ಪ್ರೇತದ ಆತ್ಮ ಚರಿತೆ! (ಭಾಗ ೧)
– ಶ್ರೀಕಾಂತ್ ಶೆಟ್ಟಿ
ಒಂದು ಪ್ರೇತದ ಕತೆ. ಆ ಒಂದು ಪ್ರೇತ ಮಾಡಿದ ಆವಾಂತರಕ್ಕೆ ಇತಿಹಾಸವೇ ಹೊಸ ತಿರುವು ಪಡೆದುಕೊಂಡು ಬಿಟ್ಟಿತು. ಈ ಭೂತ ಪ್ರೇತ ಇದೆಲ್ಲಾ ಇದೆಯೋ ಇಲ್ಲವೋ, ಇದ್ದರೆ ವೈಜ್ಞಾನಿಕ ಕಾರಣ ಕೊಡಿ. ಅದರ ಇರುವನ್ನು ಸಾಬೀತು ಮಾಡಿ ಎನ್ನುವವರಿಗೆ ಈ ಕತೆ ಹೇಳಿ ಮಾಡಿಸಿದ್ದಲ್ಲ. ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದುಕೊಂಡು ಬಂದಿರುವ ದಂತಕತೆಯನ್ನು ಆಧಾರವಾಗಿಟ್ಟುಕೊಂಡು ಈ ಸರಣಿಯನ್ನು ಬರೆಯುತ್ತಿದ್ದೇನೆ. ಇದರಲ್ಲಿ ಕೇವಲ ಪ್ರೇತ ಮಾತ್ರ ಬಂದು ಹೋಗುವುದಿಲ್ಲ. ಹದಿನೆಂಟನೇ ಶತಮಾನದಲ್ಲಿ ಭೂಮಿ ನಡುಗಿಸುವಷ್ಟು ಸೇನೆ ಕಟ್ಟಿಕೊಂಡು, ಮೊಘಲರನ್ನು ಬೇರು ಸಮೇತ ಕಿತ್ತೊಗೆದ ಮರಾಟಾ ಪೇಶ್ವಾಗಳು ಬರುತ್ತಾರೆ. ಉತ್ತರದ ಹಿಮಾಲಯದಿಂದ ದಕ್ಷಿಣದ ಕೃಷ್ಣಾ ನದಿ ದಂಡೆಯವರೆಗೆ ಪೇಶ್ವಾಗಳ ಕತ್ತಿಯ ಅಬ್ಬರ, ಕುದುರೆಗಳ ಹೇಷಾರವ, ಮದೋನ್ಮತ್ತ ಆನೆಗಳ ಹೂಂಕಾರ.. ನಭವನ್ನೇ ನಡುಗಿಸುವ ಮರಾಠಾ ಮಾವಳಿಗಳ ಹರಹರಾ ಮಹಾದೇವ ರಣಘರ್ಜನೆ.. ಚಿತ್ಪಾವನ ಬ್ರಾಹ್ಮಣ ರಣಕಲಿಗಳ ಅಪ್ರತಿಮ ರಣತಂತ್ರ.. ಒಂದು ಶತಮಾನ ಕಾಲ ವಿಜೃಂಭಿಸಿದ ಮರಾಠ ಶಕ್ತಿಯ ವಿವಿಧ ಮುಖ ಪರಿಚಯ ಇಲ್ಲಿ ನಿಮಗಾಗಲಿದೆ.
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 22
ಚಿದಂಬರಂ ಪಿಳ್ಳೈ
– ರಾಮಚಂದ್ರ ಹೆಗಡೆ
ಭಾರತ-ಶ್ರೀಲಂಕಾ ನಡುವಿನ ಸಮುದ್ರದಲ್ಲಿ ನೌಕಾಯಾನದ ಹೆಸರಿನಲ್ಲಿ ಜನರ ಸುಲಿಗೆ ಮಾಡುತ್ತಿದ್ದ ಬ್ರಿಟಿಷರ ಆಟಾಟೋಪಕ್ಕೆ ಉತ್ತರವಾಗಿ ‘ಸ್ವದೇಶಿ ನ್ಯಾವಿಗೇಷನ್ ಕಂಪೆನಿ’ ಹುಟ್ಟುಹಾಕಿದ ಧೀರ ಸಾಹಸಿ ತಮಿಳುನಾಡಿನ ಚಿದಂಬರಂ ಪಿಳ್ಳೈ. ತಮ್ಮದೇ ಆದ ಸಂಪೂರ್ಣ ಸ್ವದೇಶಿ ನೌಕಾಯಾನ ಸಂಸ್ಥೆಯನ್ನು 1906 ರ ಸಮಯದಲ್ಲೇ ಹುಟ್ಟುಹಾಕಿ ಈಸ್ಟ್ ಇಂಡಿಯಾ ಕಂಪನಿಯೇ ಪತರಗುಟ್ಟುವಂತೆ ಮಾಡಿದ, ಭಾರತೀಯರ ಪ್ರತಿರೋಧ ಕೇವಲ ಯುದ್ಧ ಬಲಿದಾನಗಳಲ್ಲಷ್ಟೇ ಅಲ್ಲ ಎಂದು ನಿರೂಪಿಸಿದ ಅಪ್ರತಿಮ ದೇಶಭಕ್ತ ಪಿಳ್ಳೈ. ಆಗಿನ ಕಾಲದಲ್ಲಿ ತಮಿಳುನಾಡಿನಲ್ಲಿ ಸ್ವರಾಜ್ಯ ಎಂಬ ಶಬ್ದವನ್ನು ಉಚ್ಚಾರ ಮಾಡಲೂ ಜನರು ಹೆದರುತ್ತಿದ್ದರು. ‘ಸ್ವಾತಂತ್ಯ್ರ’ ಎಂದು ಅಪ್ಪಿ ತಪ್ಪಿ ಹೇಳಿದರೆ ಅದು ರಾಜದ್ರೋಹವಾಗುತ್ತದೆ ಎಂದು ಜನರಿಗೆ ಅಂಜಿಕೆ. ಅಂಥ ಒಂದು ಕಾಲದಲ್ಲಿ ಚಿದಂಬರಂ ಪಿಳ್ಳೈಯವರು ತಮಿಳುನಾಡಿನಲ್ಲಿ ‘ವಂದೇ ಮಾತರಂ’ ಎಂದು ಘೋಷಣೆ ಕೂಗಿದರು. ಬ್ರಿಟಿಷರ ಚಕ್ರಾಧಿಪತ್ಯದ ವಿರುದ್ಧ ಜನರನ್ನು ಎತ್ತಿಕಟ್ಟಿದರು. ಸಹಸ್ರಾರು ಸ್ವಾತಂತ್ಯ್ರ ವೀರರನ್ನು ಹುರಿಗೊಳಿಸಿದ ಚಿದಂಬರಂ ಪಿಳ್ಳೈಯವರು ರಾಜದ್ರೋಹದ ಆಪಾದನೆ ಹೊತ್ತು ಆರು ವರ್ಷಗಳ ಕಾಲ ಸೆರೆಮನೆಯಲ್ಲಿ ಕಷ್ಟಪಟ್ಟರು. ಮತ್ತಷ್ಟು ಓದು