ವೇದನೆಯೂ ವ್ಯಸನವಾಗಿಬಿಟ್ಟರೇನು ಫಲ…?
– ಗುರುರಾಜ ಕೋಡ್ಕಣಿ. ಯಲ್ಲಾಪುರ
ಆಗಷ್ಟೇ ಮೊರೊಕ್ಕೊ ದೇಶದ ಮರಾಕ್ಕೇಶ್ ಪಟ್ಟಣಕ್ಕೆ ಬಂದಿಳಿದಿದ್ದ ಮತಪ್ರಚಾರಕನನ್ನು ತೀವ್ರವಾಗಿ ಆಕರ್ಷಿಸಿದ್ದು ಊರ ಹೊರಗಿನ ಮರುಭೂಮಿ. ತನ್ನನ್ನು ಸೂಜಿಗಲ್ಲಿನಂತೆ ಸೆಳೆದ ಮರಳುಗಾಡನ್ನು ಕಂಡ ಮರುಕ್ಷಣವೇ, ತನ್ನ ಪ್ರತಿನಿತ್ಯದ ಬೆಳಗಿನ ವಿಹಾರ ಆ ಮರಳುಗಾಡಿನಲ್ಲಿಯೇ ಎಂಬ ನಿರ್ಧಾರಕ್ಕೆ ಬಂದ ಪ್ರಚಾರಕ. ಹಾಗೊಂದು ನಿರ್ಧಾರದ ಮೊದಲ ದಿನವೇ ಮರುಭೂಮಿಯಲ್ಲಿ ಆತನಿಗೊಂದು ಅಚ್ಚರಿ ಕಾದಿತ್ತು. ಪ್ರಶಾಂತವಾದ ಮರಳುಗಾಡಿನ ನಡುವೆ ಮರಳಿನ ಮೇಲೆ ಅಡ್ಡವಾಗಿ ಮಲಗಿ ನೆಲಕ್ಕೆ ತನ್ನ ಕಿವಿಯಾನಿಸಿ, ಮರಳಿನ ಮೇಲೆ ಕೈಯಾಡಿಸುತ್ತ ಅಡ್ಡ ಮಲಗಿದ್ದ ವ್ಯಕ್ತಿಯೊಬ್ಬನ ವರ್ತನೆ ತನ್ನ ಪಾಡಿಗೆ ತಾನೆಂಬಂತೆ ನಡೆದು ಸಾಗುತ್ತಿದ್ದ ಪ್ರಚಾರಕನ ಗಮನ ಸೆಳೆದಿತ್ತು. ಮೊದಲ ದಿನ ಅದರೆಡೆಗೆ ತುಂಬ ಲಕ್ಷ್ಯ ಕೊಡದ ಪ್ರಚಾರಕ ‘ಹುಚ್ಚನಿರಬೇಕು ಪಾಪ..’ ಎಂದುಕೊಂಡು ಮುಂದೆ ಸಾಗಿದ. ಆದರೆ ಎರಡನೇ ದಿನವೂ ಘಟನೆಯ ಪುನರಾವರ್ತನೆ ಪ್ರಚಾರಕನ ಕುತೂಹಲವನ್ನು ಇನ್ನಷ್ಟು ಕೆರಳಿಸಿತ್ತು. ಅಷ್ಟಾಗಿಯೂ ಆ ವ್ಯಕ್ತಿಯನ್ನು ಮಾತನಾಡಿಸುವ ಗೋಜಿಗೆ ಹೋಗದ ಪ್ರಚಾರಕನ ಕುತೂಹಲ ಒಂದು ತಿಂಗಳ ನಂತರ ತನ್ನ ಸಹನೆಯ ಕಟ್ಟೆಯೊಡೆದಿತ್ತು. ಪ್ರತಿದಿನವೂ ನೆಲಕ್ಕೆ ಆತುಕೊಂಡು ವಿಚಿತ್ರವಾಗಿ ವರ್ತಿಸುವ ಆಗಂತುಕನ ಬಳಿ ತೆರಳಿದ ಪ್ರಚಾರಕ, ತನಗೆ ಬರುತ್ತಿದ್ದ ಅರೆಬರೆ ಅರೇಬಿಕ್ ಭಾಷೆಯಲ್ಲಿ, ‘ಗೆಳೆಯಾ, ನಾನು ಪ್ರತಿನಿತ್ಯವೂ ನೀನು ಹೀಗೆ ವರ್ತಿಸುವುದನ್ನು ಕಂಡಿದ್ದೇನೆ. ನೀನು ಹೀಗೆ ನೆಲಕ್ಕೆ ಆನಿಸಿಕೊಂಡು, ನೆಲವನ್ನು ಸವರುತ್ತ ಕುಳಿತುಕೊಳ್ಳಲು ಕಾರಣವೇನು ಎಂದು ತಿಳಿದುಕೊಳ್ಳಬಹುದೇ’? ಎಂದು ಪ್ರಶ್ನಿಸಿದ. ಮತ್ತಷ್ಟು ಓದು