ವಿಷಯದ ವಿವರಗಳಿಗೆ ದಾಟಿರಿ

Archive for

3
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 18:
ದುರ್ಗಾ ದೇವಿ ವೋಹ್ರಾ (ದುರ್ಗಾ ಬಾಭಿ) :
– ರಾಮಚಂದ್ರ ಹೆಗಡೆ

20-women-who-made-our-heads-raise-high-8_1457531002_725x725ನೀವು ‘ಲೆಜೆಂಡ್ ಆ ಭಗತ್ ಸಿಂಗ್’ ಸಿನೆಮಾ ನೋಡಿದ್ದರೆ ಅದರಲ್ಲಿ ಬ್ರಿಟಿಷ್ ಅಧಿಕಾರಿ ಸೌಂಡರ್ಸ್ ಹತ್ಯೆಯ ನಂತರ ಭಗತ್ ಸಿಂಗ್ ಲಾಹೋರ್ ನಿಂದ ಕಲ್ಕತ್ತಾ ಗೆ ತಪ್ಪಿಸಿಕೊಂಡು ಹೋಗುವ ದೃಶ್ಯ ನೋಡಿರುತ್ತೀರಿ. ಬ್ರಿಟಿಷರು ಭಗತ್ ಸಿಂಗ್ ಗಾಗಿ ದೇಶಾದ್ಯಂತ ಕಟ್ಟೆಚ್ಚರದ ಹುಡುಕಾಟ ನಡೆಸಿದ್ದಾಗ ಅಲ್ಲಿಂದ ಕಲ್ಕತ್ತಾ ಗೆ ತಪ್ಪಿಸಿಕೊಂಡು ಹೋಗುವ ಐಡಿಯಾ ಕೊಟ್ಟು ಹಾಗೆ ತಪ್ಪಿಸಿಕೊಂಡು ಹೋಗಲು ಭಗತ್ ಸಿಂಗ್ ನ ಪತ್ನಿಯಂತೆ ವೇಷ ಧರಿಸಿ ಅವನಿಗೆ ಕಲ್ಕತ್ತಾ ತಲುಪಲು ನೆರವಾದವಳು ಈ ದುರ್ಗಾ ಬಾಭಿ. ಮತ್ತಷ್ಟು ಓದು »

3
ಸೆಪ್ಟೆಂ

ಅಂಬೇಡ್ಕರ್, ಮಾರ್ಕ್ಸ್ ಮತ್ತು ಬುದ್ಧ…..

– ಗುರುರಾಜ ಕೋಡ್ಕಣಿ. ಯಲ್ಲಾಪುರ
buddha_or_karl_marx“ಅದೊಮ್ಮೆ ಬುದ್ಧನ ಅಗ್ರಗಣ್ಯ ಶಿಷ್ಯರಲ್ಲಿ ಒಬ್ಬನಾದ ಅನಾಥಪಿಂಡಿಕನು ಬುದ್ದನಿರುವಲ್ಲಿಗೆ ಆಗಮಿಸುತ್ತಾನೆ. ಹಾಗೆ ಬಂದವನೇ ಬುದ್ಧನಿಗೆ ವಂದಿಸಿ, ಪಕ್ಕದಲ್ಲಿದ್ದ ಆಸನದಲ್ಲಿ ಕುಳಿತುಕೊಳ್ಳುತ್ತ ‘ಹೇ ಮಹಾಜ್ಞಾನಿಯೇ, ಗೃಹಸ್ತನೆನಿಸಿಕೊಂಡವನಿಗೆ ತುಂಬ ಆಸಕ್ತಿದಾಯವೆನ್ನಿಸುವ ಹಿತನೀಡುವ, ಆದರೆ ಅಷ್ಟೇ ಕಷ್ಟವೆನಿಸುವ ಕಾರ್ಯ ಯಾವುದೆಂದು ನಿನಗನ್ನಿಸುತ್ತದೆ .’? ಎಂದು ಪ್ರಶ್ನಿಸುತ್ತಾನೆ. ಹೀಗೊಂದು ಪ್ರಶ್ನೆಯನ್ನು ಕೇಳಿ ಮುಗುಳ್ನಕ್ಕ ಗೌತಮ, ‘ಅಂತಹ ಹಲವಾರು ಕೆಲಸಗಳಿವೆ ಶಿಷ್ಯೋತ್ತಮನೇ. ನ್ಯಾಯಬದ್ಧವಾಗಿ ಸಂಪತ್ತನ್ನು ಗಳಿಸುವುದು ಅಂಥದ್ದೊಂದು ಬಹುಮುಖ್ಯ ಕಾರ್ಯ. ಮೊದಲು ವ್ಯಕ್ತಿ ತಾನು ಧರ್ಮಯುತವಾಗಿ ಸಂಪತ್ತನ್ನು ಗಳಿಸಿಕೊಳ್ಳಬೇಕು. ನಂತರ ತನ್ನ ಹತ್ತಿರದ ಬಂಧುಗಳೂ ಸಹ ನ್ಯಾಯಸಮ್ಮತವಾಗಿಯೇ ಸಂಪತ್ತಿನ ಗಳಿಕೆ ಮಾಡುವಂತೆ ನೋಡಿಕೊಳ್ಳಬೇಕು. ಮೂರನೆಯದ್ದಾಗಿ ವ್ಯಕ್ತಿಯೊಬ್ಬ ತುಂಬ ಕಾಲ ಬದುಕಿ ದೀರ್ಘಾಯುಷಿಯೆನ್ನಿಸಿಕೊಳ್ಳಬೇಕು. ಇವೆಲ್ಲವೂ ಮನುಷ್ಯನಿಗೆ ಇಷ್ಟವಾಗುವ, ಹಿತವೆನಿಸುವ ಕಾರ್ಯಗಳೇ. ಆದರೆ ಅವುಗಳ ಸಾಧನೆ ಸುಲಭಸಾಧ್ಯವಲ್ಲ. ಇಂಥಹ ಐಹಿಕ ಭೋಗಗಳ ಗಳಿಕೆಗೂ ನಂಬಿಕೆ, ಸಚ್ಚಾರಿತ್ರ್ಯ, ಉದಾರತೆ ಮತ್ತು ವಿವೇಕವೆನ್ನುವ ನಾಲ್ಕು ಮೌಲ್ಯಗಳ ಆಶೀರ್ವಾದ ಬೇಕು. ಸಚ್ಚಾರಿತ್ರ್ಯವೆನ್ನುವುದು ಮನುಷ್ಯನ ಮನಸ್ಸು ಚಂಚಲವಾಗದೇ ಕುಡಿತ, ಕಳ್ಳತನ ಕೊಲೆಗಳಂತಹ ಕೆಟ್ಟ ಕಾರ್ಯಗಳನ್ನು ಮಾಡದಂತೆ ಆತನನ್ನು ತಡೆಯುತ್ತದೆ. ಉದಾರತೆಯ ಭಾವವು ಮನುಷ್ಯನನ್ನು ದುರಾಸೆಯಂತಹ ದುರ್ಗುಣಗಳಿಂದ ಮುಕ್ತವಾಗಿಸಿ ತೆರೆದ ಮನಸ್ಸಿನಿಂದ ದಾನಧರ್ಮಗಳನ್ನು ಮಾಡುವಂತೆ ಪ್ರೋತ್ಸಾಹಿಸುತ್ತದೆ. ವಿವೇಕವೆನ್ನುವುದು ಮನುಷ್ಯನನ್ನು ವಿಮೋಚನೆಯತ್ತ ಕರೆದೊಯ್ಯುವ ಮಾರ್ಗ. ವಿವೇಕವೆನ್ನುವ ಹಾರೈಕೆ, ಮನುಷ್ಯನನ್ನು ಜಡತ್ವ, ಕುಯುಕ್ತಿ, ಆಲಸ್ಯ ಅನುಮಾನದಂತಹ ಅವಗುಣಗಳಿಂದ ದೂರವಿರಿಸುತ್ತದೆ. ಹಾಗಾಗಿ ನೈತಿಕತೆಯಿಂದ, ನ್ಯಾಯಸಮ್ಮತ ದುಡಿಮೆಯಿಂದ ಬೆವರು ಸುರಿಸಿ ಗಳಿಸಿದ ಆಸ್ತಿಯೂ ಸಾಮಾನ್ಯ ಮನುಷ್ಯನಿಗೆ ಒಂದು ವರದಾನವಿದ್ದಂತೆಯೇ ಸರಿ. ಹೀಗೆ ಸಿರಿವಂತನಾಗುವ ಗೃಹಸ್ತ, ಬದುಕಿನುದ್ದಕ್ಕೂ ತಾನು ಸಂತಸವಾಗಿರುವುದಲ್ಲದೇ, ಸದಾಕಾಲ ತನ್ನ ಹೆತ್ತವರು, ಮಡದಿ ಮಕ್ಕಳು ಮತ್ತು ಸ್ನೇಹಿತರನ್ನೂ ಸಹ ಸಂತೋಷವಾಗಿರಸಬಲ್ಲ. ಸಂತಸವೇ ಸಾಮಾನ್ಯನೊಬ್ಬನ ಬದುಕಿನ ಸಾರ್ಥಕತೆ ‘ಎನ್ನುತ್ತ ಉತ್ತರಿಸುತ್ತಾನೆ’ ಎಂದು ಬರೆಯುತ್ತಾರೆ, ಸಂವಿಧಾನ ಶಿಲ್ಪಿ ಡಾ.ಭೀಮರಾವ್ ಅಂಬೇಡ್ಕರ್ ತಮ್ಮ ‘Buddha Or Karl Marx’ಎನ್ನುವ ಕೃತಿಯಲ್ಲಿ. ಮತ್ತಷ್ಟು ಓದು »