ಜಮ್ಮು-ಕಾಶ್ಮೀರ (ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು)
ನಿಲುಮೆ ತಂಡವು, ಮಂಗಳೂರಿನಲ್ಲಿ ( 18.09.2016 ) ರಂದು ನಡೆಸಿದ ‘ಕಾಶ್ಮೀರದ ಕುರಿತು ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ರೂಪಲಕ್ಷ್ಮೀಯರವರು ಅಕ್ಷರ ರೂಪಕ್ಕಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದ ವಿಚಾರಗಳು ಈಗ ನಿಲುಮೆಯ ಓದುಗರ ಮುಂದೆ..
ಚಕ್ರವರ್ತಿ ಸೂಲಿಬೆಲೆಯವರ ಭಾಷಣದ ಮುಖ್ಯಾಂಶಗಳು.
ವರ್ಷಕೊಮ್ಮೆ ನಾನು ಜಮ್ಮು, ಕಾಶ್ಮೀರಕ್ಕೆ ಹೋಗೋದ್ರಿಂದ, ಅಲ್ಲಿ ನಾನು ನೋಡಿರುವ ಆಧಾರದ ಮೇಲೆ, ನನ್ನ ವಿಚಾರಗಳನ್ನು ಹೇಳ್ತೀನಿ. ಪ್ರೊಫೆಸರ್ ಪ್ರೇಮ್ ಶೇಖರ್ ಅವರು ಆಗಲೇ ಹೇಳಿದ ಪ್ರಕಾರ, ಕಾಶ್ಮೀರದಲ್ಲಿ ಮೂರು ತರಹದ ಜನಾಂಗಗಳಿವೆ. ೧. ಹಿಂದು, ೨. ಮುಸ್ಲಿಮ್ ಮತ್ತು ೩. ಬುದ್ದಿಸ್ಟ್ – ಲಡಾಕ್ ನಲ್ಲಿರುವಂತಹವರು. ಆದರೆ ಮುಸ್ಲಿಮರು ಹೇಳೋದು – ಕಾಶ್ಮೀರದಲ್ಲಿ ನಾಲ್ಕು ತರಹದ ಜನರಿದ್ದಾರೆ. ೧. ಹಿಂದೂ, ೨. ಮುಸ್ಲಿಮ್ – ಸುನ್ನಿ ಮತ್ತು ಶಿಯಾ ೩. ಲಡಾಕ್. ಪ್ರೇಮ್ ಶೇಖರ್ ಸರ್ ಹೇಳಿದ ಹಾಗೆಯೇ ಇನ್ನು ಮುಂದೆ ಕಾರ್ಗಿಲ್ ನ ಸುದ್ಧಿಗೆ ಪಾಕಿಸ್ತಾನ್ ಬರೋಲ್ಲ. ಯಾಕೆಂದರೆ ಕಾರ್ಗಿಲ್ ನಲ್ಲಿ ಹೆಚ್ಚಾಗಿರುವ ಮುಸ್ಲಿಮರು – ಶಿಯಾ ಪಂಗಡದವರು. ಪಾಕಿಸ್ತಾನದಲ್ಲಿರುವ ಮುಸ್ಲಿಮರು – ಸುನ್ನಿ ಪಂಗಡದವರು. ಕಾಶ್ಮೀರದ ಕಣಿವೆಯಲ್ಲಿರೋ ಮುಸ್ಲಿಮರು, ಪಾಕಿಸ್ತಾನದ ಮುಸ್ಲಿಮರನ್ನು ತಮ್ಮ ಮುಸಲ್ಮಾನರು ಅಂತಂದುಕೊಳ್ತಾರೆ. ಆದರೆ ಕಾರ್ಗಿಲ್ ನ ಶಿಯಾದವರಿಗೆ ಚೆನ್ನಾಗಿ ಗೊತ್ತು. ತಾವೇನಾದರೂ ಪಾಕಿಸ್ತಾನಕ್ಕೆ ಹೋದರೆ, ಇದುವರೆವಿಗೂ ಕಣಿವೆಯಲ್ಲಾದ ಅತ್ಯಾಚಾರಗಳು, ದೌರ್ಜನ್ಯಗಳನ್ನು, ಈ ಪಾಕಿಸ್ತಾನದ ಸುನ್ನಿಗಳು ತಮ್ಮ ಮೇಲೆಯೇ ನಡೆಸುತ್ತಾರೆ. ಆ ಭಯದಿಂದ ಕಾರ್ಗಿಲ್ ನ ಮುಸ್ಲಿಮರು, ಏನೇ ಆದರೂ ನಾವು ಭಾರತದಲ್ಲೇ ಇರ್ತೀವಿ. ಪಾಕಿಸ್ತಾನಕ್ಕೆ ಸೇರೋಲ್ಲ ಅಂತಾ ಹೇಳ್ತಾರೆ. ಮತ್ತಷ್ಟು ಓದು