ವಿಷಯದ ವಿವರಗಳಿಗೆ ದಾಟಿರಿ

Archive for

6
ಆಕ್ಟೋ

ಮಹತ್ತರ ಸಂತಸಗಳ ಹುಡುಕಾಟದ ನಡುವೆ….!

– ಗುರುರಾಜ ಕೋಡ್ಕಣಿ. ಯಲ್ಲಾಪುರ

ತುಂಬ ಬುದ್ಧಿವಂತನಾಗಿದ್ದ ಆ ವೃದ್ಧ ತನ್ನ ಹಳ್ಳಿಯ ಮುಖ್ಯಸ್ಥ. ಆತನ ಸಲಹೆ ಸೂಚನೆಗಳಿಲ್ಲದೇ ಹಳ್ಳಿಯ ಯಾವ ಕೆಲಸಕಾರ್ಯಗಳೂ ನಡೆಯುತ್ತಿರಲಿಲ್ಲ. ಹಳ್ಳಿಗರಿಗೆ ಆತನ ಮಾತೆಂದರೆ ವೇದವಾಕ್ಯ.ತಮ್ಮ ಖಾಸಗಿ ಸಮಸ್ಯೆಗಳ ಕುರಿತಾದ ಸಲಹೆಗಳಿಗಾಗಿಯೂ ಹಳ್ಳಿಗರು ಅವನನ್ನು ಭೇಟಿಯಾಗುತ್ತಿದ್ದರು. ದುರಂತವೆಂದರೆ ಇಂಥಹ ಬುದ್ಧಿವಂತ ಅಪ್ಪನಿಗೆ ಇದ್ದೊಬ್ಬ ಮಗ ಭಯಂಕರ ಸೋಮಾರಿ. ಯಾವುದೇ ಕೆಲಸ ಮಾಡದೆ ಬೀದಿಬೀದಿ ಸುತ್ತುತ್ತ,ಕುಡಿಯುತ್ತ ತಿನ್ನುತ್ತ, ಸ್ನೇಹಿತರೊಂದಿಗೆ ಕಾಲ ಕಳೆಯುವುದೊಂದೇ ಅವನ ಬದುಕಾಗಿತ್ತು. ಮೊದಮೊದಲು ಅಪ್ಪ ಅವನನ್ನು ಗದರಿಸುತ್ತಿದ್ದ. ಮಗ ಕೊಂಚ ದೊಡ್ಡವನಾಗುತ್ತಿದ್ದಂತೆಯೇ ಗದರಿಸುವುದನ್ನು ಬಿಟ್ಟು ಪ್ರೀತಿಯಿಂದ ಬುದ್ದಿವಾದ ಹೇಳಿ ನೋಡಿದ. ಆದರೆ ಅಪ್ಪನ ಗದರಿಕೆಯಾಗಲಿ, ಪ್ರೀತಿಯಾಗಲಿ ಮಗನ ವರ್ತನೆಯಲ್ಲಿ ಯಾವ ಬದಲಾವಣೆಯನ್ನೂ ತರಲಿಲ್ಲ. ಹೆಚ್ಚುತ್ತಿರುವ ತನ್ನ ವಯಸ್ಸಿನೊಂದಿಗೆ ಮಗನ ಭವಿಷ್ಯದ ಚಿಂತೆಯೂ ಹೆಚ್ಚಿತ್ತು ಊರ ಮುಖ್ಯಸ್ಥನಿಗೆ. ಹೇಗಾದರೂ ಸರಿ ತಾನು ಸಾಯುವುದರೊಳಗಾಗಿ ಮಗನನ್ನು ಸರಿದಾರಿಗೆ ತರಲೇಬೇಕೆಂದು ನಿಶ್ಚಯಿಸಿಕೊಂಡ ಹಿರಿಯ, ಅದೊಂದು ದಿನ ಮಗನನ್ನು ಕರೆದು, ‘ಮಗು ನೀನಿನ್ನೂ ಚಿಕ್ಕ ಹುಡುಗನಲ್ಲ, ಬೆಳೆದು ನಿಂತಿರುವ ಯುವಕ. ಮತ್ತಷ್ಟು ಓದು »

5
ಆಕ್ಟೋ

ಒಂದು ಪ್ರೇತದ ಕತೆ! (ಭಾಗ 6)

– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)
ಪ್ರೇತದ ಆತ್ಮ ಚರಿತೆ! (ಭಾಗ ೪)
ಪ್ರೇತದ ಆತ್ಮ ಚರಿತೆ! (ಭಾಗ ೫)

14195962_1082397995189142_6175616879255697664_oಒಂದೆಡೆ ಕುಸಿಯುತ್ತಿರುವ ಆಡಳಿತ ವ್ಯವಸ್ಥೆ, ಬಂಡೇಳುತ್ತಿರುವ ಪಾಳೇಗಾರರು, ಪ್ರಧಾನರ ಒಳಜಗಳ… ನಾಲ್ದಿಕ್ಕುಗಳಲ್ಲೂ ಮರಾಠಾ ಸಾಮ್ರಾಜ್ಯವನ್ನು ಕುಟಿಲನೀತಿಯ ಮೂಲಕ ಆಕ್ರಮಿಸಿಕೊಳ್ಳಲು ಹವಣಿಸುತ್ತಿರುವ ಕೆಂಪು ಮುಸುಡಿಗಳ ಈಸ್ಟ್ ಇಂಡಿಯಾ ಕಂಪನಿ. ಅದರಿಂದ ಬಿಡಿಸಿಕೊಳ್ಳಲು ಬಾಜಿರಾವ್ ಪಂಡರಾಪುರದಲ್ಲಿ ಸಾಕಷ್ಟು ಧರ್ಮ ಕಾರ್ಯಗಳನ್ನು ನಡೆಸಿದ. ಭೀಮಾ ನದಿಯ ತೀರದಲ್ಲಿ ಭಾರಿ ಹೋಮಗಳನ್ನಿಟ್ಟು ನಾರಾಯಣನ ಪ್ರೇತವನ್ನು ಉಚ್ಛಾಟನೆ ಮಾಡಲಾಯಿತು. ಆದರೆ ಯಾವುದೂ ಉಪಯೋಗವಾಗಲಿಲ್ಲ. ಕೇವಲ ಪೇಶ್ವಾಗಳ ಸಾಮ್ರಾಜ್ಯ ನಾಶವಾಗಲಿ… ಪೇಶ್ವಾಗಳಿಗೆ ಸಂತಾನವಿಲ್ಲದೆ ಹೋಗಲಿ… ಪೇಶ್ವಾಗಳು ಕೈ ಹಿಡಿದ ಮಡದಿಯರನ್ನು ಮುಟ್ಟಿದರೆ ಸಾಕು ಅವರು ಸತ್ತು ಹೋಗುವಂತಾಗಲಿ… ಪೇಶ್ವಾಗಳ ಅರಮನೆಗೆ ಬೆಂಕಿ ಬೀಳಲಿ. ಇದು ನಾರಾಯಣನ ಪ್ರೇತ ಬಾಜಿರಾಯನ ಕಿವಿಯಲ್ಲಿ ಪ್ರತೀ ದಿನ ಉಸುರುತ್ತಿದ್ದ ಮಾತುಗಳು.. ಬಾಜಿರಾಯ ಮದುವೆಯಾದ. ಮಕ್ಕಳನ್ನು ಪಡೆಯಬೇಕು ಎಂದು ಪ್ರಯತ್ನ ಪಟ್ಟ ಕೆಲವೇ ದಿನದಲ್ಲಿ ಪತ್ನಿ ನಿಗೂಡವಾಗಿ ಸಾವನ್ನಪ್ಪಿದಳು.!! ಮತ್ತೊಬ್ಬಳನ್ನು ಮದುವೆಯಾದ ಅವಳೂ ಇದೇ ರೀತಿ ನಿಗೂಢವಾಗಿ ಸತ್ತು ಹೋದಳು. ಹೀಗೆ ನಾಲ್ಕು ಜನರನ್ನು, ನಾರಾಯಣ ಪೇಶ್ವೆಯ ಪ್ರೇತ ಬಲಿ ಪಡೆದುಕೊಂಡಿತು. ಬಾಜಿರಾಯನಿಗೆ ಹೆಣ್ಣು ಕೊಡಲು ಜನ ಹಿಂದೇಟು ಹಾಕತೊಡಗಿದರು. ಮತ್ತಷ್ಟು ಓದು »

4
ಆಕ್ಟೋ

ಮನೆಯೊಂದು ಮೂರು ಬಾಗಿಲು…..

– ಮು ಅ ಶ್ರೀರಂಗ

28_ramya_1600129f೧. ಕೃಷ್ಣರಾಜಸಾಗರ ಆಣೆಕಟ್ಟು ಕಟ್ಟುವಾಗಲಿಂದ ಹಿಡಿದು ಇಲ್ಲಿಯತನಕ  ನೂರು ವರ್ಷಗಳಿಗೂ ಮೀರಿ ಕಾವೇರಿ ನದಿ ನೀರಿನ ಹಂಚಿಕೆ ಮತ್ತಿತರ ವಿಷಯಗಳ ಗಲಾಟೆ ತಮಿಳುನಾಡು (ಅಂದಿನ ಮದ್ರಾಸ್ ರಾಜ್ಯ) ಮತ್ತು ನಮ್ಮ ನಡುವೆ ಇದೆ. ಶಾಸಕಾಂಗ, ನ್ಯಾಯಾಂಗ, ಒಕ್ಕೂಟ ವ್ಯವಸ್ಥೆ, ಕೇಂದ್ರ ಸರ್ಕಾರ ಹೀಗೆ ಅನೇಕ ವಿಷಯಗಳು ಹೆಣೆದುಕೊಂಡಿರುವ ಒಂದು ಸಮಸ್ಯೆ ಸಿನಿಮಾನಟರ, ಬುದ್ಧಿಜೀವಿಗಳ, ಸಾಹಿತಿಗಳ ಮೆರವಣಿಗೆ, ಅಬ್ಬರದ, ಆಕ್ರೋಶದ ಒಂದು ಹೇಳಿಕೆಯಿಂದ ಬಗೆ ಹರಿಯುತ್ತವೆ ಎಂಬುದೇ ಹಾಸ್ಯಾಸ್ಪದ ಸಂಗತಿ. ಕೆಲವು ಪ್ರಚಾರಪ್ರಿಯ ಸಾಹಿತಿಗಳು ಗೋಕಾಕ್ ಚಳುವಳಿಯ ಉದಾಹರಣೆ ಕೊಟ್ಟು ಈಗಲೂ ಹಾಗೆ ಮಾಡಿದರೆ ರಾತ್ರಿ ಕಳೆದು ಬೆಳಗಾಗುವುದರವೊಳಗೆ ಕಾವೇರಿ ಸಮಸ್ಯೆ ಬಗೆಹರಿಸಬಹುದು ಎಂಬ ಹೇಳಿಕೆಕೊಡುತ್ತಿದ್ದಾರೆ. ಆದರೆ ಗೋಕಾಕ್ ವರದಿಯ ಅನುಷ್ಠಾನ ಕಟ್ಟುನಿಟ್ಟಾಗಿ ಜಾರಿಯಾಗಿದೆಯೇ? ಇತ್ತೀಚಿಗೆ ತಾನೇ ಸುಪ್ರೀಂ ಕೋರ್ಟಿನಲ್ಲಿ ಕನ್ನಡ ಮಾಧ್ಯಮ ಕಡ್ಡಾಯ ಮಾಡುವುದು ತಪ್ಪು ಎಂದು ಹೇಳಿ ‘ಮಾತೃ ಭಾಷೆ’ಗೆ ನಮ್ಮ ಸಂವಿಧಾನದ ಪ್ರಕಾರ ಬೇರೆ ವ್ಯಾಖ್ಯಾನ ನೀಡಿದೆ. ಖಾಸಗಿ ಶಾಲೆಗಳ ಒಕ್ಕೂಟದ ವಾದಕ್ಕೆ ಜಯ ಸಿಕ್ಕಿದೆ. ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಖಾಲಿ ಹೊಡೆಯುತ್ತಿವೆ; ಮುಚ್ಚುತ್ತಿವೆ ಅಥವಾ ಮೂರ್ನಾಲಕ್ಕು ಶಾಲೆಗಳನ್ನು ಒಟ್ಟುಗೂಡಿಸಿ ಹಾಗೂ ಹೀಗೂ ಉಸಿರಾಡುವಂತೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ಕೊಡಬೇಕು ಎಂಬ ಮಹಿಷಿ ವರದಿಯ ಜಾರಿಯೂ ಪೂರ್ಣಪ್ರಮಾಣದಲ್ಲಿ ಜಾರಿಯಾಗಲು ಸಂವಿಧಾನ, ನ್ಯಾಯಾಂಗದ ವಿಧಿಗಳ ಪ್ರಕಾರ ಆಗುತ್ತಿಲ್ಲ. ಇದೇನು ನಮ್ಮನ್ನಾಳುತ್ತಿರುವ, ಆಳಿದ  ಸರ್ಕಾರಗಳ ‘ರಾಜಕೀಯ ಇಚ್ಚಾಶಕ್ತಿ’ಯ ಕೊರತೆಯೋ ಅಥವಾ ಆ ವರದಿಗಳಲ್ಲಿನ ಕೊರತೆಯೋ ತಿಳಿಯದಾಗಿದೆ. ಮತ್ತಷ್ಟು ಓದು »

3
ಆಕ್ಟೋ

ಮಾದರೀ ಹೋರಾಟಗಾರರ ಮುಂದಾಳತ್ವದಲ್ಲಿ ಪ್ರಾಯೋಜಿತ ಪ್ರತಿಭಟನೆಗಳು

– ಎಸ್. ಎನ್. ಭಾಸ್ಕರ್‍

dr-br-ambedkarದಲಿತಪರ ಹೋರಾಟ, ಚಳುವಳಿಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ದಲಿತ ಸಂಬಂಧಿ ಸಂಘಟನೆಯ ಮುಖಂಡರೊಬ್ಬರು ತಮ್ಮ ಚಳುವಳಿ, ಧ್ಯೇಯ ಗಳ ಬಗ್ಗೆ ಮಾತನಾಡುತ್ತಾ, ಈ ಹಿಂದೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್‍. ಅಂಬೇಡ್ಕರ್‍ ರವರು ಹೇಳಿದ್ದ ಈ ಮಾತುಗಳನ್ನು ಉಲ್ಲೇಖಿಸುತ್ತಾರೆ.

“ಹಿಂದೂ ಧರ್ಮವೆಂಬುದು ಬಹು ಮಹಡಿಗಳನ್ನು ಹೊಂದಿರುವ ಒಂದು ಕಟ್ಟಡವಿರುವ ಹಾಗೆ. ವಿಪರ್ಯಾಸವೆಂದರೆ ಇಲ್ಲಿ ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಹೋಗಲು ಯಾವುದೇ ಮೆಟ್ಟಿಲುಗಳಿಲ್ಲ. ನೆಲಮಹಡಿಯಲ್ಲಿರುವವನು ಕೊನೆಯ ತನಕ ಅಲ್ಲೇ ಇರಬೇಕಾಗುತ್ತದೆ. ಮೇಲ್ಮಹಡಿಯಲ್ಲಿರುವವನು ಕೊನೆಯವರೆಗೂ ಮೇಲ್ಮಟ್ಟದಲ್ಲಿಯೇ ಇರುವಂತೆ ನೋಡಿಕೊಳ್ಳಲಾಗುತ್ತದೆ” ಮತ್ತಷ್ಟು ಓದು »

2
ಆಕ್ಟೋ

ಚಿನ್ನ ತರಬಲ್ಲ ಚಿಗರೆಗಳು ನಮ್ಮಲ್ಲೇ ಇರುವಾಗ…

– ರೋಹಿತ್ ಚಕ್ರತೀರ್ಥ

juje-with-the-new-batch-of-siddi-kids-photo-credit-101indiaತನ್ನ ಏಳು ವರ್ಷದ ಮಗನನ್ನು ಮಡಿಲಲ್ಲಿ ಕೂರಿಸಿಕೊಂಡು ಆಕೆ ಪ್ರಾಣಿಪಕ್ಷಿಗಳನ್ನು ಪರಿಚಯಿಸುವ ಚಿತ್ರಪುಸ್ತಕವನ್ನು ಹರವಿದ್ದಳು. “ಇದು ಅಳಿಲು, ಅ-ಳಿ-ಲು. ಇದು ಆನೆ. ಇದು ಚಿರತೆ, ಮತ್ತೆ ಓ ಇದು ಜಿರಾಫೆ” ಎಂದೆಲ್ಲ ಹೇಳಿಕೊಡುತ್ತ “ಇದು ಚಿಂಪಾಂಜಿ” ಎಂದು ಮುಂದಿನ ಚಿತ್ರದತ್ತ ತೋರಿಸಿದಾಗ ಅದುವರೆಗೆ ಅಕ್ಷರಗಳನ್ನು ಉರು ಹೊಡೆಯುತ್ತಿದ್ದ ಹುಡುಗ ಥಟ್ಟನೆ “ಓ! ಇದು ಗೊತ್ತು!” ಎಂದುಬಿಟ್ಟ. “ಹೌದಾ? ನೀನ್ಯಾವತ್ತೋ ಈ ಪ್ರಾಣೀನ ನೋಡಿದ್ದು?” ಎಂದು ಆಕೆ ಕೇಳಿದಾಗ ಹುಡುಗ ಮುಗ್ಧವಾಗಿ “ನಮ್ಮ ಶಾಲೆ ಪಕ್ಕದ ಕಿರಾಣಿ ಅಂಗಡಿ ಮಾಮ ಹಾಗೇ ಕರೆಯೋದು ನನ್ನ” ಎಂದುಬಿಟ್ಟ. ಅದುವರೆಗೆ ಮಗುವನ್ನು ತೊಡೆಯಲ್ಲಿಟ್ಟುಕೊಂಡು ಅಕ್ಷರಾಭ್ಯಾಸ ಮಾಡಿಸುತ್ತಿದ್ದ ಆಕೆಗೆ ಎದೆ ಮೇಲೆ ಯಾರೋ ಬಿಸಿ ಎಣ್ಣೆ ಹುಯ್ದಂತಾಯಿತು. ಕಣ್ಣುಗಳು ಮನಸ್ಸಿನ ನಿಯಂತ್ರಣಕ್ಕೆ ಕ್ಯಾರೆನ್ನದೆ ಅಶ್ರುಧಾರೆ ತುಂಬಿಕೊಂಡುಬಿಟ್ಟವು. ಬೆಳಕು ಬೀರುತ್ತಿದ್ದ ಎದುರಿನ ಕಿಟಕಿ ಧಡಾರನೆ ಮುಚ್ಚಿಹೋಗಿ ಕೋಣೆಯೆಲ್ಲ ಕತ್ತಲುಗಟ್ಟಿದಂತೆ ಭಾಸವಾಯಿತು. ಮೈ ಸೆಟೆದುಕೊಂಡಿತು. ಮತ್ತಷ್ಟು ಓದು »

1
ಆಕ್ಟೋ

ಆಗಬೇಕಿದೆ ಸರಸ್ವತಿ ಮಂದಿರಗಳ ಜೀರ್ಣೋದ್ಧಾರ

– ಮುರಳಿ ಕೃಷ್ಣ ಕಡವ

ಒಂದೂರಿನ ಒಂದಷ್ಟು ಜನ ತಮ್ಮ ಮಕ್ಕಳ ವಿದ್ಯಾಭ್ಯಾಸ ಸರಿಯಾಗಿ ನಡೆಯುತ್ತಿಲ್ಲಾ ಅಂತ ಒಬ್ಬ ಜ್ಯೋತಿಷಿಯ ಬಳಿ ಸಲಹೆಗಾಗಿ ಹೋದರು. ಜ್ಯೋತಿಷಿಯು ತನ್ನೆಲ್ಲಾ ಲೆಕ್ಕಚಾರಗಳನ್ನು ಮಾಡಿ, “ನಿಮ್ಮೂರಿನ ಮಧ್ಯದಲ್ಲಿ ದೇವರ ಸಾನ್ನಿಧ್ಯವಿದೆ, ಅಲ್ಲಿ ಒಂದು ದೇವಸ್ಥಾನದ ನಿರ್ಮಾಣವಾಗಬೇಕು” ಎಂಬ ಪರಿಹಾರವನ್ನು ನೀಡಿದರು. ದೇವರ ಮೇಲಿನ ಭಕ್ತಿಗಿಂತ ಭಯವೇ ಜಾಸ್ತಿ ನೋಡಿ ಜನರಿಗೆ. ಸರಿ ಎಂದು ಒಂದೇ ವರ್ಷದಲ್ಲಿ ಲಕ್ಷಗಟ್ಟಲೇ ದುಡ್ಡು ಸಂಗ್ರಹಿಸಿ, ಒಂದು ಗುಡಿಯನ್ನ ಎದ್ದು ನಿಲ್ಲಿಸಿ, ದೇವರ ಮೂರ್ತಿಯನ್ನ ಪ್ರತಿಷ್ಟಾಪಿಸಿಯೇ ಬಿಟ್ಟರು. ಅದಕ್ಕೊಬ್ಬ ಪೂಜಾರಿಯನ್ನೂ ನೇಮಿಸಿ ಪೂಜೆ, ಹೋಮ ಹವನಗಳನ್ನೂ ನಡೆಸಲಾಯಿತು. ಆದರೆ ಅವರು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲೇ ಇಲ್ಲ. ಕೇಳಿದರೆ ಆ ಜನರ ಉತ್ತರ ಏನು ಗೊತ್ತಾ “ನಮ್ಮ ಕೆಲಸ ನಾವು ಮಾಡಿದ್ದೇವೆ ಫಲಾಫಲಗಳೆಲ್ಲಾ ದೇವರಿಗೆ ಬಿಟ್ಟದ್ದು” ಅಂತ. ಮತ್ತಷ್ಟು ಓದು »

1
ಆಕ್ಟೋ

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

– ಗುರುಪ್ರಸಾದ್ ಕೆ ಕೆ.

ಶ್ರೀಧರಭಾಮಿನಿಧಾರೆ ೧-೫
ಶ್ರೀಧರಭಾಮಿನಿಧಾರೆ ೬-೧೦
ಶ್ರೀಧರಭಾಮಿನಿಧಾರೆ ೧೧-೧೫

ಶ್ರೀಧರಭಾಮಿನಿಧಾರೆ ೧೬-೨೦

shreedhar_swami16)
ಶಾಂತಿ ಸಾಗರನಾದ ಸಿರಿಧರ
ಕಾಂತಿಯದು ವೃದ್ಧಿಸುವ ತೆರದಿ
ಸಂತಸಾಧುಗಳಿಂದ ಕಲಿಯುವ ಹಲವು ವಿಷಯಗಳಾ||
ಶಾಂತಮೂರುತಿ ರಾಮದೇವನ
ಚಿಂತೆ ಇಲ್ಲದ ಮನದಿ ನೆನೆಯುತ
ಸಂತಸದಲೀ ಕಾಲ ಕಳೆಯುತಲಿರುವ ಪುರದಲ್ಲೀ||

ತಾತ್ಪರ್ಯ : ಸದಾ ಶಾಂತಿಭಾವವನ್ನೇ ಹೊಂದಿದ ಶ್ರೀಧರರು, ತಮ್ಮ ತೇಜಸ್ಸು ವೃದ್ಧಿಯಾಗುವಂತೆ, ಸಾಧು ಸಂತರ, ಸಜ್ಜನರ ಜೊತೆಗೆ ಮಾತಾಡುತ್ತಾ ಹಲವಾರು ಆಧ್ಯಾತ್ಮಿಕ ವಿಷಯಗಳನ್ನು ತಿಳಿದುಕೊಳ್ಳುತ್ತಾ ಇದ್ದರು. ಸದಾ ನಿಶ್ಚಿಂತ ಮನೋಭಾವನೆಯಲ್ಲಿ ರಾಮನಾಮವ ಜಪಿಸುತ್ತಾ ಸಂತಸದಲ್ಲಿ ಕಾಲಕಳೆಯುತ್ತಿರುವ ಇವರನ್ನು ನೋಡುವುದೇ ಸುತ್ತಲಿನ ಜನರಿಗೆ ಒಂದು ಸೊಗಸಾಗಿತ್ತು. ಮತ್ತಷ್ಟು ಓದು »