ವಿಷಯದ ವಿವರಗಳಿಗೆ ದಾಟಿರಿ

Archive for

13
ಏಪ್ರಿಲ್

ಇದೊಂದು ಸಣ್ಣ ಸಂಗತಿ ತಿಳಿದಿದ್ದರೆ ಆ ಸಾವನ್ನು ಯಾರಾದರೂ ತಪ್ಪಿಸಬಹುದಿತ್ತು

– ರೋಹಿತ್ ಚಕ್ರತೀರ್ಥ

harishjpg-08-1457415172ಫೆಬ್ರವರಿ 17ನೇ ತಾರೀಖು ಬುಧವಾರದ ಪತ್ರಿಕೆಯಲ್ಲಿ ಪ್ರಕಟವಾದ ಆ ವರದಿಯನ್ನು ಹಾಗ್‍ಹಾಗೇ ಕೊಡುವುದಾದರೆ ಅದು ಹೀಗಿದೆ: ಹುಟ್ಟೂರಿನಲ್ಲಿ ನಡೆಯುತ್ತಿದ್ದ ಸ್ಥಳೀಯ ಚುನಾವಣೆಯಲ್ಲಿ ಓಟು ಹಾಕಲೆಂದು ಹರೀಶ್ ಶನಿವಾರ ಊರಿಗೆ ತೆರಳಿದ್ದರು. ತನ್ನ ಕುಟುಂಬದ ಜತೆ (ತಾಯಿ ಮತ್ತು ಅಣ್ಣ) ಒಂದಷ್ಟು  ಹೆಚ್ಚಿನ  ಸಮಯ  ಕಳೆಯುವ   ಉದ್ಧೇಶದಿಂದ  ಸೋಮವಾರ   ರಜೆ   ಹಾಕಿದ್ದರು. ಮಂಗಳವಾರ  ಆಫೀಸಿದ್ದುದರಿಂದ  ಊರಿಂದ  ಮುಂಜಾನೆ  ಬೇಗನೇ  ಹೊರಟಿದ್ದರು.  ಬೈಕು ಚಲಾಯಿಸುತ್ತ  ಬರುತ್ತಿದ್ದಾಗ,  ತಿಪ್ಪಗೊಂಡನಹಳ್ಳಿಯ  ಸಮೀಪ,  ಹಿಂದಿನಿಂದ  ಒಂದು   ಲಾರಿ ಅವರನ್ನು ಓವರ್‍ಟೇಕ್ ಮಾಡುವ ಯತ್ನದಲ್ಲಿತ್ತು. ಲಾರಿ ಅತಿ ವೇಗದಲ್ಲಿದ್ದುದರಿಂದ, ಅದು ತನ್ನ ತೀರಾ ಹತ್ತಿರ ಬಂದಾಗ ಹರೀಶ್ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದರು. ಆದರೆ, ಲಾರಿ ಮಾತ್ರ ನಿಲ್ಲುವ ಸೂಚನೆ ತೋರಿಸಲಿಲ್ಲ. ಅದು, ಯಮವೇಗದಲ್ಲಿ ಮುಂದುವರಿದು ಹರೀಶರ  ದೇಹದ  ಮೇಲೆಯೇ  ಹಾದುಹೋಯಿತು. ಮತ್ತಷ್ಟು ಓದು »

12
ಏಪ್ರಿಲ್

ನಿಮ್ಮ ಜಿ-ಮೇಲ್‌ಗೆ ಬೇರೆ ಯಾರಾದ್ರೂ ಲಾಗಿನ್ ಆಗಿದ್ದಾರೆಯೇ ಅಂತ ತಿಳಿಯಿರಿ

-ಅವಿನಾಶ್ ಬಿ

gmailಅತ್ಯಂತ ಮಹತ್ವದ, ಸೂಕ್ಷ್ಮ ಮಾಹಿತಿಗಳಿರುವ ಇಮೇಲ್ ಖಾತೆಯನ್ನು ಉಪಯೋಗಿಸುವಾಗ ಸಾಕಷ್ಟು ಎಚ್ಚರ ವಹಿಸುವುದು ಅಗತ್ಯ. ಗೂಗಲ್ ಮೇಲ್ ಅಥವಾ ಜಿ-ಮೇಲ್ ಬಳಸುತ್ತಿರುವವರಿಗೆ ಒಂದು ಅನುಕೂಲ ಇದೆ. ಅದೆಂದರೆ, ನಿಮ್ಮ ಇಮೇಲ್ ಖಾತೆಯನ್ನು ಬೇರೆ ಯಾರಾದರೂ ಉಪಯೋಗಿಸುತ್ತಿದ್ದಾರಾ, ಹ್ಯಾಕರ್‌ಗಳು ಕನ್ನ ಹಾಕಿದ್ದಾರಾ, ಎಲ್ಲಿಂದ ನಿಮ್ಮ ಮೇಲ್‌ಗೆ ಲಾಗ್ ಇನ್ ಆಗಿದೆ ಮುಂತಾದ ವಿವರಗಳನ್ನು (ಕೊನೆಯ 10 ಚಟುವಟಿಕೆಗಳನ್ನು) ತಿಳಿದುಕೊಳ್ಳಬಹುದು. ಮತ್ತಷ್ಟು ಓದು »

11
ಏಪ್ರಿಲ್

ಋಗ್ವೇದ ೧೦.೮೫.೧೩ ಅಘಾಸು ಹನ್ಯಂತೇ ಗಾವಃ

– ವಿನಾಯಕ ಹಂಪಿಹೊಳಿ

rigvedaಸ್ವಘೋಷಿತ ಅಭಿನವ ಪ್ರವಾದಿ ಜಾಕೀರ ನಾಯ್ಕರ ಶಿಷ್ಯರೊಂದಿಗೆ ಸ್ವಲ್ಪ ದಿನಗಳ ಹಿಂದೆ ನನ್ನ ಕೆಲವು ಮಿತ್ರರು ಚರ್ಚೆಯೊಂದನ್ನು ನಡೆಸಿದ್ದರು. ಆ ಚರ್ಚೆಯಲ್ಲಿ ನಾನೂ ಭಾಗವಹಿಸಿದ್ದೆ. ಅಲ್ಲಿ ನಮ್ಮ ವಿರೋಧಿಗಳ ವಾದವೊಂದು ನನ್ನ ಗಮನ ಸೆಳೆಯಿತು. ಅಲ್ಲಿ ನಮ್ಮ ವಿರೋಧಿಗಳು “ಋಗ್ವೇದದಲ್ಲಿ ಗೋಮಾಂಸದ ಉಲ್ಲೇಖವಿದೆ. ಮದುವೆಯ ಸಂದರ್ಭದಲ್ಲಿ ಆಕಳುಗಳನ್ನು ಕಡಿಯಲಾಗುತ್ತಿತ್ತು ಎಂಬುದಕ್ಕೆ ಆಧಾರವಿದೆ. ಬೇಕಾದರೆ ಋಗ್ವೇದದ ೧೦ನೇ ಮಂಡಲದ ೮೫ನೇ ಸೂಕ್ತದ ೧೩ನೇ ಋಕ್ಕನ್ನು ನೋಡಿ” ಎಂದು ಹೇಳಿದ್ದರು. ಆ ಋಕ್ಕು ಹೀಗಿತ್ತು.

ಸೂರ್ಯಾಯಾ ವಹತುಃ ಪ್ರಾಗಾತ್ಸವಿತಾ ಯಮವಾಸೃಜತ್ | ಅಘಾಸು ಹನ್ಯಂತೇ ಗಾವೋsರ್ಜನ್ಯೋಃ ಪರ್ಯುಹ್ಯತೇ || ಮತ್ತಷ್ಟು ಓದು »

9
ಏಪ್ರಿಲ್

ಮಧುರೈ ಮೀನಾಕ್ಷಿ

– ರಂಜನ್ ಕೇಶವ

imageಭಯ ಹುಟ್ಟಿಸುವಂತಹ ಬೃಹತ್ ಗಾತ್ರದ ಕಂಬಗಳು. ಅದರಲ್ಲಿ ದೊಡ್ಡ ದೊಡ್ಡ ಗಾತ್ರದ ಸಿಂಹದಂತಿರುವ ರಾಕ್ಷಸನ ಕೆತ್ತನೆಗಳು. ಇಂಥಹ ಸಾಲು ಸಾಲು ಕಂಬಗಳು ದಾರಿಯ ಇಕ್ಕೆಲಗಳಲ್ಲಿ ಇರುತ್ತವೆ. ಮೊದಲಸಲ ನೋಡುವವರಿಗೆ ಇಲ್ಲಿನ ಭವ್ಯ ಕೆತ್ತನೆಗಳ ನೋಟವೇ ಒಮ್ಮೆ ದಿಗಿಲು ಹುಟ್ಟಿಸಬಹುದು. ಮೀನಾಕ್ಷಿ ಮಂದಿರಸಮೂಹಗಳು ಒಂದು ಬೃಹತ್ ಆವರಣದ ಮಧ್ಯೆಯಲ್ಲಿವೆ. ಇದಕ್ಕೆ ಉತ್ತರ, ದಕ್ಷಿಣ, ಪೂರ್ವ – ಪಶ್ಚಿಮ ಎಂಬಂತೆ ನಾಲ್ಕು ಪ್ರವೇಶದ್ವಾರಗಳು. ಒಳ ಪ್ರವೇಶಿಸುತ್ತಿದ್ದಂತೆ ಒಂದು ಚಕ್ರವ್ಯೂಹ ಪ್ರವೇಶಿಸಿದಂತೆ ಅನೇಕ ಮಾರ್ಗಗಳ ದರ್ಶನ. ಮಾರ್ಗಗಳ ಪರಿಚಯವಿಲ್ಲದೆ ಒಳ ಪ್ರವೇಶಿಸಿದರೆ ದಾರಿ ತಪ್ಪಿ ಒಳಗೊಳಗೆಯೇ ವ್ಯರ್ಥ ಸಮಯ ಕಳೆಯುವ ಸಾಧ್ಯತೆಯೇ ಹೆಚ್ಚು. ಮತ್ತಷ್ಟು ಓದು »

8
ಏಪ್ರಿಲ್

ಯುಗಾದಿಯ ತಗಾದೆ

– ನಾಗೇಶ್ ಮೈಸೂರು

ಯುಗಾದಿ ಹಬ್ಬದ ಶುಭಾಶಯಗಳುಗುಬ್ಬಣ್ಣ ‘ಗುರ್ರ್’ ಎಂದು ಏದುಸಿರಲ್ಲೆ ಭುಸುಗುಟ್ಟುತ್ತ, ಧುಮುಗುಟ್ಟುತ್ತಲೆ ಮನೆಯೊಳಗೆ ಕಾಲಿಟ್ಟಾಗ ಇಂದೇಕೊ ಅಪರೂಪಕ್ಕೆ ಗುಬ್ಬಣ್ಣನಿಗು ಕೋಪ ಬಂದಿರುವಂತಿದೆಯಲ್ಲ ಅನಿಸಿ ಕುತೂಹಲವಾಯ್ತು. ಸಹನೆಯಲ್ಲಿ ಸಾಧು ಸಂತರ ಅಪರಾವತಾರವಾದ ಗುಬ್ಬಣ್ಣ ಕೂಗಾಡಿದರು ಪೂಜೆಗೆ ದೇವರ ಮೇಲೆಸೆದ ಹೂವಂತಿರುವುದನ್ನು ಮಾತ್ರ ಕಂಡಿದ್ದ ನನಗೆ, ಅವನ ಈ ಅವತಾರ ಸ್ವಲ್ಪ ಹೊಸದು. ಅದರಲ್ಲು ಮನೆಯಲ್ಲಿ ನರಸಿಂಹಿಣಿಯವತಾರದ ‘ಫುಲ್ ಟೈಮ್ ಕಾಂಟ್ರಾಕ್ಟ್’ ಅನ್ನು ಅವನ ಶ್ರೀಮತಿಯೆ ಶ್ರದ್ಧಾಪೂರ್ವಕವಾಗಿ (ಬಲಾತ್ಕಾರವಾಗಿಯೆ), ವಹಿಸಿಕೊಂಡ ಮೇಲೆ ಗುಬ್ಬಣ್ಣ ಇನ್ನೂ ತೀರಾ ಸಾಧುವಾಗಿಬಿಟ್ಟಿದ್ದ. ಅದೇ ಹಿನ್ನಲೆಯಲ್ಲೆ,

‘ ಗುಬ್ಬಣ್ಣ… ಯಾಕೊ ಮುಖವೆಲ್ಲ ಕೆಂಪಗೆ ಚೆಂಡು ಮಲ್ಲಿಗೆಯಾಗಿಬಿಟ್ಟಿದೆ ? ಜ್ವರ ಗಿರ ಬಂದುಬಿಟ್ಟಿದಿಯಾ ಹೇಗೆ ? ಹುಷಾರಾಗಿದ್ದೀಯಾ ತಾನೆ ?’ ಎಂದೆ ಒಂದೆ ಉಸಿರಲ್ಲಿ.

ಮತ್ತಷ್ಟು ಓದು »

8
ಏಪ್ರಿಲ್

ಕಮ್ಯುನಿಸ್ಟರ ರಕ್ತ ಚರಿತ್ರೆಯ ಪುಟಗಳು

– ರಾಕೇಶ್ ಶೆಟ್ಟಿ

ನಕ್ಸಲ್ಇತ್ತೀಚೆಗೆ ಹೈದರಾಬಾದ್ ಯುನಿವರ್ಸಿಟಿಯ ರೋಹಿತ್ ವೆಮುಲ ಎಂಬ ಯುವಕನ ಆತ್ಮಹತ್ಯೆ ಹಾಗೂ ದೆಹಲಿಯ ಜೆ.ಎನ್.ಯು ವಿವಾದಗಳ ಸಮಯದಲ್ಲಿ ಕಾಕಗಳು (ಕಾಂಗ್ರೆಸ್+ಕಮ್ಯುನಿಸ್ಟ್) ಮೋದಿಯವರ ಸರ್ಕಾರ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿವೆ ಎಂದು ಉಯಿಲೆಬ್ಬಿಸಿದ್ದಾರೆ.ಕರ್ನಾಟಕದಲ್ಲಿರುವ ಇವರ ಅಣ್ತಮ್ಮಂದಿರು ದಿನ ಬೆಳಗಾದರೆ ಟೌನ್ ಹಾಲ್ ಎದುರು ನಿಲ್ಲುತ್ತಿದ್ದಾರೆ. ಆದರೆ,ಯುನಿವರ್ಸಿಟಿ,ವಿದ್ಯಾರ್ಥಿಗಳ ಬಗ್ಗೆ ಮಾತನಾಡುವ ನೈತಿಕತೆ ಕಾಕಗಳಿಗಿದೆಯೇ? ಕರ್ನಾಟಕದ ಕುವೆಂಪು ಯುನಿವರ್ಸಿಟಿಯಲ್ಲಿದ್ದ CSLC ಎಂಬ ಸಂಶೋಧನಾ ಕೇಂದ್ರವನ್ನು ಮುಚ್ಚಿಸಿದ್ದು ಇದೇ ಕಾಂಗ್ರೆಸ್ ಸರ್ಕಾರ,ಮುಚ್ಛಿಸುವಂತೆ ಒತ್ತಡ ಹಾಕಿದ್ದು ಟೌನ್ ಹಾಲ್ ಬುದ್ಧಿಜೀವಿಗಳೇ. ಕಾಂಗ್ರೆಸ್ಸಿನವರ ಇತಿಹಾಸ ಎಲ್ಲರಿಗೂ ತಿಳಿದಿರುವುದೇ.ಆದರೆ ಈ ಕಮ್ಯುನಿಸ್ಟರ ಪುಣ್ಯ ಕಾರ್ಯಗಳ ಬಗ್ಗೆ ಸ್ವಲ್ಪ ಹೇಳಬೇಕು. (ಇದು ಕೇವಲ ಕೇರಳದ ಕಮ್ಯುನಿಸ್ಟರ ಇತಿಹಾಸ.ಬಂಗಾಳದ ಕಾಮ್ರೇಡುಗಳ ಕತೆ ಇದಕ್ಕೂ ದೊಡ್ಡದು)

ಅದು ಸೆಪ್ಟಂಬರ್ ೧೭,೧೯೯೬ರ ದಿನ.ಕೇರಳದ ಪರುಮಲ ಜಿಲ್ಲೆಯ ದೇವಸ್ವೋಮ್ ಕಾಲೇಜಿನ ಕ್ಯಾಂಪಸ್ಸಿಗೆ ಲಗ್ಗೆಯಿಟ್ಟ ಕಮ್ಯುನಿಸ್ಟರು ‘ಅನು,ಸುಜಿತ್,ಕಿಮ್’ ಎಂಬ ಎಬಿವಿಪಿಯ ಕಾರ್ಯಕರ್ತರ ಮೇಲೆ ಮುಗಿಬಿದ್ದರು.ಎಬಿವಿಪಿಯೊಂದಿಗೆ ಗುರುತಿಸಿಕಂಡಿದ್ದೇ ಈ ಹುಡುಗರು ಮಾಡಿದ್ದು ತಪ್ಪು,ಕೇರಳದಲ್ಲಿ ಕಮ್ಯುನಿಸ್ಟರು ನಿಮ್ಮನ್ನು ಸುತ್ತುವರೆದರೆಂದರೇ ಸ್ಟಾಲಿನ್/ಮಾವೋ ಪ್ರೇತಾತ್ಮ ಮೃತ್ಯು ರೂಪದಲ್ಲಿ ನಿಮ್ಮೆದುರು ಬಂದು ನಿಂತಂತೆಯೇ ಸರಿ.ಪ್ರಾಣ ಉಳಿಸಿಕೊಳ್ಳಲು ಓಡಿದ ಈ ಹುಡುಗರು ಪಂಪಾ ನದಿಗೆ ಹಾರಿ ಈಜಲಾರಂಭಿಸಿದ್ದರು.ನೀರಿಗೆ ಬಿದ್ದ ವಿದ್ಯಾರ್ಥಿಗಳ ಮೇಲೆ ಕಮ್ಯುನಿಸ್ಟ್ ಗೂಂಡಾಗಳು ಕಲ್ಲು ತೂರಲಾರಂಭಿಸಿದರು. ಆಚೆ ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ಹೆಣ್ಣು ಮಕ್ಕಳು ಕಮ್ಯುನಿಸ್ಟರ ಕಲ್ಲಿನೇಟಿಗೆ ತುತ್ತಾಗಿ ಮುಳುಗುತ್ತಿದ್ದ ಹುಡುಗರತ್ತ ಸೀರೆಗಳನ್ನೆಸೆದು ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೇ,ಮಹಿಳಾವಾದದ ಭಾಷಣ ಬಿಗಿಯುವ ಕಾಮ್ರೇಡುಗಳು ಅವರ ಮೇಲೆ ಕಲ್ಲಿನ ಮಳೆ ಸುರಿದರು.ವಿಧಿಯಿಲ್ಲದೇ ಆ ಹೆಣ್ಣುಮಕ್ಕಳು ಪ್ರಾಣ ಉಳಿಸಿಕೊಳ್ಳಲು ಓಡಿದರು.ಇತ್ತ ಹದಿಹರೆಯದ ವಿದ್ಯಾರ್ಥಿಗಳ ಪ್ರಾಣಕ್ಕೆ ಆಜಾದಿ ಸಿಕ್ಕಿತ್ತು.ಸ್ಟಾಲಿನ್ ಘೋರಿಯೊಳಗಿಂದಲೇ ಲಾಲ್ ಸಲಾಂ ಎಂದನೇನೋ. ಕಡೆಗೇನಾಯ್ತು.ಅವರದ್ದೇ ಸರ್ಕಾರ,ಅವರು ಮಾಡಿದ್ದೇ ಕಾನೂನು.ಯಾರೆಂದರೇ ಯಾರಿಗೂ ಶಿಕ್ಷೆಯಾಗಲಿಲ್ಲ.ಇಂದು ಅದೇ ಕಮ್ಯುನಿಸ್ಟರು ವಿದ್ಯಾರ್ಥಿಗಳ ಆಜಾದಿ ಬಗ್ಗೆ ಮಾತನಾಡುತಿದ್ದಾರೆಂದರೇ ಎಂತ ವ್ಯಂಗ್ಯವಲ್ಲವೇ?

ಮತ್ತಷ್ಟು ಓದು »

8
ಏಪ್ರಿಲ್

ಬಡ್ಜೆಟ್ಟೆಂಬ ಬಕಾಸುರ

– ನಾಗೇಶ ಮೈಸೂರು

union-budget-inner14-newಈಗ ನಾನು ಹೇಳ ಹೊರಟಿರುವುದು ವಾರ್ಷಿಕ ಬಡ್ಜೆಟ್ಟಿನ (ಆಯವ್ಯಯ ಲೆಕ್ಕಾಚಾರ) ಕುರಿತು. ಪ್ರತಿ ವರ್ಷದ ಫೆಬ್ರವರಿ ಕೊನೆಗೆ ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು ಮಂಡಿಸುವ ದೇಶದ ಬಡ್ಜೆಟ್ಟಲ್ಲ ಬಿಡಿ. ಸ್ವಲ್ಪ ಪುಟ್ಟ ಮಟ್ಟದಲ್ಲಿ ಕಂಪನಿಗಳಲ್ಲಿ ನಡೆಯುವ ವಾರ್ಷಿಕ ಬಡ್ಜೆಟ್ಟಿನ ಕುರಿತು. ಕಂಪನಿ ಚಿಕ್ಕದೋ, ಮಧ್ಯಮ ಗಾತ್ರದ್ದೋ, ದೊಡ್ಡದೋ ಒಟ್ಟಾರೆ ಒಂದಲ್ಲಾ ಒಂದು ರೀತಿ ಆಯವ್ಯಯದ ಲೆಕ್ಕಾಚಾರ ನಡೆದೇ ನಡೆಯುತ್ತದೆ. ಆಯಾ ಸಂಸ್ಥೆಯ ವಾತಾವರಣಕ್ಕೆ ಸರಿ-ಸೂಕ್ತ ಮಟ್ಟದಲ್ಲಿ.

ತುಂಬ ಸರಳವಾಗಿ ಹೇಳುವುದಾದರೆ ಈ ಇಡೀ ವಾರ್ಷಿಕ ವ್ಯಾಯಾಮ ಎರಡು ಮುಖ್ಯ ಅಂಶಗಳ ಸುತ್ತ ಗಿರಕಿ ಹೊಡೆಯುವ ಪುನರಾವರ್ತನ ಚಕ್ರ. ಮೊದಲಿಗೆ ಸಂಸ್ಥೆಗೆ ಆ ವರ್ಷದಲ್ಲಿ ಏನೆಲ್ಲ ಮೂಲೆಗಳಿಂದ ಬರಬಹುದಾದ ಆದಾಯದ ಅಂದಾಜು ಮಾಡಿಟ್ಟುಕೊಳ್ಳುವುದು. ಮತ್ತೊಂದು ಕಡೆಯಿಂದ ಆ ಆದಾಯ ಮೂಲಕ್ಕೆ ಸಂವಾದಿಯಾಗಿ ಏನೆಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕಾಗಿ ಬರುವುದೋ ಎಂದು ಅಂದಾಜು ಲೆಕ್ಕಾಚಾರ ಹಾಕುವುದು. ಇವೆರಡು ಅಂದಾಜುಗಳನ್ನು ಕ್ರೋಢಿಕರಿಸಿದರೆ ಒಟ್ಟಾರೆ ನಿವ್ವಳ ಲಾಭ, ನಷ್ಟಗಳ ಅಂದಾಜು ಸಿಗುತ್ತದೆ. ಜತೆಗೆ ಅದನ್ನು ನಿಭಾಯಿಸಲು ಬೇಕಾದ ಹಣ ಬಲ, ಜನ ಬಲ, ಯಂತ್ರ ಬಲ ಇತ್ಯಾದಿಗಳ ಸ್ಥೂಲ ಅಂದಾಜು ಸಿಗುತ್ತದೆ. ಇದನ್ನು ಗುರಿಯತ್ತ ನಡೆಸುವ ಆಧಾರವಾಗಿಟ್ಟುಕೊಂಡು ತಮ್ಮಲ್ಲಿನ ಹಣಕಾಸು ಮತ್ತಿತರ ಸಂಪನ್ಮೂಲಗಳನ್ನು ಸಮರ್ಥವಾಗಿ ಸರಿಯಾದ ಕಡೆ ವಿನಿಯೋಗಿಸಲು ಪ್ರಯತ್ನಿಸುವುದು ಇದರ ಮೂಲೋದ್ದೇಶ. ಹಣ ತುಟ್ಟಿಯಾದ ಕಾರಣ ಮತ್ತು ಹೇರಳವಾಗಿ ದೊರಕದ ಸಂಪನ್ಮೂಲವಾದ ಕಾರಣ ಇರುವಷ್ಟು ಹಣದ ಸೂಕ್ತ ಸದ್ವಿನಿಯೋಗ ಮಾಡಿಕೊಳ್ಳುವುದು ಅತಿ ಮುಖ್ಯವಾದ ಅಂಶ. ಆಯ ವ್ಯಯದ ಲೆಕ್ಕಾಚಾರ ಈ ದಿಸೆಯಲ್ಲಿ ನಡೆಯಲು ಸಹಕಾರಿಯಾಗುವ ಹೆಜ್ಜೆ ಮತ್ತು ನಿಭಾಯಿಸಿ ಸಂಭಾಳಿಸುವ ಆಯುಧ. ಮತ್ತಷ್ಟು ಓದು »

7
ಏಪ್ರಿಲ್

ಮತ್ತೊಮ್ಮೆ ಚೆಕಾಫ್

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

anton-chekhov-1-728ಮಧ್ಯಾಹ್ನದ ಸಮಯವದು. ತೀಕ್ಷ್ಣ ಕಂಗಳ,ಎತ್ತರದ ನಿಲುವಿನ ನಡುವಯಸ್ಕ ವಾಲ್ಡೆರೆವ್ ಕಚೇರಿಯ ಬಾಗಿಲಲ್ಲಿ ನಿಂತಿದ್ದ .ಧರಿಸಿದ್ದ ಮೇಲಂಗಿಯನ್ನು ಸರಿಪಡಿಸಿಕೊಳ್ಳುತ್ತ ನಿಂತಿದ್ದ ಆತ ಮಟ್ಟಸವಾಗಿ ತಲೆ ಬಾಚಿದ್ದ.ತನ್ನ ರೇಷ್ಮೆಯ ರುಮಾಲಿನಲ್ಲಿ ಹುಬ್ಬನ್ನೊರಿಸಿಕೊಳ್ಳುತ್ತ ಆ ಸರಕಾರಿ ಕಚೇರಿಯನ್ನು ಪ್ರವೇಶಿಸಿದ್ದ ಅವನ ನಡಿಗೆಯೂ ಕೊಂಚ ವಿಭಿನ್ನತೆಯಿಂದ ಕೂಡಿತ್ತು. ಸರಕಾರಿ ಕಚೇರಿಯಲ್ಲಿ ಎಂದಿನ ಸೋಮಾರಿತನದ ವಾತಾವರಣ.ಒಂದು ಹರಿವಾಣದ ತುಂಬ ಹತ್ತಾರು ಗ್ಲಾಸುಗಳನ್ನಿಟ್ಟುಕೊಂಡು ಗಡಿಬಿಡಿಯಲ್ಲಿ ನಡೆಯುತ್ತಿದ್ದ ಜವಾನನೊಬ್ಬನನ್ನು ತಡೆದು ನಿಲ್ಲಿಸಿ,’ನಾನೊಂದು ಮಾಹಿತಿಯನ್ನು ಪಡೆಯಬೇಕಿತ್ತು.’ಎಂದು ಪ್ರಶ್ನಿಸಿದ.ಕ್ಷಣಕಾಲ ವಾಲ್ಡೆರೆವ್ ನನ್ನು ದಿಟ್ಟಿಸುತ್ತ ನಿಂತಿದ್ದ ಜವಾನನ್ನು ಗಮನಿಸಿದ ವಾಲ್ಡೆರೆವ್ ಮತ್ತೊಮ್ಮೆ ” ಸರ್ ನಾನು ತುಂಬ ಅಗತ್ಯವಾದ ಮಾಹಿತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಹಾಗೆಯೇ ಮಂಡಳಿ ಪಾಸು ಮಾಡಿದ ಗೊತ್ತುವಳಿಯ ಪ್ರತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಇದನ್ನೆಲ್ಲಿ ವಿಚಾರಿಸಬೇಕೆನ್ನುವುದನ್ನು ದಯವಿಟ್ಟು ತಿಳಿಸಿ”ಎಂದು ಪ್ರಶ್ನಿಸಿದ. ಮತ್ತಷ್ಟು ಓದು »

6
ಏಪ್ರಿಲ್

ಈ ಗೆಲುವು ಮತ್ತೊಂದು ಸೋಲಿಗೆ ಮುನ್ನುಡಿಯಾಗದಿರಲಿ ರಾಘವೇಶ್ವರರೇ….

– ಕೆ ಎಸ್ ರಾಘವೇಂದ್ರ ನಾವಡ

08-1444299163-raghaveshwaraswamijiಅಂತೂ ಇಂತು ಎರಡು ವರುಷಗಳ ಹಿಂದೆ ಹೋಗಿದ್ದ ಹಿಂದೂಗಳ ಮರ್ಯಾದೆ ಮೊನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊಂದು “ಅಂತರಿಕ ಯುದ್ಧ” ಗೆದ್ದಿದ್ದಾರೆ!! ಏಕೆ0ದರೆ ಬಾಹ್ಯ ವೈರಿಗಿ0ತಲೂ ಆಂತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅಂದ ಮೇಲೆ ನಮ್ಮ ರಾಘವೇಶ್ವರ ಗೆಲುವೇನು ಸಾಮಾನ್ಯವೇ? ಏಕೆಂದರೆ ರಾಘವೇಶ್ವರರ ವಿರುದ್ಧ ಹಿಂದಿನ0ತೆ ಯುದ್ದ ಸಾರಿದ್ದು ಬೇರಾರು ಅಲ್ಲ! ಅವರ ಸುತ್ತು ಬಳಗದಲ್ಲಿನ ಹಿತಶತ್ರುಗಳೇ!! ಬ್ರಾಹ್ಮಣರೇ!, ಹಿಂದೂ ಸಂಘಟನೆಗಳೇ! ಇವರೊಂದಿಗೆ ಸಾರಿಗೆ ಒಗ್ಗರಣೆ ಹಾಕುವಂತೆ ಈ ಬಳಗಕ್ಕೆ ಬೇರೆಯವರ ಸಾಥ್ ಇತ್ತಷ್ಟೇ ! ಹಿಂದೂಗಳು ಹಿಂದೂಗಳ ಬೆಳವಣಿಗೆಯನ್ನು ಸಹಿಸಲಾರರು ಎಂಬುದಕ್ಕೆ ಈ ಹಗರಣ ಮತ್ತೊಂದು ಉದಾಹರಣೆಯಷ್ಟೇ!! ಮತ್ತಷ್ಟು ಓದು »

5
ಏಪ್ರಿಲ್

ನಮೋ ಬ್ರಿಗೇಡ್ ಮೇಲಿನ ಕೋಪಕ್ಕೆ ನರೇಶ್ ತುತ್ತಾದರೇ?

– ಹನುಮ೦ತ ಕಾಮತ್

11143647_10204577244893080_67827641632082198_nವಿನಾಯಕ ಪಾಂಡುರಂಗ ಬಾಳಿಗಾ, ಇತ್ತೀಚೆಗೆ ಕೊಲೆಯಾದ ಆರ್‌ಟಿಐ ಕಾರ್ಯಕರ್ತ.ಬಹುಶಃ ಆರು ವರ್ಷಗಳ ಹಿಂದಿನ ಒಂದು ದಿನ. ವಿನಾಯಕ ಬಾಳಿಗಾ ನನ್ನ  ಹತ್ತಿರ  ಬಂದಿದ್ದರು.  ‘ನನಗೆ ಮಾಹಿತಿ  ಹಕ್ಕು  ಕಾಯ್ದೆಯಡಿ  ಮಾಹಿತಿ ಪಡೆಯುವುದು  ಹೇಗೆ  ಎನ್ನುವುದರ  ಬಗ್ಗೆ  ಒಂದಿಷ್ಟು ಮಾಹಿತಿ  ಬೇಕು’ ಎಂದರು. ಕಾರಣ ಕೇಳಿದೆ.. ವಿನಾಯಕ ಬಾಳಿಗಾ ಅವರಿಗೆ ತನ್ನ ಮನೆಯಿಂದ ಕೊಡಿಯಾಲ್  ಬೈಲ್‌ಗೆ  ಹೋಗುವ ರಸ್ತೆಯಲ್ಲಿರುವ  ಪ್ರಖ್ಯಾತ  ಬಿಲ್ಡರ್ ರಮೇಶ್ ಕುಮಾರ್ ಅವರ ಮೌರಿಷ್ಕಾ ವಸತಿ ಸಮುಚ್ಚಯ ಮತ್ತು ಅದರ ಎದುರಿರುವ  ಶಾರದಾ ವಿದ್ಯಾಲಯದ ಮೇಲೆ  ತುಂಬಾ  ಸಿಟ್ಟಿದ್ದಂತೆ ಕಾಣುತ್ತಿತ್ತು. ಸಾಮಾನ್ಯವಾಗಿ ಯಾವುದಾದರೂ  ಒಂದು  ಸಂಸ್ಥೆ ಅಥವಾ ವ್ಯವಸ್ಥೆಯಿಂದ ಸಾರ್ವಜನಿಕರ ಮೇಲೆ ಅನ್ಯಾಯ, ದೌರ್ಜನ್ಯ ನಡೆದಾಗ ಆ ಸಂಸ್ಥೆ ಅಥವಾ ವ್ಯವಸ್ಥೆ  ಎಷ್ಟರ  ಮಟ್ಟಿಗೆ ನಿಯಮ,  ಕಾನೂನುಗಳನ್ನು ಪರಿಪಾಲಿಸುತ್ತಿದೆ, ಯಾವ ಹಂತದಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತನ್ನ ಇಚ್ಚೆ ಬಂದಂತೆ ವರ್ತಿಸುತ್ತದೆ ಎಂದು ಲಿಖಿತ ದಾಖಲೆಗಳು ನಮ್ಮ ಬಳಿ ಇದ್ದಲ್ಲಿ ಆಗ ನ್ಯಾಯಾಲಯದಲ್ಲಿ ಹೋರಾಟ ಮಾಡುವುದು ಸುಲಭ. ಬಹುಶಃ  ಮೌರಿಷ್ಕಾ  ವಸತಿ  ಸಮುಚ್ಚಯ  ಮತ್ತು ಶಾರದಾ  ವಿದ್ಯಾಲಯದ ವಿರುದ್ಧ ಅಂತಹ ದಾಖಲೆಗಳನ್ನು ಪಡೆದು, ಕಾನೂನು ಹೋರಾಟ ಮಾಡಲು ಬಾಳಿಗಾ ತೀರ್ಮಾನಿಸಿದ್ದರು.ಮೌರಿಷ್ಕಾ ಅಪಾರ್ಟಮೆಂಟಿನಿಂದ  ಏನು  ಸಮಸ್ಯೆಯಾಗುತ್ತಿದೆ  ಎಂದು ಕೇಳಿದೆ. ಮತ್ತಷ್ಟು ಓದು »