ವೀಡಿಯೋ ಗೇಮ್ ಸಾಧಕ – ಬಾಧಕಗಳ ಒಂದು ವಿಶ್ಲೇಷಣೆ
– ಶೈಲೇಶ್ ಕುಲ್ಕರ್ಣಿ
ವೀಡಿಯೊಗೇಮ್ ಗಳು ನಿಜಕ್ಕೂ ವ್ಯಕ್ತಿಯ ದೈಹಿಕ ಅಥವಾ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲಷ್ಟು ಪ್ರಭಾವಶಾಲಿಯೇ ಎಂಬ ಪ್ರಶ್ನೆಯನ್ನಿಟ್ಟುಕೊಂಡೇ ಪರ-ವಿರೋಧದ ಚರ್ಚೆ ಕಳೆದ ೩೦ವರ್ಷಗಳಿಂದಲೂ ವಿಶ್ವದಾದ್ಯಂತ ನಡೆದಿದೆ. ಸಿನೆಮಾ, ಕುಣಿತಗಳಿಂದ ತೊಡಗಿ ದೂರದರ್ಶನ, ಅಂತರ್ಜಾಲ, ಕಾದಂಬರಿಗಳಾದಿಯಾಗಿ ಬಹುಶಃ ಮನುಷ್ಯನ ಗಮನವನ್ನೆಲ್ಲಾ ತನ್ನಲ್ಲಿ ಹಿಡಿದಿಡಬಲ್ಲ ಸಾಧ್ಯತೆಯುಳ್ಳ ಎಲ್ಲಾ ಚಟುವಟಿಕೆಗಳೂ ಒಂದಲ್ಲ ಒಂದು ಸಾರಿ ಈ ರೀತಿಯ ಟೀಕೆಯನ್ನ ಎದುರಿಸಿಯೇ ಬಂದಿವೆ. ಮತ್ತಷ್ಟು ಓದು
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ– 16:
ಚಾಪೇಕರ್ ಸಹೋದರರು
– ರಾಮಚಂದ್ರ ಹೆಗಡೆ
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮೈಲಾರ ಮಹಾದೇವರ ಕುಟುಂಬ ಸೆರೆವಾಸ ಅನುಭವಿಸಿದರೆ ವಿವೇಕಾನಂದರ ಕುಟುಂಬ ರಾಷ್ಟ್ರಜಾಗೃತಿಯಲ್ಲಿ ತೊಡಗಿಕೊಂಡ ಸ್ಫೂರ್ತಿದಾಯಕ ಕಥೆಯನ್ನು ಇದೇ ಸರಣಿಯಲ್ಲಿ ಹಿಂದೆ ಓದಿದ್ದೇವೆ. ಪುಣೆಯ ಚಾಪೇಕರ್ ಕುಟುಂಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಲಿದಾನಗೈದು ಭಾರತಮಾತೆಯ ದಾಸ್ಯ ವಿಮುಕ್ತಿ ಆಂದೋಲನದಲ್ಲಿ ಸಂಪೂರ್ಣವಾಗಿ ತನ್ನನ್ನು ಸಮರ್ಪಿಸಿಕೊಂಡ ಕಥೆ ರೋಮಾಂಚನಕಾರಿ. ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ದಾಮೋದರ ಚಾಪೇಕರ್, ಬಾಲಕೃಷ್ಣ ಚಾಪೇಕರ್ ಮತ್ತು ವಾಸುದೇವ್ ಚಾಪೇಕರ್ ತಮ್ಮ ಅಪ್ರತಿಮ ಶೌರ್ಯ ಹಾಗೂ ದೇಶಭಕ್ತಿಯಿಂದಾಗಿ ಕ್ರಾಂತಿಯ ಕಹಳೆ ಮೊಳಗಿಸಿ ಬಲಿದಾನಗೈದ ಕಥೆ ಇತಿಹಾಸದಲ್ಲಿ ಅಪರೂಪದ ಸಂಗತಿ. ದೇಶದ ಇತರ ಕ್ರಾಂತಿಕಾರಿಗಳ ಹೋರಾಟದ ಯಶೋಗಾಥೆಯನ್ನು, ಬಲಿದಾನದ ಸಾಹಸ ಕಥೆಯನ್ನು ಕೇಳುತ್ತಲೇ ಬೆಳೆದ ಚಾಪೇಕರ್ ಸಹೋದರರಿಗೆ ತಾವೂ ದೇಶದ ದಾಸ್ಯ ವಿಮುಕ್ತಿಗೆ ಹೋರಾಡಬೇಕೆಂಬ ಕನಸು ಹುಟ್ಟಿತು. ಇಂಗ್ಲಿಷರ ದರ್ಪ ದಬ್ಬಾಳಿಕೆಯ ವಿರುದ್ಧ ಹೋರಾಡಲು ಶರೀರಬಲ ಬೇಕು, ಸಂಘಟನೆ ಬೇಕು ಎಂದು ನಿರ್ಧರಿಸಿದ ಚಾಪೇಕರ್ ಸಹೋದರರು ದಿನನಿತ್ಯ ಕಠಿಣ ವ್ಯಾಯಾಮ ಯೋಗಾಭ್ಯಾಸದಲ್ಲಿ ನಿರತರಾದರು. ಮದುವೆಯಾಗಿ ಮಕ್ಕಳಾಗಿ ಹೊಸ ಜವಾಬ್ದಾರಿಗಳು ಬಂದರೂ ಅವರ ಸ್ವಾತಂತ್ರ್ಯದ ಕನಸು ದೂರಾಗಲಿಲ್ಲ. ಮತ್ತಷ್ಟು ಓದು