ವಿಷಯದ ವಿವರಗಳಿಗೆ ದಾಟಿರಿ

Archive for

14
ಸೆಪ್ಟೆಂ

ಪ್ರತಿಭಟನೆಯನ್ನೂ ಅಪರಾಧವನ್ನೂ ಏಕೆ ಸಮೀಕರಿಸುತ್ತೀರಿ ಮಾಧ್ಯಮಗಳೇ?

– ವಿನಾಯಕ ಹಂಪಿಹೊಳಿ

 imagesರಾಜ್ಯಾದ್ಯಂತ ಪ್ರತಿಭಟನೆಗಳನ್ನು ವರದಿ ಮಾಡುವ ಸಂದರ್ಭದಲ್ಲಿ ನಮ್ಮ ಮಾಧ್ಯಮಗಳುವಾಹನಗಳಿಗೆ ಬೆಂಕಿ ಹಚ್ಚುವದರ ಮೂಲಕ ಕಲ್ಲು ತೂರುವ್ರದರ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರುಎಂಬ ಮಾತನ್ನು ಬಳಸಿದ್ದೇ ತಪ್ಪು ಎಂಬುದು ನನ್ನ ಅನಿಸಿಕೆ. ಏಕೆಂದರೆ ಇಂತಹ ಅನೈತಿಕ ಕಾರ್ಯಗಳನ್ನು, `ಆಕ್ರೋಶದ ಸಹಜ ಅಭಿವ್ಯಕ್ತಿ’ ಎಂಬಂತೆ ಬಿಂಬಿಸಿರುವದೇ ಕ್ರಿಯೆಯನ್ನು ಸಮರ್ಥಿಸಿದಂತೆ. ಉದಾಹರಣೆಗೆಚಾರ್ಲಿ ಹೆಬ್ಡೋ ಕಚೇರಿಯ ಮೇಲೆ ಬಾಂಬು ಹಾಕುವದರ ಮೂಲಕ ಭಯೋತ್ಪಾದಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರುಎಂದು ಸುದ್ದಿ ಬಿತ್ತರಿಸಿದರೆ ಹೇಗಿರುತ್ತದೆ? ಭಯೋತ್ಪಾದಕರಂತೆ ಜೀವ ತೆಗೆದಿಲ್ಲ ಎನ್ನುವದನ್ನು ಒಪ್ಪಬಹುದು. ಆದರೆ ಸಾಲಸೋಲ ಮಾಡಿ ಪಡೆದ ಲಾರಿಗಳೇ, ಜೀವನಾಧಾರವನ್ನಾಗಿ ಮಾಡಿಕೊಂಡಿರುವ ಲಾರಿ ಡ್ರೈವರು ಕ್ಲೀನರುಗಳಿಗೆ, ಅವರ ಸಂಸಾರಕ್ಕೆ ಇದ್ದ ಒಂದೇ ಜೀವನೋಪಾಯವನ್ನೇ, ಕಸಿದುಕೊಳ್ಳುವದು ಸರಿಯೇ? ಜೀವ ತೆಗೆಯುವದಕ್ಕಿಂತ ಜೀವನ ತೆಗೆಯುವದು ಕಡಿಮೆ ಅಪರಾಧವಾಯಿತೇ?

ಮತ್ತಷ್ಟು ಓದು »

14
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 28:
ಮೆಣಸಿನಹಾಳ ತಿಮ್ಮನಗೌಡ
– ರಾಮಚಂದ್ರ ಹೆಗಡೆ

11slide2ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಬ್ರಿಟಿಷರ ವಿರುದ್ಧ ಕ್ರಾಂತಿ ಕಹಳೆ ಮೊಳಗಿಸಿ ಹುತಾತ್ಮನಾದ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನಗೌಡರು. ಇಂದಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೆಣಸಿನಹಾಳದಲ್ಲಿ ಶ್ರೀಮಂತ ಪಾಟೀಲ ಕುಟುಂಬದಲ್ಲಿ ಜನಿಸಿದ ತಿಮ್ಮನಗೌಡ ಬ್ಯಾಡಗಿಗೆ ಸುಭಾಷಚಂದ್ರ ಬೋಸರು ಬಂದಾಗ ಸ್ವಾತಂತ್ರ್ಯ ಹೋರಾಟದ ಕುರಿತ ಅವರ ಭಾಷಣ ಕೇಳಿ ರೋಮಾಂಚಿತರಾಗಿ ತ್ಯಾಗ ಮತ್ತು ಬಲಿದಾನದ ದೀಕ್ಷೆ ತೊಟ್ಟು ತನ್ನ 21ರ ವಯಸ್ಸಿನಲ್ಲೇ ಕಾನೂನು ಭಂಗ ಚಳುವಳಿಗೆ ಧುಮುಕಿದರು. ಆ ಹೊತ್ತಿಗೆ ಬ್ರಿಟಿಷರ ದರ್ಪ ದೌರ್ಜನ್ಯಗಳು ಮಿತಿಮೀರಿದ್ದವು. ಸಾಮಾನ್ಯ ಬಡ ರೈತರನ್ನು ದುಪ್ಪಟ್ಟು ಕಂದಾಯ ಹಾಕಿ ಶೋಷಿಸಲಾಗುತ್ತಿತ್ತು. ಅದನ್ನು ಪ್ರತಿಭಟಿಸಿ ಶೋಷಣೆಯ ವಿರುದ್ಧ ದನಿಯೆತ್ತಿದ ತಿಮ್ಮನಗೌಡರನ್ನು ಬ್ರಿಟಿಷರು ಇನ್ನೂ ಅನೇಕ ಹೋರಾಟಗಾರರೊಂದಿಗೆ ಬಂಧಿಸಿ ಎರಡು ವರ್ಷಕಾಲ ಯರವಾಡ ಜೈಲಿನಲ್ಲಿ ಸೆರೆಯಲ್ಲಿಟ್ಟರು. ಅಲ್ಲಿ ತಿಮ್ಮನಗೌಡರು ಚರಖಾದಿಂದ ನೂಲು ತೆಗೆಯುವುದನ್ನು ಕಲಿತರು. ಜೈಲಿನಿಂದ ಬಿಡುಗಡೆಗೊಂಡ ತಿಮ್ಮನಗೌಡರಿಗೆ ಅವರ ಊರಿನಲ್ಲಿ ಭವ್ಯ ಸ್ವಾಗತ ದೊರೆಯಿತು. ಜೈಲಿನಿಂದ ಬಂದ ಮೇಲೆ ಮತ್ತೆ ತಿಮ್ಮನಗೌಡರು ತಮ್ಮ ಕ್ರಾಂತಿ ಚಟುವಟಿಕೆಗಳನ್ನು ಮುಂದುವರೆಸಿದರು. ಬ್ರಿಟಿಷ್ ದೌರ್ಜನ್ಯದ ವಿರುದ್ಧ ತರುಣರ ಗುಂಪು ಕಟ್ಟಿಕೊಂಡು ಊರೂರು ತಿರುಗಿ ಭಾಷಣ ಮಾಡುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಾ ಜನರನ್ನು ಬಡಿದೆಬ್ಬಿಸತೊಡಗಿದರು. ಮತ್ತಷ್ಟು ಓದು »

14
ಸೆಪ್ಟೆಂ

ಸಾಧಕರ ಹೆಸರಲ್ಲಿ ಅಸ್ಮಿತೆಯ ಹುಡುಕಾಟ

– ಡಾ.ಬಿ.ವಿ.ವಸಂತ ಕುಮಾರ್

basavannaಭಾರತ ದೇಶ ಪ್ರಪಂಚದ ಒಂದು ವಿಶಿಷ್ಟ ದೇಶ. ಭಾರತದ ಬದುಕಿನ ದಾರಿಗಳನ್ನು ಇಲ್ಲಿನ ಮಹಾತ್ಮರು ನಿರ್ಮಿಸಿದ್ದಾರೆ. ಕಾಡಿನಿಂದ ಒಡಮೂಡಿದ ಈ ದಾರಿಗಳೆಡೆಗೆ ನಗರ ಮಹಾನಗರಗಳ ಜನರು ಮುಖಮಾಡಿದ್ದನ್ನೂ, ಮಾಡುತ್ತಾ ಇರುವುದನ್ನೂ, ಮುಂದೆ ಮಾಡುವುದನ್ನೂ ನೋಡಬಹುದು. ಇವರೇ ನಿಜವಾದ ರಾಷ್ಟ್ರ ನಿರ್ಮಾಪಕರು, ಸಂಸ್ಕೃತಿ ಸೃಷ್ಟಿಕರ್ತರು, ಕಲ್ಯಾಣದ ಮಹಾಕನಸುಗಾರರು. ಇಂಥವರನ್ನು ಸಂತರು, ಮಹಂತರು, ಶರಣರು, ಋಷಿಮುನಿಗಳು, ದಾರ್ಶನಿಕರು ಎಂದೆಲ್ಲ ಕರೆಯುತ್ತಾರೆ. ಅವರನ್ನು ಸಮಾಜದ ಜನ ಸದಾ ತಮ್ಮ ಬಾಳಿಗೆ ಆದರ್ಶದ ನಂದಾದೀವಿಗೆಯನ್ನಾಗಿಸಿಕೊಂಡಿದ್ದಾರೆ. ಅವರನ್ನು ಗುರುವೆಂದು ಸ್ವೀಕರಿಸಿ ತಾವು ಭಕ್ತರಾಗಿ ಗುರು-ಶಿಷ್ಯ ಪರಂಪರೆಯ ಆಧ್ಯಾತ್ಮಕ್ಕೂ ಅನುಭವಕ್ಕೂ ಕಾರಣರಾಗಿದ್ದಾರೆ. ಮತ್ತಷ್ಟು ಓದು »