ವಿಷಯದ ವಿವರಗಳಿಗೆ ದಾಟಿರಿ

Archive for

28
ಏಪ್ರಿಲ್

ಹೊಸ ಕಾದಂಬರಿ : ಕರಣಂ ಪವನ್ ಪ್ರಸಾದರ “ಕರ್ಮ”

 – ನಂದೀಶ್ ಆಚಾರ್ಯ

ಕರ್ಮConcave media co.ಈ ಕಾದಂಬರಿಯನ್ನು ಹೊರತಂದಿದೆ. ನಾಟಕಕಾರರಾದ ಕರಣಂ ಪವನ್ ಪ್ರಸಾದರ ಮೊದಲ ಕಾದಂಬರಿಯಿದು. ಖ್ಯಾತ ಕಾದಾಂಬರಿಕಾರರಾದ ಎಸ್ ಎಲ್ ಭೈರಪ್ಪನವರು ಈ ಕಾದಂಬರಿಯ ಪ್ರಥಮ ಪ್ರತಿಯನ್ನು ಓದಿ ಮೆಚ್ಚಿಕೊಂಡಿದ್ದಾರೆ. ಕಳೆದ ವಾರ ಶತವಾಧಾನಿ ಆರ್ ಗಣೇಶರು ಕಾದಾಂಬರಿಯನ್ನು ಬಿಡುಗಡೆಗೊಳಿಸಿದರು. ನಗರ ಜೀವನದ ಅಭದ್ರ ಭಾವಸ್ಥಿತಿಯಿಂದ ಒಮ್ಮೆಲೆ ತಂದೆಯ ಸಾವಿನ ನಂತರದ ಕಾರ್ಯದಲ್ಲಿ ತೊಡಗುವ ಟೆಕ್ಕಿಯ ಮೂಲಕ ಕಥೆ ಹರಡುಕೊಳ್ಳುತ್ತದೆ.  ನಂತರದ ಹದಿನೈದು ದಿನಗಳಲ್ಲಿ ಆತನಲ್ಲಾಗುವ ನಂಬಿಕೆ ಮತ್ತು ಶ್ರದ್ಧೆಯ ನಡುವಿನ ತೊಳಲಾಟ ಮತ್ತು ಸ್ಥಿತ್ಯಂತರದ ಯಾನವೇ ‘ಕರ್ಮ’
ಅಚಾನಕ್ಕಾಗಿ ಅಪ್ಪಳಿಸಿದ ತಂದೆಯ ಸಾವಿನ ಸುದ್ದಿ ತನಗೆ ಏನೂ ಅಘಾತವನ್ನ ನೀಡದ್ದನ್ನು ಕಂಡು ಕಥಾನಾಯಕ ಮೊದಲಿನಿಂದಲೂ ಗೊಂದಲದಲ್ಲೇ ಎದುರಾಗುತ್ತಾನೆ. ಪ್ರತಿ ಪ್ರಸಂಗದಲ್ಲೂ ತನ್ನನ್ನು ತಾನೇ ಕೆಡವಿಕೊಂಡು ಅನುಭವಿಸುತ್ತಾನೆ. ತನ್ನ ಹುಟ್ಟೂರಿಗೆ ಹೋಗಿ ತನ್ನ ತಮ್ಮ ನರಹರಿ, ತಾಯಿಯನ್ನು ಕೂಡಿ ತಂದೆಯ ಕ್ರಿಯೆಯಲ್ಲಿ ಪಾಲ್ಗೊಳ್ಳುವಲ್ಲಿಯಿಂದ ಕರ್ಮ ಮಜಲು ಬದಲಿಸಿ ತನ್ನ ಮೂಲವಾದವಾದ ನಂಬಿಕೆ ಮತ್ತು ಶ್ರದ್ಧೆ ಎರಡೂ ತೀರ ಬೇರೆ. ನಂಬಿಕೆ ಚಂಚಲ, ಶ್ರದ್ಧೆ ಅಚಲ, ನಂಬಿಕೆಗೆ ಘಾಸಿಯಾಗುತ್ತದೆ, ಶ್ರದ್ಧೆಗೆ ಎಂದೂ ಘಾಸಿಯಾಗುವುದಿಲ್ಲ ಎಂಬಲ್ಲಿಗೆ ಬಂದು ನಿಲ್ಲುತ್ತದೆ. ಕ್ರಿಯೆ ಮಾಡಿಸುವ ತಂದೆಯ ಸ್ನೇಹಿತ ಶ್ರೀಕಂಠ ಜೋಯಿಸರು ಮತ್ತು ಕಥಾ ನಾಯಕನ ಸಂಭಾಷಣೆಯ ಒಂದು ಪ್ರಸಂಗ ಹೀಗಿದೆ.

“ಇವೆಲ್ಲಾ ನಿಜಾನಾ?’’ ಅಳುಕಿನಿಂದಲೇ ಸುರೇಂದ್ರ ಪ್ರಶ್ನಿಸಿದ. ಭಟ್ಟರು ಹಿಂದಿರುಗಿ ನೋಡುವ ಹೊತ್ತಿಗೆ ಇವನ ಕಂಠ ಕುಸಿದು ಹೋಯಿತು. ಅಲ್ಲೇ ಅಡಕೆ ಮರಕ್ಕೆ ಹಬ್ಬಿಸಿದ್ದ ಏಲಕ್ಕಿ ಗಿಡವನ್ನು ಪರೀಕ್ಷಿಸುತ್ತಾ ನಿಂತ. “ತೋಟ ಮಾರ್ತಾ ಇದೀನಿ ತಗೋತ್ಯಾ ಮಾರಾಯಾ?’’ ಗಿಡವನ್ನು ಮೂಸುತ್ತಿದ್ದ ಸುರೇಂದ್ರ “ನನಗ್ಯಾಕೆ ಭಟ್ಟರೇ?’’ ಎಂದ. “ಈಗ ಅದೇ ಹೊಸ ವಿಚಾರ ಈ ವಾಣಿ ಗಂಡ ಎಲ್ಲಾ  ಮುಂಡುಮೋಚಿ ಈಗ ಇಲ್ಲಿ ತೋಟ ಗೀಟ ಮಾಡ್ಕೊಂಡು ಅದನ್ನೇ ಕಂಪೆನಿ ಮಾಡಿ ದುಡ್ಡು ಮಾಡ್ತಾ ಇದಾನೆ ಅವನು ನಿನ್ನ ಥರಾನೆ ಯಾವುದೋ ಇಂಜಿನಿಯರ್ ನನಗೆ ಸರಿ ಗೊತ್ತಿಲ್ಲ’’ ಭರತನ ಮೇಲಿನ ಉರಿಗೆ ಗಿಡದ ಎಲೆಯನ್ನು ಚಿವುಟಿದ. “ಎಲೆ ಎಂತ ಮಾಡ್ತೋ ನಿಂಗೆ? ಅದೇನೋ ವಿಷಯ ಅಂದ್ಯಲ್ಲ ಏನು?’’ ಆಗಲೇ ಕೇಳಿದೆನೆಲ್ಲ ಅದೇ ಎಂದು ಸುರೇಂದ್ರ ಉತ್ತರಿಸಿದ. “ನಿಜವಾ ಅಂತ ಕೇಳಿದೆ. ಏನು ನಿಜ. ನಾನು ಇರೋದ, ನೀ ಇರೋದ ಅಥವಾ ನಾ ಮನುಷ್ಯಾನ ಏನು? ಸ್ವಷ್ಟ ಕೇಳು, ಈ ಮೈಗಳ್ಳ ಮುಂಡೇವು ಇದಾವಲ್ಲ ಇವರಿಂದ ಅಡಕೆ ಇಳಿಸಕ್ಕೆ ಆಗಿಲ್ಲ. ದುಡ್ಡು ಕೊಟ್ರೂ ಜನ ಬರಲ್ಲ. ದಿನದ ಗಂಜಿ ನಂಬಿದೋರಿಗೆ ಒಂದು ರೂಪಾಯಿ ಅಕ್ಕಿ ಕೊಟ್ರೆ ಇನ್ನೇನ್ ಆಗತ್ತೆ ಹೊಲದ ಕೆಲಸ ತೋಟದ ಕೆಲಸಕ್ಕೆ ಆಳುಗಳೇ ಇಲ್ಲ. ವಯಸ್ಸಲ್ಲಿ ನಾನೇ ಇಳಿಸ್ತಿದ್ದೆ.

ಮತ್ತಷ್ಟು ಓದು »