ಭಾಷೆ – ಜಿಜ್ಞಾಸೆ : ಗಂಜಿ, ಹಿಂಡಿ, ಬೂಸಾ ಇತ್ಯಾದಿ
– ರೋಹಿತ್ ಚಕ್ರತೀರ್ಥ
ನಮ್ಮ ಮನೆಯಲ್ಲಿದ್ದ ಕಾಮಧೇನು ಎಂಬ ದನವನ್ನು ದಿನವೂ ಬಯಲಿಗೆ ಅಟ್ಟಿಸಿಕೊಂಡು ಹೋಗಿ ಸಂಜೆ ಹೊತ್ತಿಗೆ ಮರಳಿ ಹಟ್ಟಿಗೆ ತರುವ ಕೆಲಸ ಮಾಡುತ್ತಿದ್ದ ನನಗೆ, ಹಸುವಿಗೆ ಅಕ್ಕಚ್ಚು ಇಡುವುದು ಅತ್ಯಂತ ಪ್ರಿಯವಾಗಿದ್ದ ಕೆಲಸ. ಬೆಂದ ಅನ್ನವನ್ನು ಬಸಿದಾಗ ಸಿಗುವ ಗಂಜಿನೀರಿಗೆ ಒಂದಷ್ಟು ಕಲ್ಲುಪ್ಪು ಹಾಕಿ ಕರಗಿಸಿ ಅಜ್ಜಿ ಕೊಟ್ಟರೆ ಅದನ್ನು ದನದ ಮುಂದಿಟ್ಟು ಅದು ಕುಡಿಯುವ ಚಂದ ನೋಡುತ್ತ ಕೂರುತ್ತಿದ್ದೆ. ಮೂತಿ ಇಳಿಸಿದರೂ ಮೂಗೊಳಗೆ ನೀರು ಹೋಗದಂತೆ ಬಹಳ ಎಚ್ಚರಿಕೆಯಿಂದ ನಾಜೂಕಾಗಿ ಸುರ್‍ಸುರ್ರೆನ್ನುತ್ತ ಗಂಜಿ ಹೀರುವ ದನದ ಜಾಣ್ಮೆಗೆ ತಲೆದೂಗುತ್ತಿದ್ದೆ. ಮತ್ತಷ್ಟು ಓದು 
ವೇಳಿ ನಾಚಿಯರ್
– ರಂಜನ್ ಕೇಶವ
ಅದು ೧೭೭೩ ರ ಸಮಯ. ಕಪಟ ದೊರೆ ಆರ್ಕೋಟ್ ನವಾಬ ಬ್ರಿಟಿಷರೊಂದಿಗೆ ಕೈ ಜೋಡಿಸಿ ಶಿವಗಂಗೆಯ ರಾಜ ಬಡಗನಾಥ ಪೆರಿಯ ಒಡೆಯದೇವರ್ ದೇವಸ್ಥಾನದ ಪ್ರವಾಸದಲ್ಲಿ ನಿಶ್ಯಸ್ತ್ರನಾಗಿದ್ದಾಗ ಧಾಳಿ ಮಾಡಿ ಹತ್ಯೆಗೈದು ಶಿವಗಂಗೆಯನ್ನು ವಶಪಡಿಸಿಕೊಂಡಿದ್ದ. ಇದಾಗಿ ೮ ವರ್ಷಗಳು ಕಳೆದಾಗಿತ್ತು. ಆಗ ಒಡೆಯ ದೇವರ್ ರ ಪತ್ನಿ ವೇಳಿ ನಾಚಿಯರ್ ತಮ್ ಮಂತ್ರಿ ತಾಂಡವ ಪಿಳೈಯ ಸಹಾಯದ ಮೇರೆಗೆ ದಿಂಡಿಗಲ್ ಸಮೀಪದ ವಿರೂಪಾಚಿಪಾಳಯಮ್ ಗೆ ತಪ್ಪಿಸಿಕೊಂಡು ಹೋಗಿರುತ್ತಾರೆ. ಅಲ್ಲಿನ ಪಾಳೇಗಾರ ಗೋಪಾಲನಾಯಕನ ರಕ್ಷಣೆಯಲ್ಲಿ ಕಾಲಕಳೆಯುತ್ತಾ ಕಳೆದುಹೋದ ಶಿವಗಂಗೆಯನ್ನು ಮರಳಿ ಪಡೆಯಲು ಸಕಲ ಸಿದ್ಧತೆಯನ್ನು ನಾಚಿಯರ್ ನಡೆಸುತ್ತಿದ್ದರು. ಇದಕ್ಕಾಗಿ ನೆರೆಹೊರೆಯವರೆಲ್ಲರ ಸಹಾಯವನ್ನು ಜೊತೆಗೂಡಿಸುತ್ತಿದ್ದರು . ಮತ್ತಷ್ಟು ಓದು 
ಸ್ವಾಮಿ ವಿವೇಕಾನಂದರ ಒಂದು ಮರು ಓದು
3, 4, 5 ಜೂನ್ 2016
ಸ್ಥಳ ಮತ್ತು ಆತಿಥ್ಯ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮೂಡುಬಿದಿರೆ, ಕರ್ನಾಟಕ
ಸಹ ಸಂಘಟಕರು: Vergelijkende Cultuurwetenschappen (ಗೆಂಟ್ ವಿಶ್ವವಿದ್ಯಾಲಯ, ಬೆಲ್ಜಿಯಂ); SDM Centre for Interdisciplinary Research in Humanities and Social Sciences (ಉಜಿರೆ, ಭಾರತ) ಮತ್ತು India Platform
ಪ್ರವೇಶ: ಉಚಿತ, ಆದರೆ ನೊಂದಾವಣೆ ಖಡ್ಡಾಯ.
ನೊಂದಾಯಿಸಿಕೊಳ್ಳಲು, ತಮ್ಮ ಪೂರ್ಣ ಹೆಸರು, ಸಂಸ್ಥೆ ಮುಂತಾದ ವಿವರಗಳೊಂದಿಗೆ ಇಲ್ಲಿಗೆ ಬರೆಯಿರಿ: revisitingvivekananda@gmail.com
ಕಡೆಯ ದಿನಾಂಕ: 10 ಮೇ 2016.
ಸಮ್ಮೇಳನದ ಚಟುವಟಿಕೆಗಳ ತಾತ್ಕಾಲಿಕ ವೆಳಾಪಟ್ಟಿ ಮತ್ತು ಇಂಗ್ಲಿಷ್ concept noteಗಾಗಿ ನೋಡಿ: http://www.cslc.in/dharma-and-ethics/?page=Dharma_And_Ethics_8 ಮತ್ತಷ್ಟು ಓದು 
ಕಂಬಿಯಿಲ್ಲದ ರೈಲು ಹತ್ತಿದವನ ‘ದಿನಾಚರಣೆ’ಗೆ ರಾಜಾಜ್ಞೆ ಹೊರಡಿಸಿದ್ದ ಇತಿಹಾಸ ಗೊತ್ತಾ?
– ಗೋಪಾಲಕೃಷ್ಣ
ಜಾತಿ, ಧರ್ಮ, ವರ್ಣ, ಮೇಲು ಕೀಳು ಯಾವ ಗೀಳಿಗೂ ಬೀಳದೆ ಜಗತ್ತಿನಾದ್ಯಂತ ಸಮಾನತೆಯ ದ್ಯೋತಕವಾಗಿ ಆಚರಿಸಿಕೊಂಡು ಬರುತ್ತಿರುವ ಏಕೈಕ ಆಚರಣೆಯೆಂದರೆ ಅದು ‘ಮೂರ್ಖರ ದಿನಾಚರಣೆ’. ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ 1 ವರ್ಷದ ಮೊದಲ ದಿನವಾಗಿತ್ತು. ಪೋಪ್ ಗ್ರೆಗೋರಿ 1582ರಲ್ಲಿ ಏಪ್ರಿಲ್ ಬದಲಿಗೆ ಜನವರಿಯಿಂದ ಹೊಸವರ್ಷವೆಂದು, ಜನವರಿ 1ನ್ನು ವರ್ಷದ ಮೊದಲ ದಿನವೆಂದು ಬದಲಾಯಿಸಿದ. ಗ್ರೆಗೋರಿಯನ್ ಕ್ಯಾಲೆಂಡರ್ ಒಪ್ಪಿಕೊಳ್ಳದಿದ್ದ ಕೆಲವರು ಏಪ್ರಿಲ್ 1ರಂದು ಹೊಸವರ್ಷಾಚರಣೆ ಮಾಡುತ್ತಿದ್ದರು. ಅಂತಹವರನ್ನು ಮೂರ್ಖರೆಂದು ಗೇಲಿ ಮಾಡುತ್ತಿದ್ದುದರಿಂದ ಏಪ್ರಿಲ್ ಒಂದನೇ ತಾರೀಖು ಮೂರ್ಖರ ದಿನವಾಗಿದೆ ಎನ್ನುವುದು ಇತಿಹಾಸ. ಮತ್ತಷ್ಟು ಓದು 





