ಸಿಟಿಯೊಂದು ಸ್ಮಾರ್ಟ್ ಆಗುವುದು ಯಾವಾಗ?
– ರಾಘವೇಂದ್ರ ಸುಬ್ರಹ್ಮಣ್ಯ
ಮೊನ್ನೆ ಈ ವೆಂಕಯ್ಯನವರ ಗಲಾಟೆ ನಡೆಯುತ್ತಿರುವಾಗ ಯಾರೋ ಸ್ನೇಹಿತರು ವೆಂಕಯ್ಯ ಮಾಡಿದ ಅನ್ಯಾಯ ನೋಡಿ ಅಂತಾ ಪಕ್ಕದಲ್ಲಿರುವ ನ್ಯೂಸ್ ಕ್ಲಿಪ್ಪಿಂಗಿನ ಚಿತ್ರವೊಂದನ್ನು ಹಾಕಿದರು. ಆ ವಾದ ವಿವಾದ ಎಲ್ಲಾ ಮುಗಿದ ಮೇಲೂ, ಅದೊಂದು ಚಿತ್ರ ನನ್ನ ತಲೆಯಲ್ಲುಳಿದು ಬಿಡ್ತು. ವೆಂಕಯ್ಯ ಬದಿಗೆ ಹೋಗಯ್ಯ ಅಂತಾ ತಳ್ಳಿದ್ರೂ ಆ ಚಿತ್ರ ಹೋಗ್ಲಿಲ್ಲ.
ಆ ಚಿತ್ರದಲ್ಲಿದ್ದ ವಿಷಯ “ರಾಜ್ಯದ ಯಾವ ನಗರವೂ ಸ್ಮಾರ್ಟ್ ಸಿಟಿಯಾಗೋದಿಲ್ವಂತೆ” ಅನ್ನೋದು. ಆ ಸುದ್ಧಿಗೆ ನನಗೆ ಬೇಸರವಾಗ್ಲಿಲ್ಲ. ಆದರೆ ಅಲ್ಲಿ ಕೆಳಗಿರೋ ಚಿತ್ರ ನೋಡಿ ಬೇಸರವಾಯ್ತು. Infact, ಕರ್ನಾಟಕದ ನಗರ ಸ್ಮಾರ್ಟ್ ಸಿಟಿಯಾಗುವುದು ಅಂದ್ರೆ ಈ ಚಿತ್ರದಲ್ಲಿರೋವಂತೆ ಆಗೋದು ಅಂತಾದ್ರೆ, ಆ ಅವಕಾಶ ಕರ್ನಾಟಕದ ನಗರವೊಂದಕ್ಕೆ ತಪ್ಪಿದ್ದಕ್ಕೆ ಸಂತೋಷವೇ ಆಯ್ತು. ಯಾಕಂದ್ರೆ ಆ ಚಿತ್ರದಲ್ಲಿದ್ದದ್ದು ಬರೀ ದೊಡ್ಡ, ಎತ್ತರದ ಕಟ್ಟಡಗಳು. ಬಿಟ್ರೆ, ಫೈ ಓವರ್ ಮೇಲೆ ಇನ್ನೊಂದು ಫೈ ಓವರ್ರಿನ ಮೇಲೆ ಮತ್ತೊಂದು ಫ್ಲೈ ಓವರ್. ನಮಗೆ ನಮ್ಮ ಸರ್ಕಾರಗಳು, ಮಾಧ್ಯದವರು ಹಿಡಿಸಿರೋ ಈ ಸ್ಮಾರ್ಟ್ ಸಿಟಿಯ ಹುಚ್ಚು ನೋಡಿ ತಲೆಕೆಟ್ಟು ಹೋಯ್ತು. ಆಮೇಲೆ ಸ್ವಲ್ಪ ಹೊತ್ತಿನ ಮೇಲೆ ಅನ್ನಿಸ್ತು, ಇದು ಹುಚ್ಚಲ್ಲ. ಬರೀ ತಪ್ಪು ಮಾಹಿತಿ, ತಪ್ಪು ಗ್ರಹಿಕೆಯಷ್ಟೇ ಅಂತಾ. ಹೆಚ್ಚು ಯೋಚಿಸಿದಷ್ಟು ಆ ಅನಿಸಿಕೆ ಸರಿ ಅನ್ನಿಸ್ತಾ ಹೋಯ್ತು. ಹಾಗೆಯೇ ನಮ್ಮಲ್ಲೇ ಕೆಲ ಜನ ಮನಗೆ ಹಿಡಿಸಿರುವ ಈ ಸನ್ನಿ ಎಂತದ್ದು ಅಂತಾ ಕಣ್ಣಮುಂದೆ ಹರಿದಾಡಲು ಶುರುವಾಯ್ತು. ಮತ್ತಷ್ಟು ಓದು 
ಅಂದು ಸಿದ್ದರಾಮಯ್ಯನವರನ್ನು ಪ್ರೋತ್ಸಾಹಿಸಿದ್ದಕ್ಕೆ ಹೆಗಡೆ ಅವರ ಆತ್ಮ ಇಂದು ಅದೆಷ್ಟು ನೊಂದುಕೊಳ್ಳುತ್ತಿದೆಯೋ
– ಶ್ರೀನಿವಾಸ್ ರಾವ್
ನಮ್ಮಲ್ಲಿ ವೀರರನ್ನು ಬಣ್ಣಿಸುವುದಕ್ಕೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಗುಣವನ್ನು ಬಣ್ಣಿಸಲು “ಹೇಳುವುದನ್ನೇ ಮಾಡುತ್ತಾನೆ” ಎಂಬ ಮಾತನ್ನು ಬಳಸುತ್ತೇವೆ, ಈಗ ಸಿದ್ದರಾಮಯ್ಯನವರನ್ನು ನೋಡಿದರೆ ಹಾಗೆಯೇ ಅನಿಸುತ್ತಿದೆ. ಈಗ್ಗೆ ಮೂರು ವರ್ಷಗಳ ಹಿಂದೆ ನವನಿರ್ಮಾಣ ವೇದಿಕೆ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ “ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಇದ್ದ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ” ನಾನು ನೂರಕ್ಕೆ ನೂರರಷ್ಟು ಪ್ರಾಮಾಣಿಕನಾಗಿದ್ದೇನೆ ಎಂದು ಹೇಳಿದರೆ ನನಗೆ ನಾನೇ ಸುಳ್ಳು ಹೇಳಿಕೊಂಡಂತೆ” ಎಂಬ ಅಣಿ ಮುತ್ತುಗಳನ್ನು ಉದುರಿಸಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಅಂದು ಹೇಳಿದ ಮಾತನ್ನು ಸತ್ಯ ಎಂದು ನಿರೂಪಿಸಲು ಅದೆಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದು ಬಹುಶಃ ಅವರೊಬ್ಬರಿಗೇ ಗೊತ್ತಿರಬೇಕು. ಮತ್ತಷ್ಟು ಓದು 
ಹಳಿ ತಪ್ಪಿರುವ ಚಾಲಕನಿಗೆ ತಿಳಿಹೇಳುವವರು ಯಾರು?
– ರೋಹಿತ್ ಚಕ್ರತೀರ್ಥ
ಮೂಕಂ ಕರೋತಿ ವಾಚಾಲಂ. ಹಾಗಾಗಿದೆ ನನಗೆ. ಬರೆಯಬೇಕಿದ್ದ ಕೈ ಓಡುತ್ತಿಲ್ಲ. ಮನಸ್ಸು ಹೆಪ್ಪುಗಟ್ಟಿ ಕೂತಿದೆ. ಏನು ಅಂತ ಬರೆಯಲಿ? ಏನನ್ನು ಹೇಳಲಿ? ಕತ್ತಲಿಗೆ ಹತ್ತೆ ತಲೆ? ನೂರಾರೆ? ಅದು ಅಸಂಖ್ಯ! ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ ಅನಾದಿ; ಕೋದಂಡದಂಡವೂ ಹೀಗೆ ದಂಡ ಎನ್ನುವ ಗೋಪಾಲಕೃಷ್ಣ ಅಡಿಗರ ಸಾಲುಗಳು ತಲೆಯೊಳಗೆ ಅಪ್ಪಾಲೆತಿಪ್ಪಾಲೆಯಂತೆ ಸುತ್ತುತ್ತಿವೆ. ಮಳೆಗಾಲದ ಕಾರ್ಮೋಡಗಳು ಸುತ್ತ ಇಳಿಬಿದ್ದಿರುವಂತೆ ಹೃದಯದ ತುಂಬೆಲ್ಲ ಕತ್ತಲೆ ತೂಗುತ್ತಿದೆ. ಮೈ ಮಂಜುಗಟ್ಟಿದೆ. ಬರೆಯುವುದನ್ನು ಉಸಿರಾಟದಷ್ಟೇ ಸಹಜವಾಗಿ ಮಾಡಬಲ್ಲ ನನಗೂ ಕೈಯನ್ನು ಯಾರೋ ಎಳೆದುಕಟ್ಟಿರುವಂಥ ಭಾವ. ಮತ್ತಷ್ಟು ಓದು 
ಕವಲು ದಾರಿಯಲ್ಲಿ ಕನ್ನಡ
-ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ
ನನ್ನ ಸ್ನೇಹಿತರ ಮನೆಯಲ್ಲಿ ನಡೆದ ಘಟನೆ ಇದು. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಯಾದ ನನ್ನ ಸ್ನೇಹಿತರ ಮಗ ಕನ್ನಡ ಪಠ್ಯಪುಸ್ತಕದಲ್ಲಿನ ಪದವೊಂದರ ಅರ್ಥಕ್ಕಾಗಿ ತನ್ನ ತಂದೆಯಲ್ಲಿ ಕೇಳಿದ. ಅವರಿಬ್ಬರ ನಡುವಿನ ಸಂಭಾಷಣೆ ಹೀಗಿತ್ತು. ‘ಪಪ್ಪಾ ವ್ಹಾಟ್ ಈಜ್ ಬೇವಿನ ಮರ?’. ಆ ಮಗುವಿಗೆ ಅರ್ಥವಾಗಬೇಕೆಂದರೆ ಆತನದೇ ಧಾಟಿಯಲ್ಲಿ ಉತ್ತರಿಸುವುದು ಬಿಟ್ಟು ಆ ತಂದೆಗೆ ಬೇರೆ ದಾರಿಯೇ ಇರಲಿಲ್ಲ. ‘ಪಾಪು ಬೇವಿನಮರ ಮೀನ್ಸ್ ನೀಮ್ ಟ್ರೀ. ಎ ಟ್ರೀ ಆಫ್ ಬಿಟರ್ ಲೀವ್ಸ್. ಹ್ಯಾವ್ ಯು ಸೀನ್ ಎ ಬಿಗ್ ಟ್ರೀ ಇನ್ ಗ್ರ್ಯಾಂಡ್ ಪಾ ಹೌಸ್? ದಟ್ ಈಜ್ ಬೇವಿನ ಮರ’. ತಂದೆ ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ನೀಡಿದ ನಂತರ ಆ ಮಗುವಿನ ಸಮಸ್ಯೆ ಸುಲಭವಾಗಿ ಬಗೆಹರಿಯಿತು. ತನ್ನದೇ ಪರಿಸರದಲ್ಲಿನ ವಸ್ತುವೊಂದರ ವಿವರಣೆಗಾಗಿ ಆ ಮಗು ತನ್ನದಲ್ಲದ ಅನ್ಯಭಾಷೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಸಹಜವಾಗಿಯೇ ಆತಂಕಪಡುವ ಸಂಗತಿ. ನಾವುಗಳೆಲ್ಲ ಚಿಕ್ಕವರಾಗಿದ್ದಾಗ ಇಂಗ್ಲಿಷ್ ಪಠ್ಯ ಪುಸ್ತಕದ ಜೊತೆಗೆ ಗೈಡ್‍ಗಳನ್ನು ಬಳಸುತ್ತಿದ್ದೇವು. ಆ ಗೈಡ್‍ಗಳಲ್ಲಿ ಇಂಗ್ಲಿಷ್ ಪಠ್ಯದ ಕನ್ನಡ ಭಾವಾರ್ಥದ ಜೊತೆಗೆ ಇಡೀ ಪಠ್ಯ ಕನ್ನಡ ಅಕ್ಷರಗಳಲ್ಲಿ ಪ್ರಕಟವಾಗಿರುತ್ತಿತ್ತು. ಹೀಗಾಗಿ ನಾವು ಇಂಗ್ಲಿಷ ಭಾಷೆಯನ್ನು ಕನ್ನಡ ಅಕ್ಷರಗಳ ಮೂಲಕವೇ ಕಲಿಯುತ್ತಿದ್ದೇವು. ಆದರೆ ಇವತ್ತು ನಮ್ಮದೇ ನೆಲದ ಮಕ್ಕಳು ಕನ್ನಡ ಭಾಷೆಯನ್ನು ಇಂಗ್ಲಿಷ್ ಮೂಲಕ ಕಲಿಯಲು ಪ್ರಯತ್ನಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಇಂಗ್ಲಿಷ್ ಭಾಷೆಯನ್ನು ಕನ್ನಡದ ಮೂಲಕ ಕಲಿಯುವಂತಾಗಲಿ ಎನ್ನುವ ಸಲಹೆಯನ್ನು ಕೇಳದಷ್ಟು ಬಹುದೂರ ನಾವುಗಳೆಲ್ಲ ಸಾಗಿ ಬಂದಿದ್ದೇವೆ. ಮತ್ತಷ್ಟು ಓದು 
ನುಡಿ ಮರಣ ಭಾಷಾವಸಾನ
– ಸುದರ್ಶನ ಗುರುರಾಜರಾವ್
ಮುನ್ನುಡಿ:
ಕೆಳಗಿನ ಕವಿತಾ ಸಂಭಾಷಣೆಯ ಮೂಲಕ – ಸಮಸ್ಯೆಯ ಪರಿಚಯ ಗಮನಿಸಿ
ಕನ್ನಡಿಗ
ಓ ತಾಯಿ ನೀನೇಕೆ ಬೇಡುತಿಹೆ ಭಿಕ್ಷೆ
ಎಲ್ಲಿ ಹೋಯಿತು ನಿನ್ನ ಮನೆ ಮಂದಿ ರಕ್ಷೆ
ಬಾಡಿ ನಲುಗಿಹುದಲ್ಲ ಈ ನಿನ್ನ ವದನ
ಏನಾಯ್ತು ಆ ನಿನ್ನ ಬಹು ಭವ್ಯ ಸದನ
ಭುವನೇಶ್ವರಿ ದೇವಿ (ಕನ್ನಡ ಮಾತೆ:)
ಮಗುವೆ ಮನೆಯಿದ್ದು ಪರದೇಶಿ ನಾನು
ದಿನವೂ ನಾ ಅರೆಹೊಟ್ಟೆ ನೀ ತಿಳಿಯೆಯೇನು
ನನ್ನ ಕೋರಿಕೆಗಿನಿತು ಕೊಡದೆ ಬೆಲೆಯನ್ನು
ಬೇಯಿಸುತ ಬಡಿಸಿಹರು ಕಲಬೆರೆಕೆಯನ್ನು ಮತ್ತಷ್ಟು ಓದು 
ನವಿಲುಗರಿ…..
– ಮಯೂರಲಕ್ಷ್ಮೀ
ಮುಖಪುಸ್ತಕದ ಅಭಿವ್ಯಕ್ತ ಮನಸುಗಳು…….
ದೈನಂದಿನ ಯಾಂತ್ರಿಕ ಬದುಕಿನ ಏಕತಾನತೆಯಿಂದ ಹೊರಬಂದು ಮನದಲ್ಲಿ ಹಾದು ಹೋಗುವ ಹಲವು ಭಾವನೆಗಳನ್ನು ವ್ಯಕ್ತಪಡಿಸಲು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಸಿಗುವ ಸಾಧನಗಳಲ್ಲಿ ಇಂದು ಮುಖಪುಟವೂ (ಫೇಸ್‍ಬುಕ್) ಮುಖ್ಯ ಪಾತ್ರ ವಹಿಸುತ್ತಿದೆ. ಹಲವರಿಗೆ ಮುಖಪುಸ್ತಕದ ಸಂವಾದಗಳಲ್ಲಿ ತಮ್ಮ ವಿಚಾರಧಾರೆಗಳನ್ನು ಎಲ್ಲರೊಡನೆ ಹಂಚಿಕೊಳ್ಳುವ ಬಹುಮುಖ್ಯ ತಾಣಗಳು… ತಮಗಾದ ಹತಾಶೆ ಮತ್ತು ಸೋಲುಗಳಿಂದ ಹೊರಬಂದ ಮತ್ತೊಬ್ಬರಲ್ಲಿ ಕಂಡು ಗೆಲುವಿನ ಹಾದಿಯನ್ನು ಅರಸುವ ಹೃದಯಗಳು…ಇಂದಿನ ಮಾಹಿತಿ ಯುಗದಲ್ಲಿ ಐತಿಹಾಸಿಕ ಗತವೈಭವದ ಹಿರಿಮೆಯನ್ನು ಸಾರುವ ಬರಹಗಳು… ದೇಶ-ದೇಶಗಳ ಸಂಸ್ಕೃತಿಯನ್ನು ಕುರಿತು ದಾಖಲೆಗಳನ್ನು ನೀಡುವ ಪ್ರಾಜ್ಞ ದೃಷ್ಟಿಕೋನಗಳು… ಶಿಲಾಯುಗದಿಂದ ಸೈಬರ್‍ಯುಗದವರೆಗೂ ಅರಿವಿನ ಹಂದರವನ್ನು ಒರೆಹಚ್ಚುವ ವೈಜ್ಞಾನಿಕ ಸಿದ್ಧಾಂತಗಳು… ಪ್ರಚಲಿತ ವಿದ್ಯಮಾನಗಳನ್ನು ವಿಶ್ಲೇಷಿಸಿ BURNING ISSUE ಗಳನ್ನು ಕುರಿತು ಗಂಭೀರ ಚರ್ಚೆಗಳಲ್ಲಿ ಭಾಗವಹಿಸಿ ತಮ್ಮ ತಮ್ಮ ವಾದಗಳನ್ನು ವ್ಯಕ್ತಪಡಿಸುವ ಮನಸುಗಳು… ಸಕಾರಾತ್ಮಕ ನಿಲುವುಗಳನ್ನು ಪಾಸಿಟೀವ್ ದೃಷ್ಟಿಕೋನದಲ್ಲಿ ಭಿತ್ತರಿಸುವ ಚಿತ್ರ ಸಂದೇಶಗಳನ್ನು ಕಂಡ ಕೂಡಲೇ ತಮ್ಮ ಗೋಡೆಯ ಮೇಲೆ ಲಗತ್ತಿಸುವ ಕೈಗಳು… ಯಾರಿಗೋ ಎಲ್ಲೋ ಕಷ್ಟವಾದಲ್ಲಿ ಆ ಕಷ್ಟವು ತಮಗೇ ಬಂದಂತೆ ಕೂಡಲೇ ಪರಿತಿಪಿಸಿ ಪ್ರತಿಕ್ರಯಿಸುವ ಶುದ್ಧಾತ್ಮಗಳು… ಪ್ರಕೃತಿಯ ವಿಸ್ಮಯಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಂರಕ್ಷಿಸುವ ಛಾಯಾಚಿತ್ರ ಶೀರ್ಷಿಕೆಗಳು…ಇಂತಹ ನೂರಾರು ಸಾವಿರಾರು ಜನರು ದಿನನಿತ್ಯ ಫೇಸ್‍ಬುಕ್‍ನ ಜಾಲತಾಣದಲ್ಲಿ ಸಂವಹನಶೀಲರಾಗಿರುತ್ತಾರೆ. ತಿಳಿದೋ ತಿಳಿಯದೆಯೋ ನಾವು ಈ ಅಂತರ್‍ಜಾಲವೆಂಬ ತಾಣವಲ್ಲದ ತಾಣದಲ್ಲಿ ಕಳೆದು ಹೋಗುತ್ತಿರುತ್ತೇವೆ….. ಮತ್ತಷ್ಟು ಓದು 
ಸಿಬಿಐ ಅಧಿಕಾರಿಗಳಾಗಿ ಸೇರಿದವರಿಗೆ ಮರೆಯಲಾರದ ಪಾಠ
– ರೋಹಿತ್ ಚಕ್ರತೀರ್ಥ
1987ನೇ ಇಸವಿಯ ಮಾರ್ಚ್ ತಿಂಗಳು. 19ನೇ ತಾರೀಕು. ಮುಂಬಯಿಯ ಪೊಲೀಸ್ ಮುಖ್ಯ ಕಚೇರಿಗೆ ಒಂದು ಫೋನ್‍ಕಾಲ್ ಬಂತು. ಇನ್ನೂ ಹದಿಮೂರು ವರ್ಷ ಸರ್ವೀಸ್ ಇದ್ದ, ದಕ್ಷ ಅಧಿಕಾರಿಯಾಗಿ ಹೆಸರು ಮಾಡಿ ಅದಾಗಲೇ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಗೇರಿದ್ದ ಅರವಿಂದ ಇನಾಂದಾರ್ ಫೋನೆತ್ತಿಕೊಂಡರು. ಅತ್ತ ಕಡೆಯಿಂದ ರಿಸೀವರ್ ಹಿಡಿದಿದ್ದ ಧ್ವನಿ ತಾನು ಒಪೆರಾ ಹೌಸ್‍ನಿಂದ ಮಾತಾಡುತ್ತಿರುವುದಾಗಿ ಹೇಳಿಕೊಂಡಿತು. ಅಲ್ಲಿನ ಒಂದು ಹೆಸರಾಂತ ಜ್ಯುವೆಲ್ಲರಿ ಮಳಿಗೆಯಲ್ಲಿ ಸಿಬಿಐ ದಾಳಿಯಾಗಿರುವುದಾಗಿ ಆ ಧ್ವನಿ ಹೇಳಿತು. ಮುಂಬಯಿಯನ್ನು ಕಂಡುಬಲ್ಲವರಿಗೆ ಒಪೆರಾ ಹೌಸ್ ಬಗ್ಗೆ ಹೆಚ್ಚೇನೂ ವಿವರಿಸಬೇಕಾಗಿಲ್ಲ. ನಮ್ಮ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಪುಸ್ತಕಗಳಿದ್ದಂತೆ, ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಬಟ್ಟೆಗಳನ್ನು ಹರವಿ ಹಾಕಿದಂತೆ, ಚಿಕ್ಕಪೇಟೆಯಲ್ಲಿ ಸೀರೆಗಳ ಬೆಟ್ಟ ಪೇರಿಸಿದಂತೆ ಅಥವಾ ಕೆ.ಆರ್.ಮಾರ್ಕೆಟ್‍ನಲ್ಲಿ ಹೂಗಳ ಜಾತ್ರೆ ನಡೆಸಿದಂತೆ ಮುಂಬಯಿಯ ಒಪೆರಾ ಹೌಸ್‍ನಲ್ಲಿ ಜ್ಯುವೆಲ್ಲರಿ ಮಳಿಗೆಗಳದ್ದೇ ದಿಬ್ಬಣ. ಒಂದಕ್ಕಿಂತ ಒಂದು ಬಿಗುವಾದ, ಎತ್ತರವಾದ, ಭವ್ಯವಾದ ಆಭರಣದಂಗಡಿಗಳು ಇರುವ ಅತ್ಯಂತ ಪಾಶ್ ಜಾಗ ಇದು. ದಿನವೊಂದಕ್ಕೆ ಏನಿಲ್ಲೆಂದರೂ ಈ ಜಾಗದಲ್ಲಿ ಹತ್ತಿಪ್ಪತ್ತು ಕೋಟಿ ರುಪಾಯಿಗಳ ವ್ಯವಹಾರ ಚಕಾಚಕ್ ನಡೆದುಹೋಗುತ್ತದೆ. ಅದೆಷ್ಟು ಕಪ್ಪುದುಡ್ಡು ಇಲ್ಲಿನ ಝಗಮಗ ಚಿನ್ನದ ಹೊಳಪಲ್ಲಿ ಬಿಳುಪಾಗಿಹೋಗುತ್ತವೋ ಲೆಕ್ಕವಿಟ್ಟವರಾರು! ಹಾಗಾಗಿ, ಸಿಬಿಐ ದಾಳಿ ನಡೆದಿದೆ ಎನ್ನುವುದನ್ನು ಕೇಳಿದಾಗ ಇನಾಂದಾರರೇನೂ ಅಷ್ಟೊಂದು ಅಚ್ಚರಿಪಡಲಿಲ್ಲ. ಆದರೆ ಮುಂದಿನ ಕತೆ ಕೇಳಿದಮೇಲೆ ಮಾತ್ರ ಆಶ್ಚರ್ಯಚಕಿತರಾಗಿ, ತಕ್ಷಣ ತನ್ನ ಗಾಡಿಯನ್ನು ಒಪೆರಾ ಹೌಸ್ ಕಡೆ ಓಡಿಸಿದರು. ಮತ್ತಷ್ಟು ಓದು 
ವಿದ್ಯಾರ್ಥಿ ರಾಜಕೀಯ ಕ್ರಿಯಾಶೀಲತೆ ಮುಂದಿರುವ ಸವಾಲುಗಳು
ಬಿ.ಜಿ. ಕುಲಕರ್ಣಿ
ಸಹಾಯಕ ಪ್ರಾಧ್ಯಾಪಕರು
ರಾಜ್ಯಶಾಸ್ತ್ರ ವಿಭಾಗ
ಬಸವಪ್ರಭು ಕೋರೆ ಮಹಾವಿದ್ಯಾಲಯ
ಚಿಕ್ಕೋಡಿ. ಜಿಲ್ಲಾ: ಬೆಳಗಾವಿ
ವಿದ್ಯಾರ್ಥಿ ರಾಜಕೀಯ ಕ್ರೀಯಾಶಿಲತೆ ಕುರಿತು ಚರ್ಚಿಸುವಾಗ ಉದ್ಭವವಾಗುವ ಮೊದಲ ಪ್ರಶ್ನೆಯೆಂದರೆ ವಿದ್ಯಾರ್ಥಿಗಳು ರಾಜಕೀಯದಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ? ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಪಂಥಗಳಿವೆ. ಮೊದಲನೆಯ ಪಂಥದ ಅಭಿಪ್ರಾಯವೆನೆಂದರೆ ವಿದ್ಯಾರ್ಥಿಗಳ ಮೊದಲ ಆದ್ಯತೆ ಅಧ್ಯಯನ. ಆದ್ದರಿಂದ ವಿದ್ಯಾರ್ಥಿಗಳು ಅಧ್ಯಯನದಲ್ಲಿ ನಿರತರಾಗಬೇಕು. ಆ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ವಾದಿಸುತ್ತಾರೆ. ಎರಡನೆ ಪಂಥವು ವಿದ್ಯಾರ್ಥಿಗಳೂ ಜನ ಸಮೂಹದ ಭಾಗವಾಗಿರುವುದರಿಂದ, ರಾಜಕೀಯ ಸಮಾಜ ಬಿಟ್ಟು ಇಲ್ಲವಾದ್ದರಿಂದ, ರಾಜಕೀಯ ನಿರ್ಧಾರಗಳು ವಿದ್ಯಾರ್ಥಿಗಳ ಮೇಲೂ ಪ್ರಭಾವ ಬೀರುವುದರಿಂದ ವಿದ್ಯಾರ್ಥಿಗಳು ರಾಜಕೀಯದಲ್ಲಿ ಭಾಗವಹಿಸಬೇಕು ಎಂಬ ವಾದ ಮಂಡಿಸುತ್ತಾರೆ. ವಿದ್ಯಾರ್ಥಿಗಳು ರಾಜಕೀಯದಲ್ಲಿ ಏಕೆ ಭಾಗವಹಿಸಬೇಕು ಎಂಬ ವಾದಕ್ಕೆ ಪ್ರಬಲ ಕಾರಣಗಳನ್ನು ಇಲ್ಲಿ ಚರ್ಚಿಸಲಾಗಿದೆ. ಮತ್ತಷ್ಟು ಓದು 
“ಮಿಡಿದ ಹೃದಯಗಳು”
ಪ್ರವೀಣ್ .ಎಸ್
ಜೂನ್ ತಿಂಗಳ ಮುಂಜಾನೆಯ ಮಳೆ, ನಾನು ಆಫೀಸ್ಗೆ ಪ್ರಯಾಣಿಸಲು ದ್ವಿಚಕ್ರ ವಾಹನವನ್ನು ತರಾತುರಿಯಲ್ಲಿ ಹೊರ ತೆಗೆಯಲು ಸಾಹಸ ಪಡುತ್ತಿದ್ದೆ ಆದದ್ದೇನು?…ಅನಿರೀಕ್ಷಿತ ತಾಂತ್ರಿಕ ದೋಷ!, ಪೆಚ್ಚು ಮೊರೆ ಹಾಕಿಕೊಂಡು ಅದೃಷ್ಟವನ್ನು ಬಯ್ಯುತ್ತ, ಇಂದು ಮಹಾ ನಗರ ಪಾಲಿಕೆಯ ಬಸ್ಸೇ ಗತಿಯೆಂದು, ಕೈ ಗೆ ಸಿಕ್ಕ ಛತ್ರಿ ಹಿಡಿದು, ಬ್ಯಾಗನ್ನು ಬೆನ್ನಿಗೇರಿಸಿ, ಪ್ಯಾಂಟನ್ನು ಅರ್ಧ ಅಡಿ ಮಡಿಸಿ, ಹಳ್ಳ ಕೊಳ್ಳಗಳ ರಸ್ತೆಯಲ್ಲಿ ಹೆಜ್ಜೆ ಹಾಕುತ್ತ ಆತುರವಾಗಿ ಬಸ್ ಸ್ಟಾಪಿನೆಡೆಗೆ ಪ್ರಯಾಣಿಸಿದೆ. ಅಂತೂ ಇಂತು ತುಂತುರು ಮಳೆಯ ಫಲಿತಾಂಶವೋ ಎಂಬ ಟ್ರಾಫಿಕ್ ಜಂಜಾಟಕ್ಕೆ ಸಿಲುಕಿ ಬಸವಳಿದ ಬಸ್ ಬಂದೆ ಬಿಟ್ಟಿತು, ಇನ್ನು ಚಾಲಕರು ಮತ್ತು ನಿರ್ವಾಹಕರು ಒಂದು ಕಾಪಿ ಹೀರಲೋ / ಬೀಡಿ ಹಚ್ಚಲೋ ಕೆಳಗಿಳಿದರು, ಆಗಲೇ ಸಮಯ 8 ಕ್ಕೆ ಹತ್ತು ನಿಮಿಷ. ಬಸ್ ಏರಿ ಸಾಮಾನ್ಯವಾಗಿಯೇ ಕಿಟಕಿ ಪಕ್ಕದ ಸೀಟ್ನಲ್ಲಿ ಕೂರುವ ಜನ ಇಂದು ಯಾರೂ ಆ ಸೀಟ್ಗಳ ಹಿಡಿಯುತ್ತಿಲ್ಲ, ಕಾರಣ ನಿಮಗೆ ಗೊತ್ತೇ ಇದೆ! ಎಷ್ಟು ಪ್ರಮಾಣದ ಮಳೆ ಹೊರಗೆ ಆಗಿದೆ ಎಂದು ತಿಳಿಯಲು ನಮ್ಮೂರಿನ ಬಸ್ಸಿನೊಳಗೆ ಹೊಕ್ಕರೆ ಸಾಕು (ಮಳೆ ಅಳೆಯುವ ಸಾಧನವಿಟ್ಟು ಅಳೆವುದೊಂದೇ ಬಾಕಿ, ಹವಾಮಾನ ಇಲಾಖೆಗೆ) ಆ ವಿಷಯ ಇರಲಿ ಬಿಡಿ; ಅಂತೂ ನನಗೂ ಒಂದು ಸೀಟು ದೊರಕಿತು. ಮತ್ತಷ್ಟು ಓದು 
ಜನರಲ್ ತಿಮ್ಮಯ್ಯ
– ಸಿ. ರವಿ ಕುಮಾರ್
ಒಂದು ದಿನ ನನ್ನ ತಂದೆಯವರು ತಮ್ಮ ಬಳಿ ಇದ್ದ ಮಿಲಿಟರಿ ಇತಿಹಾಸ ಈ ಒಂದು ಘಟನೆಯನ್ನು ತಿಳಿಸಿದರು. ಅದನ್ನು ಕೇಳಿದ ಮೇಲೆ ಬಹುಶಃ ನಮ್ಮ ಅಂದಿನ ಪ್ರಧಾನಿ ನೆಹರುರವರು ಈ ವ್ಯಕ್ತಿಯ ಅನುಭವವನ್ನು ಬಳಸಿಕೊಂಡಿದ್ದರೆ 1962ರ ಚೇನದೊಡನೆ ನಡೆದ ಯುದ್ಧದ ಗತಿ ಬದಲಾಗುತ್ತಿತ್ತೊ ಏನೊ? `ಅಪ್ಪಣೆ ಮೀರಿ ತಿಮ್ಮಯ್ಯ ಗೆದ್ದಾಗ’ ಎರಡನೇ ಮಹಾಯುದ್ಧದ ಮಧ್ಯಕಾಲ. ಜಪಾನಿ ಪಡೆಗಳು ಬರ್ಮಾ ದೇಶದಲ್ಲಿ ಹೊಕ್ಕು ಎತ್ತೆತ್ತಲೂ ಹಬ್ಬಿದ್ದವು. ಇರಾವತೀ ನದಿಯ ಕಣಿವೆ ಜಪಾನೀಯರ ವಶವಾಗಿ ಬ್ರಹ್ಮಪುತ್ರಾ ಕಣಿವೆಯೀಗ ಅವರ ತೋಪುಗಳ ಗರ್ಜನೆಯಿಂದ ಪ್ರತಿಧ್ವನಿಸುತ್ತಿತ್ತು. ಬ್ರಿಟಿಶ್ ಸಾಮ್ರಾಜ್ಯವಾದದ ಪರಕ್ರಮ ಸೂರ್ಯ ಅಕಾಲದಲ್ಲೇ ಅಸ್ತಂಗತನಾಗಿದ್ದ. ಬೆಟ್ಟದ ಒಂದು ಕೋಡಿನಲ್ಲಿ ಇನ್ನೂರೈವತ್ತು ಜಪಾನೀ ಸೈನಿಕರು ಕಂದಕ ತೋಡಿ ಬಲವಾಗಿ ತಳವೂರಿದ್ದರು. ಆ ಶೃಂಗದ ಕೆಳಗೆ ಕಡಿದಾದ ಬೆಟ್ಟದ ಗೋಡೆಗೆ ಅಂಟಿಕೊಂಡು ಭಾರತ ಸೈನ್ಯದ ಕುಮಾಂವ್ ರೆಜಿಮೆಂಟಿನ ಜವಾನರು ಟೆಂಟ್ ಹಾಕಿದ್ದರು. ಎರಡು ಸೈನ್ಯದ ಸೈನಿಕರು ತಮ್ಮ ತಮ್ಮ ನೆಲೆಗಳನ್ನು ಭದ್ರಪಡಿಸಿಕೊಂಡು ಮುನ್ನುಗುವ ದಾರಿಯನ್ನು ಯೋಚಿಸುತ್ತಿದ್ದವು. ಮತ್ತಷ್ಟು ಓದು 






