನು ಎಲ್ಲರೂ ಇಲ್ಲಿ ಊಟದ ಡಬ್ಬಿಗಳನ್ನು ಇಡುತ್ತಾರೆ ಅದ್ದರಿಂದ ನಾನು ಇದನ್ನು ಇಲ್ಲಿ ಇರಿಸಿಕೊಳ್ಳಲಿಕ್ಕೆ ಆಗೋದಿಲ್ಲ ಎಂದು ಹೇಳಿ ನೀವು ಬೇಕಾದರೆ ಇವತ್ತು ಇದನ್ನು ಮನೆಗೆ ತೆಗೆದುಕೊಂಡು ಹೋಗಿ ನಾಳೆ ಯಾರಾದರು ಇದರ ಮಾಲಿಕರು ಬರುತ್ತಾರೆನೋ ನೋಡೋಣ ಎಂದನು. ಅಸ್ಟು ಮುದ್ದಾದ ಆ ಮರಿಯೇನ್ನು ಅಲ್ಲಿಯೇ ಎಲ್ಲಾದರು ಬಿಟ್ಟು ಹೋಗಲಿಕ್ಕೆ ಪ್ರೊಫೆಸರ್ ಗೆ ಮನಸ್ಸಾಗಲಿಲ್ಲ. ಮರಿಯನ್ನು ತೆಗೆದುಕೊಂಡು ಮನೆಗೆ ಹೋದರು. ಆದರೆ ಮನೆಯಲ್ಲೊಂದು ತೊಂದರೆ! ಏನೆಂದರೆ ಪ್ರೊಫೆಸರ್ ಪತ್ನಿಗೆ ನಾಯಿಗಳು ಅಂದರೆ ಆಗ್ತಾ ಇರಲಿಲ್ಲ.ಇನ್ನು ಇ ಮರಿಯೇನ್ನು ಅವಳಿಗೆ ತಿಳಿಯದ ಹಾಗೆ ಬಚ್ಚಿಟ್ಟು ನಾಳೆ ಸ್ಟೇಷನ್ ಗೆ ತೆಗೆದುಕೊಂಡು ಹೋಗಿ ಅದರ ಮಾಲಿಕರಿಗೆ ಕೊಟ್ಟರಾಯಿತು ಎಂದು ತಿಳಿದರು. ನಿದಾನವಾಗಿ ಮನೆಯೊಳಗೇ ಹೋಗಿ ಇ ಮುದ್ದಾದ ಮರಿಯೇನ್ನು ಒಂದು ಮುಚ್ಚಳವಿಲ್ಲದ ಕಟ್ಟಿಗೆಯ ಬಾಕ್ಸ್ ನಲ್ಲಿ ಮಲಗಿಸಿದರು. ಆದರೆ ಆ ಮರಿ ಎಸ್ಟೊಂದು ಚೂಟಿಯಾಗಿತ್ತು ಅಂದರೆ ಕಟ್ಟಿಗೆಯ ಬಾಕ್ಸ್ ನಿಂದ ಹೊರಗೆ ಬಂದು ಬಿಡುತಿತ್ತು! ಅದನ್ನು ಮತ್ತೆ ಅದರಲ್ಲೇ ಬಚ್ಚಿಟ್ಟರು… ಅಷ್ಟರಲ್ಲಿ ಅವರ ಪತ್ನಿ ಅವರಲ್ಲಿಗೆ ಬಂದು ಊಟಕ್ಕೆ ಕರೆದಳು.. ಪ್ರೊಫೆಸರ್ ಊಟವಾದ ಮೇಲೆ ಮಲಗಲು ತೆರಳಿದರು. ಆ ನಾಯಿ ಮರಿಯು ರಾತ್ರಿ ಬಾಕ್ಸ್ ನಿಂದ ಹೊರಗೆ ಬಂದು ನೇರವಾಗಿ ಪ್ರೊಫೆಸರ್ ಮಲಗಿರುವ ಕೊನೆಗೆ ಹೋಗಲು ಅದರಬಗ್ಗೆ ಪ್ರೊಫೆಸರ್ ಪತ್ನಿಗೆ ತಿಳಿದು ಹೋಯಿತು. ಸಿಟ್ಟಿನಲ್ಲಿದ್ದ ಪತ್ನಿಗೆ ವಿಷಯ ತಿಳಿಸಿ ನಡೆದದ್ದನ್ನು ಹೇಳಿ ಕೇವಲ ಒಂದು ದಿನ ಅಷ್ಟೇ ಎಂದು ಸಮಜಾಯಿಸಿದರು.