ವಿಷಯದ ವಿವರಗಳಿಗೆ ದಾಟಿರಿ

Archive for

9
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 23:
ಮದನ್ ಲಾಲ್ ಧಿಂಗ್ರಾ
– ರಾಮಚಂದ್ರ ಹೆಗಡೆ

madan_lal_dhingraಪರದೇಶಿ ಬ್ರಿಟಿಷರು ಭಾರತದ ನೆಲಕ್ಕೆ ಬಂದು ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ನೆಲಕ್ಕೇ ಹೋಗಿ ಇಂಗ್ಲೆಂಡಿನಲ್ಲೇ ಕ್ರಾಂತಿ ಚಟುವಟಿಕೆ ನಡೆಸಿ ಬ್ರಿಟಿಷರನ್ನೇ ಬೆಚ್ಚಿಬೀಳಿಸಿದ, ವಿದೇಶಿ ನೆಲದಲ್ಲಿ ಭಾರತಕ್ಕಾಗಿ ಮೊದಲ ಬಲಿದಾನ ಮಾಡಿದ ಕೆಚ್ಚೆದೆಯ ವೀರ ಮದನ್ ಲಾಲ್ ಧಿಂಗ್ರಾ. ಪಂಜಾಬಿನ ಅಮೃತಸರದ ಶ್ರೀಮಂತ ಕುಟುಂಬದ ಮದನ್ ಲಾಲ್ ಇಂಜಿನೀಯರಿಂಗ್ ಓದಲಿಕ್ಕೆಂದು ಲಂಡನ್ ಗೆ ಹೋಗಿದ್ದವನು. ಸ್ವಭಾವತಃ ಶೋಕಿಲಾಲ. ಮನೆಯವರೆಲ್ಲ ಬ್ರಿಟಿಷರ ಪರಮ ಭಕ್ತರು. ಇಂಗ್ಲೆಂಡ್ ನ ವಿಲಾಸೀ ಸಂಸ್ಕೃತಿಗೆ ಮಾರುಹೋದ ಮದನ್ ಬೆಲೆಬಾಳುವ ಸೂಟು ಬೂಟುಗಳನ್ನು ಹಾಕಿಕೊಂಡು ಶೋಕಿಲಾಲನಾಗಿ ಇಂಗ್ಲೆಂಡಿನ ರಸ್ತೆಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತ ಕಾಲಕಳೆಯುತೊಡಗಿದ್ದ. ಮತ್ತಷ್ಟು ಓದು »

9
ಸೆಪ್ಟೆಂ

ತಮಿಳುನಾಡು, ಕಾವೇರಿ, ಜಯಲಲಿತ, ದೇವೇಗೌಡರು ಮತ್ತು ನಾನು

– ಪ್ರೇಮಶೇಖರ

jayನೆರೆಯ ತಮಿಳುನಾಡಿನಲ್ಲಿ ಹಲವು ಅಚ್ಚರಿ ಹುಟ್ಟಿಸುವ ವಿರೋಧಾಭಾಸಗಳು ಕಾಣಸಿಗುತ್ತವೆ. ತಮಿಳರು ಮಹಾ ಭಾಷಾಭಿಮಾನಿಗಳು. ತಮ್ಮ ನಾಡು ನುಡಿಯ ಬಗ್ಗೆ ಅವರ ಪ್ರೀತಿ, ಅಭಿಮಾನ, ಕಾಳಜಿಗೆ ಸಮಕಾಲೀನ ಭಾರತೀಯ ಇತಿಹಾಸದಲ್ಲಿ ದಂತಕತೆಯ ಆಯಾಮವೊದಗಿಬಿಟ್ಟಿದೆ. ಆದರೆ, ಇಂತಹ ಸ್ವಾಭಿಮಾನಿ ತಮಿಳರು ಕಳೆದ ನಲವತ್ತು-ನಲವತ್ತೈದು ವರ್ಷಗಳಿಂದಲೂ ತಮಿಳೇತರರನ್ನು ತಮ್ಮ ರಾಜಕೀಯ ನಾಯಕರನ್ನಾಗಿ ಒಪ್ಪಿಕೊಂಡು ಅವರ ಕೈಯಲ್ಲಿ ತಮ್ಮ ರಾಜ್ಯವನ್ನಿಟ್ಟುಬಿಟ್ಟಿದ್ದಾರೆ. ಕರುಣಾನಿಧಿ ಕಳೆದ ನಾಲ್ಕು ದಶಕಗಳಿಂದಲೂ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಅನಭಿಷಿಕ್ತ ಸಾಮ್ರಾಟರಾಗಿ ಮೆರೆಯುತ್ತಿದ್ದಾರೆ, ನಾಲ್ಕು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಈ ಕರುಣಾನಿಧಿ ತೆಲುಗು ಮೂಲದವರು. ಡಿಎಂಕೆ ಪಕ್ಷವನ್ನು ಒಡೆದು ಅದಕ್ಕೆ ಪರ್ಯಾಯವಾಗಿ “ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ” (ಎಐಎಡಿಎಂಕೆ) ಪಕ್ಷ ಕಟ್ಟಿ ಸತತ ಹತ್ತು ವರ್ಷಗಳವರೆಗೆ ತಮಿಳುನಾಡನ್ನು ಆಳಿದ ಎಂ. ಜಿ. ರಾಮಚಂದ್ರನ್ (ಎಂಜಿಆರ್) ಒಬ್ಬ ಮಲೆಯಾಳಿ. ಅವರ ಸಹವರ್ತಿ ಮತ್ತು ಉತ್ತರಾಧಿಕಾರಿ, ಕೋಟ್ಯಂತರ ತಮಿಳರ ಪ್ರೀತಿಯ “ಅಮ್ಮ” ಜಯಲಲಿತಾರ ಮೂಲ ಕರ್ನಾಟಕದಲ್ಲಿ. ಅದಕ್ಕೂ ಹಿಂದೆ ಹೋಗುವುದಾದರೆ ದ್ರಾವಿಡ ಚಳುವಳಿಯ ಅಧ್ವರ್ಯು, ತಮಿಳುನಾಡಿನ ಇತಿಹಾಸದ ದಿಕ್ಕನ್ನೇ ಬದಲಿಸಿದ “ಪೆರಿಯಾರ್” ಬಿರುದಾಂಕಿತ ಇ. ವಿ. ರಾಮಸ್ವಾಮಿ ನಾಯಕರ್ ಕನ್ನಡಿಗರಂತೆ. ಇವರೆಲ್ಲರೂ ತಮಿಳನ್ನು ತಮ್ಮದಾಗಿಸಿಕೊಂಡು, ತಮಿಳುನಾಡಿಗೆ ತಮ್ಮನ್ನರ್ಪಿಸಿಕೊಂಡು ತಮಿಳರ ಹೃದಯಗಳಲ್ಲಿ ಸ್ಥಾನ ಗಳಿಸಿಕೊಂಡುಬಿಟ್ಟರು. ಮತ್ತಷ್ಟು ಓದು »

9
ಸೆಪ್ಟೆಂ

ಕಾಶ್ಮೀರ ಸಮಸ್ಯೆಯ ವರ್ತಮಾನ

– ಪ್ರೊ. ರಾಜಾರಾಮ ಹೆಗಡೆ

12-kashmir-protest-2ಕಾಶ್ಮೀರವು ಇಂದು ಕೇವಲ ಭಾರತ ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳ ನಡುವಿನ ಹಗೆಯ ಕಾರಣವಷ್ಟೇ ಅಲ್ಲ, ಭಾರತದಲ್ಲೇ ಆಂತರಿಕ ಹಗೆಯ ಹೊಗೆಯೆಬ್ಬಿಸುತ್ತಿರುವ ಒಂದು ವರ್ತಮಾನದ ಸಮಸ್ಯೆಯಾಗಿದೆ. ಹಾಗಾಗಿ ಕಾಶ್ಮೀರ ವಿವಾದವು ಹೇಗೆ ಪ್ರಾರಂಭವಾಯಿತು, ನಮ್ಮ ಮುತ್ಸದ್ದಿಗಳು ಎಲ್ಲಿ ಎಡವಿದರು ಎಂಬ ಹಿಸ್ಟರಿಗಿಂತ ಅದರ ತೆಕ್ಕೆಯೊಳಗೆ ಬರಲು ಸೋಲುವ ಅಥವಾ ನಿರಾಕರಿಸುವ ವರ್ತಮಾನದ ಆಯಾಮಗಳು ನನಗೆ ಸೋಜಿಗ ಹುಟ್ಟಿಸುತ್ತಿವೆ. ಇಂದು ಕಾಶ್ಮೀರವು ಭಾರತ ಪಾಕಿಸ್ತಾನಗಳ ಗಡಿ ಸಮಸ್ಯೆಯಾಗಿ ಉಳಿದಿಲ್ಲ, ಬದಲಾಗಿ ಅದು ದೇಶದ ಸಮಸ್ತ ಪ್ರಗತಿಪರ ಹೋರಾಟಗಾರರಿಗೂ, ಆಜಾದಿಯ ಕರೆಯಾಗಿ ಕಾಣಿಸುತ್ತಿದೆ ಎಂಬುದನ್ನು ಗಮನಿಸುವುದು ಅಗತ್ಯ. ಕೇವಲ ಮುಸ್ಲಿಂ ಸಂಘಟನೆಗಳೊಂದೇ ಅಲ್ಲ ಭಾರತದ ಪ್ರಗತಿಪರ ಸಂಘಟನೆಗಳೂ, ಕಾಶ್ಮೀರಿ ಮುಸ್ಲಿಂ ಹೋರಾಟಗಾರರ ಜೊತೆಗೆ ಆಜಾದಿಯ ಘೋಷಣೆ ಕೂಗುತ್ತಿವೆ. ದೇಶದ ಬರ್ಬಾದಿಯ ಕುರಿತು ಮಾತನಾಡುವುದು ಈ ಸಂಘಟನೆಗಳಿಗೆ ರಾಷ್ಟ್ರೀಯತೆಯ ಸಮಸ್ಯೆಯಾಗಿ ಕಾಣಿಸುತ್ತಿಲ್ಲ. ಬದಲಾಗಿ ಬಿಡುಗಡೆಯ ಕರೆಯಾಗಿ ಕಾಣಿಸುತ್ತಿದೆ. ಇಂಥ ಚಳವಳಿಗಳನ್ನು ಬೆಂಬಲಿಸುವ ಬುದ್ಧಿಜೀವಿಗಳಿಗೆ ಇಂಥ ಘೋಷಣೆಗಳು ನ್ಯಾಯಯುತವೆನಿಸತೊಡಗಿವೆ. ಈ ಪರಿಸ್ಥಿತಿಯು ನಮಗೆ ಎರಡು ಸವಾಲುಗಳನ್ನು ಸೃಷ್ಟಿಸಿದೆ: ಮತ್ತಷ್ಟು ಓದು »

9
ಸೆಪ್ಟೆಂ

ಕಾವೇರಿ ವಿವಾದ : ನಾಲಾಯಕ್ ನಾಯಕರ ನಡುವಿನ ಜನನಾಯಕರು

800x480_image57629329ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ಸೆಪ್ಟಂಬರ್ ೯ರಂದು ಕರ್ನಾಟಕ ಬಂದ್ ಗೂ ಕರೆ ನೀಡಲಾಗಿದೆ. ನಮಗೆ ಕುಡಿಯಲಿಕ್ಕೇ ನೀರಿಲ್ಲದಿರುವಾಗ ಕೈಲಾಗದ ಸರ್ಕಾರ ತಮಿಳುನಾಡಿನ ಬೆಳೆಗಳಿಗೆ ನೀರು ಹರಿಸುತ್ತಿದೆ. ನಮ್ಮಲ್ಲೇ ಹೆಚ್ಚಾಗಿರುವ ನಾಲಾಯಕ್ ನಾಯಕರ ನಡುವೆ, ಅಪರೂಪಕ್ಕೆ ದಿಟ್ಟತನ ಹಾಗೂ ಚಾಣಾಕ್ಷತನ ತೋರಿದ ಇಬ್ಬರು ಜನನಾಯಕರ ನೆನಪುಗಳು ನಿಮಗಾಗಿ – ನಿಲುಮೆ

ನೆನಪು ೧ :
ನಿಜವಾದ ಗಂಡಸು ಎಂದರೆ ಅದು ಬಂಗಾರಪ್ಪ
1991ರಲ್ಲಿ, ತಮಿಳುನಾಡಿಗೆ 205 ಟಿಎಂಸಿ ನೀರು ಬಿಡುವಂತೆ ಕಾವೇರಿ ನ್ಯಾಯಾಧಿಕರಣವು ಮಧ್ಯಂತರ-ತೀರ್ಪನ್ನು ನೀಡಿತು. ಈ ತೀರ್ಪಿಗೆ ವಿರುದ್ಧವಾಗಿಯೇ ಮುಖ್ಯಮಂತ್ರಿ ಬಂಗಾರಪ್ಪನವರು ಸುಗ್ರೀವಾಜ್ಞೆ ಹೊರಡಿಸಿ ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿನ ನೀರನ್ನು ರಕ್ಷಿಸಿ, ನಮ್ಮ ರಾಜ್ಯದ ರೈತರಿಗೇ ಉಳಿಸಿಕೊಳ್ಳುವಂತೆ ಅಣೆಕಟ್ಟುಗಳ ಉಸ್ತುವಾರಿಯ ಅಧಿಕಾರಿಗಳಿಗೆ ಆದೇಶಿಸಿದರು. ಮತ್ತಷ್ಟು ಓದು »