ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 23, 2014

31

ಜಾತ್ಯತೀತರಿಗೆ ಈವರೆಗಿನ ಮತಾಂತರವೇಕೆ ಕಾಣಲಿಲ್ಲ?

‍ನಿಲುಮೆ ಮೂಲಕ

ಡ್ಯಾನಿ ಪಿರೇರಾ

images
ಭಾರತದ ರಾಷ್ಟ್ರೀಯ ಜೀವನದಲ್ಲಿ ಅತಿ ದೀರ್ಘಕಾಲದಿಂದ ಘಾಸಿಗೊಳಿಸುತ್ತಿರುವ ಸಮಸ್ಯೆಗಳಲ್ಲಿ ಮತಾಂತರವೂ ಒಂದು. ಸೆಮೆಟಿಕ್ ಮೂಲವೆಂದು ಹೇಳಲಾಗುವ ಇಸ್ಲಾಂ ಮತ್ತು ಕ್ರೈಸ್ತ ಮತಗಳಲ್ಲಿ ನಡೆಯುತ್ತಿರುವ ಮತಾಂತರದ ಚಟುವಟಿಕೆಗಳು ನೂರಾರು ವರ್ಷಗಳಿಂದ ಈ ಸಮಸ್ಯೆ ಭಾರತವನ್ನು ಕಾಡುತ್ತಲೇ ಬಂದಿದೆ. ಇದಕ್ಕೆ ಬಲಿಯಾದವರ ಸಂಖ್ಯೆ ಭಾರಿಯೇ ಎನ್ನಬಹುದು. ಉತ್ತರ ಪ್ರದೇಶದಲ್ಲಿ 200 ಜನ 30 ವರ್ಷಗಳ ಹಿಂದೆ ಇಸ್ಲಾಮಿಗೆ ಮತಾಂತರಗೊಂಡು ನಂತರ ಹಿಂದೂ ಸಂಘಟನೆಗಳ ಪ್ರಯತ್ನದ ತರುವಾಯ ಮರಳಿ ಮಾತೃ ಧರ್ಮಕ್ಕೆ ಬಂದರೆ ದೇಶದ ಸೆಕ್ಯುಲರ್ ವಲಯಗಳಲ್ಲಿ ಚರ್ಚೆಯಾಗುತ್ತದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅಸ್ತಿತ್ವಕ್ಕೆ ಹೋರಾಡ ಬೇಕಾದ ಅನಿವಾರ್ಯತೆ ಉಂಟಾಗಿರುವ ರಾಜಕೀಯ ನಾಯಕರಿಗೆ ಮುಸ್ಲಿಮರು ಹಿಂದೂ ಧರ್ಮಕ್ಕೆ ಬಂದಿರುವುದು ಇವರ ಹೊಟ್ಟೆ ತೊಳೆಸಿಕೊಳ್ಳಲು ಶುರುವಾಗಿರುವ ಸಂಗತಿ ಗೋಚರವಾಗುತ್ತಿದೆ. ಹಾಗಾಗಿ ಕೇವಲ ಇನ್ನೂರು ಜನ ಮುಸ್ಲಿಮರು ಹಿಂದು ಧರ್ಮಕ್ಕೆ ಮತಾಂತರಗೊಳಿಸಿರುವುದರಿಂದ ಧಾರ್ಮಿಕ ಸಾಮರಸ್ಯ ಹಾಳಾಗುತ್ತದೆ ಎಂದು ಅರಚಲು ಶುರು ಮಾಡಿದ್ದಾರೆ. ಇಲ್ಲಿ ಒಂದು ವಿಷಯ ಹೇಳಲೇಬೇಕು. ಅದೆಂದರೆ ಇವರು ಯಾವ ಸಾಮರಸ್ಯದ ಬಗ್ಗೆ ಮಾತಾಡುತ್ತಿದ್ದಾರೆ ಎಂಬುದು!

ಹಾಗೆ ಹೇಳುವುದಾದರೆ ಮತಾಂತರ ಪ್ರಕ್ರಿಯೆಯೇ ಆತ್ಮಘಾತುಕತನದ್ದು. ‘ಮತಾಂತರ’ ಎನ್ನುವ ಶಬ್ದವೇ ಒಂದು ಧರ್ಮ ಮತ್ತೊಂದು ಧರ್ಮವನ್ನು ಕೆಣಕುವ ಅಥವಾ ಸಾಮರಸ್ಯದ ಬುಡಕ್ಕೆ ಬೀಳುವ ಕೊಡಲಿ ಪಟ್ಟು. ಒಬ್ಬ ವ್ಯಕ್ತಿ ತಾನು ಯಾವ ಧರ್ಮವನ್ನು ಆಚರಿಸಬೇಕು ಆಥವಾ ಬಿಡಬೇಕು ಎನ್ನು ತೀರ್ಮಾನ ಆತನದ್ದೇ. ಆ ಹಕ್ಕನ್ನು ನಮ್ಮ ದೇಶದ ಸಂವಿಧಾನ ಕೊಟ್ಟಿದೆ ನಿಜ. ಆದರೆ ಮತಾಂತರಿಸುವ ಸಮಾಜ ಅದು ಕ್ರೈಸ್ತ, ಮುಸ್ಲಿಂ ಅಥವಾ ಹಿಂದೂಗಳಾಗಲಿ, ಅವರವರ ಮತಗ್ರಂಥಗಳನ್ನು ಕೊಟ್ಟು ಇದನ್ನು ಓದು ಇದರಿಂದ ನಿನ್ನ ಮನಪರಿವರ್ತನೆಯಾದರೆ ನನ್ನ ಮತಕ್ಕೆ ಬಾ ಎಂದು ಹೇಳುವುದಿಲ್ಲ. ಹಾಗೆ ಮಾಡಿದ್ದರೆ ಖಂಡಿತ ಯಾರೂ ಆಕ್ಷೇಪಿಸುವುದಿಲ್ಲ. ಆದರೆ ಈ ಮತಾಂತರ ಪ್ರಕ್ರಿಯೆಯಲ್ಲಿ ಒಟ್ಟಾರೆ ಒಂದು ಧರ್ಮದ ನಂಬಿಕೆಗಳನ್ನು ಹೀಯಾಳಿಸಿ ತನ್ನ ಮತ ಶ್ರೇಷ್ಠ ಎನ್ನುವ ಭ್ರಮೆಯೊಂದಿಗೆ ಅಸಹಿಷ್ಣುತೆ ಬೆಳೆಸಲಾಗುತ್ತದೆ, ಜೊತೆಗೆ ಆಸೆ-ಆಮಿಷಗಳು! ಉತ್ತರ ಪ್ರದೇಶದಲ್ಲಿ ಮುಸ್ಲಿಂ ಕಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದನ್ನು ರಾಷ್ಟ್ರವ್ಯಾಪಿ ಚರ್ಚೆ ಮಾಡುವ ಸೆಕ್ಯುಲರ್ ನಾಯಕರು ಇದೇ ಮತಾಂತರಕ್ಕೆ ಲೆಕ್ಕವಿಲ್ಲದಷ್ಟು ಹಣ ಸುರಿಯುತ್ತಿರುವ ಕ್ರೈಸ್ತ ಮಿಶನರಿಗಳ ಮತ್ತು ಜಿಹಾದ್ ಹೆಸರಿನಲ್ಲಿ ನಡೆಯುವ ಮತಾಂತರದ ಬಗ್ಗೆ ಏಕೆ ಚಕಾರವೆತ್ತುವುದಿಲ್ಲ?! ಇದೇ ಮುಖವಾಡದ ಸೆಕ್ಯುಲರಿಷ್ಟರು ಹಿಂದೂ ಧರ್ಮೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಿರುವುದನ್ನೇಕೆ ಪ್ರಶ್ನಿಸುತ್ತಿಲ್ಲ! ಇಷ್ಟಕ್ಕೂ ಈ ಮಿಶನರಿಗಳು ಮಾಡುತ್ತಿರುವುದು ಧರ್ಮ ಬೋಧನೆಯಲ್ಲ! ತಮ್ಮ ಮತದ ಜನಸಂಖ್ಯೆ ಹೆಚ್ಚಳವಷ್ಟೇ. 2011ರ ಒಂದು ವರದಿಯ ಪ್ರಕಾರ ಪ್ರತಿವರ್ಷ ಹಿಂದುಗಳನ್ನು ಮತಾಂತರಿಸಲು 10,500ಕೋಟಿ ರೂ. ಹಣ ಅಮೆರಿಕಾ, ಜರ್ಮನಿ, ಯುಕೆ, ನೆದರಲ್ಯಾಂಡ್,ಸ್ಪೇನ್ ಇಟಲಿ ಮುಂತಾದ ಕಡೆಗಳಿಂದ ಹಣ ಸರಬರಾಜಗುತ್ತದೆ ಎಂದು ಹೇಳಲಾಗುತ್ತದೆ. ಸರ್ಕಾರವೇ ಹೇಳುವ ವರದಿಯಂತೆ ಕೆಲವು ಎನ್ ಜಿ ಒ ಗಳಿಗೆ ಕ್ರೈಸ್ತ ಮಿಶನರಿಗಳೇ ಅವರ ಖಾತೆಗೆ ಹಣ ಜಮೇಮಾಡಿವೆಯಂತೆ. ವರದಿಯಂತೆ ಮತಾಂತರಿಯು ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಗಳಿಗೆ ಹೇಳಿದ್ದೇನೆಂದರೆ ಹಿಂದಿನ ಸರ್ಕಾರಗಳು ಅನುಸರಿಸಿದ ಕುರುಡು ನೀತಿಯು ಇದನ್ನೆಲ್ಲ ಮುಚ್ಚಿ ಹಾಕಿವೆ. ಇಲ್ಲಿ ರಾಜಕಾರಣಿಗಳ ಬಾಯಿ ಮುಚ್ಚಿಕೊಂಡಿರುವಂತೆ ಅವರ ಬಾಯಿಗೆ ಹಣ ಹಾಕಲಾಗುತ್ತದೆಯಂತೆ. ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧವಾಗಿರುವುದರಂದ ಬಾಯಿ ಮುಚ್ಚಿಕೊಂಡಿರಲು ಭಾರಿ ಮೊತ್ತವನ್ನು ವ್ಯಯಮಾಡಲಾಗುತ್ತದೆಯಂತೆ. ಆ ಐ.ಬಿ.ಅಧಿಕಾರಿ ಹೇಳುವಂತೆ- ‘ಸಾವಿರದಲ್ಲೊಬ್ಬ ಈ ಆಮಿಷದ ಮತಾಂತರದ ಬಗ್ಗೆ ದೂರು ನೀಡಲು ಬರುತ್ತಾನೆ. ಈ ಮಿಶನರಿಗಳು ಭಾರಿ ಹಣ ಬಳಸಿ ಅವರ ಬಾಯಿ ಮುಚ್ಚಿಸುತ್ತವೆ’ ಎಂದು. ಹಾಗಾದರೆ ಇದರಿಂದ ಸಮರಸ್ಯಕ್ಕೆ ಧಕ್ಕೆ ಬರುವುದಿಲ್ಲವೇ? ಇದೊಂದು ಜಾತ್ಯತೀತರ ಇಬ್ಬಗೆ ನೀತಿ ಎನ್ನುವುದು ಒಂದಷ್ಟು ವಿವೇಚನೆ ಇರುವಂತರಗೆ ಖಂಡಿತ ಅರ್ಥವಾಗುತ್ತದೆ ಎನ್ನುವಾಗ ಈ ಆಕ್ಷೇಪದ ಹಿಂದೆ ಒಂದಷ್ಟು ಹೊಲಸು ರಾಜಕಾರಣದ ವಾಸನೆಯಿದೆ ಎಂದೆನಿಸದಿರದು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ಕ್ರಮ ತೆಗೆದು ಕೊಳ್ಳಬೇಕು ಎನ್ನುವ ಈ ಪಕ್ಷಪಾತಿ ಸಂಸದರಿಗೆ ಇಲ್ಲಿ ಮತಾಂತರಕ್ಕೆ ಬಳಸುವ ವಿದೇಶಿ ದೇಣಿಗೆ ಎಷ್ಟು ಎನ್ನುವ ಲೆಕ್ಕವಿದೆಯೇ? ಈ ದೇಶಕ್ಕೆ ಇಸ್ಲಾಂ ನಂತರ ಕ್ರೈಸ್ತರ ಆಕ್ರಮಣ ಅವ್ಯಹತವಾಗಿ ನಡೆದು ಇಂದಿಗೂ ನಿರಂತರವಾಗಿ ನಡೆಯುತ್ತಿರುವ ಮತಾಂತರಗಳ ಬಗ್ಗೆ ಇವರೇಕೆ ಚಕಾರವೆತ್ತುತ್ತಿಲ್ಲ! ಸಾಮರಸ್ಯದ ಪಾಠ ಹಿಂದುಗಳಿಗೆ ಮಾತ್ರವೆ? ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನದಲ್ಲಿರುವ ಕಾಂಗ್ರೆಸ್, ಬಹುಜನ ಸಮಾಜವಾದಿ, ಕಮ್ಯುನಿಷ್ಟ್ ನಾಯಕರಿಗೆ ಹಿಂದುಗಳನ್ನು ಮತಾಂತರಿಸುವ ಹುನ್ನಾರವೇಕೆ ಗೋಚರಿಸುವುದಿಲ್ಲ? ಪ್ರಸ್ತುತ ರಾಷ್ಟ್ರೀಯ ಸ್ವಯಂಸೇವಕ ಸಂಘ ಜಗತ್ತಿನ 25ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ಅದರಲ್ಲೂ ಬಹುತೇಕ ಬಹುಸಂಖ್ಯಾತ ಕ್ರೈಸ್ತ ರಾಷ್ಟ್ರಗಳಲ್ಲಿ ಎನ್ನುವುದು ಗಮನಿಸಬೇಕಾದ ಅಂಶ. ಆದರೆ ಅದೆಂದೂ ಅಲ್ಲಿನ ಬಹುಸಂಖ್ಯಾತ ಕ್ರೈಸ್ತ ಜನಾಂಗದ ಧಾರ್ಮಿಕ ನಂಬಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಅಲ್ಲಿನ ಹಿಂದುಗಳನ್ನು ಸಂಘಟಿಸುತ್ತ ಅವರಲ್ಲೂ ಈ ದೇಶದ ಪರಂಪರೆ- ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ. ಒಂದೇ ಒಂದು ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳ ಬಗ್ಗೆ ಅಲ್ಲಿ ವಿರೋಧವಿಲ್ಲ! ಏಕೆಂದರೆ ಅಲ್ಲಿನ ಮೂಲ ನಂಬಿಕೆಗಳನ್ನು ತಿರಸ್ಕರಿಸುವುದಾಗಲಿ, ಅವರ ಧಾರ್ಮಿಕ ನಂಬಿಕೆಗಳನ್ನು ಅಲ್ಲಗಳೆದು ಸಂಘ ಅವರನ್ನು ಮತಾಂತರಿಸುವ ಕೆಲಸ ಮಾಡುವುದಿಲ್ಲ. ಅದೇ ಆ ಐರೋಪ್ಯ ಮತ್ತು ಮುಸ್ಲಿಂ ರಾಷ್ಟ್ರಗಳು ತಮ್ಮದಲ್ಲದ ನಂಬಿಕೆಗಳಿರುವ ದೇಶದಲ್ಲಿ ಅದೆಷ್ಟು ಸಾಮರಸ್ಯದಿಂದ ಇವೆ ಅಲ್ಲಿನ ಆಚರಣೆಗಳಿಗೆ ಎಷ್ಟು ಮಾನ್ಯತೆ ನೀಡುತ್ತಿವೆ ಎನ್ನುವುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ! ಈ ಜಾತ್ಯತೀತರ ರಕ್ಷಣೆ ಪಡೆದ ಮತಾಂತರಿಗಳು ಭಾರತ ಧಾರ್ಮಿಕ ಸ್ವಾತಂತ್ರ್ಯದ ಸಂವಿಧಾನದ ಆಶಯವನ್ನು ದುರುಪಯೋಗ ಮಾಡಿಕೊಂಡು ಸ್ವಾತಂತ್ರ್ಯ ಪೂರ್ವಕ್ಕಿಂತ ಸ್ವಾತ್ರ್ಯೋತ್ತರ ಭಾತರದಲ್ಲಿ ಇಲ್ಲಿನ ಮತಸಾಮರಸ್ಯದ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಇದಕ್ಕೆಲ್ಲ ಮೂಲ ಕಾರಣವೇ ನಮ್ಮ ಸಂವಿಧಾನದ ಮೂಲ ಆಶಯದ ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ನಡೆಯುವ ಭಾರತದ ರಾಜಕಾರಣದ ಜಾತ್ಯತೀತತೆಯ ತಪ್ಪು ವ್ಯಾಖ್ಯಾನ.

ಈ ಹಿನ್ನೆಲೆಯಲ್ಲಿ ನಾವು ಈವರೆಗೆ ಸಾಮರಸ್ಯಕ್ಕೆ ಅಷ್ಟೇ ಅಲ್ಲ ಭಾರತದ ಅಸ್ಮಿತೆಗೆ ಸವಾಲಾಗಿರುವ ಮತಾಂತರದ ಘೋರ ಪರಿಚಯವನ್ನು ಒಂದಷ್ಟು ಮಾಡಿಕೊಳ್ಳಲೇಬೇಕು. ನೋಡಿ, ಭಾತರದ ಇತಿಹಾಸದುದ್ದಕ್ಕೂ ಬರೀ ಹಿಂದುಗಳೇ ಮತಾಂತರಕ್ಕೆ ಒಳಗಾಗಿದ್ದಾರೆ. ಮತಾಂತರಿಗಳಾಗಿದ್ದವರು ಧರ್ಮದ್ರೋಹಿಗಳಷ್ಟೇ ಅಲ್ಲ, ರಾಷ್ಟ್ರದ್ರೋಹಿಗಳೂ ಅಗಿದ್ದಾರೆ. ಭಾರತದ ಭಾಗವೇ ಆಗಿರುವ ಕಾಶ್ಮೀರದಲ್ಲಿ ಇಂದು ಹಿಂದುಗಳು ಅಲ್ಪಸಂಖ್ಯಾತರು. ಒಂದು ಕಾಲಕ್ಕೆ ಅವರು ಬಹು ಸಂಖ್ಯಾತರಾಗಿದ್ದವರು. ದಂಗು ಬಡಿಸುವ ಕಾಶ್ಮೀರದ ಘಟನೆ ಇತಿಹಾಸ ನಮಗೆ ಕಲಿಸಿಕೊಡಬೇಕಾದ ಪಾಠ. ಆದರೆ ನಾವು ಪಾಠ ಕಲಿಯುತ್ತಿಲ್ಲ. ಅದನ್ನು ನಮ್ಮ ಸೆಕ್ಯುಲರ್ ಮನಸ್ಥಿತಿ ಮತ್ತು ಓಟ್ ಬ್ಯಾಂಕ್ ರಾಜಕಾರಣ ಕಂಬಳಿ ಹೊದಿಸಿ ಮಲಗಿಸಿ ಬಿಟ್ಟಿದೆ. ಔರಂಗಜೇಬನ ಕಾಲದಲ್ಲಿ ಕಾಶ್ಮೀರಿ ಹಿಂದುಗಳು ಆತನ ಮತಾಂತರದ ಕರಾಳ ಶಾಸನಕ್ಕೆ ಹೆದರಿ ಮುಸಲ್ಮಾನರಾದರು. ಈ ಮತಾಂಧನ ಅವನತಿಯ ನಂತರ ಅಲ್ಲಿನ ಹಿಂದುಗಳು ಮರಳಿ ಮಾತೃ ಧರ್ಮಕ್ಕೆ ಬರುವ ಇಚ್ಛೆಯನ್ನು ಅಲ್ಲಿನ ಕಾಶ್ಮೀರಿ ರಾಜನಲ್ಲಿ ವ್ಯಕ್ತಪಡಿಸಿದರು. ಮರಳಿ ಮಾತೃ ಧರ್ಮಕ್ಕೆ ಬರುವ ಅವರ ಬೇಡಿಕೆ ಅಲ್ಲಿನ ರಾಜನಿಗೆ ಸರಿಯೆಂದೇ ತೋರಿತು. ಕಾಶ್ಮೀರದ ಪವಿತ್ರ ನದಿ ದಡವೊಂದರಲ್ಲಿ ಅತನು ಶುದ್ಧಿ ಕಾರ್ಯ ಏರ್ಪಡಿಸಿ ಮರಳಿ ಮಾತೃ ಧರ್ಮಕ್ಕೆ ಕರೆತರುವ ಪ್ರಯತ್ನ ಮಾಡಿದ. ಆದರೆ ಈ ಕಾರ್ಯಕ್ರಮ ನಡೆಯಲಿಲ್ಲ. ಏಕೆಂದರೆ ಧರ್ಮ ಪಂಡಿತರೆಂದು ಹೇಳಿಕೊಳ್ಳುವ ಕೆಲ ಪಂಡಿತರು ಹರಿಯುವ ನದಿಯಲ್ಲಿ ನಿಂತು ರಾಜನಿಗೆ -ನೀನು ಮಾಡುತ್ತಿರುವ ಕೆಲಸ ಧರ್ಮಕ್ಕೆ ವಿರುದ್ಧವಾದದ್ದು, ನೀನು ಮುಂದುವರೆಸಿದರೆ ನಾವು ನದಿಯಲ್ಲಿ ಮುಳುಗಿ ಸಾಯುತ್ತೇವೆ. ನೀನು ಬ್ರಹ್ಮಹತ್ಯಾದೋಷಕ್ಕೆ ಒಳಗಾಗಿ, ನರಕಕ್ಕೆ ಹೋಗುವೆ ಎಂದು ಬೆದರಿಸಿದರು. ಕೈಗೊಂಡ ಶುದ್ಧಿ ಕಾರ್ಯ ಅಲ್ಲಿಗೆ ನಿಂತಿತು. ಇಂದು ಕಾಶ್ಮೀರದಲ್ಲಿ ಮುಸ್ಲೀಮರದ್ದೇ ಬಾಹುಳ್ಯ. ಹಾಗಾಗಿ ಕಾಶ್ಮೀರ ನಮಗೆ ಸಮಸ್ಯೆ. ಇಷ್ಟೇ ಅಲ್ಲ ಬಂಗಾಳದ್ದು ಕೂಡ ಇದೇ ಸ್ಥಿತಿ. ಕಾಳಾಪಹಾಡ್ ಎನ್ನುವ ಬ್ರಾಹ್ಮಣ ಅಲ್ಲಿನ ನವಾಬನ ಆಸ್ಥಾನದ ಅಧಿಕಾರಿಯಾಗಿದ್ದ. ಆತನಿಗೆ ನವಾಬನ ಮಗಳೊಂದಿಗೆ ಪ್ರೇಮಾಂಕುರವಾಯಿತು. ಆಕೆ ಈತನೊಂದಿಗೆ ಮದುವೆಯಾಗುವ ಸಲುವಾಗಿ ಹಿಂದು ಧರ್ಮ ಸ್ವೀಕರಿಸಲು ಸಿದ್ಧಳಿದ್ದಳು. ಮದುವೆಯೂ ನಡೆಯಿತು. ಆದರೆ ಮಡಿವಂತಿಕೆಯ ಧರ್ಮ ಪಂಡಿತರು ಅದನ್ನು ತಿರಸ್ಕರಿಸಿದರು. ಅಷ್ಟೇ ಅಲ್ಲ ಕಾಳಾಪಹಾಡನನ್ನು ಅವರ ಸಮಾಜದಿಂದ ಬಹಿಷ್ಕರಿಸಿದರು. ಆತನು ತನ್ನನ್ನು ತಿರುಗಿ ಹಿಂದುವನ್ನಾಗಿ ಸ್ವೀಕರಿಸುವಂತೆ ವಿನಂತಿಸಿದ. ದುರ್ದೈವ ನಮ್ಮ ಮಡಿವಂತಿಕೆಯ ಮನಸ್ಸು ಮಲಿನಗೊಂಡಿದ್ದರಿಂದ ಆತನ ಮನವಿಗೆ ಪುರಸ್ಕಾರ ಸಿಗಲಿಲ್ಲ. ಆತ ಹಿಂದುದ್ವೇಷಿಯಾಗಿ ಪರಿವರ್ತಿತನಾದ, ಅಸಂಖ್ಯ ಹಿಂದುಗಳನ್ನು ಮುಸಲ್ಮಾನರನ್ನಾಗಿಸಿದ. ಅಷ್ಟೇ ಅಲ್ಲ ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯವನ್ನು ಧ್ವಂಸಗೊಳಿಸಿದ. ಮುಂದೆ ಬಂಗಾಳದಲ್ಲಿ ಬಹುಸಂಖ್ಯಾತರು ಮುಸಲ್ಮಾನರಾದ ಕಾರಣ ಪೂರ್ವ ಬಂಗಾಲ ಭಾರತದೊಂದಿಗೆ ಸಿಡಿದು ಹೋಗಲು ಇದ್ದ ಪ್ರಮುಖ ಕಾರಣಗಳಲ್ಲಿ ‘ಕಾಳಾಪಹಾಡ್’ ದುರ್ಘಟನೆಯೂ ಒಂದು. ಭಾರತದ ಇತಿಹಾಸದ ಕಾಲಗರ್ಭದಲ್ಲಿ ಇಂತಹ ಘಟನೆಗಳು ಅಸಂಖ್ಯ. ಇದರಿಂದ ಯಾವುದೇ ದೇಶ, ಅಲ್ಲಿನ ಜನಾಂಗ ಪಾಠ ಕಲಿಯಬೇಕಾಗುತ್ತದೆ. ಕೇವಲ ಅಧಿಕಾರ ಓಲೈಕೆಯ ಅಜೆಂಡವನ್ನಿಟ್ಟುಕೊಂಡು ಆಳ್ವಿಕೆ ಮಾಡಿಕೊಂಡು ಬಂದ ಸ್ವಾತಂತ್ರೋತ್ತರ ರಾಜಕಾರಣ ಇತಿಹಾಸದಿಂದ ಪಾಠ ಕಲಿತಿಲ್ಲ. ಕಲಿಯುವ ಇಚ್ಚೆಯೂ ಇದ್ದಂತಿಲ್ಲ. ಕೇವಲ ಇನ್ನೂರು ಜನ ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಕ್ಕೆ ಸಂಸತ್ತಿನಲ್ಲಿ ಗದ್ದಲವೆಬ್ಬಿಸಲಾಗುತ್ತಿದೆ. ಇದೇ ಮತಾಂತರದ ಹಿನ್ನೆಲೆಯಲ್ಲಿ ಭಾರತದ ಈಶಾನ್ಯ ರಾಜ್ಯಗಳು, ಪಾಕಿಸ್ತಾನ ಮತ್ತು ಬಾಂಗ್ಲಾ ಗಡಿ ಭಾಗಗಳು ಅಪಾಯದಲ್ಲಿವೆ. ಈ ದೇಶವನ್ನು ಒಟ್ಟಾರೆ ಪ್ರೀತಿಸುವವರಿಗೆ ಇತಿಹಾಸದಿಂದ ಕಲಿಯಬೇಕಾದ ಅವಶ್ಯಕತೆ ಗೋಚರಿಸುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಇಂಗ್ಲಿಷರು ಹಿಂದುಗಳ ಮೇಲೆ ಮುಸಲ್ಮಾನರನ್ನು ಎತ್ತಿಕಟ್ಟುವ ಕೆಲಸ ಮಾಡಿ ಭಾರತವನ್ನು ವಿಭಜಿಸಿ ಹೊರ ನಡೆದರು. ಇದೇ ಕೆಲಸವನ್ನು ಇಂದು ಈ ದೇಶದ ಜಾತ್ಯತೀತರೆಂದು ಹೇಳಿಕೊಳ್ಳುವ ಜನ ಈ ದೇಶದ ಐಕ್ಯತೆಗೆ ಅಪಾಯ ತರುವ ಮಾತನ್ನೇ ಆಡುತ್ತಾರೆ. ಇದರಿಂದ ಮತಾಂತರಿಗಳಿಗೆ ಇನ್ನಷ್ಟು ಉತ್ತೇಜನ ಸಿಗುತ್ತಿದೆ. ಈ ದೇಶದ ವಿಶ್ವಕುಟುಂಬಿ ಚಿಂತನೆಗೆ ಇಲ್ಲಿಯವರೇ ಅಪಾಯವಾಗುತ್ತಿದ್ದಾರೆ.

ನಾವೊಮ್ಮೆ ಯೋಚಿಸಬೇಕಾದ ವಿಷಯ ಒಂದಿದೆ. ಇಲ್ಲಿರುವ ಮುಸ್ಲಿಂ ಅಥವಾ ಕ್ರೈಸ್ತರು ಒಂದೊಮ್ಮೆ ಇಲ್ಲಿನ ಮೂಲ ಸನಾತನ ಧರ್ಮಕ್ಕೆ ಸೇರಿದವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರಾಜಕಾರಣದ ಮನಸ್ಥಿತಿಯ ವ್ಯಕ್ತಿಗಳನ್ನು ಒಂದಷ್ಟು ದೂರವಿಟ್ಟು ಯೋಚಿಸುವುದಾದರೆ, ಇಲ್ಲಿ ಮುಸ್ಲಿಂ, ಕ್ರೈಸ್ತ ಹಿಂದು ಬಂಧುಗಳು ತಮ್ಮ ಮತಗಳ ನಂಬಿಕೆ-ಆಚರಣೆಗಳನ್ನು ಉಳಿಸಿಕೊಂಡು ಒಬ್ಬರು ಇನ್ನೊಬ್ಬ ಮತ-ನಂಬಿಕೆಗಳ ನಡುವೆ ಹಸ್ತಕ್ಷೇಪ ಮಾಡದೆ ಬಾಳುವುದು ಕಷ್ಟದ ಮಾತಲ್ಲ! ಒಂದೊಮ್ಮೆ ಈ ದೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತಂದಲ್ಲಿ ಇದು ಸಾಧ್ಯವಾಗಬಲ್ಲುದೇನೋ! ಈ ನಿಟ್ಟಿನಲ್ಲಿ ಕೇಂದ್ರ ಸಕಾರ ದಿಟ್ಟಕ್ರಮ ತೆಗೆದುಕೊಳ್ಳಬೇಕಿದೆ.
ಚಿತ್ರಕೃಪೆ:http://www.campusghanta.com/dimag-ki-dahi/why-the-current-debate-on-religious-conversion-is-bogus

Read more from ಲೇಖನಗಳು
31 ಟಿಪ್ಪಣಿಗಳು Post a comment
  1. SSNK's avatar
    ಡಿಸೆ 23 2014

    ಬಹಳ ಉತ್ತಮವಾದ ಲೇಖನ.
    ಭಾರತದಲ್ಲಿರುವ (ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ಆಫ್ಘಾನಿಸ್ತಾನವನ್ನೂ ಸೇರಿಸಿಕೊಂಡಂತೆ) ಸಮಸ್ತ ಮುಸಲ್ಮಾನರೂ, ಕ್ರೈಸ್ತರೂ ಹಿಂದುಗಳೇ. ಅವರ ಪೂರ್ವಜರು ಹಿಂದುಗಳಾಗಿದ್ದರು ಎನ್ನುವುದರಲ್ಲಿ ಯಾವುದೇ ವಿವಾದವಿಲ್ಲ.
    ಅವರೆಲ್ಲರನ್ನೂ ನಮ್ಮ ಮನೆಗೆ ವಾಪಸ್ ಕರೆತರೋಣ. ಅಲ್ಲಿಗೆ ಭಾರತದ ಸಮಸ್ತ ಸಮಸ್ಯೆಗಳೂ ಪರಿಹಾರವಾಗುತ್ತದೆ.
    ಅದಕ್ಕೆ ಹಿಂದು ಸಮಾಜದಲ್ಲಿರುವ ಕುರೂಢಿಗಳು, ಆತ್ಮಘಾತುಕ ಸಂಪ್ರದಾಯಗಳು, ಅಸ್ಪೃಷ್ಯತೆ ಇತ್ಯಾದಿ ಅನಾಗರಿಕ ಪದ್ಧತಿಗಳು ಮೊದಲು ತೊಲಗಬೇಕು. ಹಿಂದು ಮನೆಯಲ್ಲಿ ಎಲ್ಲವನ್ನೂ ಬಹಳ ವೇಗದಲ್ಲಿ ಸರಿಮಾಡಿಕೊಂಡು, ನಮ್ಮನ್ನು ಬಿಟ್ಟು ಹೋಗಿರುವ ಎಲ್ಲರನ್ನೂ ವಾಪಸ್ ಕರೆತರೋಣ.

    ಉತ್ತರ
    • Nagshetty Shetkar's avatar
      Nagshetty Shetkar
      ಡಿಸೆ 23 2014

      ಮನುಸ್ಮೃತಿಯನ್ನು ಇಡೀ ವಿಶ್ವದ ಮೇಲೆ ಹೇರಿ ಬ್ರಾಹ್ಮಣ್ಯವನ್ನೇ ಮೆರೆಯಿರಿ! ಆಗ ಭೂಸುರರ ‘ಸಮಸ್ತ’ ಸಮಸ್ಯೆಗಳೂ ಪರಿಹಾರವಾಗುತ್ತದೆ.

      ಉತ್ತರ
      • SSNK's avatar
        ಡಿಸೆ 23 2014

        ಶೇಟ್ಕರರಿಗೆ ಇಷ್ಟು ಬೇಗ ಜ್ಞಾನೋದಯವಾಗಿದ್ದು ನೋಡಿದರೆ ‘ಅಚ್ಚಾ ದಿನ್’ ಬಂದು ಬಿಟ್ಟಿದೆ ಅನ್ನಿಸುತ್ತದೆ. 😉
        ಕಾಶ್ಮೀರ, ಜಾರ್ಖಂಡ್^ಗಳು ಕಾಂಗ್ರೆಸ್ ಮುಕ್ತವಾದವು. ಇಡೀ ದೇಶ ಕಮ್ಯುನಿಸ್ಟ್ ಮುಕ್ತವಾಗಿ ಬಹಳ ದಿನಗಳೇ ಆದವು.
        ಇನ್ನು ಕರ್ನಾಟಕವು ಕಾಂಗ್ರೆಸ್ ಮುಕ್ತವಾದರೆ ಅಲ್ಲಿಗೆ ದೇಶಮಾತೆಗೆ ಬಂಧವಿಮೋಚನೆಯಾದಂತೆ!! 😀

        ಉತ್ತರ
      • Sudarshana's avatar
        Sudarshana
        ಡಿಸೆ 23 2014

        ನಾಗಶೆಟ್ಟಿಯು ಯೂರೋಪಿಯನ್ನರು ನಿಘಂಟು ನೋಡಿಕೊಂಡು ಮಾಡಿದ ತಪ್ಪು ಭಾಷಾಂತರವನ್ನು ಓದಿಕೊಂಡಿದ್ದಾರೆ ಎಂದೆನಿಸುತ್ತದೆ.
        Lies with long legs. ಹಾಗೂ Breaking India ಪುಸ್ತಕಗಳನ್ನು ಗಣೇಶಯ್ಯ ಅವರ ಶಿಲಾಕುಲ ವಲಸೆ ಜತೆಗೆ ಓದಿಕೊಂಡರೆ ಉತ್ತಮ.

        ಉತ್ತರ
  2. simha sn's avatar
    ಡಿಸೆ 23 2014

    ಸ್ವ ಇಚ್ಛೆಯಿಂದ ಯಾವುದೇ ಮತವನ್ನಾದರೂ ಸ್ವೀಕರಿಸುವ ಸ್ವಾತಂತ್ರ್ಯ ಮಾನವನಿಗೆ ಇರಬೇಕು. ಅದನ್ನು ಪ್ರಭುತ್ವ ಶಕ್ತಿಯಿಂದ ದಮನಿಸುವುದು ತಪ್ಪು. ಹೊಲಸಿನಲ್ಲೇ ಆನಂದವಾಗಿದ್ದೇನೆಂದು ಭಾವಿಸುವ ಹಂದಿಯನ್ನು ಮತ್ತೆ ಮನೆಯೊಳಗೆ ಕರೆತರುವ ಮೂರ್ಖ ಯತ್ನ ಏಕೆ ಬೇಕು ?

    ಉತ್ತರ
  3. UNIVERSAL's avatar
    hemapathy
    ಡಿಸೆ 24 2014

    ಮತಾಂತರ ನಿಷೇಧ ಕಾನೂನನ್ನು ಕೂಡಲೇ ಜಾರಿಗೆ ತರಬೇಕಾಗಿದೆ. ಇದು ಕೂಡಲೇ ಆಗಲಿ.

    ಉತ್ತರ
    • SSNK's avatar
      ಡಿಸೆ 24 2014

      ಇದ್ದಕ್ಕಿದ್ದಂತೆ ಏಕಿಷ್ಟು ಆತುರ?
      ಕಳೆದ 2000 ವರ್ಷಗಳಿಂದ ಜಗತ್ತಿನಾದ್ಯಂತ ಮತಾಂತರ ನಡೆದಿದೆ.
      ಭಾರತದಲ್ಲಿ 1000 ವರ್ಷಗಳಿಗಿಂತ ಹೆಚ್ಚಿನ ಕಾಲ ಮತಾಂತರ ನಡೆದಿದೆ.
      ಕೆಲವು ವರ್ಷದ ಹಿಂದೆ ತಿರುಪತಿ ಬೆಟ್ಟವನ್ನೇ ಕ್ರೈಸ್ತ ಮಿಷನರಿಗಳಿಗೆ ನೀಡುವ ಹುನ್ನಾರ ನಡೆದಿತ್ತು. ತಿರುಮಲದ ದೇವಸ್ಥಾನದ ಒಳಗಡೆಯೇ ಭಕ್ತರನ್ನು ಕ್ರೈಸ್ತಮತಕ್ಕೆ ಸೇರುವಂತೆ ಕರೆನೀಡುವ ಉದ್ದಟತನವೂ ನಡೆಯಿತು. ಬಾಲಾಜಿಯ ದೇವಸ್ಥಾನದೊಳಗೆ ನುಗ್ಗಿದ ಮತಾಂತರಿಗಳು ಬಾಲಾಜಿ ದೇವರನ್ನೇ ನಿಂದಿಸಿದ್ದರು! ತಿರುಪತಿ ದೇವಸ್ಥಾನ ನಡೆಸುವ ವಿಶ್ವವಿದ್ಯಾಲಯದಲ್ಲಿದ್ದ ಬಾಲಾಜಿ ಮತ್ತು ಪದ್ಮಾವತಿ ಭಾವಚಿತ್ರಗಳನ್ನು ತೆಗೆದುಹಾಕಿ ಏಸುಕ್ರಿಸ್ತನ ಚಿತ್ರ, ಶಿಲುಭೆಯ ಚಿತ್ರಪಟಗಳನ್ನು ಹಾಕುವ ಪ್ರಯತ್ನವನ್ನೂ ನಡೆಸಿದ್ದರು.
      ಅದೇ ರೀತಿ ಮೀನಾಕ್ಷಿಪುರಂ ಎಂಬ ಸ್ಥಳದಲ್ಲಿ ಇಡೀ ಗ್ರಾಮವನ್ನೇ ಒಂದೇ ರಾತ್ರಿಯಲ್ಲಿ ಮತಾಂತರಗೊಳಿಸಲಾಯಿತು.
      ಕುಂಭಮೇಳದಂತಹ ಹಿಂದೂ ಧಾರ್ಮಿಕ ಸಮ್ಮೇಳನಗಳನ್ನೂ ಮಿಷನರಿಗಳು ಬಿಟ್ಟಿಲ್ಲ – ಅಲ್ಲಿಯೂ ಮತಾಂತರದ ಪ್ರಯತ್ನ ನಡೆಸಿದ್ದರು.
      ಸುನಾಮಿಯಂತಹ ಗಂಡಾಂತರದ ಸಂದರ್ಭಗಳನ್ನೂ ಮತಾಂತರಕ್ಕೆ ಬಳಸಿದರು – ಮತಾಂತರಗೊಂಡರೆ ಮಾತ್ರ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದರು.
      ಪೂರ್ವಾಂಚಲದ ನಾಗಾಲ್ಯಾಂಡ್, ಮಿಜೋರಾಂ ಮುಂತಾದ ರಾಜ್ಯಗಳಲ್ಲಿ 90% ಜನರನ್ನು ಕ್ರೈಸ್ತರನ್ನಾಗಿ ಮತಾಂತರಿಸಲಾಗಿದೆ.
      ಕರ್ನಾಟಕದ ಕರಾವಳಿ, ಕೇರಳ, ತಮಿಳುನಾಡು, ಆಂದ್ರಪ್ರದೇಶ, ಗೋವಾ ರಾಜ್ಯಗಳಲ್ಲಿ ಎಗ್ಗಿಲ್ಲದೆ ಮತಾಂತರ ಮಾಡಲಾಗಿದೆ.
      ಆಮಿಶ ಮತ್ತು ಭಯಗಳನ್ನು ಆಯುಧಗಳನ್ನಾಗಿ ಬಳಸಿ ಮತಾಂತರದ ಪ್ರಯತ್ನ ಮಾಡಲಾಗಿದೆ.
      ಹೀಗೆ ಇಷ್ಟು ವರ್ಷ ಯಾವುದೇ ತಡೆಯಿಲ್ಲದೆ, ಅಳುಕಿಲ್ಲದೆ ನಡೆಯುತ್ತಿರುವ ಮತಾಂತರವನ್ನು ಇದ್ದಕ್ಕಿದ್ದಂತೆ ನಿಷೇಧಿಸುವ ಅಗತ್ಯವಾದರೂ ಏನು?
      ನಡೆಯಲಿ ಬಿಡಿ. ಶತಮಾನಗಳಿಂದ ಹಿಂದುಗಳನ್ನು ಕ್ರೈಸ್ತ-ಮುಸಲ್ಮಾನರು ಮತಾಂತರಿಸಿದರು. ಮುಂದೆ ಕೆಲವು ದಶಕಗಳವರೆಗಾದರೂ ಹಿಂದುಗಳು ತಮ್ಮವರನ್ನು ವಾಪಸ್ ಕರೆಸಿಕೊಳ್ಳಲಿ.
      ಆ ರೀತಿ ಹಿಂದು ಧರ್ಮವನ್ನು ಬಿಟ್ಟು ಹೋದವರೆಲ್ಲಾ ವಾಪಸ್ ಬಂದ ನಂತರ ಬೇಕಾದರೆ ಮತಾಂತರ ನಿಷೇಧ ಮಾಡಲಿ.

      ಉತ್ತರ
  4. Nagshetty Shetkar's avatar
    Nagshetty Shetkar
    ಡಿಸೆ 25 2014

    ಪೇಜಾವರ ಮಠಪತಿ ಆದಿಯಾಗಿ ಬಲಪಂಥೀಯರು ಘರ್ ವಾಪಸಿಯನ್ನು ಸಮರ್ಥಿಸಿಕೊಂಡಿದ್ದಾರೆ. ಇವರಿಗೆಲ್ಲಾ ಒಂದು ಸಿಂಪಲ್ ಪ್ರಶ್ನೆ: ಭಾರತದ ಮುಸಲ್ಮಾನರಲ್ಲಿ ೯೯% ಜನ ಒಂದು ಕಾಲದಲ್ಲಿ ದಲಿತರೂ ಶೋಷಿತ ಜಾತಿಗಳಿಗೆ ಸೇರಿದವರೂ ಆಗಿದ್ದವರು. ಇವರೆಲ್ಲ ಹಿಂದೂ ಧರ್ಮಕ್ಕೆ ವಾಪಾಸು ಬಂದರೆ ಇವರನ್ನೆಲ್ಲ ಬ್ರಾಹ್ಮಣರಿಗೆ ಸಮಾನವಾದ ಸ್ಥಾನವನ್ನು ಕೊಡಲು ನೀವು ಸಿದ್ಧವಿದ್ದೀರಾ? ಪೇಜಾವರರೆ, ನಿಮ್ಮ ಮಠ ಹಾಗೂ ಉಡುಪಿಯ ಇತರ ಮಠಗಳ ಉತ್ತಾರಾಧಿಕಾರಿಯಾಗಿ ವಾಪಾಸು ಬಂದವರನ್ನು ನಿಯುಕ್ತಗೊಳಿಸಲು ಸಿದ್ಧವಿರುವಿರಾ?

    ಉತ್ತರ
    • Nagshetty Shetkar's avatar
      Nagshetty Shetkar
      ಡಿಸೆ 26 2014
    • SSNK's avatar
      ಡಿಸೆ 26 2014

      ಹಿಂದು ಧರ್ಮಕ್ಕೆ ವಾಪಸ್ ಬರುವವರು ಯಾವ ಜಾತಿಗೆ ಸೇರಬೇಕು ಎನ್ನುವುದನ್ನು ಅವರೇ ನಿರ್ಧರಿಸಿಕೊಳ್ಳುತ್ತಾರೆ.
      ಬ್ರಾಹ್ಮಣ ಜಾತಿಯ ಕುರಿತಾಗಿ ಕೀಳಾಗಿ/ಅಸಭ್ಯವಾಗಿ ಮಾತನಾಡುವ ನಿಮಗೇಕೆ, ಮತಾಂತರಗೊಂಡವರನ್ನು ಬ್ರಾಹ್ಮಣ ಜಾತಿಗೆ ಸೇರಿಸುವ ತವಕ?
      ಇಲ್ಲಿಯವರೆಗೂ ಹಿಂದು ಧರ್ಮಕ್ಕೆ ವಾಪಸ್ ಬಂದವರಾರೂ ತಾವು ಯಾವ ಜಾತಿಗೆ ಸೇರುತ್ತೇವೆ ಎನ್ನುವುದರ ಕುರಿತು ತಲೆಕೆಡಿಸಿಕೊಂಡಿಲ್ಲ. ಅವರಿಗೆ ಮತ್ತೆ ಹಿಂದುವಾಗುವುದೇ ಮುಖ್ಯವಾಗುತ್ತಿದೆಯೇ ಹೊರತು, ತಮ್ಮ ಜಾತಿಯ ಕುರಿತಾಗಿ ಯಾವುದೇ ಪ್ರಶ್ನೆಗಳೆದ್ದಿಲ್ಲ.

      ಶೇಟ್ಕರರೇ, ನೀವು ಅಥವಾ ನಿಮ್ಮ ಗುರು ‘ದರ್ಗಾ’ ಅವರು ಹಿಂದು ಧರ್ಮಕ್ಕೆ ವಾಪಸ್ ಆಗುವ ನಿರ್ಧಾರ ಮಾಡಿ, ನಿಮಗೆ ಬ್ರಾಹ್ಮಣ ಜಾತಿಗೆ ಸೇರಬೇಕೆನ್ನುವ ಆಸೆಯಿದ್ದರೆ, ನಿಮ್ಮ ಪ್ರಶ್ನೆಗೆ ಅರ್ಥ ಬರುತ್ತದೆ. 😉

      ಉತ್ತರ
      • Nagshetty Shetkar's avatar
        Nagshetty Shetkar
        ಡಿಸೆ 26 2014

        ಜಾತಿಗಳೇ ಇಲ್ಲದ ಹಿಂದೂ ಧರ್ಮವಿದೆಯೇ? ಜಾತಿ ಇಲ್ಲದೆ ಮರಳಿ ಹಿಂದೂ ಆಗುವುದು ಎಂಬುದಕ್ಕೆ ಅರ್ಥ ಏನು?

        ಉತ್ತರ
        • Naani's avatar
          Naani
          ಡಿಸೆ 26 2014

          1. ಭಾರತದಲ್ಲಿರುವ ಮುಸ್ಲೀಮರಲ್ಲಿ ಜಾತಿಗಳೇ ಇಲ್ಲದ ಮುಸ್ಲೀಂರು ಎಲ್ಲಿದ್ದಾರೆ?
          2. ಇಸ್ಲಾಂಗೆ ಮತಾಂತರಗೊಂಡವರನ್ನು ನೇರವಾಗಿ ಮುಲ್ಲಾಗಳನ್ನಾಗಿ ಮಾಡಿದ್ದೀರಿಯೇ?

          ಉತ್ತರ
        • SSNK's avatar
          ಡಿಸೆ 26 2014

          ಶೇಟ್ಕರರೇ ನಿಮಗೆ ಕನ್ನಡ ಅರ್ಥವಾಗುವುದಿಲ್ಲ ಎಂದರೆ ಹೇಳಿ; ಇಂಗ್ಲಿಷಿನಲ್ಲಿ ವಿವರಿಸುವೆ. 😀

          ನಾನೆಲ್ಲಿ “ಹಿಂದು ಧರ್ಮದಲ್ಲಿ ಜಾತಿಯಿಲ್ಲ” ಎಂದು ಹೇಳಿದೆ?
          ಹಿಂದು ಧರ್ಮಕ್ಕೆ ವಾಪಸ್ ಬರುತ್ತಿರುವವರಿಗೆ ತಾವು ಯಾವ ಜಾತಿಗೆ ಸೇರುತ್ತೇವೆ ಎನ್ನುವುದು ಮುಖ್ಯವೆನಿಸಿಲ್ಲ ಎಂದಷ್ಟೇ ಹೇಳಿದೆ.

          ನಿಮಗೇಕೆ ಅವರ ಜಾತಿಯ ಕುರಿತಾಗಿ ಅಷ್ಟೊಂದು ಕಾಳಜಿ? ಅವರು ಯಾವ ಜಾತಿಗೆ ಬೇಕಾದರೂ ಸೇರಿಕೊಳ್ಳುತ್ತಾರೆ, ನಿಮಗೇನು?
          ಊಟ ಮಾಡುವವನು, ತನ್ನ ಎಲೆಗೆ ಹಾಕುತ್ತಿರುವ ಊಟ ಖಾರ ಇದೆಯೋ, ಉಪ್ಪು ಕಡಿಮೆಯಿದೆಯೋ, ಮೊಸರು ಹುಳಿಯಿದೆಯೋ ಎನ್ನುವುದರ ಕುರಿತು ತಲೆ ಕೆಡಿಸಿಕೊಳ್ಳುತ್ತಾನೆ. ಅಡಿಗೆ ಮಾಡುವವನೂ ಅದರ ಕುರಿತಾಗಿ ಚಿಂತಿಸಬಹುದು. ಅವರಿಬ್ಬರನ್ನೂ ಬಿಟ್ಟು, ಬೀದಿಯಲ್ಲಿ ತಿರುಗಾಡುವವರೆಲ್ಲಾ ಆ ವ್ಯಕ್ತಿಯ ಎಲೆಯಲ್ಲಿರುವ ಊಟದ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ.
          ಆ ರೀತಿ ಸಂಬಂಧವಿರದವನು ತಲೆ ಕೆಡಿಸಿಕೊಂಡರೆ, ಅವನ ತಲೆಯ ಒಳಗಿರುವ ವಸ್ತು ಕೆಲಸ ಮಾಡುತ್ತಿದೆಯೇ ಎಂದು ಅನುಮಾನ ಪಡಬೇಕಾಗುತ್ತದೆ ಅಷ್ಟೇ! 😉

          ನೀವು ಮತ್ತು ನಿಮ್ಮ ದರ್ಗಾ ಹಿಂದು ಧರ್ಮಕ್ಕೆ ವಾಪಸ್ ಬರುವಾಗ, ಯಾವ ಜಾತಿಗೆ ಸೇರಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಕೇಳಿ, ತಲೆ ಕೆಡಿಸಿಕೊಳ್ಳಿ; ಆಗ ನಿಮ್ಮ ಪ್ರಶ್ನೆಗೂ ಒಂದು ಅರ್ಥವಿರುತ್ತದೆ.

          ತಮ್ಮನ್ನು ತಾವೇ ಪ್ರಗತಿಪರರು ಎಂದೆಂದುಕೊಳ್ಳುವವರಿಗೆ ಜಾತಿಯ ಕುರಿತಾಗಿ ಅದೇಕೆ ಇಷ್ಟೊಂದು ಆಸಕ್ತಿ?

          ಉತ್ತರ
          • Ess Cee's avatar
            ಜನ 23 2015

            ಇಷ್ಟಕ್ಕೂ ಮರುಮತಾಂತರಗೊಂಡವರು ಬ್ರಾಹ್ಮಣರಾಗಿ ಏಕೆ ಬದಲಾಗುತ್ತಾರೆ ಹೇಳಿ? ಬ್ರಾಹ್ಮಣರಿಗೆ ಒಂದು ರಿಸರ್ವೇಶನ್ ಇಲ್ಲ, ಸಾಮಾಜಿಕ ಭದ್ರತೆ ಇಲ್ಲ, ಸರಕಾರಿ ಉದ್ಯೋಗ ಸಿಕ್ಕೊಲ್ಲ, political influence ಇಲ್ಲ, ಇನ್ನಾವುದೇ ಪ್ರಯೋಜನ ಸಾಮಾಜಿಕವಾಗಿ ಅವರಿಗೆ ಇಲ್ಲ. ಇನ್ನೂ ಹೇಳಬೇಕೆಂದರೆ ಬ್ರಾಹ್ಮಣರಿಗೆ ಒಗ್ಗಟ್ತೂ ಇಲ್ಲ. ಇಷ್ಟೆಲ್ಲ ಇಟ್ಟುಕೊಂಡು ಯಾವ ಮರುಮತಾಂತರಿ ಬ್ರಾಹ್ಮಣರಾಗಿ ಬದಲಾಗುತ್ತಾರೆ ಹೇಳಿ? ಇವತ್ತು ಬ್ರಹ್ಮಣರೇನಾದರೂ ಉತ್ತಮ ಸ್ಥಿತಿಯಲ್ಲಿ ಇದ್ದರೆ ಅದಕ್ಕೆ ಅವರ ಸ್ವಂತ ಪರಿಶ್ರಮ ಕಾರಣ. ಅಷ್ಟು ಪರಿಶ್ರಮ ಬೇರೆಯವರಲ್ಲಿ ಇದ್ದಾಗ ಅವರು ಮರುಮತಾಂತರ ಏಕೆ ಆಗುತ್ತಾರೆ?

            Just my two cents..

            ಚಂದು

            ಉತ್ತರ
        • Nagshetty Shetkar's avatar
          Nagshetty Shetkar
          ಮೇ 14 2015

          ಹಿಂದೂ ಧರ್ಮವೆಂದರೆ ಜಾತಿಗಳ ಶ್ರೇಣೀಕೃತ ವ್ಯವಸ್ಥೆ. ಮರು ಮತಾಂತರವಾದವರನ್ನು ಯಾವ ಜಾತಿಗೆ ಸೇರಿಸಿಕೊಳ್ಳುತ್ತೀರಿ?

          ಉತ್ತರ
          • ರಂಜನಾ ರಾಮ್ ದುರ್ಗಾ's avatar
            ರಂಜನಾ ರಾಮ್ ದುರ್ಗಾ
            ಮೇ 15 2015

            ಸಹೋದರ ಶೆಟ್ಕರರೇ,ನೀವು ನಮ್ಮ ಓಶೋ ಮಠಕ್ಕೆ ಬಂದು ಸೇರಿಕೊಳ್ಳಿ ನಿಮಗೆ ಸ್ವಾಗತವಿದೆ

            ಉತ್ತರ
            • Nagshetty Shetkar's avatar
              Nagshetty Shetkar
              ಮೇ 15 2015

              ರಂಜನಾ ಸಿಸ್ಟರ್, ನಾವು ಪ್ರಗತಿಪರರು ಎಂದೂ ನಮ್ಮವೈಯಕ್ತಿಕ ಸುಖ ದುಃಖಗಳ ಬಗ್ಗೆ ಯೋಚಿಸುವುದಿಲ್ಲ, ನಮ್ಮ ಚಿಂತನೆ ಯಾವಾಗಲೂ ಸಮಾಜದ ಶೋಷಿತರ ನೋವು ತಲ್ಲಣಗಳ ಬಗ್ಗೆಯೇ ಇರುತ್ತದೆ. ಘರ್ ವಾಪಸಿ ಮೂಲಕ ಹಿಂದೂ ಧರ್ಮಕ್ಕೆ ಮತಾಂತರವಾದವರಿಗೆ ನಿಮ್ಮ ಓಶೋ ಮಠದಲ್ಲಿ ಸ್ಥಾನಮಾನ ಕೊಡುವುದಿದ್ದರೆ ಹೇಳಿ.

              ಉತ್ತರ
              • WITIAN's avatar
                WITIAN
                ಮೇ 18 2015

                ನಾವು ಪ್ರಗತಿಪರರು…ಆ ಹ್ಹ ಹಾ… ನಾಶೆಶೇ ಮತ್ತು ಪ್ರಗತಿಪರತೆ… ಹಾಗಂದರೆ ಏನು? ಇವೆರಡರ ಸಂಬಂಧವನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ!

                ಉತ್ತರ
                • NSS's avatar
                  NSS
                  ಮೇ 19 2015

                  Please stop personal attacks mud slinging. You are repeatedly doing it even after warned by moderator! Is this civilised behaviur?

                  ಉತ್ತರ
                  • WITIAN's avatar
                    WITIAN
                    ಮೇ 20 2015

                    ನೋಡಯ್ಯ, ನೀನು ನನ್ನನ್ನು impress ಮಾಡುವುದಕ್ಕೆ ಇಂಗ್ಲಿಷಿನಲ್ಲಿ ಬರೆಯ ಬೇಡ, ನಿನ್ನ ಇಂಗ್ಲಿಷ್ ನಿನ್ನ ಕನ್ನಡಕ್ಕಿಂತ ಕಳಪೆಯಾಗಿದೆ. ಇರಲಿ, ನಿನ್ನ ಪ್ರತಿಕ್ರಿಯೆಗಳನ್ನು ತಿದ್ದುವುದರಿಂದಲಾದರೂ ನಿನ್ನ ಭಾಷೆ ಸುಧಾರಿಸುತ್ತದೆಯೋ ನೋಡುವ. ನಿನ್ನ ಮೊದಲ ವಾಕ್ಯ ..Please stop personal attacks mud slinging..ಇಲ್ಲಿ personal attacks and mud slinging ಅಂತ ಬರೆಯುವುದು ಹೆಚ್ಚು ಸೂಕ್ತ. ನಾನು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ಮಿಕ್ಕ ಓದುಗರು ಒಪ್ಪುತ್ತಾರೆಂದು ನನಗೆ ನಂಬಿಕೆಯಿದೆ. ಕಾರಣ, ನಿನ್ನ ದೃಷ್ಟಿಯಲ್ಲಿ ಪ್ರಗತಿ ಪರತೆ ಎಂದರೆ ೧. ವಚನಸಾಹಿತ್ಯ ಮಾತ್ರ ಓದುವುದು; ೨. ಡ್ರಗ್ಗಾ ಸರ್ ಹೇಳಿದ್ದು ಅಲ್ಪವಿರಾಮ/ ಪೂರ್ಣವಿರಾಮಗಳನ್ನೂ ತಪ್ಪದೆ ಪಾಲಿಸುವುದು; ೩. ಮಿಕ್ಕ ಓದುಗರ ಬಗ್ಗೆ ಯಾವುದೇ ಗೌರವ ಇಟ್ಟುಕೊಳ್ಳದೇ ಇರುವುದು; ಇವೇ ಮೊದಲಾದ ವಿಷಯಗಳಷ್ಟೇ! ..you are repeatedly doing it..(ಉಹ್ಹೂ..you are doing it repeatedly ಎನ್ನುವುದು ಹೆಚ್ಚು ಸೂಕ್ತ)..even after warned by the moderator..(ಇದೂ ತಪ್ಪು..even after getting warned ಅಥವಾ even after getting a warning ಇದು ಸರಿ). Is this civilised behaviur? ಸ್ಪೆಲ್ಲಿಂಗ್..ಸ್ಪೆಲ್ಲಿಂಗ್..! ಅದ್ಯಾವ ಭಾಷೆಯಲ್ಲಿ thesis ಬರೆದನೋ ಪುಣ್ಯಾತ್ಮ.. ಓದಿ ಮೌಲ್ಯಮಾಪನ ಮಾಡಿದವರು ತಲೆ ತಿರುಗಿ ಬಿದ್ದರೋ ಏನು ಕತೆಯೋ…ಪಾಪ!

                    ಉತ್ತರ
    • rohithmath's avatar
      rohithmath
      ಮೇ 15 2015

      ಪೇಜಾವರ ಸ್ವಾಮಿಗಳ ಬಗ್ಗೆ ಹಗುರವಾಗಿ ಮಾತಾಡುತ್ತಿರುವವರು, ಪೇಜಾವರ ಸ್ವಾಮಿಗಳು ದಲಿತರಿಗೂ ತನ್ನ ಶಿಷ್ಯರಾಗುವ ಅವಕಾಶ ಕಲ್ಪಿಸಿದ್ದಾರೆ ಎನ್ನುವುದನ್ನು ಯಾಕೆ (ಜಾಣತನದಿಂದ) ಮರೆಯುತ್ತಾರೋ! ಪೇಜಾವರರು ಬುದ್ಧಿಜೀವಿಗಳಾದಿಯಾಗಿ ಉಡುಪಿಗೆ ಬಂದು ಆಶ್ರಯ ಕೇಳುವ ಎಲ್ಲರಿಗೂ ಜಾತಿಮತಸಿದ್ಧಾಂತ ನೋಡದೆ ಊಟ-ವಸತಿಗಳ ವ್ಯವಸ್ಥೆ ಮಾಡುತ್ತಾರೆ. ಸೋಕಾಲ್ಡ್ ಬುದ್ಧಿಜೀವಿಗಳಿಂದ ಯಾರಿಗಾದರೂ ಒಂದು ಹೊತ್ತಿನ ಊಟದ ಲಾಭವಾದದ್ದು ನನಗೆ ಗೊತ್ತಿಲ್ಲ. ಇವರೆಲ್ಲ ಆನೆಯನ್ನು ಕಂಡು ಊಳಿಡುತ್ತ ದಿನಗಳೆಯಲು ಯೋಗ್ಯರು ಅಷ್ಟೆ.

      ಉತ್ತರ
      • Nagshetty Shetkar's avatar
        Nagshetty Shetkar
        ಮೇ 15 2015

        ಪೇಜಾವರ ಅಧೀಶರು ಮನುವಾದಿಗಳಿಗೆ ಭಗವದ್ ಸದೃಶರಿರಬಹುದು, ಆದರೆ ಮನುಶಾಸನದಲ್ಲಿ ನಂಬಿಕೆ ಇಲ್ಲದ (ಹಾಗೂ ಬಾಬಾಸಾಹೇಬ್ ಪ್ರಣೀತ ಸಂವಿಧಾನದಲ್ಲಿ ನಂಬಿಕೆ ಇರುವ) ನಾಡಿನ ಅ-ವೈದಿಕ ಜನಸಮುದಾಯಗಳು ಪೇಜಾವರ ಅವರ ಬಗ್ಗೆ ಭಕ್ತಿಯಿಂದ ವರ್ತಿಸಬೇಕು ಅಂತ ಅಪೇಕ್ಷಿಸುವುದು ಸರಿಯಲ್ಲ. ನಾಡಿನ ಅ-ವೈದಿಕ ಸಮುದಾಯಗಳ ಬಡವರಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆಗಾಗಿ ವೈದಿಕ ಮಠ ಅಧೀಶರ ಕಾಲು ಹಿಡಿಯುವ ಪರಿಸ್ಥಿತಿ ಬರದಿರಲಿ ಅಂತ ಸಿದ್ದರಾಮಯ್ಯ ಸರಕಾರ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಸಿದ್ದರಾಮಯ್ಯನವರ ಪ್ರಗತಿಪರ ಸಾಧನೆಗಳ ಹಿಂದೆ ನಾಡಿನ ಬುದ್ಧಿಜೀವಿಗಳ ಪರಿಶ್ರಮವಿದೆ ಎಂಬುದನ್ನು ಮರೆಯದಿರಿ.

        ಉತ್ತರ
        • rohithmath's avatar
          rohithmath
          ಮೇ 15 2015

          ಸಿದ್ಧರಾಮಯ್ಯ ಅನ್ನಭಾಗ್ಯ ತರೋದಕ್ಕಿಂತ ಐವತ್ತು ವರ್ಷ ಮೊದಲಿಂದಲೂ ಉಡುಪಿಯ ಸ್ವಾಮಿಗಳು ನಿತ್ಯ ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ಈಗಲೂ ಅದು ನಿರಂತರವಾಗಿ ನಡೆಯುತ್ತಿದೆ. ಉಡುಪಿಗೆ ಹೋದ ಯಾವುದೇ ಭಕ್ತ – ಯಾವ ಜಾತಿ-ಧರ್ಮದವನೇ ಆಗಿದ್ದರೂ ದೇವಸ್ಥಾನದಲ್ಲಿ ಊಟ ಮಾಡಬಹುದು. ಸಂಶಯ ಇರುವವರು ಉಡುಪಿ ಕೃಷ್ಣಮಠದ ಎರಡಂತಸ್ತಿನ ಭೋಜನಶಾಲೆಯನ್ನು ನೋಡಿಕೊಂಡು ಬರಬಹುದು.

          ಇನ್ನು ಒಂದುಹೊತ್ತಿನ ಊಟಕ್ಕಾಗಿ ತಮ್ಮ ಕಾಲಿಗಡ್ಡಬೀಳಬೇಕೆಂದು ಯಾವ ಸ್ವಾಮೀಜಿಯೂ ಹೇಳಿಲ್ಲ. ಪೇಜಾವರರೂ ಬಯಸುವುದಿಲ್ಲ. ಅವರ ಕಾಲಿಗೆ ಅಡ್ಡಬೀಳದವರೂ ಉಡುಪಿಯಲ್ಲಿ ಯಾರ ಹಂಗಿಲ್ಲದೆ ದೇವಸ್ಥಾನದಲ್ಲಿ ಊಟ ಮಾಡಬಹುದು.

          ಇನ್ನು ಉಡುಪಿಯ ಅವೈದಿಕ ಜನರ ಬಗ್ಗೆ ಏನೇನೂ ಮಾಹಿತಿ ಇಲ್ಲದೆ ಗಾಳಿಯಲ್ಲಿ ಗುಂಡು ಹೊಡೆಯುವುದು ಒಳ್ಳೆಯದಲ್ಲ. ಮನುಶಾಸ್ತ್ರಕ್ಕೂ ಉಡುಪಿಯ ಮಠ ಪರಂಪರೆಗೂ ಯಾವುದೇ ಸಂಬಂಧ ಇಲ್ಲ!! ತಮ್ಮ ವಾದ ಮಂಡಿಸಲು ಈ ಬುದ್ಧಿಜೀವಿಗಳು ಏನೆಲ್ಲ ಹುಸಿ ಆಧಾರಗಳನ್ನು ಬಳಸಬೇಕಾಗುತ್ತದೆ!!

          ಉತ್ತರ
          • Nagshetty Shetkar's avatar
            Nagshetty Shetkar
            ಮೇ 15 2015

            “ಮನುಶಾಸ್ತ್ರಕ್ಕೂ ಉಡುಪಿಯ ಮಠ ಪರಂಪರೆಗೂ ಯಾವುದೇ ಸಂಬಂಧ ಇಲ್ಲ”

            ಸರಿ, ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಉಡುಪಿಯ ಮಠದ ಆವರಣದಲ್ಲಿ ಅನ್ನಸಂತರ್ಪಣೆ ನಡೆಯುತ್ತಿದೆ ಅಂತ ಹೇಳಿದಿರಿ. ಅಲ್ಲಿ ದಲಿತರಿಗೂ ಮಾಧ್ವರಿಗೂ ಪಂಕ್ತಿ ಒಂದೇನಾ? ಅಥವಾ ಬೇರೇನಾ?

            ಉತ್ತರ
            • rohithmath's avatar
              rohithmath
              ಮೇ 15 2015

              ಸ್ವಾಮಿ!! ನೀವು ನಿಜವಾಗಿಯೂ ಉಡುಪಿಗೆ ಹೋಗಿದ್ದೀರಾ? ಅಲ್ಲಿ ದಲಿತರು, ಮಾಧ್ವರು, ಮಾಧ್ವರಲ್ಲದ ಇತರ ಬ್ರಾಹ್ಮಣರು, ನೀವು ಹೇಳುವಂತಹ ಅವೈದಿಕರು – ಎಲ್ಲರೂ ಒಂದೇ ಸಾಲಲ್ಲಿ ಕೂರಬಹುದು. ದಯವಿಟ್ಟು ಉಡುಪಿಯ ಭೋಜನಶಾಲೆಗೆ ಭೇಟಿಕೊಡಿ. ಹಾಗೆಯೇ ಸಂತೃಪ್ತಿಯಿಂದ ಉಂಡುಬನ್ನಿ. ನೀವು ಕೃಷ್ಣನ ಭಕ್ತರು ಕೂಡ ಆಗಿರಬೇಕಾಗಿಲ್ಲ.

              ಉತ್ತರ
              • Nagshetty Shetkar's avatar
                Nagshetty Shetkar
                ಮೇ 16 2015

                ನಾನೇಕೆ ಉಡುಪಿ ಕೃಷ್ಣ ದೇವಸ್ಥಾನಕ್ಕೆ ಹೋಗಲಿ?! ಕೃಷ್ಣ ಭಕ್ತರಾಗಿದ್ದ ಕನಕದಾಸರನ್ನೇ ಉಡುಪಿ ಮಠದವರು ಸ್ವೀಕರಿಸಲಿಲ್ಲ, ಇನ್ನು ಶರಣರಿಗೆ ಮಣೆ ಹಾಕುತ್ತರೆಯೇ?!

                ಉಡುಪಿ ಮಠಗಳಲ್ಲಿ ಪಂಕ್ತಿಭೇದ ಇಲ್ಲ ಅಂತ ಸುಳ್ಳು ಏಕೆ ಹೇಳುತ್ತೀರಿ? ಅಲ್ಲಿ ಬ್ರಾಹ್ಮಣರಿಗೆ ಅಂತ ಪ್ರತ್ಯೇಕ ಊಟದ ಹಾಲ್ ಇದೆ. ನಿಮ್ಮ ರಾಕೇಶ್ ಶೆಟ್ಟಿ ಅವರೇ ಇದರ ಬಗ್ಗೆ ಇಲ್ಲಿ ಬರೆದಿದ್ದಾರೆ ನೋಡಿ: http://goo.gl/RqtfDD

                ಉತ್ತರ
                • rohithmath's avatar
                  rohithmath
                  ಮೇ 16 2015

                  ಭೋಜನಶಾಲೆಯಲ್ಲಿ ಯಾವ ಜಾತಿಯವನೂ ಕೂತು ಊಟಮಾಡಬಹುದು. ಒಬ್ಬಾಕೆಯನ್ನು ಊಟದ ಪಂಕ್ತಿಯಿಂದ ಎಬ್ಬಿಸಿದ್ದಕ್ಕೆ ನನ್ನ ಬೆಂಬಲವೂ ಇಲ್ಲ. ಪ್ರಜ್ಞಾವಂತನಾದ ಯಾವ ಬ್ರಾಹ್ಮಣ ಕೂಡ ಬೆಂಬಲಿಸುವುದಿಲ್ಲ ಎಂದು ನನ್ನ ಅಭಿಪ್ರಾಯ. ಎಲ್ಲೋ ನಡೆದುಹೋದ ಒಂದು ತಪ್ಪು ಇಡೀ ವ್ಯವಸ್ಥೆಯನ್ನು ದೂಷಿಸುವುದಕ್ಕೆ ಬಳಕೆಯಾಗಬಾರದು. ಉಡುಪಿಯ ಮಠ ಇಡೀ ಜಿಲ್ಲೆಯ ಬಿಸಿಯೂಟದ ಯೋಜನೆಯನ್ನೂ ಹೊತ್ತಿಕೊಂಡಿದೆ. (ಇದು ಕೂಡ ಸಿದ್ದರಾಮಯ್ಯನ ಬಿಸಿಯೂಟದ ಯೋಜನೆಗೂ ಮೊದಲೇ). ಅಲ್ಲಿ ಯಾರನ್ನೂ ಜಾತಿ ಕೇಳಿ ಊಟ ಬಡಿಸುವ ಪದ್ಧತಿ ಇಲ್ಲ. ಅಷ್ಟೆಲ್ಲ ಯಾಕೆ, ಹಿಂದೂ ಲಿಂಗಾಯತ ವೀರಶೈವ ಮುಸ್ಲಿಮ ಎಲ್ಲರೂ ಇರುವ ನೀನಾಸಂ ತಂಡ ತಿರುಗಾಟದ ಸಲುವಾಗಿ ಉಡುಪಿಗೆ ಬಂದಾಗ ಅವರ ಊಟ ವಸತಿಯ ಸೌಲಭ್ಯ ನೋಡಿಕೊಳ್ಳುವವರು ಪೇಜಾವರ ಸ್ವಾಮಿಗಳು. ಇದು ಇಪ್ಪತೈದು ವರ್ಷಗಳಿಂದ ನಡೆದುಬಂದ ಕ್ರಮ. ಬುದ್ಧಿಜೀವಿಗಳಾದ ತಾವು ಕೇಳಿನೋಡಿ.

                  ಪ್ರತಿಯೊಂದನ್ನೂ ಆಳವಾಗಿ ಅಭ್ಯಾಸ ಮಾಡುವವರು ಕನಕದಾಸರ ಮೇಲೆ ಬಂದ ಒಂದು ಸಿನೆಮದಿಂದ ಪ್ರೇರಣೆಗೊಂಡು ಹೇಳಿಕೆಗಳನ್ನು ಕೊಡಬಾರದು. ಕನಕದಾಸರು ರಾಜನಾಗಿದ್ದವರು. ಮಾತ್ರವಲ್ಲ, ಉಡುಪಿಯ ಶ್ರೇಷ್ಠ ಯತಿಗಳಾಗಿದ್ದ ವಾದಿರಾಜರ ಸಮಕಾಲೀನರು. ಕನಕದಾಸರು ಉಡುಪಿಗೆ ಬಂದಾಗ ಇಬ್ಬರೂ ಬಹಳ ಅನ್ಯೋನ್ಯರಾಗಿದ್ದರು ಎನ್ನುವುದನ್ನು ಇತಿಹಾಸ ದಾಖಲಿಸಿದೆ. ವಾದಿರಾಜರು ಆಧುನಿಕ ಜಗತ್ತಿನ ಋಷಿಯಂತೆ ಇದ್ದವರು. ವಾದಿರಾಜರು ಸಾಹಿತ್ಯ ರಚಿಸಿದ್ದು ನೀವೇನು ಕೆಳವರ್ಗ ಅನ್ನುತ್ತೀರೋ ಆ ಜನರ ಆಡುಮಾತಿನ ಭಾಷೆಯಲ್ಲಿ. ದಯವಿಟ್ಟು ಸಂಯಮದಿಂದ ಪರಿಶೀಲಿಸಿ.

                  ನೀವು ಉಡುಪಿಗೆ ಹೋಗಲೇಬೇಕೆಂದು ಯಾರ ಒತ್ತಾಯವೂ ಇಲ್ಲ. ಉಡುಪಿಯ ಊಟ ಉಣ್ಣುವುದಕ್ಕೂ ಪುಣ್ಯ ಬೇಕಲ್ಲವೆ!

                  ಉತ್ತರ
                  • Nagshetty Shetkar's avatar
                    Nagshetty Shetkar
                    ಮೇ 16 2015

                    “ಹಿಂದೂ ಲಿಂಗಾಯತ ವೀರಶೈವ ಮುಸ್ಲಿಮ ಎಲ್ಲರೂ ಇರುವ ನೀನಾಸಂ ತಂಡ ತಿರುಗಾಟದ ಸಲುವಾಗಿ ಉಡುಪಿಗೆ ಬಂದಾಗ ಅವರ ಊಟ ವಸತಿಯ ಸೌಲಭ್ಯ ನೋಡಿಕೊಳ್ಳುವವರು ಪೇಜಾವರ ಸ್ವಾಮಿಗಳು. ಇದು ಇಪ್ಪತೈದು ವರ್ಷಗಳಿಂದ ನಡೆದುಬಂದ ಕ್ರಮ. ”

                    ನೀನಾಸಂನ ಮುಸ್ಲಿಮ್ ಅತಿಥಿಗಳಿಗೆ ಕೃಷ್ಣಮಠದವರು ಬಿರಿಯಾನಿ ಹಾಗೂ ಮೀನು ಸಾರು ಬಡಿಸುತ್ತಾರಾ?

                    ಉತ್ತರ
                    • ರೀ ಶೆಟ್ಕರ್ ಸಾಹೇಬರೆ,ಅದೇನು ಅಂತ ಮಾತಾಡ್ತೀರಿ? ಬಿರಿಯಾನಿ ಬೇಕಾದವ್ರು ಮಿಲಿಟರಿ ಹೋಟೆಲಿಗೆ ಹೋಗಬೇಕು ಮಠಕ್ಕಲ್ಲ.ಹೋಗಿ ನೀನಾಸಂನ ಆ ತಂಡದ ಮುಂದೆ ನಿಮ್ಮ ಈ ಬಿರಿಯಾನಿ ವಾದವಿಟ್ಟು ನೋಡಿ,ಬಹುಷಃ ಸರಿಯಾಗಿ ಕೊಟ್ಟುಕಳುಹಿಸಬಹುದು ನಿಮಗೆ (ಬಿರಿಯಾನಿಯನ್ನು)

                    • WITIAN's avatar
                      WITIAN
                      ಮೇ 16 2015

                      ನನ್ನ ಕೊಡವ ಮಿತ್ರರು ಅವರ ಮನೆಯಲ್ಲಿ ಸ್ವಾದಿಷ್ಟವಾದ ‘ಪಂದಿಕರಿ’ ಮಾಡಿಸುತ್ತಾರೆ..ನೀನು ಮತ್ತು ನಿನ್ನ ಡ್ರಗ್ಗಾ ಸರ್ ಗೆ ಸ್ವಲ್ಪ ಬೇಕಿದ್ದರೆ ಕಳಿಸಿಕೊಡಲು ಹೇಳಲೇ?

  5. ಮಲ್ಲಪ್ಪ's avatar
    ಮಲ್ಲಪ್ಪ
    ಮೇ 14 2015

    ಕಾಲಾಪಹಾಡನಂತಹವರನ್ನು ಮರಳಿ ಸ್ವಧರ್ಮಕ್ಕೆ ಬರಲು ವಿರೋಧಿಸಿದರು ಹೇಗೆ ಒಬ್ಬ ಧರ್ಮವಿರೋದಿಯನ್ನು ಹುಟ್ಟಿಸಿ ಪೂರ್ವ ಭಾರತದಲ್ಲಿ ಹಿಂದುಧರ್ಮ ಪ್ರಳಯಕ್ಕೆ ಕಾರಣ ವಾದರೋ ಅಂತಹವರು ಈಗಲೂ ಹಿಂದು ಧರ್ಮದಲ್ಲಿ ಇದ್ದಾರೆ. ಲಿಂಗಾಯಿತರು ಹಿಂದುಗಳಲ್ಲ ವೀರಶೈವರು ಬೇರೆ, ಬಸವಣ್ಣ ಒಂದು ಗೂಡಿಸಿದ್ದ ಮಡಿವಾಳರಿಗೆ ಬೇರೆ ಪೀಠ ಸಮಗಾರರಿಗೆ ಬೇರೆ ಪೀಠ. ಇವರು ಗಳು ಮೈನಾರಿಟಿಯಲ್ಲಿ ಸೆರಿಸಲಿಕ್ಕಾಗಿ ಅಲ್ಪಸಂಖ್ಯಾಕರನ್ನಾಗಿ ಮಾಡಲು ಮೂಲ ಧರ್ಮದಿಂದ ಹೊರನಿಲ್ಲುವ ಪ್ರಯತ್ನ. ಇದೆಲ್ಲ ಹೊರಗೆ ನಿಂದ ಅಲ್ಲ ಒಳಗಿನಿಂದಲೇ ಧರ್ಮ ಒಡೆಯುವ ಪ್ರಯತ್ನ. ಮೊದಲು ನಾವೆಲ್ಲ ಒಂದು ಎನ್ನುವುದು ಧರ್ಮ ಎಂಬ ಜಗತ್ತಿಗೆಲ್ಲ ಗುರು ಎಂದುಕೊಂಡಿದ್ದ ಜಗದ್ಗುರುಗಳೆಲ್ಲರು ಸೇರಿ ತೀರ್ಮಾನಿಸಲಿ. ನಂತರ ಭಕ್ತರೆಲ್ಲರನ್ನು ಒಂದು ಮಾಡುವ ಪ್ರಯತ್ನ ಮಾಡಬಹುದು.ನಮ್ಮಲ್ಲಿಯ ಈ ಒಳ ಜಗಳ ಹಾಗು ಮಾರ್ಗದರ್ಶನ ಮಾಡಬೇಕಾದವರ ಒಣ ಪ್ರತಿಷ್ಠೆಯ ಲಾಭ ಸೆಮೆಟಿಕ್ ಧರ್ಮದವರು ಪಡೆಯುತಿದ್ದಾರೆ

    ಉತ್ತರ

Leave a reply to Nagshetty Shetkar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments