ವಿಷಯದ ವಿವರಗಳಿಗೆ ದಾಟಿರಿ

Archive for

20
ಸೆಪ್ಟೆಂ

ಸಿದ್ಧಾಂತಗಳ ಚರಿತ್ರೆ – 3 ಕಮ್ಯುನಿಸಂ: ( ಅಪ್ರಸ್ತುತ ಸಿದ್ಧಾಂತ, ಅವಾಸ್ತವಿಕ ಪರಿಹಾರ )

– ರೋಹಿತ್ ಚಕ್ರತೀರ್ಥ
ಸಿದ್ಧಾಂತಗಳ ಚರಿತ್ರೆ – 1 (ಕಾರ್ಲ್ ಮಾರ್ಕ್ಸ್ ಕಟ್ಟಿಕೊಟ್ಟ ಕಲ್ಪನೆಯ ಸ್ವರ್ಗ)
ಸಿದ್ಧಾಂತಗಳ ಚರಿತ್ರೆ – 2 ( ಆತನ ಚಿಂತನೆ ಅರ್ಧ ಭೂಗೋಲವನ್ನು ನಿಯಂತ್ರಿಸಿತು! )
karl-marx-wikimedia-commonsಕಮ್ಯುನಿಸ್ಟ್ ಚಿಂತನೆಯನ್ನು ಕಾರ್ಲ್ ಮಾರ್ಕ್ಸ್ ಪ್ರಾರಂಭಿಸಿದವನಲ್ಲ; ಆದರೆ ಅದಕ್ಕೊಂದು ಸ್ಪಷ್ಟ ರೂಪ ಕೊಟ್ಟವನು ಆತ. ಮಾರ್ಕ್ಸ್ ತೀರಿಕೊಂಡ ಮೂವತ್ತು ವರ್ಷಗಳ ನಂತರ ರಷ್ಯದಲ್ಲಿ ಕ್ರಾಂತಿಯಾಗಿ ಲೆನಿನ್ ಅಧಿಪತ್ಯ ಬಂತು. ಮಾರ್ಕ್ಸ್ ನ ಅದುವರೆಗಿನ ಅಪ್ರಕಟಿತ ಕೃತಿಗಳೆಲ್ಲ ಒಂದರ ಮೇಲೊಂದರಂತೆ ಸಾಲಾಗಿ ಪ್ರಕಟವಾಗಿ ಜಗತ್ತಿನ ಹಲವು ದೇಶಗಳಲ್ಲಿ, ಹಲವು ಯುವಕರ ಕೈಗೆ ಬಂದು, ಅವರೆಲ್ಲ ತಮ್ಮ ಸುತ್ತಲಿನ ಹಳೆಯ ವ್ಯವಸ್ಥೆಯನ್ನು ಕಿತ್ತೊಗೆಯುವ ಸಂಕಲ್ಪ ತೊಡುವಂತಾಯಿತು. 1920ರಿಂದ 1960ರವರೆಗಿನ ಅವಧಿ ಕಮ್ಯುನಿಸಂ ಮತ್ತು ಮಾಕ್ರ್ಸಿಸಂಗಳ ಉಚ್ಛ್ರಾಯಕಾಲ. ರಷ್ಯ, ಚೀನಾ, ಕೊರಿಯ, ಕಾಂಬೋಡಿಯಾ, ಜರ್ಮನಿ, ಗ್ರೇಟ್ ಬ್ರಿಟನ್, ಫ್ರಾನ್ಸ್, ಕ್ಯೂಬಾದಂಥ ಹಲವು ದೇಶಗಳು ಮಾಕ್ರ್ಸ್ ಚಿಂತನೆಯ ಪ್ರಯೋಗ ಶಾಲೆಗಳಾದವು. ಸ್ವಾತಂತ್ರ್ಯಾ ನಂತರದ ಮೊದಲ ಮೂರು ದಶಕಗಳಲ್ಲಿ ಭಾರತ ಕೈಗೊಂಡ ಹತ್ತುಹಲವು ಯೋಜನೆಗಳಲ್ಲಿ ಸೋವಿಯೆಟ್ ರಷ್ಯಾ ಪ್ರಣೀತ ಕಮ್ಯುನಿಸಂನ ದಟ್ಟ ಛಾಯೆಯಿದ್ದದ್ದು ಸುಸ್ಪಷ್ಟ. ಆದರೆ 1970ರ ನಂತರ ರಷ್ಯಾ ಹಲವು ಹೋಳುಗಳಾಗಿ ಒಡೆದುಹೋಗಿ ಶೀತಲಸಮರ ಅಘೋಷಿತ ಅಂತ್ಯ ಕಂಡಿದ್ದರಿಂದ ಕಮ್ಯುನಿಸಂ ಹಿನ್ನಡೆಯನುಭವಿಸಿತು. ಅಲ್ಲದೆ ಕಮ್ಯುನಿಸಂನ್ನು ಅಪ್ಪಿಕೊಂಡ ದೇಶಗಳೆಲ್ಲ ಸರ್ವಾಧಿಕಾರಿಗಳ ನಿಯಂತ್ರಣಕ್ಕೊಳಪಟ್ಟು ಬೃಹತ್ ಪ್ರಮಾಣದ ಹತ್ಯಾಕಾಂಡಗಳಿಗೆ ಸಾಕ್ಷಿಯಾದ್ದರಿಂದ, ಮಾರ್ಕ್ಸ್ ನ ಚಿಂತನೆಗಳ ಮೇಲಿದ್ದ ಭರವಸೆಗಳೆಲ್ಲ ಕಮರಿಹೋದವು. ಕಮ್ಯುನಿಸಂನ ಮೆಕ್ಕಾ ಎಂದೇ ಕರೆಸಿಕೊಳ್ಳುತ್ತಿದ್ದ ರಷ್ಯಾದೊಳಗಿನ ಬಡತನ, ಶೋಷಣೆ, ಸ್ವಾತಂತ್ರ್ಯಹರಣ, ಹಿಂಸಾಚಾರಗಳ ಕಟು ಕತೆಗಳು ಹೊರಜಗತ್ತಿಗೆ ತಿಳಿಯತೊಡಗಿದ್ದು 70ರ ದಶಕದ ನಂತರ; ಅದೂ ತುಣುಕು ತುಣುಕಾಗಿ. ಮತ್ತಷ್ಟು ಓದು »