ದಿನೇ ದಿನೇ ಹೆಚ್ಚುತ್ತಿರುವ ‘ಮೋದಿ ಜಪ’
– ನರೇಂದ್ರ ಕುಮಾರ ಎಸ್.ಎಸ್
ದಿನಗಳೆದಂತೆ, ೨೦೧೪ರ ಮಹಾ ಚುನಾವಣೆಯು ಹತ್ತಿರ ಬಂದಂತೆ ಭಾರತದಾದ್ಯಂತ ‘ಮೋದಿ ಜಪ’ ಹೆಚ್ಚುತ್ತಿದೆ. ಇದನ್ನು ಕೆಲವರು ‘ಮೋದಿ ಜ್ವರ’, ‘ಮೋದಿತ್ವ’ ಎಂದೂ ಬಣ್ಣಿಸುತ್ತಿರುವರು. ಯಾರು ಏನೇ ಹೇಳಲಿ, ಭಾರತದಾದ್ಯಂತ ನಿತ್ಯವೂ ಚರ್ಚಿಸಲ್ಪಡುತ್ತಿರುವ ಒಂದು ವಿಷಯವೆಂದರೆ “ನರೇಂದ್ರ ಮೋದಿ”. ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಾದ ಟ್ವಿಟ್ಟರ್ ಹಾಗೂ ಪೇಸ್^ಬುಕ್ ಗಳಲ್ಲಿ, ಯುವಕರು ನಡೆಸುವ ಚರ್ಚೆಗಳಲ್ಲಿ, ಕ್ಷೌರಿಕನ ಅಂಗಡಿಯಲ್ಲಿ ನಡೆಯುವ ವಾರ್ತಾಲಾಪಗಳಲ್ಲಿ, ಹಳ್ಳಿಗಳಲ್ಲಿ ನಡೆಯುವ ಸಂಭಾಷಣೆಗಳಲ್ಲಿ – ಎಲ್ಲರೂ ಮೋದಿಯ ಕುರಿತು ಮಾತನಾಡುತ್ತಿದ್ದಾರೆ! ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಜನರ ಚರ್ಚೆಗಳಲ್ಲಿ ಇಷ್ಟರಮಟ್ಟಿಗೆ ಹೊಕ್ಕಿರುವ ಮತ್ತೊಂದು ಹೆಸರಿಲ್ಲ.
ನಾನು ಕೆಲವು ದಿನಗಳ ಹಿಂದೆ, ಬೆಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದೆ. ರಸ್ತೆಗಳೆಲ್ಲ ಗುಂಡಿಗಳಿಂದ ಗಬ್ಬೆದ್ದು ಹೋಗಿದ್ದವು. ಈ ರೀತಿ ಸ್ವಲ್ಪ ಹೊತ್ತು ಪ್ರಯಾಣಿಸಿದ ನಂತರ, ನನಗೆ ನಾನೇ “ಯಾವಾಗ ಸರಿ ಹೋಗುತ್ತೋ ನಮ್ಮ ಬೆಂಗಳೂರು” ಎಂದು ಸ್ವಲ್ಪ ಗಟ್ಟಿಯಾಗಿ ಹೇಳಿಕೊಂಡೆ. ಕೂಡಲೇ, ಆಟೋ ರಿಕ್ಷಾದ ಚಾಲಕ, “ಸಾರ್, ನರೇಂದ್ರ ಮೋದಿಯವರಿಗೆ ಒಂದು ಚಾನ್ಸ್ ಕೊಟ್ಟು ನೋಡಿ, ಎಲ್ಲಾ ಸರಿ ಹೋಗುತ್ತೆ” ಎಂದು ಬಿಡೋದೇ!?
6-5=2 ಚಿತ್ರ ವಿಮರ್ಶೆ
-ಡಾ.ಅಶೋಕ್ ಕೆ ಆರ್
