ವಿಷಯದ ವಿವರಗಳಿಗೆ ದಾಟಿರಿ

Archive for

16
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 30:
ಕನಕಲತಾ ಬರುವಾ ಮತ್ತು ಭೋಗೇಶ್ವರಿ ಫು೦ಖನಾನಿ:
– ರಾಮಚಂದ್ರ ಹೆಗಡೆ

bhogeswwani-fukanani-catch-live-bhogeswwari-fukananiರಾಷ್ಟ್ರಧ್ವಜದ ಗೌರವ ರಕ್ಷಣೆಗಾಗಿ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಬಲಿದಾನಗೈದ ಅಸ್ಸಾಮಿನ ವೀರವನಿತೆಯರು ಕನಕಲತಾ ಬರುವಾ ಮತ್ತು ಭೋಗೇಶ್ವರಿ ಫು೦ಖನಾನಿ. ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರದ ಭೂಪಟ, ವಂದೇಮಾತರಂ ಎಲ್ಲವೂ ದೇಶಾಭಿಮಾನದ ಅಭಿವ್ಯಕ್ತಿಯ ಸಂಕೇತಗಳಾದರೂ ಅವು ನಮ್ಮಲ್ಲಿ ಸೃಷ್ಟಿಸುವ ಭಾವ ವರ್ಣನಾತೀತ. ಸೈನಿಕನೊಬ್ಬ ಯುದ್ಧ ಗೆದ್ದಾಗ, ಕ್ರೀಡಾಳುವೊಬ್ಬ ಆಟದಲ್ಲಿ ಗೆದ್ದಾಗ ತ್ರಿವರ್ಣ ಧ್ವಜ ಹಿಡಿದು ಕುಣಿದು ಕುಪ್ಪಳಿಸುವುದು ಕಾಣುತ್ತೇವೆ. ಯುದ್ಧಕ್ಕೆ ಹೋರಾಟ ಯೋಧನೊಬ್ಬ ಗೆದ್ದರೆ ಧ್ವಜ ಹಿಡಿದು ಬರುವೆ, ಸತ್ತರೆ ತ್ರಿವರ್ಣಧ್ವಜವನ್ನು ಸುತ್ತಿಕೊಂಡು ಬರುವೆ ಎಂದು ಹೇಳಿದ್ದು ಈ ಎಲ್ಲ ಸಂಕೇತಗಳ ಕುರಿತು ನಮಗಿರುವ ಹೆಮ್ಮೆ ಅಭಿಮಾನದ ಪ್ರತೀಕ. ರಾಷ್ಟ್ರಧ್ವಜವೆಂದರೆ ಕೇವಲ ಅದು ಬಟ್ಟೆಯಲ್ಲ. ಅದು ನಮ್ಮ ಹೆಮ್ಮೆ, ದೇಶದ ಕುರಿತ ಪ್ರೀತಿಯ ಸಂಕೇತ, ಅದು ನಮ್ಮ ಆತ್ಮಾಭಿಮಾನದ ಸಂಕೇತ. ರಾಷ್ಟ್ರಧ್ವಜದ ಪೂಜ್ಯತೆ ಹಾಗೂ ಗೌರವದ ರಕ್ಷಣೆಗಾಗಿ ೧೭ ರ ತರುಣಿ ಕನಕಲತಾರಿಂದ ಹಿಡಿದು ೭೩ ರ ವೃದ್ಧೆ ಮಾತಂಗಿನಿ ಹಜ್ರಾರವರೆಗೆ ಸ್ವಾತಂತ್ರ್ಯ ಸಮರದ ಉದ್ದಕ್ಕೂ ಸಾವಿರಾರು ಮಂದಿ ಬಲಿದಾನ ಮಾಡಿದ್ದಾರೆ. ಮತ್ತಷ್ಟು ಓದು »

16
ಸೆಪ್ಟೆಂ

ಪ್ರೇತದ ಆತ್ಮ ಚರಿತೆ! (ಭಾಗ ೨)

– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
14141908_1078958802199728_8622841239691589630_nಅದು ಮನುಕುಲ ಕಂಡ ಪರಮ ಪಾಪಿಗಳಲ್ಲೊಬ್ಬ ಔರಂಗಜೇಬ ದಿಲ್ಲಿಯ ಗದ್ದುಗೆಯಲ್ಲಿದ್ದ ಸಮಯ. ಪ್ರಜೆಗಳನ್ನು ಪರಿಪಾಲನೆ ಮಾಡಬೇಕಾದ ದೊರೆಯೇ ಜಿಸಿಯಾ ತಲೆಗಂದಾಯ ಹೇರಿ ಒಂದು ನಿರ್ದಿಷ್ಟ ಸಮಾಜದ ಸರ್ವನಾಶಕ್ಕೆ ಪಣತೊಟ್ಟು ಸಾವಿರಾರು ದೇವಾಲಯಗಳನ್ನು ದ್ವಂಸ ಮಾಡುತ್ತಿದ್ದ ಕಂಟಕಕಾಲ.. ಆ ಹೊತ್ತಿನಲ್ಲಿ ಸ್ವಾಭಿಮಾನಿ ಹಿಂದೂಗಳ ಪಾಲಿಗೆ ಆಪತ್ಭಾಂದವರಾಗಿ ಶಿವಾಜಿ ಮಹಾರಾಜರು ಉದಿಸಿದರು. ಸಹ್ಯಾದ್ರಿಯ ಸಿಂಹದ ಗುಡುಗಿಗೆ ದಿಲ್ಲಿಯ ಮೊಘಲರ ಮಯೂರ ಸಿಂಹಾಸನ ತಣ್ಣಗೆ ಕಂಪಿಸಿದ್ದಂತೂ ಸತ್ಯ. ಪ್ರವಾಹಕ್ಕೆ ವಿರುದ್ಧವಾಗಿ ಈಜಿ ತನ್ನ ಸದ್ಗುಣಗಳಿಂದ ಪ್ರಜೆಗಳ ಹೃದಯವನ್ನೂ… ಖಡ್ಗಪರಾಕ್ರಮದಿಂದ ಯವನರ ಸೈನ್ಯವನ್ನೂ ಗೆದ್ದ ಶಿವಾಜಿ, ಹಿಂದವೀ ಸ್ವಾರಾಜ್ಯವನ್ನು ಕಟ್ಟಿದರು. ಅಖಂಡ ಹಿಂದೂ ಸಾಮ್ರಾಜ್ಯಕ್ಕೆ ಬೀಜಾರೋಹಣ ಮಾಡಿದವರು ಶಿವಾಜಿ ಮಹಾರಾಜರಾದರೂ, ಅವರ ಕನಸನ್ನು ನನಸು ಮಾಡಿದವರು ಮಾತ್ರ ಪುಣೆಯ ಪೇಶ್ವಾಗಳು. ಮತ್ತಷ್ಟು ಓದು »