ಸಲಿಂಗ ಕಾಮ ಕಾನೂನು ಬಾಹಿರ ಯಾಕೆ?
-ಬಾಲಚಂದ್ರ ಭಟ್
ಸಲಿಂಗ ಕಾಮದ ಬಗ್ಗೆ ಸುಪ್ರೀಮ್ ಕೋರ್ಟ್ ಕೊಟ್ಟ ಬಹಳ ಕಾರಣಗಳಿಗಾಗಿ ಹುಬ್ಬೇರಿಸುವಂತೆ ಮಾಡಿದೆ. ಬಹಳಷ್ಟು ಜನರು ತೀರ್ಪಿನ ಬೆಂಬಲಕ್ಕಿದ್ದರೆ, ಇನ್ನು ಕೆಲವರು ಇದು ಸಲಿಂಗಿಗಳ ಹಕ್ಕು ಚ್ಯುತಿ ಎಂದು ತರ್ಕಿಸುತ್ತಿದ್ದಾರೆ. ಮೂಲತಹ ಸಲಿಂಗ ಕಾಮವೆಂಬುದು ಪೌರಾತ್ಯ, ಹಾಗೂ ಅರಬ್ ದೇಶಗಳಲ್ಲಿ ನಿಷೇಧಕ್ಕೊಳಗಾಗಲು ಮುಖ್ಯ ಕಾರಣ ಅಲ್ಲಿನ ರಿಲಿಜಿಯನ್ ಸಂಸ್ಕೃತಿ. ಮುಸ್ಲೀಮ್ ಕ್ರಿಶ್ಚಿಯನ್ ಮತ್ತಿತರ ಅಬ್ರಾಹಮಿಕ್ ಧರ್ಮಗ್ರಂಥಗಳು ಸಲಿಂಗ ಕಾಮವನ್ನು ಧರ್ಮವಿರೋಧಿ ಎಂದು ಬೋಧಿಸುತ್ತವೆಯಾದ್ದರಿಂದ ಅದನ್ನು ಅಪರಾಧ ಎಂದು ಸ್ವೀಕರಿಸಲಾಗಿತ್ತು. ವೈಜ್ನಾನಿಕ ಎಂದು ಹೇಳಲ್ಪಡುವ ನಾಸ್ತಿಕರ ರಾಜಕೀಯ ಪಕ್ಷ ಕಮ್ಯುನಿಸ್ಮ್ ಕೂಡ ಸಲಿಂಗ ಕಾಮದ ಬಗೆಗೆ ಬೇರೆಯದೆ ನಿರ್ಧಾರವನ್ನು ಹೊಂದಿರಲಿಲ್ಲ. ಬದಲಾಗಿ ರಿಲಿಜಿಯನ್ ಗಳು ಕೊಟ್ಟ ತೀರ್ಪನ್ನೆ ಸಲಿಂಗಿಗಳ ಮೇಲೆ ಹೇರಿತು. ಆದರೆ ಕಾರಣದ ವ್ಯಾಖ್ಯಾನವನ್ನಷ್ಟೆ ಬದಲು ಮಾಡಿತು. ಇದು ‘ಅನಾಗರಿಕ’ ಎಂಬ ಕಾರಣಕ್ಕೆ ಸ್ಟಾಲಿನ್ ನ ರಾಜಕಾರಣದಲ್ಲಿ ಅಪರಾಧವೆಂದು ಪರಿಗಣಿಸಲಾಗಿತ್ತು. (ಅನಾಗರಿಕ ಎಂದು ತೀರ್ಮಾನಿಸುವಲ್ಲಿ ವೈಜ್ನಾನಿಕ ಧೋರಣೆಯೇ ಇಲ್ಲದಿದ್ದದ್ದು ಕಮ್ಯುನಿಸ್ಮ್ ನ ವೈಜ್ನಾನಿಕ ನಿಲುವನ್ನು ಅನುಮಾನಪಡುವಂತಾಗಿದೆ).