ವಿಷಯದ ವಿವರಗಳಿಗೆ ದಾಟಿರಿ

Archive for

22
ಏಪ್ರಿಲ್

ಅಂಬೇಡ್ಕರ್ ರ ’ಹಿಂದುತ್ವ’ ವನ್ನು ಅರಸುತ್ತಾ-ಭಾಗ ೧

– ಬಾಲಚಂದ್ರ ಭಟ್

ಡಾ.ಬಿ.ಆರ್ ಅಂಬೇಡ್ಕರ್ಇಂದು ಡಾ. ಅಂಬೇಡ್ಕರರನ್ನು ಒಬ್ಬ ಹಿಂದೂ ದೇಶಭಕ್ತರೆಂದು ಕರೆದರೆ ಜನ ಹೇಗೆಪ್ರತಿಕ್ರಿಯಿಸಬಹುದು? ಖಂಡಿತ ಗಲಿಬಿಲಿಯಾಗುತ್ತಾರೆ. ಇದೊಂದು ಮನುವಾದಿಯ ಕುತಂತ್ರಎಂದು ಕೋಪಿಸಿಕೊಳ್ಳಬಹುದು. ಆದರೆ ಯಾವ ಮಟ್ಟಿಗೆ ಅಂಬೇಡ್ಕರರ ವ್ಯಕ್ತಿತ್ವ ನಮ್ಮಿಂದಮರೆಮಾಚಲ್ಪಟ್ಟಿದೆ ಎಂದರೆ, ಅಂಬೇಡ್ಕರ್ ಎಂದರೆ ಕೆಳಜಾತಿಗೆ ಮೀಸಲು ಎನ್ನುವ ಕೆಲವರ್ಗಗಳ ಧೋರಣೆಯಾದರೆ ಅವರೊಬ್ಬ ಬ್ರಾಹ್ಮಣ ವಿರೋಧಿ ಎಂದು ಅವರನ್ನು ಉಪೇಕ್ಷಿಸುವ ವರ್ಗ ಇನ್ನೊಂದು ಕಡೆ ಇದೆ.

ಆದರೆ ಇಂದಿನ ವರ್ತಮಾನ ರಾಜಕೀಯದಲ್ಲಿ ಅಂಬೇಡ್ಕರರ ಹಕ್ಕುಸ್ವಾತಂತ್ರ್ಯವನ್ನು ಹೊತ್ತವರೆಂಬಂತೆ ಅವರ ಉತ್ತರಾಧಿಕಾರಿಗಳೆಂದು ಕರೆದುಕೊಳ್ಳುವವರ ಹುಚ್ಚಾಟ, ತಿಕ್ಕಲುತನಗಳಿಂದ ಅದೇ ಸ್ಟೀರಿಯೋಟೈಪಿನಿಂದ ಅಂಬೇಡ್ಕರರನ್ನುನೋಡಬೇಕಾದ ಪರಿಸ್ಥಿತಿ ಬಂದಿರುವದರಿಂದ ಅವರಲ್ಲಿನ ಭವ್ಯ, ಗಂಭೀರ, ಪ್ರಭುದ್ಧವ್ಯಕ್ತಿತ್ವ ಹಾಗೂ ದಾರ್ಶನಿಕತೆ ಅಕ್ಷರಶಃ ಮರೆಯಾಗಿರುವದು ಅತ್ಯಂತ ದುರದೃಷ್ಟಕರ.ಅದೇ ಅವರ ಕನಸು ನನಸಾಗದಿರುವದಕ್ಕೂ ಕಾರಣ.

ಹಿಂದೂ ಸಂಪ್ರದಾಯದಲ್ಲಿನ ಜಾತಿಗಳ ಬಗ್ಗೆ ಅವರ ಸಂಶೋಧನೆ ನಮಗೆ ತಿಳಿದದ್ದುಅತ್ಯಲ್ಪ.ಅರವಿಂದನ್ ನೀಲಕಂದನ್ ಅವರ ’Bodhisattva’s hindutva(part 1-6 )’ ವನ್ನು ಓದಿದಾಗ ಅಂಬೇಡ್ಕರರಲ್ಲಿದ್ದ ಸಮಗ್ರ ಹಿಂದುತ್ವ ನನ್ನ ತಿಳುವಳಿಕೆಗೆಬಂದಿದ್ದು. ಅದನ್ನು ಆಯ್ದು, ಸಂಕ್ಷಿಪ್ತವಾಗಿ ಈ ಲೇಖನವನ್ನು ಬರೆದಿದ್ದೇನೆ.

ಜಾತಿ ಪದ್ದತಿಗಳ ವಿರುದ್ಧ ಅಂಬೇಡ್ಕರರು ಹೋರಾಡಿದರು ಎಂಬುದು ಎಲ್ಲರಿಗೂ ತಿಳಿದ ಸತ್ಯ.ಆದರೆ ಜಾತಿಗಳ ವಿರುದ್ಧ ಅವರ ಹೋರಾಟವು ಅವರ ಕನಸಿನ ಹಿಂದೂ ಧರ್ಮವೇ ಆಗಿತ್ತು ಎಂಬುದುನಿರ್ವಿವಾದ. ತಮ್ಮ ‘Annihilation of caste'(page no.30) ಯಲ್ಲಿ ಅವರುಹೇಳಿದ್ದು ಹೀಗೆ “ಎಲ್ಲಿಯವರೆಗೆ ಜಾತಿಗಳು ಇರುವದೊ ಅಲ್ಲಿಯವರೆಗೆ ಸಂಘಟನೆಸಾಧ್ಯವಿಲ್ಲ.ಎಲ್ಲಿಯವರೆಗೆ ಸಂಘಟನೆ ಸಾಧ್ಯವಿಲ್ಲವೋ ಅಲ್ಲಿಯವರೆಗೆ ಹಿಂದೂ ಧರ್ಮವು ದುರ್ಬಲವಾಗಿಯೇ ಇರುವದು”.

೧೯೨೭ ರಲ್ಲಿ ದಲಿತರಿಗೆ ದೇವಾಲಯದ ಪ್ರವೇಶದ ಹಕ್ಕಿನ ಬಗ್ಗೆಪ್ರಸ್ತಾಪಿಸಿ ಅವರು ಹೇಳಿದ್ದು ಹೀಗಿದೆ “ಹಿಂದುತ್ವವು ಸ್ಪಶ್ಯೃ ಹಾಗೂ ಅಸ್ಪಶ್ಯೃಎಲ್ಲರಿಗೂ ಸೇರಿದುದಾಗಿದೆ. ಕೇಳಜಾತಿಗೆ ಸೇರಿದ್ದ ವಾಲ್ಮಿಕಿ, ವ್ಯಾಧಗೀತ, ಚೋಕಮೇಳಮತ್ತು ರೋಹಿದಾಸರುಗಳು ಹಿಂದು ಧರ್ಮಕ್ಕೆ ನೀಡಿದ ಕೊಡುಗೆಯು, ಬ್ರಾಹ್ಮಣರಾದ ವಸಿಷ್ಟ,ಕ್ಷತ್ರಿಯರಾಗಿದ್ದ ಕೃಷ್ಣ, ವೈಶ್ಯರಾಗಿದ್ದ ಹರ್ಷ, ಹಾಗೂ ಶೂದ್ರರಾಗಿದ್ದತುಕಾರಮರುಗಳು ನೀಡಿದ ಕೊಡುಗೆಯಷ್ಟೆ ಮಹತ್ವಪೂರ್ಣವಾದುದು” ( ’ಬಹಿಷ್ಕೃತ್ ಭಾರತ್’ದಲ್ಲಿ). ಇಲ್ಲಿ ಅವರ ಆಧುನಿಕ ಹಿಂದೂ ಧರ್ಮವನ್ನು ಕಟ್ಟುವ ಮನೋಭಾವ ಹಾಗೂ ಸಂಘಟನೆಯಬಗೆಗಿನ ಆಸ್ಥೆಯನ್ನು ಗುರುತಿಸಬಹುದು.

ಮತ್ತಷ್ಟು ಓದು »