ಪ್ರಕೃತಿ ಮತ್ತು ಹರೆಯ..!
– ಗೀತಾ ಹೆಗಡೆ
ಹೃದಯದ ಹೆಬ್ಬಾಗಿಲಿಗೆ ತೋರಣ ಕಟ್ಟಿ ಹೂವಿನ ಘಮಲಿನ ಅರವಳಿಕೆಯಲ್ಲಿ ಮೈನವಿರೇಳಿಸುವ ಶೃಂಗಾರದ ಕನಸು ಹೆಣೆಯುತ್ತ ಅರಿವಿಲ್ಲದೆ, ಅರಿವಾಗದಂತೆ ಹೃದಯ ಸಿಂಹಾಸನದ ಮೆಟ್ಟಿಲು ಒಂದೊಂದಾಗಿ ನಿಧಾನವಾಗಿ ಹತ್ತಿ ತಳವೂರಿದ ಕಾಲದ ನೆನಪು ಎಂದಾದರೂ ಮರೆಯಲು ಸಾಧ್ಯವೆ. ಅದು ಪ್ರತಿಯೊಬ್ಬರ ಬದುಕಿನ ಸುಂದರ ಕ್ಷಣವದು. ಹೆಣ್ಣಾಗಲಿ ಗಂಡಾಗಲಿ ಹರೆಯದ ಹೊಸಿಲಲ್ಲಿ ಮನಸ್ಸು ಬೆಳೆದಂತೆಲ್ಲ ಕನಸೂ ಬೆಳೆಯುವುದು ಸ್ವಾಭಾವಿಕ. ಅದಕ್ಕೆ ದಿನಕ್ಕೊಂದು ರೆಕ್ಕೆ ಪುಕ್ಕ. ಬಣ್ಣ ಬಣ್ಣದ ಓಕುಳಿಯ ತವರು. ಹರೆಯದ ಕನಸುಗಳು ನೂರೆಂಟು. ಅದು ಮಾತಿನಲ್ಲಿ ಅಥವಾ ಅಕ್ಷರಗಳಲ್ಲಿ ಯಾರಾದರು ವರ್ಣಿಸಲು ಸಾಧ್ಯವೇ.. ಇಲ್ಲವೆಂದೇ ಹೇಳಬೇಕು. ಹರೆಯದ ಪಾತ್ರೆಯಲ್ಲಿ ಪ್ರೀತಿಯೆಂಬ ಹುಟ್ಟು, ಮತ್ತದು ಹುಟ್ಟುವ ಕಾಲ ವಸಂತ ಋತು, ಚೈತ್ರ ಮಾಸ. ಮತ್ತಷ್ಟು ಓದು