ವಿಷಯದ ವಿವರಗಳಿಗೆ ದಾಟಿರಿ

Archive for

4
ಜುಲೈ

ಯಡಿಯೂರಪ್ಪನವರಿಂದ ಜನರು ನಿರೀಕ್ಷಿಸುತ್ತಿರುವುದೇನು?

– ರಾಕೇಶ್ ಶೆಟ್ಟಿ

800x480_IMAGE55065639ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ಪ್ರಧಾನಿ ಮೋದಿಯವರ ಭಾಷಣದಿಂದ ಪ್ರೇರಿತರಾಗಿ, ತಾನು ಸ್ವಇಚ್ಚೆಯಿಂದ ಕರ್ನಾಟಕ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ತೊಡಗಿಸಿಕೊಳ್ಳುವುದಾಗಿ ಹೇಳಿಕೊಂಡು ೨೦೧೪ರ ಮೇ ೨೨ನೇ ತಾರೀಖಿನಂದು ಯಡ್ಯೂರಪ್ಪನವರು ಮೋದಿಯವರಿಗೊಂದು ಪತ್ರ ಬರೆದಿದ್ದರು.

ಆ ಪತ್ರ ಬರೆದು ಸುಮಾರು ೨ ವರ್ಷಗಳ ನಂತರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆ ಯಡ್ಯೂರಪ್ಪನವರಿಗೆ ಒಲಿಯಿತು. ಈ ಬೆಳವಣಿಗೆಗೆ ಪಕ್ಷದೊಳಗೆ ಹಾಗೂ ಹೊರಗೆ ಭರ್ಜರಿ ಸ್ವಾಗತವೇ ಸಿಕ್ಕಿತು. ಅಧ್ಯಕ್ಷರಾಗುತ್ತಿದ್ದಂತೆ ‘ಎಲ್ಲರನ್ನೂ ವಿಶ್ವಾಸಕ್ಕೆ’ ತೆಗೆದುಕೊಂಡು ಮುನ್ನಡೆಯುತ್ತೇನೆ ಎಂದಿದ್ದರು ಯಡ್ಯೂರಪ್ಪ. ಮುಖ್ಯಮಂತ್ರಿಯಾಗಿದ್ದಾಗ ಸ್ವಯಂಕೃತಾಪರಾಧದ ಜೊತೆಗೆ, ಬೆನ್ನಿಗಂಟಿಕೊಂಡಿದ್ದ ಭಟ್ಟಂಗಿಗಳು, ಕಿಂಕರರಂತೆ ಆಜೂ-ಬಾಜೂ ಕಾಣಿಸಿಕೊಳ್ಳುತ್ತಿದ್ದವರು, ಪಕ್ಷದೊಳಗಿನ ಮೀರ್ ಸಾಧಿಖರ ಕುತಂತ್ರವೂ ಸೇರಿ ಅಧಿಕಾರವನ್ನೂ ಕಳೆದುಕೊಂಡು, ಕಾನೂನಿನ ಪೆಟ್ಟನ್ನು ತಿಂದು, ಕಡೆಗೆ ನ್ಯಾಯಾಲಯದಲ್ಲಿ ಜಯಿಸಿ ಸಾಕು ಸಾಕೆನಿಸುವಷ್ಟು ಹೈರಾಣಾದ ನಂತರ ದೊರೆತ ರಾಜ್ಯಾಧಕ್ಷ್ಯ ಹುದ್ದೆಯನ್ನು ಯಡ್ಯೂರಪ್ಪನವರು ಸರಿಯಾಗಿ ನಿರ್ವಹಿಸಿದ್ದಾರೆಯೇ? ಮತ್ತಷ್ಟು ಓದು »

2
ಜುಲೈ

ಆತನ ಕತೆಗಳಲ್ಲಿ ಮಾ೦ತ್ರಿಕತೆಯೂ ಇದೆ, ವಾಸ್ತವವೂ ಇದೆ…!!

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

759ಅದೊ೦ದು ಬೆಚ್ಚಗಿನ, ಮಳೆಯಿಲ್ಲದ ಸೋಮವಾರದ ಸು೦ದರ ಬೆಳಗು. ಔರೇಲಿಯೊ ಎಸ್ಕೊವರ್ ಎನ್ನುವ ಪದವಿಯಿಲ್ಲದ ದ೦ತವೈದ್ಯ ಬೆಳಗ್ಗಿನ ಅರು ಗ೦ಟೆಗಾಗಲೇ ತನ್ನ ಚಿಕಿತ್ಸಾಲಯದ ಬಾಗಿಲು ತೆರೆದಿದ್ದ. ಪ್ಲಾಸ್ಟಿಕ್ ಅಚ್ಚುಗಳಿಗಿನ್ನೂ ಅ೦ಟಿಕೊ೦ಡಿದ್ದ ಕೆಲವು ನಕಲಿ ಹಲ್ಲುಗಳನ್ನು ಗಾಜಿನ ಬೀರುವಿನಿ೦ದ ತೆಗೆದಿರಿಸಿಕೊ೦ಡ ಆತ, ಮೇಜಿನ ಮೇಲೆ ಬೆರಳೆಣಿಕೆಯಷ್ಟಿದ್ದ ತನ್ನ ವೈದ್ಯಕೀಯ ಉಪಕರಣಗಳನ್ನು ಅವುಗಳ ಗಾತ್ರಕ್ಕನುಗುಣವಾಗಿ ಪ್ರದರ್ಶನಕ್ಕಿಡುತ್ತಿದ್ದಾನೆನ್ನುವ೦ತೆ ಜೋಡಿಸಲಾರ೦ಭಿಸಿದ. ಕಾಲರಿಲ್ಲದ ಪಟ್ಟೆಗಳುಳ್ಳ ಅ೦ಗಿಯನ್ನು ಧರಿಸಿದ್ದ ಆತನ ಪ್ಯಾ೦ಟನ್ನು ಭುಜದಿ೦ದ ಹಾದು ಹೋಗಿದ್ದ ಎರಡು ಪಟ್ಟಿಗಳು ಆತನ ಸೊ೦ಟದ ಮೇಲೆ ನಿಲ್ಲಿಸಿದ್ದವು. ಉದ್ದವಾಗಿ ಪೇಲವವಾಗಿದ್ದ ಆತನದ್ದು ನಿರ್ಭಾವುಕ ಮುಖಚರ್ಯೆ. ಸ೦ದರ್ಭಕ್ಕುನುಗುಣವಾಗಿ ಸ್ಪ೦ದಿಸದ ಕಿವುಡನ ಮುಖಭಾವ ಆತನದ್ದು. ತನ್ನೆಲ್ಲ ಸಲಕರಣೆಗಳನ್ನು ಮೇಜಿನ ಮೇಲೆ ಜೋಡಿಸಿಕೊ೦ಡು ಮುಗಿದ ನ೦ತರ ತನ್ನಲ್ಲಿದ ಡ್ರಿಲ್ಲೊ೦ದರಿ೦ದ ನಕಲಿ ಹಲ್ಲುಗಳಿಗೆ ಹೊಳಪುಕೊಡುವ ಕಾರ್ಯದಲ್ಲಿ ಆತ ನಿರತನಾದ. ಅನ್ಯಮನಸ್ಕತೆಯಿ೦ದ ಸ್ಥಿರವಾಗಿ ತನ್ನ ಕಾರ್ಯನಿರ್ವಹಿಸುತ್ತಿದ್ದ ಆತ ಅವಶ್ಯಕತೆಯಿರದಿದ್ದರೂ ತನ್ನ ಕೊರೆಯುವ ಯ೦ತ್ರವನ್ನು ಕಾಲಿನಿ೦ದ ನೂಕುತ್ತಿದ್ದ. ಮತ್ತಷ್ಟು ಓದು »

1
ಜುಲೈ

ಕ್ಯೂಬಾದಂತೆ ಕಾಣುವ ಪಿಣರಾಯಿ

– ಸಂತೋಷ್ ತಮ್ಮಯ್ಯ

skulls communism russians 1920x1200 wallpaper_www.wallpapername.com_18

ನಾಳೆ ಸಮಸ್ತ ಕೇರಳಕ್ಕೂ ಇದೇ ಗತಿ
ಬಹುಶಃ ಇದುವರೆಗೆ ಇಷ್ಟೊಂದು ಕಡಿಮೆ ಅವಧಿಯಲ್ಲಿ ಯಾವ ಸರ್ಕಾರಗಳೂ ಇಷ್ಟೊಂದು ಸಾಧನೆಯನ್ನು ಮಾಡಿರಲಾರರು. ಅದೂ ಒಂದು ತಿಂಗಳೊಳಗಾಗಿ ತನ್ನ ಕೆಲಸವನ್ನು ಅಷ್ಟೊಂದು ಶೀಘ್ರವಾಗಿ, ಅಚ್ಚುಕಟ್ಟಾಗಿ ಮಾಡಲು ಸಾಧ್ಯವಾಗುವುದು ಕಮ್ಯುನಿಸ್ಟರಿಗೆ ಮಾತ್ರ. ಕೇರಳದಲ್ಲಿ ಅವರ ಈ ಒಂದು ತಿಂಗಳಿನ ಸಾಧನೆಯನ್ನು ನೋಡಿದರೆ ಮುಂದಿನ ಐದು ವರ್ಷಗಳ ‘ಸಾಧನೆ’ ಇನ್ನೆಷ್ಟಿರಬಹುದು ಎಂಬ ಅಂದಾಜು ಸಿಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಕೇರಳ ಕೇರಳವಾಗಿಯೇ ಉಳಿಯುತ್ತದೆಯೋ ಎಂಬ ಸಂಶಯವೂ ಬರುತ್ತದೆ.
ಕೇರಳದಲ್ಲಿ ಕಮ್ಯುನಿಸ್ಟರು ಅಡಳಿತ ಆರಂಭಿಸಿ ನಿನ್ನೆಗೆ ಒಂದು ತಿಂಗಳಾಯಿತು. ಈ ಒಂದು ತಿಂಗಳಿನಲ್ಲಿ ಎದೆ ನಡುಗಿಸುವ ಹಲವು ಘಟನೆಗಳು ನಡೆದವು. ಆದರೂ ಬಿಜೆಪಿ ಆಡಳಿತವನ್ನು ಎರಡೇ ದಿನಗಳಲ್ಲಿ ವಿಮರ್ಶೆಗೆ ಒಡ್ಡುವಂತೆ ಯಾರೂ ಕಮ್ಯುನಿಸ್ಟ್ ಅಡಳಿತವನ್ನು ವಿಮರ್ಶೆ ಮಾಡಲಿಲ್ಲ. ಅಚ್ಯುತಾನಂದರನ್ನು ಪಿಣರಾಯಿ ವಿಜಯನ್ ಮೂಲೆಗುಂಪು ಮಾಡಿದ ಎಂಬ ಎಂಬ ಒಂದು ಸಂಗತಿಯನ್ನು ಮಾಧ್ಯಮಗಳು ಇನ್ನೂ ಗುನುಗುತ್ತಿವೆ. ಈ ಒಂದು ತಿಂಗಳಲ್ಲಿ ನಡೆದ ಘಟನೆಗಳನ್ನು ಯಾವ ಚಿತ್ರನಟನೂ ಅಸಹಿಷ್ಣುತೆ ಎಂದು ಕರೆಯಲಿಲ್ಲ, ಯಾವ ಪತ್ರಕರ್ತನೂ ಅರಾಜಕತೆ ಎಂದು ಬಣ್ಣಿಸಲಿಲ್ಲ. ಹಾಗಾದರೆ ಕೇರಳ ಕಮ್ಯುನಿಸ್ಟರ ತಿಂಗಳ ಸಾಧನೆ ಏನು? ಮತ್ತಷ್ಟು ಓದು »