ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 29:
ವಾಂಚಿನಾಥನ್ ಅಯ್ಯರ್
– ರಾಮಚಂದ್ರ ಹೆಗಡೆ
ತಮಿಳುನಾಡಿನ ರಾಷ್ಟ್ರಭಕ್ತ ಕ್ರಾಂತಿಕಾರಿ, ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ಪ್ರಾಣಾರ್ಪಣೆ ಮಾಡಿದ ಹುತಾತ್ಮ ವಾಂಚಿನಾಥನ್ ಅಯ್ಯರ್. ಜನರಿಂದ ‘ವಂಚಿ’ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಈ ೨೫ ರ ದೇಶಭಕ್ತ ತರುಣ ತಿರುನಲ್ವೇಲಿಯ ಕಲೆಕ್ಟರ್ ರಾಬರ್ಟ್ ಆಶ್ ನನ್ನು ಹಾಡಹಗಲೇ ಗುಂಡಿಕ್ಕಿ ತಾನೂ ಆತ್ಮಾರ್ಪಣೆ ಮಾಡಿದ. ತಿರುನಲ್ವೇಲಿ ಜಿಲ್ಲೆಯ ಸೆಂಗೊತ್ತೈ ಎಂಬ ಊರಿನಲ್ಲಿ ಜನಿಸಿದ ವಾಂಚಿನಾಥನ್ ಪ್ರಾಥಮಿಕ ಶಿಕ್ಷಣವನ್ನು ತನ್ನೂರಿನಲ್ಲೇ ಮುಗಿಸಿ, ಎಂ.ಎ ಪದವಿಯನ್ನು ತಿರುವನಂತಪುರದ ಕಾಲೇಜಿನಲ್ಲಿ ಪಡೆದಿದ್ದ. ಕಾಲೇಜಿನಲ್ಲಿ ಓದುವಾಗಲೇ ಮದುವೆಯೂ ಆಗಿತ್ತು. ಸರ್ಕಾರಿ ಹುದ್ದೆಯಲ್ಲಿ ನೌಕರಿ ಮಾಡುತ್ತಿದ್ದ. ಅದೇ ಹೊತ್ತಿಗೆ ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಜೋರಾಗಿತ್ತು. ಸ್ವದೇಶೀ ನೇವಿಗೇಷನ್ ಕಂಪನಿ ಹುಟ್ಟುಹಾಕಿ ಬ್ರಿಟಿಷರಿಗೆ ಸೆಡ್ಡು ಹೊಡೆದ ರಾಷ್ಟ್ರಭಕ್ತ ಚಿದಂಬರಂ ಪಿಳ್ಳೈ ಹಾಗೂ ‘ಭಾರತಮಾತಾ ಅಸೋಸಿಯೇಷನ್’ ಕಟ್ಟಿ ಕ್ರಾಂತಿಕಾರಿಗಳನ್ನು ತಯಾರು ಮಾಡುತ್ತಿದ್ದ ನೀಲಕಂಠ ಬ್ರಹ್ಮಚಾರಿ ಅವರ ಹೋರಾಟಗಳಿಂದ ವಾಂಚಿ ಸ್ವಾತಂತ್ರ್ಯ ಸಮರದೆಡೆಗೆ ಆಕರ್ಷಿತನಾದ. ದಕ್ಷಿಣ ಭಾರತದ ಕೆಲವೇ ಕೆಲವು ಕ್ರಾಂತಿಕಾರಿ ಸಂಘಟನೆಗಳಲ್ಲಿ ಒಂದಾದ, ನೀಲಕಂಠನಿಂದ ಬ್ರಹ್ಮಚಾರಿಯವರ ‘ಭಾರತಮಾತಾ ಅಸೋಸಿಯೇಷನ್’ ಸಶಸ್ತ್ರ ಕ್ರಾಂತಿಗಾಗಿ ಯುವಕರನ್ನು ತರಬೇತಿಗೊಳಿಸುತ್ತಿತ್ತು. ಮತ್ತಷ್ಟು ಓದು
ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ
– ಗುರುಪ್ರಸಾದ್ ಕೆ ಕೆ.
ಶ್ರೀಧರಭಾಮಿನಿಧಾರೆ ೧-೫
ಶ್ರೀಧರಭಾಮಿನಿಧಾರೆ ೬-೧೦
6)
ವೆಂಕಟಾಚಲ ಗಿರಿಯ ಅಧಿಪತಿ
ವೆಂಕಟೇಶನು ಕುಲದ ದೈವನು
ಸುಂಕಸಂಗ್ರಹ ಮಾಡುವಂತಹ ವಂಶ ಇವರದ್ದೂ||
ಸಂಕ ಇಹಕೂ ಪರಕು ಬೆಸೆಯುವ
ಸಂಕಟವ ಬಹುದೂರ ಸರಿಸುವ
ಪಂಕಜಾತ್ಮನು ಕರುಣೆ ತೋರಿಹ ವಂಶ ಇವರದ್ದೂ||
ತಾತ್ಪರ್ಯ : ಸಪ್ತಗಿರಿವಾಸ ಶ್ರೀನಿವಾಸನು ಇವರ ಕುಲದೇವರಾಗಿದ್ದಾನೆ. ಈ ‘ಪತಕಿ’ ಎಂಬ ಶಬ್ಧವು ‘ಫಸಕೀ’ ಎಂಬ ಶಬ್ದದ ಅಪಭ್ರಂಶವಾಗಿದ್ದು, ಸುಂಕವಸೂಲಿ ಮಾಡುವ ಅಧಿಕಾರಿಗೆ ಈ ಹೆಸರು ಹೇಳುವ ವಾಡಿಕೆ ಇತ್ತು. ಈ ವಂಶದಲ್ಲಿ ಹಿಂದೆ ಯಾರೋ ಸುಂಕವಸೂಲಿ ಮಾಡುವ ಅಧಿಕಾರದಲ್ಲಿ ಇದ್ದುದರಿಂದ ಈ ಮನೆತನಕ್ಕೆ ಪತಕಿ ಎಂಬ ಹೆಸರು ಬಂತು. ಬಹಳ ಧರ್ಮಿಷ್ಟರಾದ ಇವರ ವಂಶದ ಮೇಲೆ, ಸಂಕಟನಾಶಕ, ಇಹ-ಪರಗಳ ಸೇತುವೆಯಾದ ವೆಂಕಟೇಶ್ವರನ ಪೂರ್ಣಾನುಗ್ರಹ ಇತ್ತು. ಮತ್ತಷ್ಟು ಓದು