ವಿಷಯದ ವಿವರಗಳಿಗೆ ದಾಟಿರಿ

Archive for

15
ನವೆಂ

ಲೈಫ್ ಹಿಂಗೂ ‘ಚೇಂಜ್’ ಆಗುತ್ತೆ ಕಣಾ..!

– ತುರುವೇಕೆರೆ ಪ್ರಸಾದ್

untitled-5ನಾನು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ಐದು ಪೈಸೆ ತಗೊಂಡು ಹೋದರೆ ಅಂಗಡಿ ನಾಗಣ್ಣ ಮೂರು ಪೈಸೆಗೆ ಒಂದು ಹಿಡಿ ಕಡಲೆ, ಎರಡು ಪೈಸೆಗೆ ಒಂದು ಉಂಡೆ ಬೆಲ್ಲ ಕೊಡುತ್ತಿದ್ದರು. ಮೊನ್ನೆ ಬುಧವಾರ ಪ್ರಧಾನಿ ಮೋದಿ ರೂ 1000, 500ರ ನೋಟುಗಳನ್ನು ರಾತ್ರೋ ರಾತ್ರಿ ರದ್ದು ಮಾಡಿದ ಮರುದಿನ 500 ರೂಪಾಯಿ ನೋಟು ಹಿಡಿದು ಹೋದರೂ ಒಂದು ಹಿಡಿ ಕಡ್ಲೆ ಒಂದು ಉಂಡೆ ಬೆಲ್ಲ ಸಿಗದ ಪರಿಸ್ಥಿತಿ ಉಂಟಾಗಿತ್ತು. ಹಿಂದಿನ ದಿನ ರಾತ್ರಿ ಊರಿನಲ್ಲಿ ನೆಟ್ಟಗೆ ಕೆಲಸ ಮಾಡುತ್ತಿದ್ದ 2-3 ಎಟಿಎಂಗಳಲ್ಲಿದ್ದ ಅಳಿದುಳಿದ ನೂರರ ನೋಟುಗಳೆಲ್ಲಾ ಖಾಲಿಯಾಗಿದ್ದವು. ಎಲ್ಲ ಕಡೆಯೂ ರೂ.500ರ ನೋಟುಗಳೇ ರಾರಾಜಿಸುತ್ತಿದ್ದವು, ಜನ ಅವುಗಳನ್ನು ಚಿಲ್ಲರೆ ಮಾಡಿಸಲು ಪರದಾಡುತ್ತಿದ್ದರು.. ದಿನನಿತ್ಯದ ಖರ್ಚಿಗೆ ಚಿಲ್ಲರೆ ನೋಟುಗಳನ್ನು ಹೊಂದಿಸಲು ಹರಸಾಹಸ ಮಾಡುತ್ತಿದ್ದರು. ಹಾಲಿಗೆ, ದಿನಸಿಗೆ, ಬಸ್ಸಿಗೆ, ಆಟೋಗೆ ಹೀಗೆ ಯಾವ ಬಾಬತ್ತಿಗೂ 1000, 500ರ ನೋಟು ಕೆಲಸಕ್ಕೆ ಬಾರದಂತಾಗಿತ್ತು. ಎಲ್ಲಾ ಚಿಲ್ಲರೆ ಕೇಳುವವರೇ! 2-3 ಪೆಟ್ರೋಲ್ ಬಂಕ್‍ಗಳು ಬೆಳಿಗ್ಗೆ ಬಾಗಿಲೇ ತೆರೆಯಲಿಲ್ಲ. ಒಂದು ಪೆಟ್ರೋಲ್ ಬಂಕ್‍ನಲ್ಲಿ ರೂ.500ಕ್ಕೆ ಪೂರಾ ಪೆಟ್ರೋಲ್ ಹಾಕಿಸಿಕೊಂಡರೆ ಉಂಟು.. ಇಲ್ಲವೆಂದರೆ ಒಂದೆರಡು ಲೀಟರ್ ಹಾಕಿ ಚಿಲ್ಲರೆ ಕೊಡುವ ಉಸಾಬರಿಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಅವರು ತಾನೆ ಎಷ್ಟು ಜನಕ್ಕೆ ಚಿಲ್ಲರೆ ಕೊಟ್ಟಾರು? ಎಲ್ಲಿಂದ ಚಿಲ್ಲರೆಯನ್ನು ತಂದಾರು?
ಮತ್ತಷ್ಟು ಓದು »