ವಿಷಯದ ವಿವರಗಳಿಗೆ ದಾಟಿರಿ

Archive for

9
ಏಪ್ರಿಲ್

ಮಹಾತ್ಮಾ ಗಾಂಧಿಯವರ ಆಸೆಯನ್ನು ನೆರವೇರಿಸಲಿರುವ ಸೋನಿಯಾ!

– ನರೇಂದ್ರ ಕುಮಾರ್

Sonia1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ, ಕಾಂಗ್ರೆಸ್ಸಿನ ನಾಯಕರ ಮುಂದೆ ಮಹಾತ್ಮಾ ಗಾಂಧಿಯವರು ತಮ್ಮ ಆಸೆಯೊಂದನ್ನು ಹೇಳಿದರು. ಅದೆಂದರೆ, “ಭಾರತಕ್ಕೆ ಸ್ವಾತಂತ್ರ್ಯ ಪಡೆಯುವುದು ಕಾಂಗ್ರೆಸ್ಸಿನ ಉದ್ದೇಶವಾಗಿತ್ತು. ಈಗ ಅದು ನೆರವೇರಿದೆ. ಹೀಗಾಗಿ, ಇನ್ಮುಂದೆ ಕಾಂಗ್ರೆಸ್ಸಿನ ಆವಶ್ಯಕತೆಯಿರುವುದಿಲ್ಲ. ಈಗ ಕಾಂಗ್ರೆಸ್ಸನ್ನು ವಿಸರ್ಜಿಸಿಬಿಡೋಣ. ನಿಮಗೆ ಅಗತ್ಯವೆನಿಸಿದರೆ ಹೊಸದೊಂದು ರಾಜಕೀಯ ಪಕ್ಷವನ್ನು ಕಟ್ಟಿಕೊಳ್ಳಿ”. ಇದಕ್ಕೆ ಸರ್ದಾರ್ ಪಟೇಲರ ಸಮ್ಮತಿಯೂ ಇತ್ತು. ಆದರೆ, ಸ್ವತಂತ್ರ ಭಾರತದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದ ಪಂಡಿತ್ ನೆಹರೂ ಅವರು ಇದಕ್ಕೆ ಒಪ್ಪಲಿಲ್ಲ. ಇಷ್ಟು ವರ್ಷಗಳ ಕಾಲ ಕಷ್ಟಪಟ್ಟ ನಂತರ, ಅದರ ಫಲವನ್ನು ಉಣ್ಣುವುದರಲ್ಲಿ ತಪ್ಪೇನಿದೆ ಎನ್ನುವುದು ಅವರ ವಾದವಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರಿಂದ ಬಂದಿದ್ದ ಪ್ರಸಿದ್ಧಿಯನ್ನು ಅಧಿಕಾರದ ಖುರ್ಚಿಗೆ ಏರುವುದಕ್ಕೆ ಉಪಯೋಗಿಸಿಕೊಳ್ಳುವುದೇ ಸರಿ ಎಂದು ಅವರು ಹೇಳಿದರು. ಇದಾದ ಸ್ವಲ್ಪ ದಿನದಲ್ಲೇ ಗಾಂಧೀಜಿಯವರ ಕೊಲೆಯೂ ಆಗಿಹೋಯಿತು. ಗಾಂಧೀಜಿಯವರ ಆಸೆ ಹಾಗೆಯೇ ಉಳಿದು ಬಿಟ್ಟಿತ್ತು!

1947ರಲ್ಲಿ “ಸಂವಿಧಾನ ಸಭೆ” (Constituent Assembly) ಅಸ್ತಿತ್ವಕ್ಕೆ ಬಂದಿತು. ನೆಹರೂ ಪ್ರಧಾನಿಯಾದರು. ವಿವಿಧ ಪಕ್ಷಗಳಿಗೆ ಸೇರಿದವರಿಗೂ ಸರಕಾರದಲ್ಲಿ ಅವಕಾಶ ನೀಡಿದರು. ಆ ನಂತರ, ಸರಕಾರದಲ್ಲಿ ಕಾನೂನು ಮಂತ್ರಿಯಾಗಿದ್ದ ಡಾ||ಅಂಬೇಡ್ಕರ್ ಅವರ ನೇತೃತ್ವದಲ್ಲಿ ಭಾರತದ ಸಂವಿಧಾನ ರಚನೆಯಾಯಿತು. 1951ರಲ್ಲಿ ಮೊದಲ ಚುನಾವಣೆಯಾಯಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 364 ಸ್ಥಾನಗಳು ಲಭಿಸಿದವು. ಮತ್ತಾವ ಪಕ್ಷವೂ ಮೂರಂಕಿ ಮುಟ್ಟಲಿಲ್ಲ. 1957ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸ್ಥಾನಗಳು 371 ಆದವು. ಈ ಬಾರಿಯೂ ಮತ್ತಾವ ಪಕ್ಷವೂ ಮೂರಂಕಿ ಮುಟ್ಟಲಿಲ್ಲ.
ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗಳಿಸಿದ ಸ್ಥಾನಗಳು ಕೆಳಗಿನ ಕೋಷ್ಟಕದಲ್ಲಿದೆ:

ಮತ್ತಷ್ಟು ಓದು »