ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 26, 2014

47

ಭಾರತವನ್ನು “ಕಾಂಗ್ರೆಸ್ಸ್ ಮುಕ್ತ”ವಾಗಿಸಲು,ಕರ್ನಾಟಕದಲ್ಲಿ “ಬಿಜೆಪಿಯೇ ಇಲ್ಲ”!

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

Modi Karnataka BJPಕುರುಕ್ಷೇತ್ರದ ಯುದ್ದಕ್ಕೆ ಬೆಂಬಲ ಕೋರಿ ಬಂದ ಅರ್ಜುನನಿಗೆ,”ನಾರಾಯಣ ಬೇಕೋ?”,”ನಾರಾಯಣಿ ಸೈನ್ಯ ಬೇಕೋ?” ಎಂದು ಕೇಳುತ್ತಾನೆ ಶ್ರೀಕೃಷ್ಣ.’ಸಂಖ್ಯೆ’ ಗಿಂತ ‘ವ್ಯಕ್ತಿ’ ಮತ್ತು ‘ವ್ಯಕ್ತಿ’ಗಿಂತ ‘ವ್ಯಕ್ತಿತ್ವ’ದ ಮಹತ್ವ ಅರಿತಿದ್ದ ಅರ್ಜುನ “ನಾರಾಯಣ” ಎನ್ನುತ್ತಾನೆ. ಅರ್ಜುನನೆಡೆಗೆ ಕನಿಕರ ತೋರಿದ ದುರ್ಯೋಧನ “ನಾರಾಯಣಿ ಸೈನ್ಯ”  ಪಡೆದು ಹೋಗುತ್ತಾನೆ.ಕಡೆಗೆ ಯುದ್ಧದಲ್ಲಿ ಗೆದ್ದಿದ್ದು ಯಾರು ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಇಲ್ಲಿ ನನ್ನ ಗಮನವಿರುವುದು ಯುದ್ಧದ ಮೇಲಲ್ಲ.ಯುದ್ಧಕ್ಕೆ ಹೊರಟು ನಿಂತವನು ಮಾಡಿಕೊಳ್ಳುವ ತಯಾರಿಯ ಮೇಲೆ.ಕುರುಕ್ಷೇತ್ರದ ಯುದ್ಧಕ್ಕೆ ಕಾರಣನಾದ ದುರ್ಯೋಧನ,ಯುದ್ಧಕ್ಕೆ ಬೇಕಾದ ಜನರನ್ನು (ಸಂಖ್ಯೆ) ಒಟ್ಟುಗೂಡಿಸಿಕೊಂಡು ಹೊರಟು ನಿಂತನೇ ಹೊರತು,ಯುದ್ದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ.

ಬಹುಷಃ, ತನ್ನ ಜೊತೆಗೆ ಭೀಷ್ಮ,ದ್ರೋಣಾಚರ್ಯರಂತ ಅಸಾಧಾರಣ ಸಾಮರ್ಥ್ಯದ “ವ್ಯಕ್ತಿ”ಗಳಿದ್ದಾರೆ ಎನ್ನುವ ಅಹಂ ದುರ್ಯೋಧನನಿಗಿದ್ದೀತು.ವ್ಯಕ್ತಿಗಳಿದ್ದರೇನಂತೆ “ವ್ಯಕ್ತಿತ್ವ” ಇರಲಿಲ್ಲವಲ್ಲ!

ಏನಿದು,ಭೀಷ್ಮನಂತ ಭೀಷ್ಮ,ದ್ರೋಣಾಚಾರ್ಯರಿಗೆ ವ್ಯಕ್ತಿತ್ವವಿರಲಿಲ್ಲ ಎನ್ನುತ್ತಿದ್ದೇನೆ ಎನ್ನಿಸಬಹುದು.ಧರ್ಮ-ಅಧರ್ಮದ ಪ್ರಶ್ನೆ ಬಂದಾಗ ಅದಿನ್ನೇನೋ ಸಬೂಬು ಕೊಟ್ಟು ಅಧರ್ಮದ ಪರ ನಿಲ್ಲುವ ವ್ಯಕ್ತಿಯ “ವ್ಯಕ್ತಿತ್ವ”ಕ್ಕೆ ಬೆಲೆ ಉಳಿಯುತ್ತದೆಯೇ? ಕಡೆಗೂ ಮಹಾಭಾರತದ ಯುದ್ಧದಲ್ಲಿ ಗೆದ್ದಿದ್ದು ಧರ್ಮದ ಪರನಿಂತ ವ್ಯಕ್ತಿಗಳೇ.

ಇದು ಪುರಾಣವಾಯಿತು.ವಾಸ್ತವಕ್ಕಿಳಿದರೆ ಈಗೀನ ಮಹಾಭಾರತದಲ್ಲೂ ನಾನಾ ರೀತಿಯ ಯುದ್ಧಗಳಾಗುತ್ತಲೇ ಇವೆ.ಅವುಗಳಲ್ಲಿ ಪ್ರಮುಖವಾದದ್ದು “ರಾಜಕೀಯ ಭಾರತ”.ಪಂಚ ರಾಜ್ಯಗಳ ಚುನಾವಣೆ ಘೋಷಣೆಯಿಂದ ಶುರುವಾದ ಈ ಕದನ ಇನ್ನೂ ಸಾಗುತ್ತಲೇ ಇದೆ.ಎಲ್ಲಾ ರಾಜಕೀಯ ಪಂಡಿತರನ್ನು ದಂಗು ಬಡಿಸಿ ನರೇಂದ್ರ ಮೋದಿ ಗೆದ್ದು ಬಂದು ಪ್ರಧಾನಿಯಾಗಿದ್ದಾರೆ.ಈ ಚುನಾವಣಾ ಕದನದಲ್ಲಿ ಮೋದಿ ಮಾಡಿದ ಮುಖ್ಯ ಘೋಷಣೆ “ಕಾಂಗ್ರೆಸ್ಸ್ ಮುಕ್ತ ಭಾರತ” ಕುರಿತಾಗಿತ್ತು.ಪಂಚ ರಾಜ್ಯಗಳ ಚುನಾವಣೆ,ಲೋಕಸಭಾ ಚುನಾವಣೆ ಮತ್ತು ಇತ್ತೀಚೆಗೆ ಮುಗಿದ ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಾಣ ಫಲಿತಾಂಶಗಳನ್ನು ನೋಡಿದರೆ ಮೋದಿಯವರ ಬಿಜೆಪಿ ಪಕ್ಷ, “ಕಾಂಗ್ರೆಸ್ಸ್ ಮುಕ್ತ ಭಾರತ”ದ ತನ್ನ ಕನಸನ್ನು ನನಸಾಗಿಸುವತ್ತ ಮುನ್ನುಗ್ಗುತ್ತಿದೆ ಎನಿಸುತ್ತಿದೆ.ಭಾರತದ ಬಹುತೇಕ ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ಸ್ ಉಳಿದಿಲ್ಲ.ದೇಶದಲ್ಲಿ ಕಾಂಗ್ರೆಸ್ಸ್ ಪಾಲಿಗೆ ಉಳಿದಿರುವ ದೊಡ್ಡ ರಾಜ್ಯಗಳು ಎರಡೇ.ಒಂದು ಕಮ್ಯುನಿಸ್ಟರ ನಾಡು ಕೇರಳ ಮತ್ತೊಂದು ನಮ್ಮ ಕರ್ನಾಟಕ.ಹಾಗಿದ್ದರೆ, ಮೋದಿಯವರ “ಕಾಂಗ್ರೆಸ್ಸ್ ಮುಕ್ತ ಭಾರತ”ದ ಕನಸು ನನಸಾಗಬಹುದೇ?

ಭಾರತವನ್ನು “ಕಾಂಗ್ರೆಸ್ಸ್ ಮುಕ್ತ”ವಾಗಿಸಲು, ಕರ್ನಾಟಕದಲ್ಲಿ “ಬಿಜೆಪಿಯೇ ಇಲ್ಲ”!

೨೦೦೮ರಲ್ಲಿ ಬಿಜೆಪಿ ಬಹುಮತ ಪಡೆದು ಯಡ್ಯೂರಪ್ಪ ಮುಖ್ಯಮಂತ್ರಿಯಾಗುವುದರೊಂದಿಗೆ, ಬಿಜೆಪಿಯ ಪಾಲಿಗೆ ದಕ್ಷಿಣ ಭಾರತದ ಅಧಿಕಾರದ ಹೆಬ್ಬಾಗಿಲು ಕರ್ನಾಟಕ ರಾಜ್ಯ ಎನಿಸಿತ್ತು.ಯುಡ್ಯೂರಪ್ಪ ಪದಗ್ರಹಣಕ್ಕೆ ಬಿಜೆಪಿಯ ಘಟಾನುಘಟಿ ನಾಯಕರೆಲ್ಲ ಬಂದು ಅದ್ದೂರಿಯಾಗಿ ಸಮಾರಂಭ ನಡೆದಿತ್ತು. ಸಹಜವಾಗಿಯೇ ಜನರಿಗೆ ಹೊಸ ಬಿಜೆಪಿ ಸರ್ಕಾರದ ಮೇಲೆ ಪ್ರಬಲ ನಿರೀಕ್ಷೆಗಳೂ ಇದ್ದವು.ಆದರೆ,ಬಿಜೆಪಿ ಸರ್ಕಾರ ಬಂದಾದ ಮೇಲೆ ಸಾಲು ಸಾಲು ಡಿನೋಟಿಫಿಕೇಶನ್ ಹಗರಣಗಳು,ಭೂಮಿ ಕಬಳಿಕೆ ಇತ್ಯಾದಿ ಸುದ್ದಿಯಾಗತೊಡಗಿದ ನೋಡಿದ ಮೇಲೆ ’ವಿರೋಧ ಪಕ್ಷ’ವಾಗಿಯೇ ಬಿಜೆಪಿ ಚೆನ್ನಾಗಿತ್ತು ಎಂದೆನಿಸಿತ್ತು.

ಸದ್ದು ಮಾಡುತಿದ್ದ ಹಗರಣಗಳಿಗಿಂತಲೂ ರೇಜಿಗೆಯೆನಿಸುತಿದ್ದಿದ್ದು, “ಹಿಂದಿನವರೆಲ್ಲಾ ಮಾಡಿರೋದನ್ನೇ ನಾವು ಕೂಡ ಮಾಡುತ್ತಿರುವುದು” ಎಂದು ರಾಜ್ಯ ಬಿಜೆಪಿಯ ನಾಯಕರು ತಮ್ಮ ಭ್ರಷ್ಟಚಾರಗಳನ್ನು ಸಮರ್ಥಿಸಿಕೊಳ್ಳುತ್ತಿದ್ದ ರೀತಿ.ಆ ರೀತಿ ಸಮರ್ಥನೆ ಮಾಡಿಕೊಳ್ಳುವಾಗ ಇವರಿಗೆ “ಬಿಜೆಪಿ – A Party with Difference” ಅಂತ ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದು ಮರೆತೇ ಹೋಗಿತ್ತು! ಕಡೆಗೆ ಲೋಕಾಯುಕ್ತ ವರದಿಯಲ್ಲಿ ಹೆಸರು ಕಾಣಿಸಿಕೊಂಡಿದ್ದರಿಂದ ಯಡ್ಯೂರಪ್ಪ ಇಳಿದು ಸದಾನಂದ ಗೌಡರು ಬಂದರು.ಅವರು ಬರುತ್ತಲೇ,ಸರ್ಕಾರಿ ಸೈಟಿನಲ್ಲಿ ಕಾನೂನು ಉಲ್ಲಂಘನೆ ಮಾಡಿ ಅವರು ಕಟ್ಟಿಕೊಂಡ ವಾಣಿಜ್ಯ ಸಂಕೀರ್ಣದ ಬಗ್ಗೆ ದೂರು ದಾಖಲಾಯಿತು.ಆಮೇಲೆ ಗೌಡರನ್ನೂ ಆಂತರಿಕ ಕಿತ್ತಾಟಗಳಿಂದಾಗಿ ಇಳಿಸಿ ಶೆಟ್ಟರ್ ಬಂದರು.ಅಂತೂ ಇಂತೂ ಬಿಜೆಪಿ ಸರ್ಕಾರ ಐದು ವರ್ಷ ಮುಗಿಸುವ ವೇಳೆಗೆ ರಾಜ್ಯದ ಜನರು ನಿಟ್ಟುಸಿರು ಬಿಡುವಂತಾಗಿತ್ತು.ಕೊಟ್ಟ ಕುದುರೆಯನ್ನು ಏರಲಾಗದ ಸ್ಥಿತಿ ಕರ್ನಾಟಕ ಬಿಜೆಪಿ ನಾಯಕರಾದಾಗಿತ್ತು.

ಆ ನಂತರ ಬಂದ ವಿಧಾನಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಿದರು.ಅದಾಗಿ ಸ್ವಲ್ಪ ದಿನಗಳಲ್ಲೇ ಲೋಕಸಭಾ ಚುನಾವಣೆಗಳು ಘೋಷಣೆಯಾದಾಗ ೧೦ ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎನ್ನುವ ಸ್ಥಿತಿಯೇ ಇತ್ತು. ಅಂತ ಸ್ಥಿತಿಯಲ್ಲದೇ ಇನ್ನೇನು ಇರಲಿಕ್ಕೆ ಸಾಧ್ಯವಿತ್ತು ಹೇಳಿ? ಭ್ರಷ್ಟಚಾರದ ವಿಷಯದಲ್ಲಿ ಕೇಂದ್ರ ಕಾಂಗ್ರೆಸ್ಸಿನ ’ಬಿ ಟೀಂ’ನಂತಾಗಿತ್ತು ರಾಜ್ಯ ಬಿಜೆಪಿ! ಇಂತ ರಾಜ್ಯ ಬಿಜೆಪಿ ನಾಯಕರನ್ನೇ ಮುಂದಿಟ್ಟುಕೊಂಡು ಮೋದಿ ಜನರ ಮುಂದೇ ಹೋಗದಿದ್ದು ಪುಣ್ಯ.ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ೧೭ ಸೀಟು ಗೆದ್ದಿದ್ದು ಮೋದಿಯವರ,ಬಿಜೆಪಿಯ ಸಾಮಾನ್ಯ ಕಾರ್ಯಕರ್ತರ ಮತ್ತು ನಮೋ ಬ್ರಿಗೇಡ್,ನಮೋ ಗ್ರೂಪ್ ನಂತಹ ಮೋದಿ ನಾಯಕತ್ವವನ್ನು ಮೆಚ್ಚಿ ಕೆಲಸ ಮಾಡಿದ ಸಾಮಾನ್ಯರಿಂದಲೇ ಹೊರತು,ಯಾವ ಜನರು ತಾನೇ ರಾಜ್ಯದ ಬಿಜೆಪಿಯ ಸೋ-ಕಾಲ್ಡ್ ನಾಯಕರ ಮುಖ ನೋಡಿ ಮತ ಹಾಕುತಿದ್ದರು ಹೇಳಿ? ಮುಖ ನೋಡಲಿಕ್ಕೆ ಇವರು ಮುಖವನ್ನು ಉಳಿಸಿಕೊಂಡಿದ್ದಾರೆಯೇ?

ಒಂದು ವೇಳೆ ಮುಖ ಉಳಿಸಿಕೊಂಡಿದ್ದರೆ,ಇವತ್ತು ರಾಜ್ಯದ ಕಾಂಗ್ರೆಸ್ಸ್ ಸರ್ಕಾರದ ಆಡಳಿತದ ಲೋಪಗಳು,ಸಚಿವರ ಮೇಲಿನ ಭ್ರಷ್ಟಚಾರದ ಆರೋಪಗಳು,ಭೂ ಕಬಳಿಕೆ ಸುದ್ದಿಗಳು,ಖುದ್ದು ಸಿಎಂ ಸಿದ್ದರಾಮಯ್ಯನವರ ಮೇಲೆ ಅರ್ಕಾವತಿ ಡಿ-ನೋಟಿಫಿಕೇಶನ್ ಹಗರಣದ ಬಗ್ಗೆ ದನಿಯೆತ್ತಬೇಕಿತ್ತಲ್ಲ.ಯಾಕೆ ಸದ್ದೇ ಮಾಡುತ್ತಿಲ್ಲ? ಮಾಜಿ ಸಿ.ಎಂ ಶೆಟ್ಟರ್ ಅವರು, ಅರ್ಕಾವತಿ ಡಿ-ನೋಟಿಫಿಕೇಶನ್ ಬಗ್ಗೆ ಮೊದಲಿಗೆ ಜೋರಾಗಿ ದನಿಯೆತ್ತಿದರು,ಕೆಲವೇ ದಿನಗಳಲ್ಲಿ ಅವರ ಮೇಲೆಯೇ, ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡು ಮಠವೊಂದಕ್ಕೆ ಸಹಾಯ ಮಾಡಿದ ಆರೋಪ ಹೊರಬಂತು ನೋಡಿ ,ಅರ್ಕಾವತಿ ತಣ್ಣಗಾಯಿತು! ವಿಚಿತ್ರವೆಂದರೆ ಶೆಟ್ಟರ್ ಒಬ್ಬರನ್ನು ಬಿಟ್ಟರೆ ರಾಜ್ಯದ ಇನ್ಯಾವುದೇ ಬಿಜೆಪಿ ನಾಯಕರು ಈ ಬಗ್ಗೆ ಮಾತನಾಡಲೂ ಇಲ್ಲ,ಶೆಟ್ಟರ್ ಬೆಂಬಲಕ್ಕೂ ಬರಲಿಲ್ಲ.ಈಗ ಕಾಲ ತಳ್ಳುವ ನೆಪವಾಗಿ ಅರ್ಕಾವತಿ ಡಿ-ನೋಟಿಫಿಕೇಶನ್ ಬಗ್ಗೆ ತನಿಖೆಗಾಗಿ ಸಮಿತಿಯೊಂದನ್ನು ನೇಮಿಸಿಕೊಂಡಿದೆ.ಅದರ ವರದಿ ಹೊರಬರುವಷ್ಟರಲ್ಲಿ ಅದು ಜನರ ನೆನಪಿನಿಂದ ಮರೆಯಾಗಿಯೇ ಹೋಗುತ್ತದಷ್ಟೇ!

ರಾಜ್ಯದಲ್ಲಿ ವಿರೋಧ ಪಕ್ಷವೊಂದು ಇದೆಯೋ ಇಲ್ಲವೋ ಎಂಬುದೇ ಅನುಮಾನ ಹುಟ್ಟುವಂತಾಗಿದೆ ರಾಜ್ಯ ಬಿಜೆಪಿಯ ಪರಿಸ್ಥಿತಿ..ಇಂತ ಪರಿಸ್ಥಿತಿಗೆ ಕಾರಣರಾರು? ಕಾಂಗ್ರೆಸ್ಸ್ ಸರ್ಕಾರದ ಭ್ರಷ್ಟಚಾರದ ಬಗ್ಗೆ ಮಾತನಾಡಿದರೆ,ಎಲ್ಲಿ ತಮ್ಮ ಸರ್ಕಾರದ ಅವಧಿಯ ಮತ್ತು ತಮ್ಮ ನಾಯಕರ ಹಗರಣಗಳು ಹೊರಬರುತ್ತವೇ ಎನ್ನುವ ಹೆದರಿಕೆಯಿದೆಯೇನು ರಾಜ್ಯದ ಬಿಜೆಪಿ ನಾಯಕರಿಗೇ? ಇಲ್ಲವೆಂದರೆ ಇವರೇಕೆ ಇದ್ದೂ ಇಲ್ಲದಂತಿದ್ದಾರೆ? ಈ ಮಾತು ರಾಜ್ಯದ ಮೊದಲ ಸಾಲಿನ ನಾಯಕರು ಎಂದು ಕರೆಸಿಕೊಳ್ಳುವವರ ಜೊತೆಗೆ,ಎರಡನೇ ಸಾಲಿನ ನಾಯಕರು ಎನಿಸಿಕೊಂಡಿದ್ದವರ ವಿಷಯದಲ್ಲೂ ಸತ್ಯವೇ.ಇಂತ ನಾಯಕರನ್ನಿಟ್ಟುಕೊಂಡು ಪಿಎಂ ಮೋದಿ ಮತ್ತು ಅಮಿತ್ ಶಾ ಅವರು ಭಾರತವನ್ನು ’ಕಾಂಗ್ರೆಸ್ಸ್ ಮುಕ್ತ’ ಮಾಡಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ರಾಜಕೀಯವೆಂದರೆ ರೇಜಿಗೆ ಪಡುತಿದ್ದ ಯುವಕರು ಇವತ್ತು ಮೋದಿಯವರಿಂದಾಗಿ ರಾಜಕೀಯದೆಡೆಗೆ,ಚುನಾವಣೆಯೆಡೆಗೆ ಕುತೂಹಲದಿಂದ ಮತ್ತು ನಿರೀಕ್ಷೆಯನ್ನಿಟ್ಟುಕೊಂಡು ಪಾಲ್ಗೊಳ್ಳುತ್ತಿದ್ದಾರೆ.ಆದರೆ,ರಾಜ್ಯ ಬಿಜೆಪಿಯಲ್ಲಿರುವ ’ಕಾಂಗ್ರೆಸ್ಸ್ ಮನಸ್ಥಿತಿಯ ನಾಯಕರನ್ನು’ ಮುಂದಿಟ್ಟುಕೊಂಡು ಹೊರಟರೇ,ಇದೇ ಯುವಕರು ಮತ್ತೆ ಬೆನ್ನು ತೋರಿಸುತ್ತಾರೆ.

ಭಾರತದ ರಾಜಕಾರಣವೀಗ ನಿರ್ಣಾಯಕ ಹಂತದ ಹಣಾಹಣಿ ನಡೆಸುತ್ತಿದೆ. ಕುಟುಂಬ ರಾಜಕಾರಣ ಮಾಡಿಕೊಂಡು ಬಂದ ಕಾಂಗ್ರೆಸ್ಸ್ ಇವತ್ತು ಮೂಲೆ ಸೇರುತ್ತಿದೆ ಮತ್ತು ಮೋದಿಯವರು ಅದನ್ನು ಮೂಲೆ ಸೇರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.ಇಂತಹ ಸಮಯದಲ್ಲಿ ರಾಜ್ಯ ಬಿಜೆಪಿಯೂ ಅದೇ ದಿಕ್ಕಿನಲ್ಲಿ ಮುನ್ನಡೆಯಬೇಕಾದರೆ,ಹಳೆ ತಲೆಮಾರಿನ ( I mean, ಯುಪಿಎ ಸರ್ಕಾರವೂ ನಾಚುವಂತಹ ಘನ ಕಾರ್ಯ ಮಾಡಿರೋ ಮೊದಲನೆ ಮತ್ತು ಎರಡನೇ ಸಾಲಿನ) ನಾಯಕರನ್ನು ಹೊರಗಿಟ್ಟು,ರಾಜ್ಯ ಬಿಜೆಪಿಯಲ್ಲಿರುವ, ಮಾಸ್ ಲೀಡರ್ ಗಳಲ್ಲದಿದ್ದರೂ,ಕೈ,ಬಾಯಿ,ಮನಸ್ಸನ್ನು ಸ್ವಚ್ಚವಾಗಿಟ್ಟುಕೊಂಡಿರುವ ನಾಯಕರಿಗೆ,ಮೋದಿ ಮತ್ತು ಅಮಿತ್ ಶಾ ಅವರು ಪಟ್ಟಕಟ್ಟಿ ಹೊರಡಬೇಕು.ಅಷ್ಟಕ್ಕೂ ಇವತ್ತಿಗೆ ಮೋದಿಯವರೇ ಬಿಜೆಪಿಯ ಪಾಲಿಗೆ ವೋಟ್ ದಕ್ಕಿಸಿಕೊಡಬಲ್ಲ ಮಾಸ್ ಲೀಡರ್ ಆಗಿದ್ದಾರೆ.ಅಂತ ನಾಯಕನೊಬ್ಬನನ್ನು ಹುಡುಕಿ ರಾಜ್ಯ ಬಿಜೆಪಿಯ ಚುಕ್ಕಾಣಿ ಕೊಡಿಸಿ, ಮುನ್ನಡೆಯದಿದ್ದರೆ, ಮೋದಿಯವರ “ಕಾಂಗ್ರೆಸ್ಸ್ ಮುಕ್ತ ಭಾರತ” ಕನಸಾಗಿಯೇ ಉಳಿಯಲಿದೆ,ಯಾಕೆಂದರೆ “ಕರ್ನಾಟಕದಲ್ಲಿ ಬಿಜೆಪಿ ಎಂಬ ಪಕ್ಷವೇ ಇಲ್ಲ!”

ತಲೆಗಳನ್ನು ಲೆಕ್ಕ ಹಾಕಿ ನಮ್ಮಲ್ಲಿ ಇಷ್ಟು “ಸಂಖ್ಯೆ”ಯ ಮಾಸ್ ಲೀಡರುಗಳಿದ್ದಾರೆ ಎನ್ನುವವರಿಗಾಗಿ,ಮತ್ತೊಮ್ಮೆ ಹೇಳುತ್ತೇನೆ “ಸಂಖ್ಯೆಗಿಂತ “ವ್ಯಕ್ತಿ” ಮತ್ತು ವ್ಯಕ್ತಿಗಿಂತ “ವ್ಯಕ್ತಿತ್ವ” ವೂ ಮುಖ್ಯವಾಗುತ್ತದೆ”. ಅಂತಹ ವ್ಯಕ್ತಿತ್ವವಿರುವ ವ್ಯಕ್ತಿಯನ್ನು ಹುಡುಕಿಕೊಳ್ಳದಿದ್ದರೆ,ರಾಜ್ಯ ಬಿಜೆಪಿಗೆ ಸದ್ಯದ ಸಮಯದಲ್ಲಿ ಯಾವುದೇ ಭವಿಷ್ಯವೂ ಇಲ್ಲ ಮತ್ತು ಮೋದಿಯವರ ಕಾಂಗ್ರೆಸ್ಸ್ ಮುಕ್ತ ಭಾರತದ ಕನಸೂ ಈಡೇರುವುದಿಲ್ಲ!

ಚಿತ್ರಕೃಪೆ : ದಾಯ್ಜಿ ವರ್ಲ್ಡ್.ಕಾಂ

47 ಟಿಪ್ಪಣಿಗಳು Post a comment
  1. Nagshetty Shetkar's avatar
    Nagshetty Shetkar
    ನವೆಂ 27 2014

    ಬಿ ಜೆ ಪಿಯ ಪ್ರಮುಖ ನಾಯಕರೂ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಯೂ ಆಗಿರುವ ಮಾನ್ಯ ಈಶ್ವರಪ್ಪನವರು ತಳವರ್ಗದಿಂದ ಮೇಲು ಬಂದವರು. ಆದರೆ ಅವರು ಆರ್ ಎಸ ಎಸ ನ ಮುಖವಾಣಿ ಆಗಿಬಿಟ್ಟಿದ್ದಾರೆ!

    “ಜಾತಿಯೇ ಈ ದೇಶದ ವಾಸ್ತವ. ಇದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಹಿಂದೂ ಧರ್ಮ ಎನ್ನುವುದು ಬ್ರಾಹ್ಮಣ್ಯ ಧರ್ಮದ ಪರ್ಯಾಯ ಹೆಸರಾಗಿ ಬಳಕೆಯಾಗುತ್ತಿದೆ. ಬ್ರಾಹ್ಮಣ್ಯ ಧರ್ಮವೆಂದರೆ ಮತ್ತೆ ಅದೇ ಜಾತಿ ವ್ಯವಸ್ಥೆಯ ಕೂಪ. ಹಿಂದೂಧರ್ಮ ಎನ್ನುವುದು ಸಾವಿರಾರು ಜಾತಿಗಳ ಅಸಮಾನತೆಯ ತಳಹದಿಯ ಮೇಲೆ ನಿಂತಿರುವುದ”

    “ತನ್ನ ತಕ್ಷಣದ ಲಾಭಕ್ಕಾಗಿ ಇಡೀ ಶೋಷಿತ ಸಮುದಾಯವನ್ನೇ ಬಲಿ ಕೊಡಲು ಹೊರಟಿರುವ ಈಶ್ವರಪ್ಪನವರಂತಹ ನಾಯಕರೇ ಇಂದು ಶೋಷಿತ ಸಮುದಾಯದ ಪ್ರಗತಿಗೆ ದೊಡ್ಡ ಅಡ್ಡಿಯಾಗಿದ್ದಾರೆ.”

    [“ಅಪಸ್ವರದ ಈಶ್ವರಪ್ಪ ಮತ್ತು ಜಾತಿ ಗಣತಿ ಅನಿವಾರ್ಯತೆ”, ಲೇ: ಬಿ ಎಂ ಬಷೀರ್, ವಾರ್ತಾಭಾರತಿ]

    ಉತ್ತರ
    • ಮಾನ್ಯ ಶೆಟ್ಕರ್ ಅವರಿಗೂ ಮತ್ತು ಮೇಲಿನ ಸಾಲು ಬರೆದ ಶ್ರೀಮಾನ್ ಬಷೀರ್ ಸಾಹೇಬರಿಗೂ ಒಂದು ಸಾಮ್ಯತೆಯಿದೆ.ಇಬ್ಬರೂ ಪ್ರಶ್ನೆಗಳನ್ನು ಎದುರಿಸಲಾಗದೇ ಓಡಿ ಹೋಗುತ್ತಾರೆ,ಇಲ್ಲವೇ ಚರ್ಚೆಯ ದಿಕ್ಕು ತಪ್ಪಿಸಿ ನುಣುಚಿಕೊಳ್ಳುತ್ತಾರೆ

      ಉತ್ತರ
      • Nagshetty Shetkar's avatar
        Nagshetty Shetkar
        ನವೆಂ 27 2014

        “ಮಾನ್ಯ ಶೆಟ್ಕರ್ ಅವರಿಗೂ ಮತ್ತು ಮೇಲಿನ ಸಾಲು ಬರೆದ ಶ್ರೀಮಾನ್ ಬಷೀರ್ ಸಾಹೇಬರಿಗೂ ಒಂದು ಸಾಮ್ಯತೆಯಿದೆ.”

        ಪ್ರಗತಿಪರರೆಲ್ಲರಲ್ಲೂ ಸಾಮ್ಯತೆ ಇದೆ – ಪ್ರಗತಿಪರತೆ ಹಾಗೂ ತತ್ವಬದ್ಧತೆ. ಬಷೀರ್ ಮೂಲಭೂತವಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವವನು. ಅವನ ಕಮಿಟ್ಮೆಂಟ್ ಅನ್ನು ಪ್ರಶ್ನಿಸಲಾಗದು.

        ಉತ್ತರ
        • ಹೌದು ಹೌದು 😀
          ಮೈಗೆ ಎಣ್ಣೇ ಹಚ್ಚಿಕೊಂಡೇ ಅಖಾಡಕ್ಕಿಳಿಯುವುದು (ನುಣುಚಿಕೊಳ್ಳಲು ಸಹಾಯವಾಗಲಿ ಎಂದು) ಎಲ್ಲಾ ಪ್ರಗತಿಪರರಿಗಿರುವ ಸಾಮ್ಯತೆ

          ಉತ್ತರ
        • ವಿಜಯ್ ಪೈ's avatar
          ವಿಜಯ್ ಪೈ
          ನವೆಂ 29 2014

          [ಅವನ ಕಮಿಟ್ಮೆಂಟ್ ಅನ್ನು ಪ್ರಶ್ನಿಸಲಾಗದು.]
          ಬಿಟ್ಟುಹೋಗಿದ್ದು :
          ಹಾಗೆಯೇ ಅವನು ಉತ್ತರಿಸಲಾಗದೇ ಓಡಿಹೋದದ್ದನ್ನು ಪ್ರಶ್ನಿಸಲಾಗದು!

          ಮೊನ್ನೆ ಮೊನ್ನೆ ಕೆಲವು ಅಧಿಕ ಪರಸಂಗಿ ಪರಗತಿಪರರು ಇಂತಿಪ್ಪ ಮಹಾನ ಬಶೀರರನ್ನು ಪ್ರಶ್ನಿಸಿ, ಹಿಗ್ಗಾಮುಗ್ಗಾ ಝಾಡಿಸಿದರು!..ಏಕೆ ಅಂತ ತಿಳಿಯಲಿಲ್ಲ. ಸಹ ಗಂಜಿಗಿರಾಕಿಗಳಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಹಂಚಿಕೊಳ್ಳಬಹುದೆ?

          ಉತ್ತರ
    • ಮಹೇಶ's avatar
      ನವೆಂ 30 2014

      ಬಶೀರ್ ರವರು ಈ ಸಾರಿ ಮಡೆಸ್ನಾನದ ವಿರುದ್ಧ ಯಾಕೆ ದನಿ ಎತ್ತಲೇ ಇಲ್ಲ. ಕಾಂಗ್ರೆಸ್ ಸರಕಾರದ ಆಳ್ವಿಕೆ ಇದೆ ಅಂತಲೇ ?

      ಉತ್ತರ
      • Nagshetty Shetkar's avatar
        Nagshetty Shetkar
        ನವೆಂ 30 2014

        ಬಶೀರನ ಕಮಿಟ್ಮೆಂಟ್ ಅನ್ನು ಪ್ರಶ್ನಿಸಲಾಗದು ಅಂತ ನಾನು ಪುಕ್ಕಟೆ ಹೇಳಿಲ್ಲ ಮಿ. ಮಹೇಶ! ನಾವು ಪ್ರಗತಿಪರರು ಎಂದೆಂದಿಗೂ ತತ್ವನಿಷ್ಠೆಯನ್ನು ಬಿಡಲಾರೆವು. ನಮ್ಮ ಕೋರ್ ತುಂಬಾ ಸ್ಟ್ರಾಂಗ್ ಆಗಿದೆ.

        ನೋಡಿ:
        “ಮಡೆಸ್ನಾನ ಕರಾವಳಿ ಮಾತ್ರವಲ್ಲ, ಇಡೀ ರಾಜ್ಯಕ್ಕೇ ಒಂದು ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ. ವಿಜ್ಞಾನ ಮತ್ತು ವಿಚಾರಗಳಿಗೆ ಸವಾಲನ್ನು ಹಾಕಿದೆ. ಮೇಲು, ಕೀಳು ಎನ್ನುವ ಜಾತೀಯತೆಯನ್ನು ಪ್ರೋತ್ಸಾಹಿಸುವ ಮಡೆಸ್ನಾನ ಎನ್ನುವ ಹಿಂಸೆ ಮೊದಲು ನಿಲ್ಲಬೇಕು. ಮನುಷ್ಯರನ್ನು ಪ್ರಾಣಿಗಳಿಗಿಂತ ಕೀಳಾಗಿ ನೋಡುವ ಮನೋಭಾವಕ್ಕೆ ನಿಷೇಧ ಹೇರಬೇಕು….

        ಮೊತ್ತ ಮೊದಲು ಮಡೆಸ್ನಾನ ಎನ್ನುವ ಮನುಷ್ಯ ಹಿಂಸೆಗೆ ನಿಷೇಧ ಹೇರಿ ಮನುಷ್ಯ ಘನತೆಯನ್ನು ಎತ್ತಿಹಿಡಿಯೋಣ…

        ಬ್ರಾಹ್ಮಣರು ಉಂಡ ಎಂಜಲೆಲೆಯಲ್ಲಿ ಮಲೆಕುಡಿಯರು ಉರುಳಾಡುವುದನ್ನು ನಿಲ್ಲಿಸಬೇಕು ಎಂದು ಮಾನವೀಯ ನೆಲೆಯಲ್ಲಿ ಹೋರಾಟ ನಡೆಯುತ್ತಿದೆ. ಮಡೆಸ್ನಾನ ಮಾನವ ಘನತೆಗೆ ಕಳಂಕ ಎಂದು ಎಲ್ಲ ಪ್ರಗತಿಪರರೂ ಹೇಳಿಕೆ ನೀಡಿದ್ದಾರೆ. ಆದರೆ, ಜಿಲ್ಲಾಡಳಿತವಾಗಲಿ, ಸರಕಾರವಾಗಲಿ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನ್ಯಾಯಾಲಯವೂ ಕೂಡ ಸೂಕ್ತವಾಗಿ ಸ್ಪಂದಿಸಿಲ್ಲ. ಕಳೆದ ಹಲವು ದಶಕಗಳಿಂದ ಯಾವುದೇ ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಹಲವೆಡೆ ಮನುಷ್ಯರನ್ನು ನಡೆಸಿಕೊಂಡು ಬರಲಾಗುತ್ತಿದೆ…

        ಇನ್ನೊಬ್ಬರ ಎಂಜಲು ಕೊಳಕು, ನಿಕೃಷ್ಟವಾದುದು ಎನ್ನುವುದು ಗೊತ್ತಿದ್ದೂ, ಎಂಜಲಿನಿಂದ ರೋಗಗಳು ಹರಡುತ್ತವೆ ಎಂಬುದು ಸ್ಪಷ್ಟವಿದ್ದೂ ಕೆಳ ವರ್ಗದ ಜನರನ್ನು ಮೇಲ್ವರ್ಗದ ಜನರ ಎಂಜಲಲ್ಲಿ ಹೊರಳಾಡಲು ಅವಕಾಶ ನೀಡುವುದು ಹಿಂಸೆಯ ಪರಮಾವಧಿಯಾಗಿದೆ.”

        [“ಮಡೆಸ್ನಾನ-ಕಂಬಳ: ಮೊದಲು ತಡೆಯಬೇಕಾದ ಹಿಂಸೆ ಯಾವುದು?”, ವಾರ್ತಾಭಾರತಿ ಸಂಪಾದಕೀಯ, http://ladaiprakashanabasu.blogspot.in/2014/11/blog-post_906.html%5D

        ಉತ್ತರ
        • ವಿಜಯ್ ಪೈ's avatar
          ವಿಜಯ್ ಪೈ
          ನವೆಂ 30 2014

          [ಇನ್ನೊಬ್ಬರ ಎಂಜಲು ಕೊಳಕು, ನಿಕೃಷ್ಟವಾದುದು ಎನ್ನುವುದು ಗೊತ್ತಿದ್ದೂ, ]
          ಹೌದೆ? ಸಾಬರು ಸಮಾನತೆ, ಸಹೋದರತ್ವದ ಸಂಕೇತವಾಗಿ ಒಂದೇ ತಟ್ಟೆಯಲ್ಲಿ ಉಣ್ಣುತ್ತಾರೆ ಎಂದು ಕೇಳಿದ್ದೆ…

          ಉತ್ತರ
        • ಮಹೇಶ's avatar
          ಡಿಸೆ 1 2014

          ಹಿಂದೆಲ್ಲಾ ಮಡೆಸ್ನಾನದ ವಿರುದ್ಧ ಸಾಲು ಸಾಲು ಲೇಖನ ಬರೆದ ಬಶೀರ್ ರವರು, ಈ ಸಾರಿ ಮಾತ್ರ ಕಂಬಳವನ್ನು ಸಮರ್ಥಿಸುವ ಲೇಖನದಲ್ಲಿ ಅದಕ್ಕೆ ಪೂರಕವಾಗಿ ಮಡೆಸ್ನಾನದ ಉದಾಹರಣೆಯನ್ನು ತೆಗೆದುಕೊಂಡಿದ್ದಾರೆ ಅಷ್ಟೆ

          ಉತ್ತರ
          • Nagshetty Shetkar's avatar
            Nagshetty Shetkar
            ಡಿಸೆ 1 2014

            ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂತ ವಾದ ಮಾಡುವ ನಿಮ್ಮಂತಹವರನ್ನು ನೋಡಿ ಕನಿಕರ ಮೂಡುತ್ತಿದೆ.

            ಉತ್ತರ
            • ಮಹೇಶ's avatar
              ಡಿಸೆ 1 2014

              ನಾಗಶೆಟ್ಟಿ ಶೆಟ್ಕರ್ ರವರೇ, ನೀವು ಬಹಳ ಮುಗ್ಧರಿದ್ದೀರಿ. ಪ್ರಗತಿಪರರ ಬಗ್ಗೆ ನಿಮಗಿನ್ನೂ ಸರಿಯಾಗಿ ಗೊತ್ತಿಲ್ಲ. ಬಿಜೆಪಿ ಸರಕಾರವಿದ್ದಾಗ ಒಮ್ಮಿಂದೊಮ್ಮೆಲೇ ಸರಕಾರ ಮಡೆಸ್ನಾನವನ್ನು ನಿಷೇಧಿಸಬೇಕು ಎನ್ನುವ ಹುಯಿಲೆಬ್ಬಿಸಿದರು. ಅದಕ್ಕಿಂತಲೂ ಮೊದಲಿನಿಂದಲೂ ಮಡೆಸ್ನಾನವಿದ್ದಿತ್ತಲ್ಲವೇ ? ಕಳೆದ ವರ್ಷ ಕಾಂಗ್ರೆಸ್ ಸರಕಾರವಿದ್ದಾಗ ಇವರ ಪ್ರತಿಭಟನೆಯ ಕಾವು ಕಡಿಮೆಯಾಯಿತು. ಈ ವರ್ಷವಂತೂ ಕೋರ್ಟ್ ತೀರ್ಪಿನ ನೆಪವಿಟ್ಟುಕೊಂಡು ಅಲ್ಲೋ, ಇಲ್ಲೋ ಅಲ್ಪ ಸ್ವಲ್ಪ ಮಾತನಾಡಿ ಸುಮ್ಮನಾಗುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಮೌನ ವಹಿಸುತ್ತಾರೆ ಮತ್ತು ಮಡೆ ಸ್ನಾನ ಯಥಾ ಪ್ರಕಾರ ನಡೆಯುತ್ತದೆ. ಮಡೆಸ್ನಾನ ನಿಷೇಧದ ಬಗ್ಗೆ ಪ್ರಗತಿಪರರ ದನಿ ಜೋರಾಗುವುದು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಬಂದಾಗ ಮಾತ್ರ. ಕಾಂಗ್ರೆಸ್ ಆಡಳಿತದಲ್ಲಿ ಇರುವ ತನಕ ಮಡೆಸ್ನಾನ ಯಾವ ಪ್ರತಿಭಟನೆಗಳಿಲ್ಲದೇ ನಿರಾತಂಕವಾಗಿ ಸಾಗುತ್ತದೆ.

              ಉತ್ತರ
              • Nagshetty Shetkar's avatar
                Nagshetty Shetkar
                ಡಿಸೆ 1 2014

                ದರ್ಗಾ ಸರ್ ಅವರು ಮಡೆಸ್ನಾನದ ವಿಷಯದಲ್ಲಿ ಕಾಂಗ್ರೆಸ್ ಸರಕಾರದ ಕಾರಣಕ್ಕೆ ರಾಜಿ ಮಾಡಿಕೊಂಡಿಲ್ಲ. ಮನುಸ್ಮೃತಿಮುಕ್ತ ಕರ್ನಾಟಕ ಅಭಿಯೋಜನೆಯ ಅಡಿಯಲ್ಲಿ ಮಡೆಸ್ನಾನ ನಿಷೇಧವೂ ಬರುತ್ತದೆ. ಕಾಂಗ್ರೆಸ್ ಸರಕಾರ ಮೂಢನಂಬಿಕೆ ನಿಷೇಧ ಕಾನೂನು ಜಾರಿಗೆ ತರುವುದಕ್ಕೆ ಬದ್ಧವಾಗಿದೆ. ಆದುದರಿಂದ ಮಡೆಸ್ನಾನಕ್ಕೆ ಕಾಂಗ್ರೆಸ್ ಸರಕಾರವನ್ನು ಹೊಣೆಯಾಗಿಸುವುದರಲ್ಲಿ ಅರ್ಥವಿಲ್ಲ.

                ಉತ್ತರ
                • ಮಹೇಶ's avatar
                  ಡಿಸೆ 1 2014

                  ಕಾಂಗ್ರೆಸ್ ಸರಕಾರ ಜಾರಿಗೆ ತರುವುದಕ್ಕೆ ಬದ್ಧವಾಗಿದೆ, ಆದರೆ ಯಾವಾಗ? ಬಹುಶಃ ಎಂದಿಗೂ ಇಲ್ಲ. ಆ ಕಾಯಿದೆ ಬಂದರೆ ಮಡೆಸ್ನಾನ ನಿಲ್ಲುತ್ತದೆ, ಈ ಕಾಯಿದೆ ಬಂದರೆ ಮಡೆಸ್ನಾನ ನಿಲ್ಲುತ್ತದೆ ಎಂದು ಪ್ರಗತಿಪರರು ಕುಂಟು ನೆಪಗಳನ್ನು ಕೊಡುತ್ತಾ ಹೋಗುತ್ತಾರೆ. ಅಷ್ಟೇ.

                  ಉತ್ತರ
                  • Nagshetty Shetkar's avatar
                    Nagshetty Shetkar
                    ಡಿಸೆ 1 2014

                    ಮಿ. ಮಹೇಶ್, ಮಡೆಸ್ನಾನವನ್ನು ಪ್ರಗತಿಪರರು ಆಯೋಜಿಸಿಲ್ಲ, ಅದನ್ನು ಪೇಜಾವರ ಮೊದಲಾದ ನಿಮ್ಮ ಪರಗತಿಪರರು ಆಯೋಜಿಸುತ್ತಾ ಬಂದಿದ್ದಾರೆ. ನಿಮಗೆ ಮಡೆಸ್ನಾನ ನಿಲ್ಲಬೇಕು ಎಂಬ ಕಳಕಳಿ ಇದ್ದರೆ ಪೇಜಾವರ ಅವರಿಗೆ ಮಡೆಸ್ನಾನ ನಿಲ್ಲಿಸಲು ಆಗ್ರಹಿಸಿ.

                    ಉತ್ತರ
                    • ಮಹೇಶ's avatar
                      ಡಿಸೆ 1 2014

                      ಮಡೆಸ್ನಾನ ನಾವು ಆಯೋಜಿಸಿಲ್ಲ, ಮಡೆಸ್ನಾನ ನಿಲ್ಲಿಸಬೇಕು ಎನ್ನುವುದು ನಿಮಗೆ ಬೇಕಾಗಿದ್ದರೆ ನೀವು ಅವರನ್ನು ಆಗ್ರಹಿಸಿ, ಇವರನ್ನು ಆಗ್ರಹಿಸಿ ಎಂದು ಈಗ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮಾತನಾಡುವದಿದ್ದರೆ ಮೊದಲು ಯಾಕೆ ಅಷ್ಟೊಂದು ದೊಡ್ಡ ಪ್ರತಿಭಟನೆ ಮಾಡಬೇಕಿತ್ತು ? ಕಾಂಗ್ರೆಸ್ ಸರಕಾರ ಇರುವ ತನಕ ಮಡೆಸ್ನಾನ ಯಥಾವತ್ತಾಗಿ ನಡೆಯುವುದಕ್ಕೆ ಯಾವ ಅಡ್ಡಿ ಆತಂಕಗಳೂ ಇಲ್ಲ ಎಂಬುದು ಮತ್ತಷ್ಟು ಹೆಚ್ಚು ಖಚಿತವಾಯಿತು.

                      ಆದರೆ ನಾಗಶೆಟ್ಟಿ ಶೆಟ್ಕರ್ ರವರೇ, ಮಡೆಸ್ನಾನ ನಿಲ್ಲಬೇಕೆಂಬುದರ ಬಗ್ಗೆ ನಿಮ್ಮ ಪ್ರಾಮಾಣಿಕ ಕಳಕಳಿಯ ಬಗ್ಗೆ ನನಗೆ ನಂಬಿಕೆ ಇದೆ.

                    • Nagshetty Shetkar's avatar
                      Nagshetty Shetkar
                      ಡಿಸೆ 2 2014

                      ಮಿ. ಮಹೇಶ್, ಮಡೆಸ್ನಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಆಗ ಸುಧಾರಣೆ ಸಾಧ್ಯವಾಗುತ್ತದೆ. ನಿಮಗೆ ವಿಷಯದ ಬಗ್ಗೆ ಅಸಲಿ ಕಳಕಳಿ ಇದ್ದರೆ ನೀವೇಕೆ ದರ್ಗಾ ಸರ್ ಅವರಿಂದ ಜನಜಾಗೃತಿ ಭಾಷಣವನ್ನು ನಿಮ್ಮ ಊರಿನಲ್ಲಿ ಆಯೋಜಿಸಬಾರದು?

                    • ವಿಜಯ್ ಪೈ's avatar
                      ವಿಜಯ್ ಪೈ
                      ಡಿಸೆ 3 2014

                      [ನಿಮಗೆ ವಿಷಯದ ಬಗ್ಗೆ ಅಸಲಿ ಕಳಕಳಿ ಇದ್ದರೆ ನೀವೇಕೆ ದರ್ಗಾ ಸರ್ ಅವರಿಂದ ಜನಜಾಗೃತಿ ಭಾಷಣವನ್ನು ನಿಮ್ಮ ಊರಿನಲ್ಲಿ ಆಯೋಜಿಸಬಾರದು?]

                      !!!!
                      ಯಪ್ಪಾ!! ಮಹೇಶ..ದಯವಿಟ್ಟು ನಿಮ್ಮದೇ ತಪ್ಪು ಎಂದು ಒಪ್ಪಿಕೊಳ್ಳಿ. ಇಲ್ಲವಾದರೆ ಭರ್ಜರಿ ಚಿತ್ರಹಿಂಸೆಯ ಆಫರ್ ಇದೆ! :(. ಇದು ನೆಲ್ಲಿ ಹತ್ಯಾಕಾಂಡಕ್ಕಿಂತಲೂ ಘೋರ!

                    • Naani's avatar
                      Naani
                      ಡಿಸೆ 4 2014

                      🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂

                    • Naani's avatar
                      Naani
                      ಡಿಸೆ 4 2014

                      ಕಂಡ ಕಂಡವರ್ನೆಲ್ಲಾ “ತನ್ನೊದೊಂದು ಭಾಷಣ” ಏಕೆ ಏರ್ಪಡಿಸಬಾರದು ಅಂತ ಗೋಗೆರಿಯುತ್ತಿದೆಯಲ್ಲಾ ಈ ಯಪ್ಪಾ!!! ಥೋ ಥೋ ಥೋ !!!
                      🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂

                    • Nagshetty Shetkar's avatar
                      Nagshetty Shetkar
                      ಡಿಸೆ 4 2014

                      ಜನಜಾಗೃತಿಯೇ ಪ್ರಗತಿಪರರ ಗುರಿ. ಜನಜಾಗೃತಿಯನ್ನು ಸಾಧಿಸಲು ಭಾಷಣವೂ ಒಂದು ಮಾರ್ಗ. ವೈದಿಕತೆಯ ಪೊಳ್ಳುತನದ ಬಗ್ಗೆ ಭಾಷಣ ನೀಡಲು ದರ್ಗಾ ಸರ್ ಅವರಿಗಿಂತ ಹೆಚ್ಚಿನ ಅರ್ಹತೆ ಪಡೆದಿರುವವರು ಯಾರಿದ್ದಾರೆ?

                    • ವಿಜಯ್ ಪೈ's avatar
                      ವಿಜಯ್ ಪೈ
                      ಡಿಸೆ 4 2014

                      [ಜನಜಾಗೃತಿಯೇ ಪ್ರಗತಿಪರರ ಗುರಿ. ಜನಜಾಗೃತಿಯನ್ನು ಸಾಧಿಸಲು ಭಾಷಣವೂ ಒಂದು ಮಾರ್ಗ. ವೈದಿಕತೆಯ ಪೊಳ್ಳುತನದ ಬಗ್ಗೆ ಭಾಷಣ ನೀಡಲು ದರ್ಗಾ ಸರ್ ಅವರಿಗಿಂತ ಹೆಚ್ಚಿನ ಅರ್ಹತೆ ಪಡೆದಿರುವವರು ಯಾರಿದ್ದಾರೆ?]

                      ….ಮತ್ತು ಈ ದರ್ಗಾಪುರಾಣವನ್ನು ಕೇಳಲು ನಿಮಗಿಂತ ಹೆಚ್ಚಿನ ಅರ್ಹತೆ ಪಡೆದವರು ಯಾರಿದ್ದಾರೆ? ಆದ್ದರಿಂದ ಅವರು ಹೇಳಲಿ..ನೀವು ಕೇಳಿ!!. ಎಲ್ಲಾದರೂ ಒಂದು ಬೆಚ್ಚಗಿರುವ, ಒಳ್ಳೆ ಕಟ್ಟೆ ಹುಡುಕಿಕೊಂಡು.:)

          • shripad's avatar
            shripad
            ಡಿಸೆ 2 2014

            “ಬ್ರಾಹ್ಮಣರು ಉಂಡ ಎಂಜಲೆಲೆಯಲ್ಲಿ ಮಲೆಕುಡಿಯರು ಉರುಳಾಡುವುದನ್ನು ನಿಲ್ಲಿಸಬೇಕು ಎಂದು ಮಾನವೀಯ ನೆಲೆಯಲ್ಲಿ ಹೋರಾಟ ನಡೆಯುತ್ತಿದೆ…ಕೆಳ ವರ್ಗದ ಜನರನ್ನು ಮೇಲ್ವರ್ಗದ ಜನರ ಎಂಜಲಲ್ಲಿ ಹೊರಳಾಡಲು ಅವಕಾಶ ನೀಡುವುದು ಹಿಂಸೆಯ ಪರಮಾವಧಿಯಾಗಿದೆ”
            ಮಾನ್ಯ ಬಶೀರಿಗೂ ಶೆಟ್ಕರ್ ಗೂ ಜಾತಿ ಯಾವುದು ವರ್ಗ ಯಾವುದು ಎಂಬ ಕನಿಷ್ಠ ತಿಳಿವಳಿಕೆಯೇ ಇಲ್ಲ. ಆದರೆ ದಪ್ಪ ದಪ್ಪ ಪದ ಬಳಸಿ ಭಾಷಣ ಬಿಗಿಯುವುದು ಮಾತ್ರ ನಿಲ್ಲಿಸುವುದಿಲ್ಲ!

            ಉತ್ತರ
  2. SSNK's avatar
    ನವೆಂ 27 2014

    [[ಪ್ರಗತಿಪರರೆಲ್ಲರಲ್ಲೂ ಸಾಮ್ಯತೆ ಇದೆ. ಬಷೀರ್ ಮೂಲಭೂತವಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವವನು. ಅವನ ಕಮಿಟ್ಮೆಂಟ್ ಅನ್ನು ಪ್ರಶ್ನಿಸಲಾಗದು]]

    ಹೌದು, ತಮ್ಮನ್ನು ತಾವೇ ಪ್ರಗತಿಪರ ಎಂದುಕೊಂಡು, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದು, ಪ್ರಗತಿಪರರಲ್ಲಿರುವ ಒಂದು ಸಾಮ್ಯತೆ.
    ಎರಡನೆಯದು, ತಮ್ಮನ್ನು ಯಾರೂ ಪ್ರಶ್ನಿಸಬಾರದು ಎನ್ನುವ ಸರ್ವಾಧಿಕಾರಿ ಮನೋಭಾವ!
    ಮೂರನೆಯದು, ಪ್ರಗತಿಪರ ಎನ್ನಿಸಿಕೊಳ್ಳಬೇಕಾದರೆ, ಹಿಂದು ಎನ್ನುವ ಎಲ್ಲವನ್ನೂ ಧೂಷಿಸುವುದು!!
    ನಾಲ್ಕನೆಯದು, ಬಸವಮತದ ಮುಖವಾಡವನ್ನು ಇಸ್ಲಾಂ ಎಂಬ ವ್ಯಾಘ್ರದ ಮುಖಕ್ಕೆ ತೊಡಿಸಿಕೊಂಡು, ಸೋಗು ಹಾಕುವುದು!!!

    ಉತ್ತರ
  3. simha sn's avatar
    simha sn
    ನವೆಂ 28 2014

    ವಿಚಾರ ಸರಿಯಾಗಿದೆ ರಾಕೇಶ್.

    ಉತ್ತರ
  4. shripad's avatar
    shripad
    ಡಿಸೆ 4 2014

    ಮಹೇಶರೇ ದರ್ಗಾರನ್ನು “ಸ್ವಚ್ಛ ಭಾರತ ಅಭಿಯಾನಕ್ಕಾದರೂ ಮುಖ್ಯ ಅತಿಥಿಯಾಗಿ ಕರೆದು ಗಲ್ಲಿ ಶುದ್ಧಗೊಳಿಸಿ. ಭಾಷಣ ಇದ್ದದ್ದೇ. ಅಂದಹಾಗೆ ಅವರ ಪಟ್ಟದ ಶಿಷ್ಯರನ್ನೂ ಮರೆಯದೇ ಕರೆಯಿರಿ. 😀

    ಉತ್ತರ
    • Nagshetty Shetkar's avatar
      Nagshetty Shetkar
      ಡಿಸೆ 4 2014

      ವೈದಿಕರ ಮನಸ್ಸಿನೊಳಗೆ ತುಂಬಿರುವ ಮೇಲು-ಕೀಳು ಎಂಬ ಹೊಲಸನ್ನು ಚೊಕ್ಕ ಮಾಡುವ ಕೆಲಸವನ್ನು ದರ್ಗಾ ಸರ್ ಬಹಳ ಸಮಯದಿಂದ ಮಾಡುತ್ತಿದ್ದಾರೆ.

      ಉತ್ತರ
      • ವಿಜಯ್ ಪೈ's avatar
        ವಿಜಯ್ ಪೈ
        ಡಿಸೆ 4 2014

        [ವೈದಿಕರ ಮನಸ್ಸಿನೊಳಗೆ ತುಂಬಿರುವ ಮೇಲು-ಕೀಳು ಎಂಬ ಹೊಲಸನ್ನು ಚೊಕ್ಕ ಮಾಡುವ ಕೆಲಸವನ್ನು ದರ್ಗಾ ಸರ್ ಬಹಳ ಸಮಯದಿಂದ ಮಾಡುತ್ತಿದ್ದಾರೆ.]
        ಈ ಉದಾತ್ತ ಸೇವಾ ಕಾರ್ಯದಲ್ಲಿ ಪೂರ್ಣ ತಲ್ಲೀನ ರಾಗಿ, ತಮ್ಮ ಮೈಕೊಳೆಯನ್ನು ಹಾಗೂ ತಾವು ಸ್ನಾನ ಮಾಡುವುದನ್ನು ಮರೆತುಬಿಟ್ಟಿದ್ದಾರೆ..ಆದ್ದರಿಂದ ಮಹಾನ ಸಮಾಜ ಸೇವಾಕಾಂಕ್ಷಿ ಯವರು ಸ್ವಲ್ಪ ನಾರುತ್ತಾರೆ. ಕ್ಷಮೆ ಇರಲಿ.

        @ಶ್ರೀಪಾದ ಭಟ್ರು..
        ಭಾಗಿಯಾಗಿಸಿಕೊಳ್ಳುವುದಕ್ಕಿಂತ..ಸ್ವಚ್ಛತಾ ಅಭಿಯಾನದ ಅಂಗವಾಗಿ ಇವುಗಳನ್ನು ಗುಡಿಸಿ, ಕಸದ ತೊಟ್ಟಿಗೆ ಹಾಕಬೇಕು.

        ಉತ್ತರ
        • Nagshetty Shetkar's avatar
          Nagshetty Shetkar
          ಡಿಸೆ 4 2014

          ವರ್ತಮಾನದಲ್ಲಿ ಒಳ್ಳೆಯ ಚರ್ಚೆ ನಡೆಯುತ್ತಿದೆ. ಸಲಾಂ ಬಾವ ಅವರು ನಿಮ್ಮ ಶ್ರೀರಂಗ, ಅನಿತಾ ಮೊದಲಾದವರನ್ನು ಸಕ್ಕತ್ತಾಗಿ ಗುಡಿಸಿದ್ದಾರೆ. ಅಲ್ಲಿಗೆ ನೀವೂ ಬನ್ನಿ, ನಿಮ್ಮನ್ನೂ ಗುಡಿಸುತ್ತಾರೆ ನಮ್ಮ ಬಾವ ಭಾಯ್! ಹೇ ಹೇ!

          ಉತ್ತರ
          • shripad's avatar
            shripad
            ಡಿಸೆ 5 2014

            ಹಿ ಹಿ ಹಿ ಗುಡಿಸುವುದರಲ್ಲಿ ನಿಮ್ಮವರೇ ಪ್ರವೀಣರು ಎಂದು ಗೊತ್ತಿದ್ದೇ ಹೇಳಿದ್ದು! ನೀವೂ ಬನ್ನಿ, ನಿಮ್ಮ ಬಾವರನ್ನೂ ಕರೆತನ್ನಿ.

            ಉತ್ತರ
            • Nagshetty Shetkar's avatar
              Nagshetty Shetkar
              ಡಿಸೆ 5 2014

              ಜನತಾ ಪರಿವಾರ ಒಂದುಗೂಡುತ್ತಿದೆ. ಆಮ್ ಆದಮೀ ಪಕ್ಷದ ಜೊತೆ ಸೇರಿ ನಮೋ ರಾಜಕಾರಣವನ್ನು ಸದ್ಯದಲ್ಲೇ ಗುಡಿಸುತ್ತಾರೆ, ನೋಡುತ್ತಿರಿ.

              ಉತ್ತರ
          • ವಿಜಯ್ ಪೈ's avatar
            ವಿಜಯ್ ಪೈ
            ಡಿಸೆ 5 2014

            ನಿಮ್ಮ ಬಾವಾ ಭಾಯ್ ನ್ನು ಕಬೀರ ಕೇಸನಲ್ಲಿ ಛಳಿ ಬಿಡಿಸಿದಾಗ ಕೆಲ ಕಾಲ ನಾಪತ್ತೆಯಾಗಿದ್ದರು.. “ನಿಲುಮೆಗೆ ಬನ್ನಿ ಬಾವಾ ಭಾಯ್, ನಾನು ಏಕಾಂಗಿಯಾಗಿದ್ದೇನೆ” ಎಂದು ಮತ್ತೊಮ್ಮೆ ಗೋಳಾಡಿ. ಕಸ ಒಂದೇ ಕಡೆ ಇದ್ದರೆ..ನಮಗೂ ಸುಲಭ! 🙂 🙂

            ಅಂದ ಹಾಗೆ ನೀವು ಒಂಥರಾ ಪರಾವಲಂಬಿ ಜೀವಿಯೆ?

            ಉತ್ತರ
            • Nagshetty Shetkar's avatar
              Nagshetty Shetkar
              ಡಿಸೆ 5 2014

              ಶರಣರು ಪರೋಪಕಾರಿ ಹಾಗೂ ಸಮಾಜಮುಖಿ ಜೀವಿಗಳು. ವೈದಿಕರು ಪರಾವಲಂಬಿ ಜೀವಿಗಳು.

              ಉತ್ತರ
          • Nagshetty Shetkar's avatar
            Nagshetty Shetkar
            ಡಿಸೆ 6 2014
  5. ಶ್ಯಾಮ್'s avatar
    ಶ್ಯಾಮ್
    ಡಿಸೆ 5 2014

    ಒಂದು ಚಿಕ್ಕದಾದ ಸೈನಿಕರ ಗುಂಪಿನ ಸಹಾಯದಿಂದ ನಮ್ಮ ಇಡೀ ಭಾರತವನ್ನೇ ಆಳಿದ್ದ ಬ್ರಿಟಿಷರು, ಒಟ್ಟಿಗೆ ನಿಂತ ಭಾರತೀಯರನ್ನು ಗೆಲ್ಲಲಾಗದೆ ಕೆಲವೇ ವರ್ಷಗಳಲ್ಲಿ ದೇಶ ಬಿಟ್ಟು ಓಡಿ ಹೋದರು.ಯಾಕೆಂದರೆ ಆಗ ನಮ್ಮಲ್ಲಿ ಒಗ್ಗಟ್ಟು ಇತ್ತು. ಗುರಿ ಇತ್ತು,ಸಿದ್ದಾಂತ ಇತ್ತು. ಉದ್ದೇಶ ಇತ್ತು. ಸ್ವತಂತ್ರ ನಮಗೆ ಬೇಕಿತ್ತು. ಆದರೆ ಈಗ ಈ ಪ್ರಗತಿ ಪರರು ದೂರುವಂತೆ, ಮನುವಿನ ಕಾಲದಿಂದ ಅವನ ಅನುಯಾಯಿಗಳು (ಅಲ್ಪ ಸಂಖ್ಯಾತ ಬ್ರಾಹ್ಮಣರು,ಪುರೋಹಿತ ಶಾಹಿಗಳು )ಇಲ್ಲಿವರೆಗೂ ಸಮಾಜದಲ್ಲಿ ಇತರನ್ನು ಇನ್ನೂ ಮೌಡ್ಯದಲ್ಲೇ ಇಟ್ಟು ಮುಂದಕ್ಕೆ ಬರಲು ಬಿಡಲಿಲ್ಲ ಎಂದರೆ ಅದಕ್ಕೆ ಕಾರಣ ಎನು? ಒಂದೋ ಇಂತಹ ಕೆಲವೊಂದು ಮೂಢ ನಂಬಿಕೆ ಕಂದಾಚಾರ ವಿಚಾರಗಳು ಹೋರಾಟಗಾರರ ನಡುವೆಯೂ ಇದ್ದು ಅವರು ಪೂರ್ಣ ಪ್ರಮಾಣದಲ್ಲಿ ಹೋರಾಟ ನಡೆಸಲು ಆಗುತ್ತಿಲ್ಲ ಅಂದರೆ ಅವರ ಹೋರಾಟ ಸತ್ವಯುತ ಅಲ್ಲ (ಡೋಂಗಿ )ಅಂದರೆ ಅವರು ನಂಬಿಕೆಗೆ ಅರ್ಹರಲ್ಲ. ಅಥವಾ ಅವರ ನಂಬಿಕೆಯೇ ತಪ್ಪು. ಜನರ ನಂಬಿಕೆಯನ್ನೇ ಪ್ರಶ್ನಿಸುವ,ಇನ್ನೊಬ್ಬರನ್ನು ದೂರುವ ಕೆಲಸ ಮಾಡಿದರೆ ಹೊರತು, ಮೂಲ ಕಾರಣ ತಿಳಿಯದೆ ಸುಮ್ಮನೆ ಕತ್ತಿ ಬೀಸಿದ್ದಾರೆ.ಅಥವಾ ಹೋರಾಟದ ದಾರಿ ಸರಿ ಇಲ್ಲ. ಅಥವಾ ಇದೂ ಸಹ ಸಮಾಜದ ಒಂದು ಬೆಳವಣಿಗೆಯ ಹಂತವಾಗಿದ್ದು ಬೇಕಿದ್ದರೆ ಹೀಗೆಯೋ ಅಥವಾ ಅದರಲ್ಲಿನ ಕೆಟ್ಟ ಅಂಶವನ್ನು ಬಿಟ್ಟು ಮತ್ತೊಂದು ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಿದ್ದಮೇಲೆ ಯಾಕೆ ಇನ್ನೊಬ್ಬರನ್ನು ದೂಷಿಸುವುದು. ಗೆಲ್ಲಬೇಕಾದರೆ ನಾವು ಬೆಳೆಯ ಬೇಕು. ಇನ್ನೊಬ್ಬರನ್ನು ದೂಷಿಸುವುದು ಅಲ್ಲ. ಅಂತಹ ಬದಲಾವಣೆ ಹೆಚ್ಚು ದಿನ ಉಳಿಯುವುದಿಲ್ಲ . ನೀವು ಬೆಳೆಯಿರಿ ಆಗ ನಿಮ್ಮ ಜೊತೆ ಉಳಿದವರು ಬೆಳೆಯುತ್ತಾರೆ.ನೀವು ಪ್ರಶ್ನಾತೀತ ಗುಣ ಹೊಂದಿದವರಾಗಿರಬೇಕಷ್ಟೇ.

    ಉತ್ತರ
  6. M A Sriranga's avatar
    M A Sriranga
    ಡಿಸೆ 6 2014

    ಶೆಟ್ಕರ್ ಅವರಿಗೆ—- ನಿಮ್ಮ ಸಲಾಂ ಬಾವಾ ಅವರು ‘ವರ್ತಮಾನ’ದಲ್ಲಿ ನನ್ನ ಎರಡನೇ ಪ್ರಶ್ನೆಗೆ ಉತ್ತರಿಸಿಲ್ಲ. ಅನಿತಾ ಅವರ ಒಂದೇ ಪ್ರಶ್ನೆಯನ್ನು ಸಹ ಉತ್ತರಿಸಲಾಗದೆ ಬಾವಾ ಅವರು ಮರೆಯಾಗಿದ್ದಾರೆ. ಇನ್ನು ಸ್ವತಃ ತಾವು ಮಹೇಶರ ಪ್ರಶ್ನೆಯನ್ನೂ ಉತ್ತರಿಸದೆ ತಾರ್ಕಿಕ,ಅತಾರ್ಕಿಕಾ ಎಂದು ಸಬೂಬು ಹೇಳುತ್ತಾ ಕಾಲ ತಳ್ಳುತ್ತಿದ್ದೀರಿ . ಅದು ಆ ಕಡೆ ಇರಲಿ. ತಾವು ನಿಲುಮೆಯ ಚರ್ಚೆಯಲ್ಲಿ ವರ್ತಮಾನದ ವಿಷಯವನ್ನೇಕೆ ಎಳೆದು ತರುತ್ತೀರಿ ಎಂಬುದೇ ಅರ್ಥವಾಗುತ್ತಿಲ್ಲ. ಇದು ಬ್ಲಾಗ್ ಧರ್ಮವಲ್ಲ. ಆಯಾ ಬ್ಲಾಗಿನ ಜಮಾ ಖರ್ಚುಗಳನ್ನು, ಲೆಕ್ಕಗಳನ್ನು ಅಲ್ಲೇ ಚುಕ್ತಾ ಮಾಡಿಕೊಳ್ಳಬೇಕು. ಈ ದಿನ ಮಧ್ಯಾನ್ಹ ೧ ಗಂಟೆ ೫೬ ನಿಮಿಷದ ತನಕ ನನ್ನ ಪ್ರತಿಕ್ರಿಯೆಗಳನ್ನು ‘ವರ್ತಮಾನ’ದ ಬ್ಲಾಗ್ ನಿಂದ ಗುಡಿಸಿಹಾಕಿಲ್ಲ. ಓದುಗರ ಪ್ರತಿಕ್ರಿಯೆಗಳನ್ನು ಅಳಿಸಿ ಹಾಕುವ/ಗುಡಿಸಿ ಹಾಕುವ password ಇರುವುದು ಆಯಾ ಬ್ಲಾಗ್ ಗಳ ನಿರ್ವಾಹಕರ ಹತ್ತಿರ. ಸಲಾಂ ಬಾವಾ ಅವರ ಹತ್ತಿರವಲ್ಲ. ಗುಡಿಸಿ ಹಾಕುವುದು ಎಂದರೆ ತೀವ್ರವಾಗಿ ಪ್ರತಿಕ್ರಿಯಿಸುವುದು ಎಂದೂ ಅರ್ಥ ಇದೆ. ಅದು ನನಗೆ ಗೊತ್ತು. ಆದರೆ ಸಲಾಂ ಬಾವಾ ಅವರು ನನ್ನ ಎರಡನೇ ಪ್ರಶ್ನೆಗೆ ಉತ್ತರಿಸಲಿ. ಅಲ್ಲೇ ನಾನೂ ಉತ್ತರಿಸುತ್ತೇನೆ.

    ಉತ್ತರ
    • Nagshetty Shetkar's avatar
      Nagshetty Shetkar
      ಡಿಸೆ 6 2014

      “ಸ್ವತಃ ತಾವು ಮಹೇಶರ ಪ್ರಶ್ನೆಯನ್ನೂ ಉತ್ತರಿಸದೆ ತಾರ್ಕಿಕ,ಅತಾರ್ಕಿಕಾ ಎಂದು ಸಬೂಬು ಹೇಳುತ್ತಾ ಕಾಲ ತಳ್ಳುತ್ತಿದ್ದೀರಿ”

      -1

      ಉತ್ತರ
    • Nagshetty Shetkar's avatar
      Nagshetty Shetkar
      ಡಿಸೆ 6 2014

      ಶ್ರೀರಂಗ ಅವರೇ, ನಿಮ್ಮ ಬಗ್ಗೆ ನನಗೆ ವೈಯಕ್ತಿಕವಾಗಿ ಹಗೆತನವಿಲ್ಲ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ಕೊಟ್ಟ ಕಮೆಂಟನ್ನು ವರ್ತಮಾನದ ಸಂಪಾದಕರು ಪ್ರಕಟಿಸಿಲ್ಲ! ಸಲಾಂ ಬಾವ ಅವರ ಕಾಮೆಂಟುಗಳನ್ನು ಮಾಡರೇಟ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ವರ್ತಮಾನದ ಸೆಕ್ಯೂಲರ್ ಬದ್ಧತೆಯ ಸಂಪಾದಕರು ಬಹುಶಹ ನಮೋ ಸರಕಾರದ ಭೀತಿಯಿಂದ ಹೀಗೆ ಮಾಡುತ್ತಿದ್ದಾರೆ ಎಂದು ಅನುಮಾನ.

      ಉತ್ತರ
      • Shripad's avatar
        Shripad
        ಡಿಸೆ 6 2014

        ನಿಮ್ಮ ವರ್ತಮಾನದ ಸಂಪಾದಕ/ಮಾಡರೇಟರಿಗೆ ಯಾವುದರ ಭಯವಿದೆಯೋ ನೀವೇ ಹೇಳಬೇಕು. ಅಳ್ಳಕವಾದ ಎಡನಿಲುವಿನ ಲೇಖನವನ್ನು ಚಾಚೂ ತಪ್ಪದೇ ಪ್ರಕಟಿಸುವ ಶ್ರೀಯುತರು ಢೋಂಗಿ ಎಡ ನಿಲುವನ್ನು ಪ್ರಶ್ನಿಸುವ ಗಟ್ಟಿ ಬರಹವನ್ನು ಉದ್ದೇಶಪೂರ್ವಕವಾಗಿಯೇ ತಡೆಹಿಡಿಯುತ್ತಾರೆ. ನನ್ನ ಅನುಭವ ಇದು. ಆದರೆ ಅವರು ಹೇಳುವುದು ಮಾತ್ರ ನಿಷ್ಪಕ್ಷಪಾತ ಪಾರದರ್ಶಕ ನಿಲುವು ತಮ್ಮದು ಎಂದು! ನನ್ನ ಪ್ರಶ್ನೆಗಳಿಗೆ ಅವರಲ್ಲಿ ಇನ್ನೂ ಉತ್ತರ ಬಂದಿಲ್ಲ, ಅವರು ನೀಡುವ ಅಗತ್ಯವೂ ಇಲ್ಲ!!

        ಉತ್ತರ
        • Nagshetty Shetkar's avatar
          Nagshetty Shetkar
          ಡಿಸೆ 7 2014

          ಪಾಳೆಗಾರಿಕೆ ಹಿನ್ನೆಲೆಯ ರವಿ ಕೃಷ್ಣಾ ರೆಡ್ಡಿ ಅವರು ಲಂಕೇಶ್ ಪತ್ರಿಕೆಯಿಂದ ಪ್ರೇರಣೆ ಪಡೆದು ಸಾಕಷ್ಟು ಬದಲಾಗಿದ್ದಾರೆ, ಪಕ್ವವಾಗುತ್ತಿದ್ದಾರೆ. ವೃತ್ತಿಜೀವನದಲ್ಲೂ ಬಂಡವಾಳಶಾಹಿಗಳೊಂದಿಗೆ ವ್ಯವಾಹಾರಿಕ ಸಂಬಧ ಬೆಳೆಸಿ ಸಾಕಷ್ಟು ಧನ ಕನಕ ಸಂಪಾದಿಸಿರುವ ರೆಡ್ಡಿ ಅವರು ಐಟಿ ಬಿಟಿಯಿಂದ ಸಂತ್ರಸ್ತರಾದ ಬೆಂಗಳೂರಿನ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಹೆಣಗುತ್ತಿದ್ದಾರೆ. ಪ್ರಗತಿಪರರೊಡನೆ ಗುರುತಿಸಿಕೊಂಡು ಪ್ರಗತಿಪರರ ಅಭಿವ್ಯಕ್ತಿಗೆ ಕೊಡಲಿ ಹಾಕುವ ಕೆಲಸ ಮಾಡಿದರೆ ರೆಡ್ಡಿ ಅವರನ್ನು ಕನ್ನಡಿಗರು ಕ್ಷಮಿಸುವುದಿಲ್ಲ. ಇದನ್ನರಿತು ಅವರು ಇನ್ನಷ್ಟು ಪಕ್ವವಾಗತಕ್ಕದ್ದು.

          ಉತ್ತರ
        • naani's avatar
          naani
          ಡಿಸೆ 7 2014

          +1 Sripad

          ಉತ್ತರ
  7. ಶಾರೂ's avatar
    ಶಾರೂ
    ಡಿಸೆ 8 2014

    ಪ್ರತಿಕ್ರೀಯೆ.
    ಇರ್ಷಾದ್ ಉಪ್ಪಿನಂಗಡಿ ಎಂಬ ಲೇಖಕರು ವರ್ತಮಾನ ಬ್ಲಾಗಿನಲ್ಲಿ ಈ ಘಟನೆ ವಿವರಿಸುತ್ತಾರೆ.
    ಮುಸ್ಲಿಮ್ ಮಹಿಳೆಯಾಗಿ ತುಂಡುಡುಗೆ ಧರಿಸಿದ್ದು ತಪ್ಪು’ ಎಂಬ ಕಾರಣಕ್ಕಾಗಿ ಬಾಲಿವುಡ್ ನಟಿ ಹಾಗೂ ರೂಪದರ್ಶಿ ಗೌಹರ್ ಖಾನ್ ಮೇಲೆ ಮುಂಬೈನಲ್ಲಿ ನಡೆಯುತ್ತಿದ್ದ ರಿಯಾಲಿಟಿ ಕಾರ್ಯಕ್ರಮದ ವೇದಿಕೆಯಲ್ಲಿ ಮುಸ್ಲಿಮ್ ಪ್ರೇಕ್ಷಕನೊಬ್ಬ ಹಲ್ಲೆ ನಡೆಸಿ ಮತಾಂಧತೆಯನ್ನು ಮೆರೆದಿರುವ ಘಟನೆ ಮುಸ್ಲಿಮ್ ಸಮಾಜದಲ್ಲಿ ಬುರ್ಖಾ ತೊಡದ ಮಹಿಳೆಯರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ‘
    ಮೇಲಿನ ಮಾತುಗಳನ್ನು ಇರ್ಷಾದ್ ಹೇಳಿದ್ದಾರೆ. ಕೇವಲ ಬೇರೆ ಧರ್ಮೀಯರನ್ನು ಟೀಕಿಸುತ್ತಾ ಸ್ವಧರ್ಮದ ಹುಳುಕುಗಳನ್ನು ಕಂಡು ಕಾಣದಂತೆ ಕುಳಿತು ಕೊಳ್ಳುವವರೇ ಹೆಚ್ಚು ಜನ. ಅಂಥವರಲ್ಲಿ ಇರ್ಷಾದ್ ವಿಭಿನ್ನರಾಗಿ ನಿಲ್ಲುತ್ತಾರೆ. ಆದರೆ ಇಂಥ ಧ್ವನಿಗಳಿಗೆ ಬೆಂಬಲ ಬಹಳವಿಲ್ಲ. ಇಂಥ ಧ್ವನಿಗಳನ್ನು ಹತ್ತಿಕ್ಕುವವರೆ ಎಲ್ಲ.
    ಮೊದಲಿಗೆ ಹೇಳುತ್ತೇನೆ. ನಾನು ಗೌಹಾರ್ ಖಾನ್ ಅವಳ ಮೇಲೆ ಹಲ್ಲೆ ಮಾಡಿದ ಮತಾಂಧನನ್ನಾಗಲೀ ಅಥವಾ ಪಬ್ ಮೇಲೆ ದಾಳಿ ಮಾಡಿದ ಮತಾಂಧರನ್ನಾಗಲಿ ಕ್ಷಮಿಸುವದು ಖಂಡಿತ ಬೇಡ. ಅವರಿಗೆ ಖಂಡಿತ ಶಿಕ್ಷೆ ಆಗಲೇ ಬೇಕು. ಆದರೆ……………
    ಇದೇ ಸಂದರ್ಭದಲ್ಲಿ ಮಹಿಳೆಯರು ಎಂಥ ಉಡುಪುಗಳನ್ನು ಧರಿಸಬೇಕೆಂದು ನಾವೂ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾಗಿದೆ.
    ವೈಜ್ಞಾನಿಕವಾಗಿ ಹೇಳಬೇಕೆಂದರೆ ಸ್ತ್ರೀ ಮತ್ತು ಪುರುಷರ ಶರೀರದ ರಚನೆಗಳು ಅವರ ಮನಸ್ಥಿತಿ ಇವೆಲ್ಲ ಬೇರೆ ಬೇರೆ ಆಗಿವೆ. ಪುರುಷರು ಹೆಣ್ಣಿನ ಅಂಗಾಂಗಗಳನ್ನು ನೋಡಿದ ತಕ್ಷಣವೇ ಉದ್ರೇಕಗೊಳ್ಳುತ್ತಾರೆ. ಪ್ರಕೃತಿ ಹಾಗೆನೇ ಅವರನ್ನು ಸೃಷ್ಟಿಸಿದೆ. ಆದರೆ ಹೆಣ್ಣು ಹಾಗೆ ನೋಡಿದ ತಕ್ಷಣ ಉದ್ರೇಕಗೊಳ್ಳುವದಿಲ್ಲ. ಅವಳಿಗೆ ಉದ್ರೇಕಗೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ಅವಳ ಮನಸ್ಥಿತಿ ಹಾಗೇನೇ ಇರುತ್ತದೆ. ಅವಳ ಶರೀರ ರಚನೆ ಹಾಗೇನೇ ಪ್ರಕೃರ್ತಿ ಸೃಷ್ಟಿಸಿದೆ. ಪುರುಷರು ತಾಯಿಯನ್ನು , ತಂಗಿಯನ್ನು ಅಕ್ಕನನ್ನು ಮಗಳನ್ನು ಯಾರನ್ನು ನಗ್ನಾವಸ್ತೆಯಲ್ಲಿ ಅಥವಾ ಅರೆ ನಗ್ನಾವಸ್ತೆಯಲ್ಲಿ ನೋಡಿದರೂ ಬೇಗನೇ ಉದ್ರೇಕಗೊಳ್ಳುತ್ತಾರೆ.(ಸುಧಾ ಪತ್ರಿಕೆಯಲ್ಲಿ ಖ್ಯಾತ ಲೈಂಗಿಕ ತಜ್ಞರಾದ ಶ್ರೀ ವಿನೋದ್ ಛಬ್ಬಿ ಅವರು ‘ಸುಖೀ ಭವ’ ಎಂಬ ಅಂಕಣದಲ್ಲಿ ಈ ವಿಷಯ ಬರೆದಿದ್ದಾರೆ. ಇನ್ನೂ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ. ಬೇಕಿದ್ದರೆ ನೋಡಿಕೊಳ್ಳಬಹುದು.) ಆದರೂ ಅನೇಕರು ತಾವು ಬೆಳೆದ ಪರಿಸರ ಬಾಲ್ಯದಿಂದಲೂ ಬೆಳಸಿಕೊಂಡ ಪಾಪ ಪ್ರಜ್ಞೆ ಇಂಥವುಗಳಿಂದ ಪ್ರೇರೇಪಣೆ ಹೊಂದಿ ಕಂಡೂ ಕಾಣದಂತೆ ಅಥವಾ ಬೇರೊಂದು ರೀತಿಯಿಂದ ತಮ್ಮ ಉದ್ರೇಕ ಶಮನ ಮಾಡಿಕೊಳ್ಳುತ್ತಾರೆ ವಿನಃ ಅತಿರೇಕಕ್ಕೆ ಹೋಗುವದಿಲ್ಲ. ಇಂಥವರು 95% ಇದ್ದಾರೆ. ಇಲ್ಲದಿದ್ದರೆ ಹೆಣ್ಣು ಬಾಳುವದೇ ಕಠಿಣವಿತ್ತು. ಆದರೆ ಶೇಕಡಾ 5% ಜನರು ಕುಡಿದ ಅಮಲಿನಲ್ಲಿ ಅಥವಾ ವಿವೇಕ ಶೂನ್ಯರಾಗಿ ವರ್ತಿಸುತ್ತಾರೆ. ಅಂಥವರ ಕಣ್ಣಿಗೆ ಅರೆ ಬರೆ ಉಡುಪು ಧರಿಸಿದ ಹೆಣ್ಣು ಕಣ್ಣಿಗೆ ಬಿದ್ದರೆ ಮಂಗನ ಬುದ್ಧಿ ಕೆರಳುತ್ತದೆ.
    ಇನ್ನು ಹೆಣ್ಣು ಕುಡಿದು ಉನ್ಮತ್ತಳಾಗಿ ಅಸ್ತವ್ಯಸ್ತಳಾಗಿ ರಸ್ತೆಯಲ್ಲಿ ಬಿದ್ದರೆ ಆಕೆಯನ್ನು ನೋಡಿದ ಪುರುಷರ ಮನೋಸ್ಥಿತಿ ಯಾವ ರೀತಿ ಇರುತ್ತದೆ? ಎಲ್ಲರೂ ಹಾಗಿರುವದಿಲ್ಲ. ಒಪ್ಪೋಣ, ಆದರೆ ಕೆಲ ಕಾಮುಕರ ಕಣ್ಣಿಗೆ ಆಕೆ ಬಿದ್ದರೆ ಆಕೆಯ ಮೇಲೆ ದೈಹಿಕ, ಮಾನಸಿಕ ಹಲ್ಲೆ ಆಗದೇ ಇದ್ದೀತೆ? ಆಕೆಗೆ ಆ ದೈಹಿಕ ಅದರಲ್ಲೂ ವಿಶೇಷವಾಗಿ ಮಾನಸಿಕ ಆಘಾತ ತಡೆಯುವ ಶಕ್ತಿ ಇದೆಯೇ? ಮುಂದಿನ ಪರಿಣಾಮವಾದ ಗರ್ಭಧಾರಣೆ; ಅದನ್ನೂ ಹೆಣ್ಣೇ ಅನುಭವಿಸಬೇಕಲ್ಲವೇ? ಬೇಡದ ಈ ಪಿಂಡವನ್ನು ಹೊಸಕಿ ಹಾಕುವಾಗ ತೊಂದರೆ ಅನುಭವಿಸುವವಳು ಹೆಣ್ಣೇ ಅಲ್ಲವೆ? ಅವಳು ಪುರುಷನಷ್ಟು ದೈಹಿಕವಾಗಿ ಬಲಶಾಲಿ ಅಲ್ಲದ ಕಾರಣ ಕೆರಳಿದ ಇಬ್ಬರು ಮೂವರು ಹುಡುಗರು ಏಕಕಾಲಕ್ಕೆ ಆಕ್ರಮಿಸಿದಾಗ ಸೋಲಲೇ ಬೇಕಾಗುತ್ತದೆ. ಅದರೆ ಅದೇ ಒಬ್ಬ ಗಂಡು ಕುಡಿದು ಪೂರ್ಣ ನಗ್ನಾವಸ್ಥೆಯಲ್ಲೇ ಬೀದಿಯೊಂದರಲ್ಲಿ ಬಿದ್ದಿದ್ದಾನೆ ಎಂದುಕೊಳ್ಳಿ ಆಗ ಹೆಣ್ಣುಮಕ್ಕಳು ಉದ್ರೇಕಗೊಂಡು ಅವನನ್ನು ಘಾಸಿಸುತ್ತಾರೆಯೇ? ಎಷ್ಟೇ ಆಧುನಿಕ ಮನೋಭಾವದ ಹುಡುಗಿಯರಿದ್ದರೂ ಹುಡುಗರಂತೆ ವರ್ತಿಸುತ್ತಾರೆಯೇ? ಖಂಡಿತ ಇಲ್ಲ. ಯಾಕೆಂದರೆ ಹುಡುಗಿಯ ಶರೀರದ ಹಾರ್ಮೋನ್ಸ್ ಬೇಗನೇ ಕೆರಳಿಸಿಬಿಡುವದಿಲ್ಲ. ಆಕೆ ಬೆಳೆದ ವಾತಾವರಣ ಬಾಲ್ಯದಿಂದ ಲಜ್ಜೆ , ನಾಚಿಕೆ ಇತ್ಯಾದಿಗಳನ್ನು ರೂಢಿ ಮಾಡಿಸಿದ ಹುಡುಗಿ ತಾನೇ ಅಸಹ್ಹಿಸಿಕೊಳ್ಳುತ್ತಾಳೆ ವಿನಃ ಆ ಪುರುಷನಿಗೆ ಯಾವ ತೊಂದರೆ ಆಗುವದಿಲ್ಲ.
    ಒಟ್ಟಾರೆಯಾಗಿ ನನ್ನ ಅಭಿಪ್ರಾಯವೆಂದರೆ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರಕ್ಕೆ ಬಳಸಿದರೆ ನರಳುವವರು ನೀವೇ. ಮೃದು ಮನದ , ದೇಹದ ಹುಡುಗಿಯರೇ. ಗಂಡು ಕುಡಿತಾನೆ. ನಾನು ಗಂಡಿನ ಸಮನಾಗಬೇಕು. ನಾನು ಕುಡಿದರೇನು ತಪ್ಪು? ನಾನು ನನ್ನಿಷ್ಟ ಬಂದ ಉಡುಪು ಧರಿಸಿದರೇನು ತಪ್ಪು? ಇವು ಇಂದಿನ ಹುಡುಗಿಯರ ಆಲೋಚನೆಗಳಾಗಿವೆ. ನನ್ನಂಥ ವಿಚಾರವಿರುವವರನ್ನು ಅಡಗೂಲಜ್ಜಿ ಜಮಾನದವಳೆಂದೂ , ಬದಲಾವಣೆಗೆ ಹೊಂದಿಕೊಳ್ಳದ ಹೆಣ್ಣೆಂದೂ ಜರೆಯುತ್ತೀರಿ. ಆದರೆ ಒಮ್ಮೆ ಪ್ರಾಂಜಲ ಮನದಿಂದ ಯೋಚಿಸಿದರೆ ಅರ್ಥವಾದೀತು. ತಲೆ ಘಟ್ಟಿಯಾಗಿದೆಯೆಂದು ಗೋಡೆಗೆ ಹೊಡೆದುಕೊಳ್ಳುವದು ಜಾಣತನವಲ್ಲ. ಅನಾಹುತಗಳು ನಡೆದ ನಂತರ ಓ ಹೀಗಾಗಬೇಕು. ಗಲ್ಲಿಗೇರಿಸಬೇಕು. ಇತ್ಯಾದಿ ಕೂಗಾಡುವದಕ್ಕಿಂತ ಮೊದಲೇ ಹೆಣ್ಣು ಹುಡುಗಿಯರೇ ಎಚ್ಚರಗೊಳ್ಳಿರಿ.
    ಕೆಲವು ವಿಷಯಗಳಲ್ಲಿ ಸಮಾನತೆ ಸಾಧಿಸುವ ಹುಚ್ಚಾಟ ಬೇಡ. ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು. ಹಾಗಂತ ಧರ್ಮದ ಹೆಸರೇಳಿಕೊಂಡು ಹೆಣ್ಣು ಮಕ್ಕಳ ಮೇಲೆ ದಬಾನಿಕೆ ಮಾಡುವವರನ್ನು ನಾನು ಕ್ಷಮಿಸಲ್ಲ. ಖಂಡಿತ ಅವರಿಗೆ ಶಿಕ್ಷೆ ಆಗಲೇಬೇಕು.
    ಹೆಣ್ಣು ಮಕ್ಕಳಿಗೆ ಅವಳ ತಾಯಂದಿರು ತಂದೆ ತಿಳಿಸಿ ಹೇಳಬೇಕೆ ವಿನಃ ಇನ್ನೊಬ್ಬರ ದಬಾನಿಕೆ ಬೇಡ. ಹೆಣ್ಣು ಮಕ್ಕಳೇ ಪುರುಷರಂತೆ ವಿಜ್ಞಾನಿ ಆಗಿ. ಡಾಕ್ಟರ್ ಆಗಿ , ಸಮಾಜ ಸುಧಾರಕರಾಗಿ. ಸಮಾನತೆ ಸಾಧಿಸಿ ತೊರಿಸಿ. ವಿನಹಾ ಕುಡಿಯುವಲ್ಲಿ, ಸಿಗರೇಟು, ಮಾದಕ ವಸ್ತು ಸೇವನೆ, ಅರೆ ನಗ್ನ ಉಡುಪಿನಲ್ಲಿ ಖಂಡಿತ ಸಮಾನತೆ ಬೇಡ. ದಯವಿಟ್ಟು ಅರ್ಥ ಮಾಡಿಕೊಂಡು ಹೂವಿನಂಥ ನಿಮ್ಮ ಶರೀರವನ್ನು ಹೊಸಕಿಹಾಕುವ ಹುನ್ನಾರ ಮಾಡುತ್ತಿರುವ ಕಾಮುಕ ರಾಕ್ಷಸರಿಗೆ ನಿಮ್ಮ ಕೋಮಲ ಶರೀರ ಅರ್ಪಿಸಬೇಡಿರಿ. ಆ ಹೂ. ದೇವ ದೇವನ ಅಡಿದಾವರೆ ಸೇರಲಿ ಧನ್ಯವಾಗಲಿ.
    ಒಂದು ಸೂಚನೆ:- ಶ್ರೀ ಶ್ರೀರಂಗರು ಆ ಬ್ಲಾಗಿನ ವಿಷಯ ಅಲ್ಲೇ ಚುಕ್ತಾ ಮಾಡಬೇಕು. ಇಲ್ಲಿ ಏಕೆ ಚರ್ಚೆ ಎಂದು ಹೇಳಿದ್ದಾರೆ. ಆದರೆ ಅಲ್ಲಿ ನಾನು ಬರೆದಿದ್ದನ್ನು ಪ್ರಕಟಿಸುವದೇ ಇಲ್ಲ. ಕಾರಣ ಓದುಗರಿಗೆ ನನ್ನ ಅಭಿಪ್ರಾಯ ತಿಳಿಸಲು ಹೀಗೆ ಮಾಡಲೇಬೇಕಾಗಿದೆ. ಅನಿವಾರ್ಯ.

    ಉತ್ತರ
  8. M A Sriranga's avatar
    M A Sriranga
    ಡಿಸೆ 8 2014

    ಶಾರೂ ಅವರಿಗೆ—-ತಮ್ಮ ಈ ಪ್ರತಿಕ್ರಿಯೆಯ ಪ್ರತಿ ಪದ,ವಾಕ್ಯಗಳೂ ‘ವರ್ತಮಾನ’ ಬ್ಲಾಗ್ ನಲ್ಲಿ’ ಶಾರದಾ ಹಳ್ಳಿ’ ಎಂಬ ಹೆಸರಿನಲ್ಲಿ ೮-೧೨-೧೪ರಂದು ಮಧ್ಯಾನ್ಹ ೨ ಗಂಟೆಯಲ್ಲಿ ಪ್ರಕಟವಾಗಿದೆ. ನನ್ನನ್ನು ಉದ್ದೇಶಿಸಿ ಬರೆದ ಮೂರ್ನಾಲಕ್ಕು ಸಾಲುಗಳು ಅಲ್ಲಿಲ್ಲ ಅಷ್ಟೇ. ನಾನು ‘ವರ್ತಮಾನ’ದಲ್ಲಿ ಪ್ರಕಟವಾದ ನಿಮ್ಮ ಪ್ರತಿಕ್ರಿಯೆಗೆ ಅಲ್ಲೇ ಉತ್ತರಿಸುತ್ತೇನೆ. ಒಂದು ಬ್ಲಾಗಿನ ಲೇಖನದ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಬ್ಲಾಗಿನಲ್ಲಿ ಚರ್ಚೆ ಮಾಡುವುದು ಸರಿಯಲ್ಲ ಎಂಬ ನನ್ನ ನಿಲುವಿಗೆ ನಾನು ಈಗಲೂ ಬದ್ಧನಾಗಿದ್ದೇನೆ.

    ಉತ್ತರ
  9. ಶಾರೂ's avatar
    ಶಾರೂ
    ಡಿಸೆ 8 2014

    ಆಯ್ತು ಸರ್. ಆದರೆ ಆ ಬ್ಲಾಗಿನವರು ಕೆಲವು ಸಲ ನಮ್ಮ ಕಮೆಂಟುಗಳನ್ನು ಪ್ರಕಟಿಸುವದೇ ಇಲ್ಲ. ಅದಕ್ಕೆ ಇಲ್ಲಿ ಹಾಕಿದ್ದೆ. ಒಟ್ಟಾರೆ ನನ್ನ ಅಭಿಪ್ರಾಯವನ್ನು ಓದುಗರಿಗೆ ಸಮಾಜಕ್ಕೆ ತಿಳಿಸುವದು ನನ್ನ ಉದ್ದೇಶವಾಗಿತ್ತು.

    ಉತ್ತರ
  10. Laxman's avatar
    Laxman
    ಫೆಬ್ರ 28 2018

    I’m voting for Modi je

    ಉತ್ತರ
  11. ಭರತ's avatar
    ಭರತ
    ಮಾರ್ಚ್ 7 2018

    this is 4 yr old article, but still now it’s relevant with State BJP

    ಉತ್ತರ

Leave a reply to ಭರತ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments