Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೩
ಮೂಲ : ಪ್ರಶಾಂತ್ ವೈದ್ಯರಾಜ್
ಕನ್ನಡಕ್ಕೆ : ಸತ್ಯನಾರಾಯಣ ಎಸ್
Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೧
Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೨
ಭಾಗ ೧ ಮತ್ತು ೨ ರಲ್ಲಿ ‘370ನೇ ವಿಧಿಯ ಸಾಂವಿಧಾನಿಕ ಸಿಂಧುತ್ವ’ ಮತ್ತು ‘370ನೇ ವಿಧಿಯ ನಿಂದನೆ ಮತ್ತು ದುರ್ಬಳಕೆ’ಯ ಬಗ್ಗೆ ಮಾತನಾಡಿದೆವು. ಭಾಗ ೩ ರಲ್ಲಿ ಮುಂದಿನ ಹಾದಿಯ ಬಗ್ಗೆ ಚಿಂತಿಸೋಣ
ಮುಂದಿನ ಹಾದಿ
ಮೇಲೆ ನೀಡಿದ ಎಲ್ಲ ಉದಾಹರಣೆಗಳು ಸಾಬೀತುಪಡಿಸುವುದಿಷ್ಟೇ, ಸಂವಿಧಾನದ 370ನೇ ವಿಧಿ ಪ್ರಜಾಪ್ರಭುತ್ವದ ಆದರ್ಶಗಳು ಮತ್ತು ನಾಗರಿಕತೆ, ಮಾನವ ಹಕ್ಕುಗಳ ಕುರಿತ ಅಂತರಾಷ್ಟ್ರೀಯ ಕಾನೂನುಗಳ ಕಲ್ಪನೆಗಳ ಮೇಲೆ ನಡೆಯತ್ತಿರುವ ಅತಿಯಾದ ಅಣಕ. ಇದು ಭಾರತದ ಜನಸಂಖ್ಯೆ ಗಣನೀಯ ಪ್ರಮಾಣದ ಭಾಗವೊಂದನ್ನು ದ್ವತೀಯ ದರ್ಜೆಯ ಮತ್ತು ನಾಗರಿಕರೇ ಅಲ್ಲದ ಸ್ಥಿತಿಗೆ ಇಳಿಸುತ್ತದೆ. ವಿಪುಲ್ ಕೌಲನ ಪ್ರಕರಣವನ್ನು ಮತ್ತೆ ನೋಡುವುದಾದರೆ, ಅಂದಿನ ಮುಖ್ಯಮಂತ್ರಿ ಗುಲಾಮ್ ನಬೀ ಆಜಾದ್ರ ಕಾರ್ಯದರ್ಶಿ ನೀಡಿದ “ರಾಜ್ಯಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯ ಅಡಿಯಲ್ಲಿ ಭಾರತ ಸರ್ಕಾರದ ಗೃಹ ಇಲಾಖೆ ನೀಡುವ ಯಾವುದೇ ಸೂಚನೆಯನ್ನು ಪಾಲಿಸಲು ಜಮ್ಮು ಕಾಶ್ಮೀರ ರಾಜ್ಯ ಸರ್ಕಾರ ಬಾಧ್ಯವಲ್ಲ. ಆದ್ದರಿಂದ ನಿಮ್ಮ ಮಗುವಿನ ವೈದ್ಯಕೀಯ ವೆಚ್ಚವನ್ನು ಪಾವತಿಸಲು ಸಾಧ್ಯವಿಲ್ಲ” ಎನ್ನುವ ನಿರ್ದಯ ಉತ್ತರ ಕೌಲ್ ಕುಟುಂಬದಲ್ಲಿ ಅಣುಮಾತ್ರವಷ್ಟಾದರೂ ಜೀವಂತವಾಗಿದ್ದ ಭರವಸೆಯನ್ನು ತುಂಡರಿಸಿ ಅಡಗಿಸಿತು. ಜಮ್ಮು ಕಾಶ್ಮೀರ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ ಹದಿಮೂರು ವರ್ಷದ ಅದೃಷ್ಟಹೀನ ಬಾಲಕನ ಬವಿಷ್ಯವನ್ನು ಅಂಧಕಾರಕ್ಕೆ ನೂಕಿತು.