ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 17:
ಧೋಂಡಿಯ ವಾಘ್
– ರಾಮಚಂದ್ರ ಹೆಗಡೆ
ಮಲೆನಾಡು ಪ್ರದೇಶದಲ್ಲಿ ಬ್ರಿಟಿಷರ ನಿದ್ದೆಗೆಡಿಸಿ ಸಹ್ಯಾದ್ರಿಯ ಹುಲಿ ಎಂಬ ಖ್ಯಾತಿಗೆ ಪಾತ್ರನಾದ ವೀರ ಧೋಂಡಿಯ ವಾಘ್. ಹುಟ್ಟಿನಿಂದ ಮರಾಠಾ ಆಗಿದ್ದ ದೋಂಡಿಯಾ ವಾಘ್ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನಿಂದ ಬಂದ ಒಬ್ಬ ಕೂಲಿ ಸೈನಿಕ. ಮೊದಲು ಕೊಲ್ಹಾಪುರ, ಧಾರವಾಡ ಮುಂತಾದ ಕಡೆ ಸಂಸ್ಥಾನಗಳಲ್ಲಿ ದುಡಿದು ನಂತರ ಹೈದರಾಲಿ ಸೈನ್ಯದಲ್ಲಿ ಸೇರಿಕೊಂಡಿದ್ದ. ನಂತರ ಸೈನ್ಯದಿಂದ ಓಡಿಹೋದ ವಾಘ್ ತನಗೆ ಬೇಕಾದ ಜನರ ಒಂದು ತಂಡವನ್ನು ಖಾಸಗಿ ಸೈನ್ಯವಾಗಿ ಕಟ್ಟಿದ. ಕೆಲಕಾಲ ಸೆರೆಯಲ್ಲಿದ್ದ ವಾಘ್ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲೆಸೆಯುವ ತೀರ್ಮಾನ ಕೈಗೊಂಡ. ಅಲ್ಲಿಂದ ಬಿಡುಗಡೆಯಾಗಿ ಬ್ರಿಟಿಷರ ವಿರೋಧಿಯಾಗಿ ಬೆಳೆದ. ಮೈಸೂರು ಸಂಸ್ಥಾನವು ಬ್ರಿಟಿಷರಿಗೆ ವಾರ್ಷಿಕ ಕಾಣಿಕೆಯನ್ನು ಒಪ್ಪಿಸುವ ಸಲುವಾಗಿ ರೈತರ ಮೇಲೆ ಕರ ಹೇರಿದಾಗ ವಾಘ್ ಅದರ ವಿರುದ್ಧ ದನಿಯೆತ್ತಿದ. ರೈತರು ದೋಂಡಿಯಾ ವಾಘನನ್ನು ಬೆಂಬಲಿಸಿದರು. ಆರಂಭದಲ್ಲಿ ಅವನ ಸಂಘಟನೆ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿದ್ದು, ಬ್ರಿಟಿಷರು ಬಿನ್ನುಹತ್ತಿದಾಗ ಹೈದರಾಬಾದ್ ಕರ್ನಾಟಕ ಪ್ರಾಂತಕ್ಕೆ ಬಂದು ಸೇರಿದ. ಮತ್ತಷ್ಟು ಓದು