ವಿಷಯದ ವಿವರಗಳಿಗೆ ದಾಟಿರಿ

Archive for

4
ನವೆಂ

ಕಲೆಕ್ಷನ್ ಹಣ ಹಂಚಿಕೆ ವಿಚಾರಕ್ಕೆ ಗಂಜಿ ಚಲೋ ನಾಯಕರ ಮಾರಾಮಾರಿ: ಐವರಿಗೆ ಗಾಯ (ಸುಳ್ಸುದ್ದಿ)

– ಪ್ರವೀಣ್ ಕುಮಾರ್, ಮಾವಿನಕಾಡು

%e0%b2%ae%e0%b2%be%e0%b2%b0%e0%b2%be%e0%b2%ae%e0%b2%be%e0%b2%b0%e0%b2%bfಕೆಲವು ದಿನಗಳ ಹಿಂದೆ “ಗಂಜಿಗಾಗಿ ಚಲೋ” ಎನ್ನುವ ಕಾರ್ಯಕ್ರಮ ಮಾಡಿದ್ದ ತಂಡವೊಂದು ಆ ಕಾರ್ಯಕ್ರಮಕ್ಕೆಂದು ಕಲೆಕ್ಷನ್ ಮಾಡಿದ್ದ ಹಣವನ್ನು ಹಂಚಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ಮಾಡಿಕೊಂಡು ಪರಸ್ಪರ ಬಡಿದಾಡಿ ಆಸ್ಪತ್ರೆ ಸೇರಿದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ: ಕೆಲವು ದಿನಗಳ ಹಿಂದೆ ನಕ್ಸಲ್ ಹೋರಾಟಗಾರರು, ಅನ್ಯ ಕೋಮಿನ ಕೆಲವರ ಬೆಂಬಲದೊಂದಿಗೆ ಕೆಲ ದಪಹೋಗಾರರ ಜೊತೆ ಸೇರಿ ಗಂಜಿಗಾಗಿ ಚಲೋ ಎನ್ನುವ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರನ್ನು ಸೇರಿಸುವುದಾಗಿ ಹೇಳಿಕೊಂಡಿದ್ದ ಆ ಹೋರಾಟಗಾರರು ತಳಮಟ್ಟದ ಶೋಷಿತರಷ್ಟೇ ಅಲ್ಲದೇ ರಾಜಕಾರಣಿಗಳೂ ಸೇರಿದಂತೆ ಹಲವಾರು ಜನರಿಂದ ರೂ.500 ರಿಂದ ಐವತ್ತು ಸಾವಿರದವರೆಗೆ ಹಣವನ್ನು ಕಲೆಕ್ಷನ್ ಮಾಡಿದ್ದರು. ಕಲೆಕ್ಷನ್ ಆದ ಆ ಹಣದ ಒಟ್ಟು ಮೊತ್ತ ಸುಮಾರು ಎರಡು ಕೋಟಿಗೂ ಮೀರಿತ್ತು. ಆದರೆ ಒಂದು ಲಕ್ಷ ಜನರು ಸೇರುತ್ತಾರೆ ಎಂದು ಬಿಂಬಿತವಾಗಿದ್ದ ಆ ಕಾರ್ಯಕ್ರಮಕ್ಕೆ ಸೇರಿದ್ದು ಕೇವಲ 632 ಜನ ಮಾತ್ರ! ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಕೇವಲ ನಾಲ್ಕೂವರೆ ಲಕ್ಷಗಳು! ಇದರಿಂದಾಗಿ ಬರೋಬ್ಬರಿ ಎರಡು ಕೋಟಿ ರೂಪಾಯಿಗಳಷ್ಟು ಹಣ ಹೋರಾಟಗಾರರ ಬಳಿಯೇ ಉಳಿಯಿತು. ಇದನ್ನು ಮೊದಲೇ ಯೋಚಿಸಿದ್ದ ಕಾರ್ಯಕ್ರಮದ ಆಯೋಜಕರಾದ ಹೋರಾಟಗಾರರು ಮುಂದಿನ ವಾರ ಎಲ್ಲರೂ ತುಮಕೂರು ರಸ್ತೆಯ “ಫಿಶ್ ಲ್ಯಾಂಡ್ ಢಾಬಾ” ದಲ್ಲಿ ಕೂತು ಹಂಚಿಕೊಳ್ಳುವುದೆಂದು ತೀರ್ಮಾನಿಸಿ ಕಾರ್ಯಕ್ರಮಕ್ಕೆ ತಮ್ಮ ತನು-ಮನವನ್ನು ಅರ್ಪಿಸಿದ್ದ ರಾಜಕಾರಣಿಯೊಬ್ಬರ ಸಲಹೆಗಾರರ ಕೈಲಿ ಆ ಹಣವನ್ನು ಕೊಟ್ಟು ತಮ್ಮ ತಮ್ಮ ಮನೆಗಳನ್ನು ತಲುಪಿದ್ದರು. ಮತ್ತಷ್ಟು ಓದು »

4
ನವೆಂ

ಯೌವನದ ಬರೆ..!

– ಗೀತಾ ಹೆಗ್ಡೆ

imagesಜಗತ್ತು ಎಷ್ಟು ವಿಚಿತ್ರ. ಯಾವುದು ನಮ್ಮ ಕೈಗೆ ಸಿಗುತ್ತದೆ ಎಂದು ಭಾವಿಸುತ್ತೇವೊ ಅದು ಸುಲಭದಲ್ಲಿ ಸಿಗೋದೇ ಇಲ್ಲ. ನನಗಾಗಿ ಈ ಜಗತ್ತಿದೆ. ನನ್ನ ಆಸೆಗಳೆಲ್ಲ ಇಲ್ಲಿ ಈಡೇರುತ್ತದೆ, ನಾ ಯಾವತ್ತೂ ಸೋಲೋದೆ ಇಲ್ಲ ಅನ್ನುವ ಭಾವಾವೇಶದಲ್ಲಿ ಸಾಗುವ ಈ ಯೌವ್ವನದ ಒಂದೊಂದು ಮಜಲು ದಾಟಿಕೊಂಡು ಹೋದಂತೆಲ್ಲ ಪರಿಸ್ಥಿತಿಯ ಅನುಭವ ತನ್ನಷ್ಟಕ್ಕೆ ಚಿತ್ತವನ್ನು ಕಲಕಲು ಶುರುಮಾಡುತ್ತದೆ. ನೂರೆಂಟು ಕನಸುಗಳ ಆಗರ ಈ ಯೌವ್ವನದ ಮೆಟ್ಟಿಲು. ಏರುವ ಗತಿ ತೀವ್ರವಾದಂತೆಲ್ಲ ಆಸೆಗಳ ಭಂಡಾರ ಹೆಚ್ಚುತ್ತಲೇ ಹೋಗುತ್ತದೆ. ಏರುವ ರಭಸದಲ್ಲಿ ಹಿಂತಿರುಗಿ ನೋಡುವ ಗೊಡವೆ ಕಡೆಗೆ ಲಕ್ಷವಿಲ್ಲ. ಅಷ್ಟೊಂದು ಕಾತರ, ನಿರೀಕ್ಷೆ, ಪಡೆದೆ ತೀರಬೇಕೆನ್ನುವ ಉತ್ಕಟ ಆಕಾಂಕ್ಷೆ. ಈ ಸಮಯದಲ್ಲಿ ಯಾರ ಮಾತೂ ಕಿವಿಗೆ ಬೀಳೋದೆ ಇಲ್ಲ. ನಾ ಮಾಡಿದ್ದೆ ಸರಿ. “ಕೋಳಿಗೆ ಮೂರೇ ಕಾಲು” ಎಂದು ವಾದ ಮಾಡುವ ಮೊಂಡು ಬುದ್ಧಿ ಅದೆಲ್ಲಿಂದ ಮನಸ್ಸು ಹೊಕ್ಕು ತಾಂಡವವಾಡುತ್ತೊ! ಮತ್ತಷ್ಟು ಓದು »